ಬೆಂಗಳೂರು, ಗುರುವಾರ, ಡಿಸೆಂಬರ್ ೫, ೨೦೧೯ (ಮಾರ್ಗಶಿರ ೧೪, ಶಕ ವರ್ಷ ೧೯೪೧)
Bengaluru, Thursday, December 5, 2019 (Margashira 14, Shaka Varsha 1941)
ಸಂಪುಟ ೧೫೪
Volume 154
ಸಂಚಿಕೆ ೪೮
Issue 48
ಭಾಗ ೧
ರಾಜ್ಯ ಸರ್ಕಾರದ ಮುಖ್ಯ ಆದೇಶಗಳು ಹಾಗೂ ಸುತ್ತೋಲೆ ಮುಂತಾದ
ಎಲ್ಲಾ ಇಲಾಖೆಗಳಿಗೂ ಸಂಬಂಧಿಸಿದ ಆದೇಶಗಳು
ಕಂದಾಯ ಸಚಿವಾಲಯ
ವಿಷಯ : ಚಾರ್ಧಾಮ್ ಯಾತ್ರೆ ಕೈಗೊಳ್ಳುವ ಯಾತ್ರಾರ್ಥಿಗಳಿಗೆ ಸರ್ಕಾರದ ವತಿಯಿಂದ ಧನಸಹಾಯ ನೀಡುವ ಕುರಿತು
ಮಾರ್ಗಸೂಚಿಯನ್ನು ಹೊರಡಿಸುವ ಬಗ್ಗೆ.
ಓದಲಾಗಿದೆ: (1) ಸರ್ಕಾರದ ಆದೇಶ ಸಂಖ್ಯೆ: ಕಂಇ 179 ಮುಅಬಿ 2014 ದಿನಾಂಕ: 07-11-2014
(2) ಸರ್ಕಾರದ ಆದೇಶ ಸಂಖ್ಯೆ: ಕಂಇ 101 ಮುಅಬಿ 2018 ದಿನಾಂಕ: 05.09.2018 (3) ಆಯುಕ್ತರು, ಧಾರ್ಮಿಕ ದತ್ತಿ ಇಲಾಖೆ ಇವರ ಪತ್ರ ಸಂಖ್ಯೆ:ಚಾರ್ಧಾಮ್ ಮಾನಸ ಸರೋವರ/ಸಿಆರ್/
01/2019-20 ದಿನಾಂಕ: 05-06-2018
ಪ್ರಸ್ತಾವನೆ :
ಮೇಲೆ (1) ರಲ್ಲಿ ಓದಲಾದ ಸರ್ಕಾರದ ಆದೇಶದಲ್ಲಿ 2014-15ನೇ ಸಾಲಿನ ಆಯವ್ಯಯ ಭಾಷಣದಲ್ಲಿ ಘೋಷಿಸಿದಂತೆ ಚಾರ್ಧಾಮ್ ಯಾತ್ರೆ ಕೈಗೊಂಡ ಯಾತ್ರಾರ್ಥಿಗಳಿಗೆ ಧನಸಹಾಯ ