ಬೆಂಗಳೂರು, ಗುರುವಾರ, ನವೆಂಬರ್ ೨೧, ೨೦೧೯ (ಕಾರ್ತೀಕ ೩೦, ಶಕ ವರ್ಷ ೧೯೪೧)
Bengaluru, Thursday, November 21, 2019 ( Karthika 30, Shaka Varsha 1941)
ಸಂಪುಟ ೧೫೪
Volume 154
ಸಂಚಿಕೆ ೪೬
Issue 46
ಭಾಗ ೧
ರಾಜ್ಯ ಸರ್ಕಾರದ ಮುಖ್ಯ ಆದೇಶಗಳು ಹಾಗೂ ಸುತ್ತೋಲೆ ಮುಂತಾದ
ಎಲ್ಲಾ ಇಲಾಖೆಗಳಿಗೂ ಸಂಬಂಧಿಸಿದ ಆದೇಶಗಳು
ನಗರಾಭಿವೃದ್ಧಿ ಸಚಿವಾಲಯ
ವಿಷಯ : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೌರಾಡಳಿತ
ನಿರ್ದೇಶನಾಲಯದ ನೌಕರರ ಸೇವೆಯನ್ನು ಪಾಲಿಕೆಯ ಸೇವೆಯಲ್ಲಿ ವಿಲೀನಗೊಳಿಸುವ ಬಗ್ಗೆ.
ಓದಲಾಗಿದೆ : 1. ಸರ್ಕಾರದ ಅಧಿಸೂಚನೆ ಸಂಖ್ಯೆ: ನಅಇ 92 ಎಂಎನ್‌ವೈ 2006, ದಿನಾಂಕ: 16.01.2007. 2. ಸರ್ಕಾರದ ಸುತ್ತೋಲೆ ಸಂಖ್ಯೆ: ನಅಇ 92 ಎಂಎನ್‌ವೈ 2006(ಪಿ), ದಿನಾಂಕ: 12.01.2007. 3. ಪ್ರಧಾನ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ ಇವರ ಅಧ್ಯಕ್ಷತೆಯಲ್ಲಿ ದಿನಾಂಕ: 11.06.2007
ರಂದು ಜರುಗಿದ ಸಭೆಯ ನಡವಳಿಗಳು.
4. ಸರ್ಕಾರದ ಆದೇಶ ಸಂಖ್ಯೆ: ನಅಇ 341 ಎಂಎನ್‌ವೈ 2007, ದಿನಾಂಕ: 10.01.2011. 5. ಸರ್ಕಾರದ ಆದೇಶ ಸಂಖ್ಯೆ: ನಅಇ 729 ಎಂಎನ್‌ವೈ 2007, ದಿನಾಂಕ: 13.05.2011. 6. ಸರ್ಕಾರದ ಆದೇಶ ಸಂಖ್ಯೆ: ನಅಇ 112 ಎಂಎನ್‌ವೈ 2013, ದಿನಾಂಕ: 16.01.2014. 7. ನಿರ್ದೇಶಕರು, ಪೌರಾಡಳಿತ ನಿರ್ದೇಶನಾಲಯ ಇವರ ಆದೇಶ ಸಂಖ್ಯೆ: ಪೌ.ನಿ/13593/
ಡಿ.ಎಂ.ಎ/93/ ಡಿಡಬ್ಲ್ಯೂಇ/2015-16, ದಿನಾಂಕ: 21.12.2016.
8. ನಿರ್ದೇಶಕರು, ಪೌರಾಡಳಿತ ನಿರ್ದೇಶನಾಲಯ, ಬೆಂಗಳೂರು ರವರ ನಡವಳಿ ಆದೇಶ ಸಂಖ್ಯೆ:
ಪೌನಿ/13593/ಡಿಎಂಎ/93/ಡಿಡಬ್ಲ್ಯೂಇ/15-16, ದಿನಾಂಕ: 18.03.2017.
9. ನೌಕರರು ಸರ್ಕಾರಕ್ಕೆ ದಿನಾಂಕ: 05.04.2017 ರಂದು ಸಲ್ಲಿಸಿರುವ ಮನವಿ. 10. ಸರ್ಕಾರದ ಸಮ ಸಂಖ್ಯೆಯ ಪತ್ರದ ದಿನಾಂಕ: 28.04.2017. 11. ಆಯುಕ್ತರು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಇವರ ಪತ್ರ ಸಂಖ್ಯೆ: ಬಿ12(1)/
ಪಿಆರ್/262/2016-17, ದಿನಾಂಕ: 17.10.2017.
12. ಆಯುಕ್ತರು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಇವರ ಪತ್ರ ಸಂಖ್ಯೆ: ಬಿ12(1)/
ಪಿಆರ್/721/2016-17, ದಿನಾಂಕ: 26.09.2017.
ಪ್ರಸ್ತಾವನೆ:-
ಮೇಲೆ (1) ರಲ್ಲಿ ಓದಲಾದ ದಿನಾಂಕ: 16.01.2007ರ ಅಧಿಸೂಚನೆಯಲ್ಲಿ ಬೆಂಗಳೂರು ನಗರದ ಸುತ್ತಮುತ್ತ ಇರುವ 7 ನಗರ ಸಭೆಗಳು ಮತ್ತು 1 ಪುರಸಭೆ ಹಾಗೂ 110 ಗ್ರಾಮಗಳನ್ನು ಬೆಂಗಳೂರು ಮಹಾನಗರ ಪಾಲಿಕೆಗೆ ವಿಲೀನಗೊಳಿಸಿ, ಬೃಹತ್ ಬೆಂಗಳೂರು ಮಹಾನಗರಪಾಲಿಕೆಯನ್ನಾಗಿ ರಚಿಸಲಾಗಿದೆ.
ಮೇಲೆ (2) ರಲ್ಲಿ ಓದಲಾದ ಸರ್ಕಾರದ ದಿನಾಂಕ: 12.01.2007 ರ ಸುತ್ತೋಲೆಯಲ್ಲಿ ಬೃಹತ್ ಬೆಂಗಳೂರು ಮಹಾನಗರಪಾಲಿಕೆ ಸೇರಿದ 7 ನಗರ ಸಭೆ, 1 ಪುರಸಭೆ ಮತ್ತು 110 ಗ್ರಾಮಗಳ ಕಛೇರಿಯಲ್ಲಿ ನಿರ್ವಹಿಸುತ್ತಿದ್ದ ಕೆಲಸ ಕಾರ್ಯಗಳನ್ನು ಮುಂದುವರಿಸಿಕೊಂಡು ಹೋಗುವ ಬಗ್ಗೆ ಕೆಲವು ಸೂಚನೆಗಳನ್ನು ನೀಡಲಾಗಿದೆ ಮತ್ತು ಆಡಳಿತದ ವಿಚಾರವಾಗಿ ನಗರ ಸಭೆ ಮತ್ತು ಪುರಸಭೆಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದ ಖಾಯಂ ನೌಕರರುಗಳನ್ನು ಸರ್ಕಾರದ ಮತ್ತು ಪಾಲಿಕೆಯ ಚಾಲ್ತಿಯಲ್ಲಿರುವ ನಿಯಮಗಳ ಪ್ರಕಾರ ಪಾಲಿಕೆಯು ವಿಲೀನಗೊಳಿಸಲಾಗುವುದೆಂದು ತಿಳಿಸಲಾಗಿದೆ.
(೭೮೯)೭೯೦ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್೨೧, ೨೦೧೯ ಭಾಗ ೧ ಮೇಲೆ ಓದಲಾದ (3) ರಲ್ಲಿ ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ದಿನಾಂಕ: 11.06.2007ರಂದು ಸಭೆ ಜರುಗಿದ್ದು, ನೌಕರರನ್ನು ವಿಲೀನಾತಿ ಮಾಡುವ ಬಗ್ಗೆ ಈ ಕೆಳಕಂಡ ಷರತ್ತುಗಳನ್ನು ವಿಧಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.
(1) Taking pay scale as a criteria, the Bruhat Bangalore Mahanagara Palike would work out a formula for
fitment of officer's and officials of CMCs/TMC and Gram Panchayaths for the purpose of absorption.
(2) The Bruhat Bangalore Mahanagara Palike shall explore the possibility of protecting the respective interse
seniority of officers and officials of CMCs/TMC and Gram Panchayaths within the ambit of rules and
regulations, since the constitution of Bruhat Bangalore Mahanagara Palike was in public interest. This will
be based upon the prevailing seniority rules.
(3) The BBMP shall prepare the list of 317 officials of the Directorate of Municipal Administration (excluding
Officers on deputation from other Departments) within 15 days and shall submit a concrete proposal to
Director of Municipal Administration so as to enable them to call for options for absorption from these
employees.
(4) The Director of Municipal Administration, as the Appointing Authority shall take action to obtain willingness
from the employees of the erstwhile CMCs/TMC subject to the guidelines for seniority and fitment of posts
proposed by the Bruhat Bangalore Mahanagara Palike within a time limit of 8 weeks. Those not submitting
any option will be deem ed to have opted for absorption. This will be made explicit in the letters I concerned.
(5) Until Rules for absorption are finalised, the Bruhat Bangalore Mahanagara Palike shall not promote any of
its Officers. However, if there are any compelling reasons, requiring some immediate action, the Bruhat
Bangalore Mahanagara Palike may fill up the vacancy on working arrangement (in charge) basis only.
(6) With regard to the daily wagers of erstwhile CMCs/TMC the Director of Municipal Administration as the
Appointing Authority shall take necessary steps in conformity with the DPAR (SR) guidelines issued from
time to time within a period of two months.
(7) In view of the abolition of DUDC Cell in Bangalore (Urban) DC Office, Bruhat Bangalore Mahanagara Palike
will provide the minimum staff for monitoring and finalisation of some of the ULB issues including
regularisation of daily wagers to the Deputy Commissioner, Bangalore (Urban).
(8) As regards Watermen and Valvemen of the CMC/TMCs, it was decided that the matter be discussed with
the BWSSB subsequently.
ಮೇಲೆ ಓದಲಾದ (4), (5) ಮತ್ತು (6) ರಲ್ಲಿ ಓದಲಾದ ದಿನಾಂಕ: 10.01.2011, 13.05.2011 ಮತ್ತು 16.01.2014ರ ಆದೇಶಗಳಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ವಿಲೀನವಾಗಿರುವ 7 ನಗರ ಸಭೆ ಮತ್ತು 1 ಪುರಸಭೆಯ ಕಾಯಂ ಪೌರ ಸೇವಾ ನೌಕರರ ಸೇವೆಯನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಸೇವೆಯಲ್ಲಿ ವಿಲೀನಗೊಳಿಸಿ ಆದೇಶಿಸಲಾಗಿರುತ್ತದೆ.
ಮೇಲೆ ಓದಲಾದ (7) ರಲ್ಲಿ ಓದಲಾದ ದಿನಾಂಕ: 21.12.2016ರ ಆದೇಶದಲ್ಲಿ ನಿರ್ದೇಶಕರು, ಪೌರಾಡಳಿತ ನಿರ್ದೇಶನಾಲಯ, ಇವರು ಮಾನ್ಯ ಸರ್ವೋಚ್ಛ ನ್ಯಾಯಾಲಯವು ನಿಗದಿಪಡಿಸಿರುವ ನಾಲ್ಕು ಷರತ್ತುಗಳನ್ನು ಪೂರ್ಣಗೊಳಿಸಿರುವ ಮತ್ತು ಸರ್ಕಾರದ ಆದೇಶಗಳ ನಿರ್ಣಯಗಳನ್ವಯ ಈ ಕೆಳಕಂಡ ಗ್ರೂಪ್ 'ಸಿ' ವೃಂದದ ದಿನಗೂಲಿ ನೌಕರರ ಸೇವೆಯನ್ನು ಅವರ ಹೆಸರಿನ ಮುಂದೆ ತೋರಿಸಿರುವ ವೇತನ ಶ್ರೇೕಣಿಯಲ್ಲಿ ಸೇವೆ ಸಕ್ರಮಗೊಳಿಸಿ ಆದೇಶಿಸಿರುತ್ತದೆ.
| ಕ್ರ. ಸಂ | ಸ್ಥಳಿಯ ಸಂಸ್ಥೆಯ ಹ ಸರು ೆ | ನೌಕರರ ಹೆಸರು ಮತ್ತು ಹ ುದ್ದೆ | ವೇತನ ಶ್ರೇಣಿ | ಜನ್ಮ ದಿನಾಂಕ | ನ ೕಮಕಾತಿಯಾದ ೆ ದಿನಾಂಕ | ಸೇವೆ ಸಕ್ರಮಗೊಂಡ ದಿನಾಂಕ |
| 1. | ಪ ುರ ಸಭೆ ಅಂಕೋಲ | ಪ ದ್ಮನಾಭ ರಾಮಾ ನಾಯ್ಕ ದ್ವಿ.ದ.ಸ | 3000-5450 | 24.03.1960 | 28.12.1994 | 27-12-2004 |
| 2. | ಬಿ.ಬಿ.ಎಂ.ಪಿ ವ ುಹಾದೇವಪುರ | ಶ್ರೀ ರಮೇಶ್ ಕರವಸೂಲಿಗಾರ | 3000-5450 | 20.05.1965 | 22.12.1989 | 21-12-1999 |
ಮೇಲೆ ಓದಲಾದ (8) ರಲ್ಲಿ ದಿನಾಂಕ: 18.03.2017ರ ಆದೇಶದಲ್ಲಿ ನಿರ್ದೇಶಕರು, ಪೌರಾಡಳಿತ ನಿರ್ದೇಶನಾಲಯ, ಇವರು ಮಾನ್ಯ ಸರ್ವೋಚ್ಛ ನ್ಯಾಯಾಲಯವು ನಿಗದಿಪಡಿಸಿರುವ ನಾಲ್ಕು ಷರತ್ತುಗಳನ್ನು ಪೂರ್ಣಗೊಳಿಸಿರುವ ಮತ್ತು ಸರ್ಕಾರದ ಆದೇಶಗಳ ನಿರ್ಣಯಗಳನ್ವಯ ಈ ಕೆಳಕಂಡ ಗ್ರೂಪ್ 'ಸಿ' ವೃಂದದ ದಿನಗೂಲಿ ನೌಕರರ ಸೇವೆಯನ್ನು ಅವರ ಹೆಸರಿನ ಮುಂದೆ ತೋರಿಸಿರುವ ವೇತನ ಶ್ರೇೕಣಿಯಲ್ಲಿ ಸೇವೆ ಸಕ್ರಮಗೊಳಿಸಿ ಆದೇಶಿಸಿರುತ್ತದೆ.
ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್೨೧, ೨೦೧೯ ೭೯೧| ಕ್ರ. ಸಂ | ಸ್ಥಳಿಯ ಸಂಸ್ಥೆಯ ಹ ಸರು ೆ | ನೌಕರರ ಹೆಸರು ಮತ್ತು ಹುದ್ದೆ | ವ ೕತನ ಶ್ರೇಣಿ ೆ | ಜನ್ಮ ದಿನಾಂಕ | ನ ೕಮಕಾತಿಯಾದ ೆ ದಿನಾಂಕ | ಸೇವೆ ಸಕ್ರಮಗೊಂಡ ದಿನಾಂಕ |
| 1 | ಯಲಹಂಕ ವಲಯ, ಕಛೇರಿ, ಬಿ.ಬಿ.ಎಂ.ಪಿ ಬೆಂಗಳೂರು | ಶ್ರೀಮತಿ ಡಿ. ನಾರಾಯಣಮ್ಮ, ಬ ರ ೆ ಳ ಚ್ಚುಗಾರರು | 3000-5450 | 20-07-1962 | 29-10-1990 | 28-10-2000 |
| 2 | ರಾ.ರಾ..ನಗರ ವ ಲಯ ಕಛೇರಿ ಬಿ.ಬಿ.ಎಂ.ಪಿ ಬೆಂಗಳೂರು | ಶಿ ೕ ಎನ್. ಜಗದೀಶ್ ್ರ ಕರವಸೂಲಿಗಾರರು | 3000-5450 | 0 3-06-1966 | 02-04-1993 | 01-04-2003 |
| 3 | ರಾ.ರಾ..ನಗರ ವ ಲಯ ಕಛೇರಿ ಬಿ.ಬಿ.ಎಂ.ಪಿ ಬೆಂಗಳೂರು | ಶ್ರೀ ಎನ್. ಚ ಂದ್ರಶೇಖರಯ್ಯ ಕರವಸೂಲಿಗಾರರು | 3000-5450 | 2 2-02-1970 | 30-11-1990 | 29-11-2000 |
ಮೇಲೆ ಓದಲಾದ (9) ರಲ್ಲಿ ದಿನಾಂಕ: 05.04.2017ರ ಪತ್ರದಲ್ಲಿ ಈ ಮೇಲೆ ಹೇಳಿದ ನೌಕರರು ಸರ್ಕಾರಕ್ಕೆ ಸಲ್ಲಿಸಿದ ಮನವಿಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿಯೇ ತಾವುಗಳು ದಿನಗೂಲಿ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿದ್ದು, ನಂತರ ಪೌರಾಡಳಿತ ನಿರ್ದೇಶನಾಲಯದ ಆಯುಕ್ತರು, ತಮ್ಮ ಸೇವೆಯನ್ನು ಸಕ್ರಮಗೊಳಿಸಿರುವುದರಿಂದ, ಈ ಹಿಂದಿನ ಸಂದರ್ಭಗಳಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೌರಾಡಳಿತ ಇಲಾಖೆಗೆ ಸೇರಿದ ಸಿಬ್ಬಂದಿ/ನೌಕರರುಗಳನ್ನು ಪಾಲಿಕೆಯ ಸೇವೆಯಲ್ಲಿ ವಿಲೀನಗೊಳಿಸಿ ಸರ್ಕಾರಿ ಆದೇಶ ಹೊರಡಿಸಿರುವಂತೆಯೇ ತಮ್ಮ ಸೇವೆಯನ್ನೂ ಸಹ ಪಾಲಿಕೆಯ ಸೇವೆಯಲ್ಲಿ ವಿಲೀನಗೊಳಿಸಿ ಆದೇಶ ಹೊರಡಿಸುವಂತೆ ಕೋರಿರುತ್ತಾರೆ.
ಮೇಲೆ ಓದಲಾದ (10) ರಲ್ಲಿ ದಿನಾಂಕ: 28.04.2017ರ ಸರ್ಕಾರದ ಪತ್ರದೊಂದಿಗೆ ಮನವಿದಾರರ ದಿನಾಂಕ: 05-04-2017ರ ಮನವಿಯ ಪ್ರತಿಯನ್ನು ಆಯುಕ್ತರು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಆಯುಕ್ತರಿಗೆ ಕಳುಹಿಸಿ, ಮನವಿಯಲ್ಲಿ ಕೋರಿರುವಂತೆ ದಿನಗೂಲಿ ನೌಕರರ ಸೇವೆಯನ್ನು ಬಿ.ಬಿ.ಎಂ.ಪಿ ಯಲ್ಲಿ ವಿಲಿನಗೊಳಿಸುವ ಬಗ್ಗೆ ಪ್ರಸ್ತಾವನೆಯನ್ನು ಸಲ್ಲಿಸುವಂತೆ ಕೊರಲಾಗಿತ್ತು.
ಮೇಲೆ ಓದಲಾದ (11) ಮತ್ತು (12) ರಲ್ಲಿ ದಿನಾಂಕ: 17.10.2017 ಮತ್ತು 26.09.2017ರ ಪ್ರಸ್ತಾವನೆಗಳಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಆಯುಕ್ತರು, ನಿರ್ದೇಶಕರು, ಪೌರಾಡಳಿತ ನಿರ್ದೇಶನಾಲಯ, ಇವರ ಆದೇಶಗಳಂತೆ ಶ್ರೀ ರಮೇಶ್, ಕರವಸೂಲಿಗಾರ, ಮಹಾದೇವಪುರ ವಲಯ, ಬಿ.ಬಿ.ಎಂ.ಪಿ, ಶ್ರೀಮತಿ ನಾರಾಯಣಮ್ಮ, ಬೆರಳಚ್ಚುಗಾರರು, ಯಲಹಂಕ ವಲಯ ಕಛೇರಿ, ಬಿ.ಬಿ.ಎಂ.ಪಿ, ಶ್ರೀ ಎನ್. ಜಗದೀಶ್ ಮತ್ತು ಶ್ರೀ ಎಸ್. ಚಂದ್ರಶೇಖರಯ್ಯ, ಕರವಸೂಲಿಗಾರ, ರಾಜರಾಜೇಶ್ವರಿ ನಗರ ವಲಯ, ಬಿ.ಬಿ.ಎಂ.ಪಿ ಇವರುಗಳ ಸೇವೆಯನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಸೇವೆಯಲ್ಲಿ ವಿಲೀನಗೊಳಿಸುವ ಬಗ್ಗೆ ಸರ್ಕಾರದ ಹಂತದಲ್ಲಿಯೇ ಕ್ರಮ ವಹಿಸುವಂತೆ ತಿಳಿಸಿರುತ್ತಾರೆ.
ಬೆಂಗಳೂರು ನಗರದ ಸುತ್ತಮುತ್ತಲಿನ 07 ನಗರ ಸಭೆಗಳು, 01 ಪುರಸಭೆ ಮತ್ತು 110 ಗ್ರಾಮಗಳನ್ನು ದಿನಾಂಕ: 16.01.2007 ರಂದು ಬೆಂಗಳೂರು ಮಹಾನಗರ ಪಾಲಿಕೆಗೆ ವಿಲೀನಗೊಳಿಸಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನಾಗಿ ರಚಿಸಲಾಗಿರುವುದರಿಂದ, ಕರ್ನಾಟಕ ಮುನಿಸಿಪಲ್ ಕಾರ್ಪೋರೇಷನ್ಸ್ ಕಾಯ್ದೆ 1976ರ ಕಲಂ-500 ರಿಂದ 503 ರನ್ವಯ ನಗರಸಭೆಗಳು ಮತ್ತು ಪುರಸಭೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಎಲ್ಲಾ ನೌಕರರುಗಳು ಸ್ವಯಂಚಾಲಿತವಾಗಿ ವಿಲೀನಗೊಳಿಸಲಾದ ದೊಡ್ಡ ನಗರ ಸ್ಥಳೀಯ ಸಂಸ್ಥೆ ಅಂದರೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಸೇರಿದವರಾಗಿರುತ್ತಾರೆ. ಆದ್ದರಿಂದ, ನಿರ್ದೇಶಕರು, ಪೌರಾಡಳಿತ ನಿರ್ದೇಶನಾಲಯ ಇವರು ದಿನಾಂಕ: 21.12.2016 ಮತ್ತು 18.03.2017ರ ಆದೇಶಗಳಲ್ಲಿ ಸಕ್ರಮಗೊಳಿಸಿರುವ ಹಾಗೂ ಬೃಹತ್ ಬೆಂಗಳೂರು ಮಹಾನಗರಪಾಲಿಕೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 4 ಜನ ನೌಕರರುಗಳ ಸೇವೆಯನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಸೇವೆಯಲ್ಲಿ ವಿಲೀನಗೊಳಿಸುವುದು ಸೂಕ್ತವಾಗಿರುತ್ತದೆ ಎಂದು ಸರ್ಕಾರವು ಭಾವಿಸಿರುತ್ತದೆ. ಆದ್ದರಿಂದ ಈ ಆದೇಶ.
ಸರ್ಕಾರದ ಆದೇಶ ಸಂಖ್ಯೆ : ನಅಇ 205 ಎಂಎನ್‌ಜಿ 2017, ಬೆಂಗಳೂರು, ದಿನಾಂಕ : 13-11-2019
ಪ್ರಸ್ತಾವನೆಯಲ್ಲಿ ವಿವರಿಸಿರುವ ಕಾರಣಗಳ ಹಿನ್ನೆಲೆಯಲ್ಲಿ, ಆಯುಕ್ತರು, ಪೌರಾಡಳಿತ ನಿರ್ದೇಶನಾಲಯ ಇವರ ಆದೇಶ ಸಂಖ್ಯೆ: ಪೌ.ನಿ/13593/ ಡಿ.ಎಂ.ಎ/93/ಡಿಡಬ್ಲ್ಯೂಇ/2015-16, ದಿನಾಂಕ: 21.12.2016 ರಲ್ಲಿ ಮತ್ತು ಆದೇಶ ಸಂಖ್ಯೆ: ಪೌನಿ/13593/ಡಿಎಂಎ/93/ಡಿಡಬ್ಲ್ಯೂಇ/15-16, ದಿನಾಂಕ: 18.03.2017 ರಲ್ಲಿ ಸಕ್ರಮಗೊಳಿಸಿರುವ ನಾಲ್ಕು ಜನ ನೌಕರುಗಳನ್ನು ಆದೇಶದಲ್ಲಿನ ಷರತ್ತುಗಳಿಗೆ ಒಳಪಟ್ಟು ಕರ್ನಾಟಕ ಮುನ್ಸಿಪಲ್ ಕಾರ್ಪೋರೇಷನ್ಸ್ ಅಧಿನಿಯಮ 1976ರ ಕಲಂ 501(ಸಿ) ರನ್ವಯ 7 ನಗರ ಸಭೆ ಮತ್ತು 1 ಪುರಸಭೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಈ ಕೆಳಕಂಡ ಪೌರಾಸೇವಾ ವೃಂದದ ಗ್ರೂಪ್ 'ಸಿ' ನೌಕರರುಗಳನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ವಿಲೀನಗೊಳಿಸಿ ಆದೇಶಿಸಿದೆ.
| ಕ್ರ. ಸ ಂ | ಸ್ಥಳಿಯ ಸಂಸ್ಥೆಯ ಹ ಸ ೆ ರು | ನೌಕರರ ಹೆಸರು ಮತ್ತು ಹ ುದ್ದೆ | ವೇತನ ಶ್ರೇಣಿ | ಜನ್ಮ ದಿನಾಂಕ | ನ ೕಮಕಾತಿಯಾದ ೆ ದಿನಾಂಕ | ಸೇವೆ ಸಕ್ರಮಗೊಂಡ ದಿನಾಂಕ |
| 1 | ಬಿ.ಬಿ.ಎಂ.ಪಿ ವ ುಹಾದೇವಪುರ | ಶ್ರೀ ರಮೇಶ್ ಕರವಸೂಲಿಗಾರ | 3000-5450 | 20.05.1965 | 22.12.1989 | 21-12-1999 |
| 2 | ಯಲಹಂಕ ವಲಯ, ಕಛೇರಿ, ಬಿ.ಬಿ.ಎಂ.ಪಿ ಬ ಂಗಳೂರು ೆ | ಶ್ರೀಮತಿ ಡಿ. ನಾರಾಯಣಮ್ಮ, ಬ ರ ೆ ಳಚ್ಚುಗಾರರು | 3000-5450 | 20-07-1962 | 29-10-1990 | 28-10-2000 |
| 3 | ರಾ.ರಾ..ನಗರ ವ ಲಯ ಕಛೇರಿ ಬಿ.ಬಿ.ಎಂ.ಪಿ ಬ ಂಗಳೂರು ೆ | ಶ್ರೀ ಎನ್. ಜಗದೀಶ್ ಕರವಸೂಲಿಗಾರರು | 3000-5450 | 03-06-1966 | 02-04-1993 | 01-04-2003 |
| 4 | ರಾ.ರಾ..ನಗರ ವ ಲಯ ಕಛೇರಿ ಬಿ.ಬಿ.ಎಂ.ಪಿ ಬ ಂಗಳೂರು ೆ | ಶಿ ೕ ಎನ್. ್ರ ಚಂದ್ರಶೇಖರಯ್ಯ ಕರವಸೂಲಿಗಾರರು | 3000-5450 | 22-02-1970 | 30-11-1990 | 29-11-2000 |
ಷರತ್ತುಗಳು:-
(1) ವಿಲೀನಗೊಳಿಸಲಾದ ನೌಕರರುಗಳನ್ನು ಅವರು ಹೊಂದಿರುವ ಹುದ್ದೆಗೆ ನೇಮಿಸುವುದು. ಒಂದು ವೇಳೆ, ಬೃಹತ್ ಬೆಂಗಳೂರು
ಮಹಾನಗರ ಪಾಲಿಕೆಯ ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ಹುದ್ದೆಗಳು ಲಭ್ಯವಿಲ್ಲದಿದ್ದಲ್ಲಿ, ಅಂತಹವರನ್ನು ತತ್ಸಮಾನ
ಹುದ್ದೆಗೆ ನೇಮಿಸುವುದು.
(2) ವಿಲೀನಗೊಳಿಸುವ ಪ್ರಕ್ರಿಯೆಯನ್ನು ಮಾನ್ಯ ಉಚ್ಛ ನ್ಯಾಯಾಲಯವು ರಿಟ್ ಅರ್ಜಿ ಸಂಖ್ಯೆ: 8523/2007 ಮತ್ತಿತರೆ ಪ್ರಕರಣಗಳಲ್ಲಿ ನೀಡಿರುವ ಆದೇಶದಂತೆ, (i) ಹುದ್ದೆಯ ಸ್ವರೂಪ ಮತ್ತು ಕರ್ತವ್ಯಗಳು; (ii) ಹುದ್ದೆಯನ್ನು ಹೊಂದಿರುವ ನೌಕರರು
ಚಲಾಯಿಸುವ ಅಧಿಕಾರಗಳು, ಅವರ ಅಧಿಕಾರ ವ್ಯಾಪ್ತಿಯ ಪ್ರದೇಶ ಅಥವಾ ಹೊಂದಿರುವ ಇತರೆ ಪ್ರಭಾರ ಅಥವಾ ನಿರ್ವಹಿಸುವ
ಜವಾಬ್ದಾರಿಗಳು; (iii) ಹುದ್ದೆಯ ನೇಮಕಾತಿಗೆ ನಿರ್ದಿಷ್ಟಪಡಿಸಲಾದ ಕನಿಷ್ಟ ವಿದ್ಯಾರ್ಹತೆ, ಯಾವುದಾದರೂ ಇದ್ದಲ್ಲಿ; ಮತ್ತು (iv) ಹುದ್ದೆಯ ವೇತನ; ಈ ಅಂಶಗಳನ್ನು ಕಡ್ಡಾಯವಾಗಿ ಪರಿಗಣಿಸುವುದು.
(3) ಸದರಿ 4 ನೌಕರರಲ್ಲಿ ಯಾರಾದರೂ ನಿಧನರಾಗಿದ್ದಲ್ಲಿ ಅಥವಾ ಸೇವೆಯಲ್ಲಿ ಬಿಟ್ಟು ಹೋಗಿದ್ದಲ್ಲಿ ಪರಿಶೀಲಿಸಿ ನಿಯಮಾನುಸಾರ
ಕ್ರಮ ಜರುಗಿಸತಕ್ಕದ್ದು; ಈ ಅಂಶಗಳನ್ನು ಕಡ್ಡಾಯವಾಗಿ ಪರಿಗಣಿಸತಕ್ಕದ್ದು;
(4) ಸದರಿ 4 ನೌಕರರ ಆಯಾ ಹುದ್ದೆಯ ವೇತನ ಮತ್ತು ಭತ್ಯೆಗಳನ್ನು, ಸಕ್ರಮಗೊಳಿಸಿದ ದಿನಾಂಕದಿಂದ ಅನ್ವಯವಾಗುವಂತೆ
ಭವಿಷ್ಯವರ್ತಿಯಾಗಿ ನಿಗಧಿಪಡಿಸುವುದು ಮತ್ತು ಈ ಸಂಬಂಧದ ವೆಚ್ಚವನ್ನು ಬೃಹತ್ ಬೆಂಗಳೂರು ಮಹಾನಗರಪಾಲಿಕೆಯ
ವತಿಯಿಂದಲೇ ಭರಿಸತಕ್ಕದ್ದು;
(5) ವಿಲೀನಾತಿಯು ಸಾರ್ವಜನಿಕ ಹಿತದೃಷ್ಠಿಯಿಂದ ಕೂಡಿರುವುದರಿಂದ ಸದರಿ ನೌಕರರುಗಳ ಜೇಷ್ಠತೆಯನ್ನು ಕರ್ನಾಟಕ ಸರ್ಕಾರಿ
ನೌಕರರ (ಜೇಷ್ಠತಾ) ನಿಯಮಗಳು, 1957ರ ನಿಯಮ-6 ರನ್ವಯ ನಿಗಧಿಪಡಿಸತಕ್ಕದ್ದು;
(6) ವಿಲೀನಗೊಳಿಸಲಾದ ಪ್ರತಿಯೊಬ್ಬ ನೌಕರರ ಹೆಸರು, ಹುಟ್ಟಿದ ದಿನಾಂಕ ಮತ್ತು ಪ್ರಸ್ತುತ ಹುದ್ದೆಗೆ ಸಕ್ರಮಗೊಳಿಸಿರುವ ದಿನಾಂಕವನ್ನು
ಅವರುಗಳ ಸೇವಾ ಪುಸ್ತಕದೊಂದಿಗೆ ಮತ್ತೊಮ್ಮೆ ತಾಳೆ ಮಾಡಿ ದೃಡೀಕರಿಸತಕ್ಕದ್ದು;
(7) ಪಾಲಿಕೆಯ ಸೇವೆಯಲ್ಲಿ ವಿಲೀನಗೊಳ್ಳಲು ಇಚ್ಛೆ ವ್ಯಕ್ತಪಡಿಸದ ನೌಕರರುಗಳನ್ನು ಅವರ ಮಾತೃ ಇಲಾಖೆಗೆ ಹಿಂತಿರುಗಿಸಲು ಕ್ರಮ ಕೈಗೊಳ್ಳುವುದು.
(8) ಜಾರಿಯಲ್ಲಿರುವ ಅಧಿನಿಯಮ / ನಿಯಮ / ಸರ್ಕಾರಿ ಆದೇಶ / ಸುತ್ತೋಲೆ ಗಳನ್ವಯ ಕ್ರಮವಹಿಸತಕ್ಕದ್ದು.
PR-398
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, SC-500
ಲಕ್ಷ್ಮೀಸಾಗರ್ ಎನ್.ಕೆ
ಸರ್ಕಾರದ ಅಧೀನ ಕಾರ್ಯದರ್ಶಿ
ನಗರಾಭಿವೃದ್ಧಿ ಇಲಾಖೆ (ಬಿ.ಬಿ.ಎಂ.ಪಿ.).
ಕಂದಾಯ ಸಚಿವಾಲಯ
ಸುತ್ತೋಲೆ
ಸಂಖ್ಯೆ: ಕಂಇ 20 ಸಿಸಿಆರ್‌ವಿ 2019, ಬೆಂಗಳೂರು, ದಿನಾಂಕ: 15-10-2019
ವಿಷಯ : ದಾಖಲೆರಹಿತ ಜನವಸತಿಗಳನ್ನು ಕಂದಾಯ ಗ್ರಾಮ/ಗ್ರಾಮದ ಭಾಗವಾಗಿ ಪರಿವರ್ತಿಸಿ ಅಲ್ಲಿಯ ನಿವಾಸಿಗಳಿಗೆ
ವಾಸದ ಹಕ್ಕು ದಾಖಲೆಗಳನ್ನು ನೀಡುವ ಕಾರ್ಯಕ್ರಮ ಕುರಿತು.
ಓದಲಾಗಿದೆ : 1) ಸರ್ಕಾರದ ಆದೇಶ ಸಂ: ಕಂಇ 01 ಭೂದಾಪು 2016, ದಿನಾಂಕ : 01.03.2016ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್೨೧, ೨೦೧೯ ೭೯೩ 2) ಸರ್ಕಾರದ ಅಧಿಸೂಚನೆ ಸಂ: ಸಂವ್ಯಶಾಇ 54 ಶಾಸನ 2017, ದಿ : 28.10.2017 3) ಸರ್ಕಾರದ ಅಧಿಸೂಚನೆ ಸಂ: ಸಂವ್ಯಶಾಇ 54 ಶಾಸನ 2017, ದಿ : 16.12.2017 4) ಸರ್ಕಾರದ ಅಧಿಸೂಚನೆ ಸಂ: ಆರ್‌ಡಿ 92 ಎಲ್‌ಪಿಜಿ 2017, ದಿ : 17.03.2018 5) ಸರ್ಕಾರದ ಅಧಿಸೂಚನೆ ಸಂ: ಆರ್‌ಡಿ 260 ಎಲ್ಆರ್ಎ 2017, ದಿ : 11.01.2018
ರಾಜ್ಯದಲ್ಲಿ ನೆಲೆಗೊಂಡಿರುವ ಜನವಸತಿಗಳ ಪೈಕಿ ಹಲವಾರು ಜನವಸತಿಗಳು ವಿಶೇಷವಾಗಿ ಲಂಬಾಣಿ ತಾಂಡ, ಗೊಲ್ಲರಹಟ್ಟಿ, ವಡ್ಡರಹಟ್ಟಿ, ನಾಯಕರ ಹಟ್ಟಿ, ಕುರುಬರಹಟ್ಟಿ, ಹಾಡಿ, ಮಜರೆ, ದೊಡ್ಡಿ, ಪಾಳ್ಯ, ಕ್ಯಾಂಪ್. ಕಾಲೋನಿ ಇತ್ಯಾದಿ., ಹೆಸರುಗಳಿಂದ ಗುರುತಿಸಲ್ಪಡುವ ಜನವಸತಿಗಳು ದಾಖಲೆರಹಿತವಾಗಿಯೇ ಉಳಿದುಕೊಂಡಿರುತ್ತವೆ. ಇಂತಹ ಜನವಸತಿಗಳನ್ನು ಕಂದಾಯ ಗ್ರಾಮಗಳಾಗಿ ಅಥವಾ ಅಸ್ತಿತ್ವದಲ್ಲಿರುವ ಕಂದಾಯ ಗ್ರಾಮದ ಭಾಗವಾಗಿ ಪರಿವರ್ತಿಸಿ ಅಲ್ಲಿಯ ನಿವಾಸಿಗಳಿಗೆ ವಾಸ್ತವ್ಯದ ಹಕ್ಕು ದಾಖಲೆಗಳನ್ನು ಒದಗಿಸುವ ಉದ್ದೇಶದಿಂದ ಉಲ್ಲೇಖ (1) ರಂತೆ ಆದೇಶವನ್ನು ಹೊರಡಿಸಲಾಗಿರುತ್ತದೆ. ಸದರಿ ಆದೇಶದ ಭಾಗವಾಗಿ ರೂಪಿಸಲಾದ ಅನುಬಂಧದ ಮಾರ್ಗಸೂಚಿಯಲ್ಲಿ ಇಂತಹ ಜನವಸತಿಗಳನ್ನು ಕಂದಾಯ ಗ್ರಾಮವಾಗಿ ಪರಿವರ್ತಿಸುವ ವಿಧಾನ, ಪರಿವರ್ತಿತ ಗ್ರಾಮ/ ಗ್ರಾಮದ ಭಾಗದ ನಿವಾಸಿಗಳಿಗೆ ಹಕ್ಕು ದಾಖಲೆಗಳನ್ನು ಒದಗಿಸುವ ಬಗೆ ಮತ್ತು ಪರಿವರ್ತನೆಗೊಂಡ ನಂತರ ಕೈಗೊಳ್ಳಬೇಕಾದ ಕೆಲಸ ಕಾರ್ಯಗಳ ಕುರಿತು ವಿವರಿಸಲಾಗಿದೆ.
ಈ ಯೋಜನೆಯ ಪ್ರಮುಖ ಮತ್ತು ಅಂತಿಮ ಉದ್ದೇಶವು ದಾಖಲೆರಹಿತ ಜನವಸತಿಗಳಿಗೆ ಕಾನೂನಿನ ಮಾನ್ಯತೆ ನೀಡಿ ಅಲ್ಲಿ ವಾಸವಿರುವ ಕುಟುಂಬಗಳಿಗೆ ಅವರ ವಾಸದ ಮನೆ ಮತ್ತು ವಾಸಕ್ಕಾಗಿ ಬಳಕೆಯಾಗುತ್ತಿರುವ ಇತರೆ ಜಾಗಗಳಿಗೆ ಹಕ್ಕು ದಾಖಲೆಗಳನ್ನು ಒದಗಿಸಿಕೊಡುವುದಾಗಿದೆ. ಇದಕ್ಕಾಗಿ ಸರ್ಕಾರವು ಕರ್ನಾಟಕ ಭೂ ಸುಧಾರಣಾ ಕಾಯ್ದೆ ಮತ್ತು ಭೂ ಕಂದಾಯ ಕಾಯ್ದೆಗಳಿಗೆ ತಿದ್ದುಪಡಿಗಳನ್ನು ತಂದು ಉಲ್ಲೇಖ (2) ಮತ್ತು (3) ರ ಅಧಿಸೂಚನೆಗಳ ಮೂಲಕ ಅಂತಹ ಜನವಸತಿಗಳ ನಿವಾಸಿಗಳಿಗೆ ಹಕ್ಕು ದಾಖಲೆಗಳನ್ನು ನೀಡಲು ಅವಕಾಶ ಕಲ್ಪಿಸಿದೆ. ಇದರ ಅನುಷ್ಠಾನಕ್ಕಾಗಿ ಉಲ್ಲೇಖ (4) ಮತ್ತು (5) ರ ಅಧಿಸೂಚನೆಗಳಲ್ಲಿ ನಿಯಮಗಳನ್ನು ರಚಿಸಲಾಗಿದೆ. ಈ ನಿಯಮಗಳಲ್ಲಿ ದಾಖಲೆರಹಿತ ಜನವಸತಿಯನ್ನು ಕಂದಾಯ ಗ್ರಾಮ/ಗ್ರಾಮದ ಭಾಗವೆಂದು ಪರಿಗಣಿಸಲು ಕನಿಷ್ಟ 10 ಮನೆಗಳ ಗ್ರಾಮಗುಚ್ಛವಿರಬೇಕೆಂದು ನಿರ್ದಿಷ್ಟಪಡಿಸಿ ಅಲ್ಲಿ ವಾಸವಿರುವ ಕುಟುಂಬಗಳಿಗೆ ವಾಸಸ್ಥಳದ ಹಕ್ಕುದಾಖಲೆಗಳನ್ನು ನೀಡುವ ಕಾರ್ಯವಿಧಾನವನ್ನು ವಿವರಿಸಲಾಗಿದೆ.
ಮೇಲಿನ ಕಾನೂನು ನಿಯಮಗಳನ್ನು ಉಲ್ಲೇಖ (1) ರ ಅಧಿಸೂಚನೆಯ ಮಾರ್ಗಸೂಚಿಯೊಂದಿಗೆ ಓದಿಕೊಂಡಾಗ, 10 ರಿಂದ 49 ಮನೆಗಳಿರುವ ಗ್ರಾಮಗುಚ್ಛವನ್ನು ಅಸ್ತಿತ್ವದಲ್ಲಿರುವ ಕಂದಾಯ ಗ್ರಾಮದ ಉಪಗ್ರಾಮ (ಮಜರೆ) ಆಗಿಯೂ ಹಾಗೂ 50 ಮತ್ತು ಅದಕ್ಕಿಂತ ಹೆಚ್ಚಿನ ಮನೆಗಳಿರುವ ಗ್ರಾಮಗುಚ್ಛವನ್ನು ಸ್ವತಂತ್ರ ಕಂದಾಯ ಗ್ರಾಮವೆಂದು ಪರಿವರ್ತಿಸಲು ಕ್ರಮ ಕೈಗೊಳ್ಳಬೇಕಾಗುತ್ತದೆ. ಆದರೆ ಜಿಲ್ಲಾಧಿಕಾರಿಗಳು ಈ ಮೇಲೆ ವಿವರಿಸಿದ ಕಾನೂನು ನಿಯಮಗಳನ್ನು ಪರಿಗಣನೆಗೆ ತೆಗೆದುಕೊಳ್ಳದೆ, ಉಲ್ಲೇಖ (1) ರ ಆದೇಶದ ಭಾಗದಲ್ಲಿ ಸ್ವತಂತ್ರ ಕಂದಾಯ ಗ್ರಾಮವನ್ನು ರಚಿಸಲು ನಮೂದಾದ ಮಾನದಂಡಗಳನ್ನು ಪೂರೈಸುವ ದಾಖಲೆರಹಿತ ಜನವಸತಿಗಳನ್ನು ಮಾತ್ರ ಕಂದಾಯ ಗ್ರಾಮವಾಗಿ ಪರಿವರ್ತಿಸಲು ಪ್ರಸ್ತಾವನೆ ಸಲ್ಲಿಸುತ್ತಿದ್ದಾರೆ. ಇದರಿಂದ 49 ಕ್ಕಿಂತ ಕಡಿಮೆ ಮನೆಗಳಿರುವ ಹಾಗೂ ಅದಕ್ಕೂ ಹೆಚ್ಚಿನ ಮನೆಗಳಿದ್ದು, ಮೂಲ ಗ್ರಾಮದಿಂದ 1 ಕಿ.ಮೀ., ವ್ಯಾಪ್ತಿಯ ಒಳಗೆ ಬರುವ ಜನವಸತಿಗಳು ಈ ಯೋಜನೆಯ ಪ್ರಯೋಜನದಿಂದ ವಂಚಿತವಾಗುತ್ತಿವೆ.
ಆದ್ದರಿಂದ ಉಲ್ಲೇಖ (1) ರ ಸರ್ಕಾರಿ ಆದೇಶಕ್ಕೆ ಪೂರಕವಾಗಿ ಬಂದಿರುವ ಉಲ್ಲೇಖ (2) ರಿಂದ (5) ರ ಅಧಿಸೂಚನೆ ನಿಯಮಗಳನ್ನು ಗಮನದಲ್ಲಿರಿಸಿಕೊಂಡು ಕೆಳಕಂಡಂತೆ ಸ್ಪಷ್ಟೀಕರಣವನ್ನು ನೀಡಲಾಗಿದೆ.
1. ಯಾವುದೇ ಒಂದು ದಾಖಲೆ ರಹಿತ ಜನವಸತಿಯು ಕನಿಷ್ಟ 10 ಆದರೆ 49 ಕ್ಕೆ ಮೀರದ ಮನೆಗಳಿರುವ ಅಥವಾ 49 ಕ್ಕಿಂತ ಹೆಚ್ಚಿನ ಮನೆಗಳಿದ್ದರೂ ಮೂಲ ಗ್ರಾಮದಿಂದ 1 ಕಿ.ಮೀ., ವ್ಯಾಪ್ತಿಯ ಒಳಗೆ ಇರುವ ಗ್ರಾಮಗುಚ್ಛವಾಗಿದ್ದರೆ, ಸ್ಥಳೀಯರು ಅಪೇಕ್ಷಿಸುವ ಹೆಸರಿನಲ್ಲಿ ಅದು ನೆಲೆಗೊಂಡಿರುವ ಮೂಲ ಗ್ರಾಮದ ಭಾಗ/ಬಡಾವಣೆ ಅಥವಾ ಉಪಗ್ರಾಮ ಎಂದು ಪರಿಗಣಿಸಿ ಕರ್ನಾಟಕ ಭೂ ಕಂದಾಯ ಕಾಯ್ದೆ 1964 ರ ಕಲಮು (5) ರಂತೆ ಅಧಿಸೂಚನೆ ಹೊರಡಿಸಲು ಪ್ರಸ್ತಾವನೆ ಸಲ್ಲಿಸಬೇಕು. ಈ ಪ್ರಸ್ತಾವನೆಯಲ್ಲಿ ಸದರಿ ಜನವಸತಿಯು ನೆಲೆಗೊಂಡಿರುವ ಪೂರ್ಣ ಪ್ರದೇಶವನ್ನು ಗ್ರಾಮಠಾಣವಾಗಿ ಪರಿವರ್ತಿಸಲು ಅಗತ್ಯವಿರುವ ನಕ್ಷೆ (ಗ್ರಾಮ ನಕ್ಷೆ ಮತ್ತು ಗ್ರಾಮಠಾಣದ ನಕ್ಷೆ) ಮತ್ತು ಅದು ಆವರಿಸಿಕೊಂಡಿರುವ ಜಾಗದ ದಾಖಲೆಗಳು ಲಭ್ಯವಿರಬೇಕು. ಸ್ವತಂತ್ರ ಗ್ರಾಮಕ್ಕೆ ಇರುವಂತೆ ಇದಕ್ಕೆ ಲಗತ್ತು ಸರ್ವೆ ನಂಬರುಗಳು ಇರಬೇಕಾಗಿಲ್ಲ.
2 ಹಾಗೆಯೇ ಯಾವುದೇ ಒಂದು ದಾಖಲೆ ರಹಿತ ಜನವಸತಿಯು 50 ಮತ್ತು ಅದಕ್ಕಿಂತ ಹೆಚ್ಚಿನ ಮನೆಗಳು ಅಥವಾ 250 ಕ್ಕಿಂತ ಹೆಚ್ಚಿನ ಜನಸಂಖ್ಯೆ ಹೊಂದಿದ್ದು, ಮೂಲ ಗ್ರಾಮದಿಂದ ಸುಮಾರು 1 ಕಿ.ಮೀ. ವ್ಯಾಪ್ತಿಯ ಹೊರಗೆ ನೆಲೆಗೊಂಡಿದ್ದರೆ ಅಂತಹ ಜನವಸತಿಯನ್ನು ಸ್ವತಂತ್ರ ಕಂದಾಯ ಗ್ರಾಮವೆಂದು ಪರಿವರ್ತಿಸಲು ಅಧಿಸೂಚನೆಗಾಗಿ ಪ್ರಸ್ತಾವನೆ ಸಲ್ಲಿಸಬೇಕು. ಇಂತಹ ಜನವಸತಿಗಳಿಗೆ ಉಲ್ಲೇಖ (1)ರ ಮಾರ್ಗಸೂಚಿಯಲ್ಲಿ ತಿಳಿಸಲಾದಂತೆ ಲಗತ್ತು ಸರ್ವೆ ನಂಬರು ಜಮೀನುಗಳು ಇರಬೇಕು.
3 ದಾಖಲೆರಹಿತ ಜನವಸತಿಯು ಸರ್ಕಾರಿ ಜಮೀನಿನಲ್ಲಿ ನೆಲೆಗೊಂಡಿದ್ದರೆ ಅದನ್ನು ಕಂದಾಯ ಗ್ರಾಮ/ಗ್ರಾಮದ ಭಾಗವಾಗಿ ಪರಿವರ್ತಿಸಲು ಈ ಮೇಲೆ ತಿಳಿಸಿದ ವಿಧಾನದಲ್ಲಿ ನೇರವಾಗಿ ಪ್ರಸ್ತಾವನೆ ಸಲ್ಲಿಸಬೇಕು. ಆದರೆ ಖಾಸಗಿ ಜಮೀನುಗಳಲ್ಲಿ ನೆಲೆಗೊಂಡಿರುವ ಜನವಸತಿಗಳನ್ನು ಕಂದಾಯ ಗ್ರಾಮ/ಗ್ರಾಮದ ಭಾಗ/ಬಡಾವಣೆ/ಉಪ ಗ್ರಾಮ (ಮಜರೆ) ಆಗಿ ಪರಿವರ್ತಿಸಲು ಪ್ರಸ್ತಾವನೆ ಸಲ್ಲಿಸುವ ಮುನ್ನ, ಜಿಲ್ಲಾಧಿಕಾರಿಗಳು ಮೊದಲಿಗೆ ಅವು ನೆಲೆಗೊಂಡಿರುವ ಜಾಗಗಳನ್ನು ಕರ್ನಾಟಕ ಭೂ ಸುಧಾರಣಾ ಕಾಯ್ದೆ 1961 ರ ಕಲಂ 38-ಎ ಪ್ರಕಾರ 2-ಇ ಅಧಿಸೂಚನೆಯನ್ನು ಹೊರಡಿಸಿ ಸರ್ಕಾರದಲ್ಲಿ ನಿಹಿತಗೊಳಿಸಬೇಕು. ಹೀಗೆ 2-ಇ ಅಧಿಸೂಚನೆ ಹೊರಡಿಸುವಾಗ ಖಾಸಗಿ ಹೆಸರಿನ ಜಾಗದಲ್ಲಿ ಭೂಮಾಲೀಕರೆ ಸ್ವತಃ ಮನೆಗಳನ್ನು ನಿರ್ಮಿಸಿಕೊಂಡಿದ್ದರೆ ಅದರ ವಿಸ್ತೀರ್ಣವನ್ನು 2-ಇ ಅಧಿಸೂಚನೆಯಲ್ಲಿ ತರಬಾರದು. ಇಂತಹ ಜಾಗವು ನಿಯಮಾನುಸಾರ ಭೂ ಪರಿವರ್ತನೆ ಆಗದೇ ಇದ್ದರೆ ಅದರ ಮಾಲೀಕರು ಮುಂದೆ ಪಂಚಾಯತಿಗಳಿಂದ ಇ-ಸ್ವತ್ತು/ಖಾತೆ ಪಡೆಯುವಾಗ ಕರ್ನಾಟಕ ಭೂ ಕಂದಾಯ ಕಾಯ್ದೆ 1964 ರ ಕಲಮು 95(2-ಎ) ಷರತ್ತಿಗೊಳಪಟ್ಟು ಕಲಮು 96(4) ರನ್ವಯ ಪರಿವರ್ತನಾ ಶುಲ್ಕ ಪಾವತಿಸಿದ ನಂತರವೇ ಖಾತೆ ಪಡೆಯಲು ಅರ್ಹರಾಗುತ್ತಾರೆ.
ಪರಂತು ಅಂತಹ ಜಾಗದಲ್ಲಿ ಸಮುದಾಯಕ್ಕೆ ಬಳಕೆಯಾಗುತ್ತಿರುವ ಜಾಗ ಅಂದರೆ ರಸ್ತೆ, ಶಾಲೆ ಇತ್ಯಾದಿಗಳೇನಾದರೂ ಒಳಗೊಂಡಿದ್ದರೆ R.N.I. No. KARBIL/2001/47147 POSTAL REGN. No. RNP/KA/BGS/2202/2017-19 Licensed to post without prepayment WPP No. 297೭೯೪ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್೨೧, ೨೦೧೯ ಭಾಗ ೧ ಅದನ್ನು ಮಾತ್ರ ಸರ್ಕಾರದಲ್ಲಿ ನಿಹಿತಗೊಳಿಸಿಕೊಳ್ಳಬೇಕು. ಇದಾದ ನಂತರ 2-ಇ ಅಧಿಸೂಚನೆಯಲ್ಲಿ ಸೇರ್ಪಡೆಗೊಂಡ ವಿಸ್ತೀರ್ಣ, ಭೂಮಾಲೀಕರ ಸ್ವಂತ ಮನೆಗಳಿರುವ ವಿಸ್ತೀರ್ಣದ ಜಾಗ, ಹಾಗೂ ಸರ್ಕಾರಿ ಒಡೆತನದ ಜಾಗಗಳನ್ನು ಸೇರಿಸಿ ಇಡೀ ಜನವಸತಿ ಪ್ರದೇಶವನ್ನು ಗ್ರಾಮಠಾಣವಾಗಿ ಪರಿಗಣಿಸಿ ಅದನ್ನು ಕಂದಾಯ ಗ್ರಾಮ/ಗ್ರಾಮದ ಭಾಗ/ಬಡಾವಣೆ ಆಗಿ ಅಧಿಸೂಚಿಸಲು ಪ್ರಸ್ತಾವನೆ ಸಲ್ಲಿಸಬೇಕು.
4 ದಾಖಲೆ ರಹಿತ ಜನವಸತಿಯು ಆವರಿಸಿದ ಪ್ರದೇಶದಲ್ಲಿ ಭಾಗಶಃ ಖಾಸಗಿ, ಭಾಗಶಃ ಸರ್ಕಾರಿ/ಅರಣ್ಯ ಭೂಮಿ ಇದ್ದಲ್ಲಿ, ಮೊದಲಿಗೆ ಖಾಸಗಿ ಜಮೀನಿನ ಭಾಗಕ್ಕೆ 2-ಇ ಅಧಿಸೂಚನೆ ಹೊರಡಿಸಿ ಸರ್ಕಾರದಲ್ಲಿ ನಿಹಿತಗೊಳಿಸಿಕೊಳ್ಳಬೇಕು. ನಂತರ ಆ ಜಾಗವೂ ಸೇರಿದಂತೆ ಸರ್ಕಾರಿ ಒಡೆತನದ ಪೂರ್ಣ ಪ್ರದೇಶವನ್ನು ಗ್ರಾಮಠಾಣವಾಗಿ ಪರಿಗಣಿಸಿ, ಅದನ್ನು ಕಂದಾಯ ಗ್ರಾಮ/ಗ್ರಾಮದ ಭಾಗವಾಗಿ ಪರಿವರ್ತಿಸಲು ಪ್ರಸ್ತಾವನೆ ಸಲ್ಲಿಸಬೇಕು. ಸದರಿ ಜನವಸತಿ ಆವರಿಸಿರುವ ಜಾಗದ ಭಾಗವೇನಾದರೂ ಅರಣ್ಯ ಭೂಮಿಯಾಗಿದ್ದರೆ ಆ ಭಾಗವನ್ನು ಸದ್ಯಕ್ಕೆ ಗ್ರಾಮಠಾಣದ ವ್ಯಾಪ್ತಿಗೆ ತರಕೂಡದು. ನಂತರದಲ್ಲಿ ಅದನ್ನು ಅರಣ್ಯ ಹಕ್ಕು ಕಾಯ್ದೆ 2006ರ ನಿಯಮಗಳನ್ವಯ ಪ್ರತ್ಯೇಕ ಅಧಿಸೂಚನೆಯ ಮೂಲಕ ಆ ಗ್ರಾಮಠಾಣಕ್ಕೆ ಸೇರ್ಪಡೆಗೊಳಿಸಲು ಅವಕಾಶವಿರುತ್ತದೆ.
5 ಯಾವುದೇ ಒಂದು ಜನವಸತಿಯು ಆವರಿಸಿರುವ ಭೂ ಪ್ರದೇಶದಲ್ಲಿ ಒಂದಕ್ಕಿಂತ ಹೆಚ್ಚಿನ ಗ್ರಾಮದ ಗಡಿ ಪ್ರದೇಶವು ಸೇರಿಕೊಂಡಿದ್ದರೆ ಅದನ್ನು ಕಂದಾಯ ಗ್ರಾಮವಾಗಿ ಪರಿವರ್ತಿಸಲು ಉಭಯ ಗ್ರಾಮಗಳ ಗಡಿಗಳಿಂದ ಅದಕ್ಕೆ ಲಗತ್ತಿಸಲು ಬೇಕಾದ ಜಮೀನನ್ನು ವರ್ಗಾಯಿಸಿಕೊಂಡು ಹೊಸ ಗ್ರಾಮದ ರಚನೆ ಮಾಡಬೇಕು. ಇದಕ್ಕಾಗಿ ಹೊರಡಿಸುವ ಅಧಿಸೂಚನೆಯಲ್ಲಿ ಹೊಸ ಗ್ರಾಮ ಮತ್ತು ಅದರ ರಚನೆಗೆ ಬೇಕಾದ ಜಮೀನುಗಳು ವರ್ಗಾವಣೆಗೊಂಡ ಮೂಲ ಗ್ರಾಮಗಳ ಉಳಿಕೆ ಸರ್ವೆ ನಂಬರ್, ವಿಸ್ತೀರ್ಣ ಮತ್ತು ಅದಕ್ಕೆ ಪರ್ಯಾಯವಾಗಿ ನೀಡುವ ಹೊಸ ನಂಬರ್ ವಿವರಗಳು ಶೆಡ್ಯೂಲ್‌ನಲ್ಲಿ ನಮೂದಾಗಬೇಕು. ಒಂದುವೇಳೆ ಅಂತಹ ಜನವಸತಿಯನ್ನು ಪ್ರತ್ಯೇಕ ಕಂದಾಯ ಗ್ರಾಮವೆಂದು ರಚಿಸುವ ಬದಲು ಗ್ರಾಮದ ಭಾಗ ಅಥವಾ ಮಜರೆ ಎಂದು ಪರಿವರ್ತಿಸುವುದಾದರೆ ಅದನ್ನು ಬಹುಪಾಲು ಮನೆಗಳನ್ನು ಹೊಂದಿರುವ ಗಡಿ ವ್ಯಾಪ್ತಿಯ ಕಂದಾಯ ಗ್ರಾಮದ ಭಾಗ/ಮಜರೆ ಎಂದು ಪರಿಗಣಿಸಬೇಕು ಹಾಗೂ ಅದಕ್ಕೆ ಲಗತ್ತಾದಂತೆ ಇರುವ ಪಕ್ಕದ ಗ್ರಾಮ/ಗ್ರಾಮಗಳ ಗಡಿ ವ್ಯಾಪ್ತಿಯ ಜನವಸತಿ ಭಾಗದ ಪ್ರದೇಶವನ್ನು ಒಳಪಡಿಸಿ ಗ್ರಾಮಠಾಣವನ್ನು ನಿಗದಿಪಡಿಸಬೇಕು. ಅಧಿಸೂಚನೆಯಲ್ಲಿ ಉಭಯ ಗ್ರಾಮಗಳ ಗಡಿಯಿಂದ ತೆಗೆದುಕೊಂಡ ವಿಸ್ತೀರ್ಣದ ಜಾಗವನ್ನು ಸಂಬಂಧಿತ ಗ್ರಾಮಗಳ ಸರ್ವೆ ನಂಬರ್‌ಗಳಿಂದ ಕಳೆದು ಆಯಾ ಗ್ರಾಮಗಳ ಆಕಾರ್‌ಬಂದ್ ಮತ್ತು ಗಡಿ ನಕ್ಷೆಯಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡಿಕೊಳ್ಳಬೇಕು.
6. 2-ಇ ಅಧಿಸೂಚನೆ ವ್ಯಾಪ್ತಿಗೊಳಪಡುವ ಜಾಗದಲ್ಲಿ ಮನೆ ನಿರ್ಮಿಸಿಕೊಂಡವರು ಅದನ್ನು ಹೊರಡಿಸಿದ 1 ವರ್ಷದ ಒಳಗೆ ತಮ್ಮ ವಾಸ್ತವ್ಯದ ಹಕ್ಕು ಪ್ರತಿಪಾದಿಸಬೇಕೆಂಬ ನಿಯಮವಿರುವುದರಿಂದ ಸದರಿ ಜನವಸತಿಯು ಕಂದಾಯ ಗ್ರಾಮವಾಗಿ ಪರಿವರ್ತನೆಗೊಳ್ಳಲು ಅಂತಿಮ ಆಧಿಸೂಚನೆ ಆಗುವವರೆಗೆ ಕಾಯದೇ ಅವರಿಗೆ ವಾಸ್ತವ್ಯದ ಹಕ್ಕು ದಾಖಲೆ ನೀಡಲು ಉಪ ವಿಭಾಗಾಧಿಕಾರಿಗಳು ಸಮಾನಾಂತರವಾಗಿ ನಿಯಮಾನುಸಾರ ಕ್ರಮವಹಿಸಬೇಕು.
7. ಹೀಗೆ 2-ಇ ಅಧಿಸೂಚನೆಗೊಂಡ ಖಾಸಗಿ ಜಮೀನು ಹಾಗೂ ಕಂದಾಯ ಗ್ರಾಮವಾಗಿ ಅಂತಿಮ ಅಧಿಸೂಚನೆಯಾದ ಸರ್ಕಾರಿ ಜಮೀನುಗಳಲ್ಲಿ ನೆಲೆಗೊಂಡ ಜನವಸತಿ ನಿವಾಸಿಗಳು ತಮ್ಮ ವಾಸ್ತವ್ಯದ ಮನೆ ಮತ್ತು ಅದರ ಉಪಯುಕ್ತತೆಯ ಜಾಗಕ್ಕೆ ಉಲ್ಲೇಖ (4) ಮತ್ತು (5) ರ ನಿಯಮಗಳಿಗೆ ಅನುಗುಣವಾಗಿ ಹಕ್ಕುಪತ್ರ ಪಡೆಯಲು ಅರ್ಹರಾಗುತ್ತಾರೆ. ಅವರಿಗೆ ಹಕ್ಕು ಪತ್ರಗಳನ್ನು ನೀಡಲು ಸಕ್ಷಮ ಪ್ರಾಧಿಕಾರಕ್ಕೆ ಸಹಾಯಕವಾಗುವಂತೆ ಸ್ಥಳೀಯ ಭೂದಾಖಲೆಗಳ ಸಹಾಯಕ ನಿರ್ದೇಶಕರು ಮೇಲ್ಕಂಡ ವರ್ಗದ ಜನವಸತಿಗಳನ್ನು ಅವು ಇರುವ ಸ್ಥಿತಿಯಲ್ಲಿಯೇ ಅಗತ್ಯವಾದ ತಂತ್ರಜ್ಞಾನವನ್ನು (ಇ.ಟಿ.ಎಸ್. ಇತ್ಯಾದಿ) ಬಳಸಿ ಗ್ರಾಮ ಬಡಾವಣೆ ನಕ್ಷೆಗಳನ್ನು ರೂಪಿಸಬೇಕು. ಸದರಿ ನಕ್ಷೆಯಲ್ಲಿ ಅಲ್ಲಿಯ ನಿವಾಸಿಗಳು ವಾಸ ಮತ್ತು ವಾಸದ ಉದ್ದೇಶಕ್ಕಾಗಿ ಬಳಸುವ ಜಾಗಗಳು ಹಾಗೂ ಸಮುದಾಯ ಬಳಕೆಯಲ್ಲಿರುವ ಜಾಗಗಳನ್ನು ಗುರುತಿಸಿ ಅವುಗಳ ಅಳತೆ, ವಿಸ್ತೀರ್ಣ, ಚೆಕ್ಕುಬಂದಿ ದಾಖಲಿಸಲು ಅನುಕೂಲವಾಗುವಂತೆ ಗುರುತು ಮಾಡಿ ಹಕ್ಕು ದಾಖಲೆ ನೀಡಲು ಅಧಿಕಾರವುಳ್ಳ ಸಕ್ಷಮ ಪ್ರಾಧಿಕಾರಕ್ಕೆ ಸಲ್ಲಿಸಬೇಕು. ಇದನ್ನಾಧರಿಸಿ ಸಕ್ಷಮ ಪ್ರಾಧಿಕಾರಗಳು ಅಲ್ಲಿಯ ನಿವಾಸಿಗಳಿಗೆ ನಿಯಮಾನುಸಾರ ಹಕ್ಕು ಪತ್ರಗಳನ್ನು ನೀಡಲು, ಹಕ್ಕು ಪತ್ರಕ್ಕೆ ಅರ್ಹವಾಗದ ಜಾಗವನ್ನು ಸರ್ಕಾರದ ಒಡೆತನದಲ್ಲಿಯೇ ಉಳಿಸಿಕೊಳ್ಳಲು ಹಾಗೂ ಸಮುದಾಯ ಬಳಕೆ ಜಾಗಗಳನ್ನು ಸ್ಥಳೀಯ ಸಂಸ್ಥೆ/ಇಲಾಖೆ/ಟ್ರಸ್ಟ್/ನಿರ್ವಹಣಾ ಸಂಸ್ಥೆಗಳಿಗೆ ವಹಿಸಿಕೊಡಲು ಕ್ರಮ ಕೈಗೊಳ್ಳುವುದು.
PR - 416
ಎನ್.ಮಂಜುನಾಥ್ ಪ್ರಸಾದ್
SC - 500
ಪ್ರಧಾನ ಕಾರ್ಯದರ್ಶಿಗಳು
ಕಂದಾಯ ಇಲಾಖೆ
ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು-59.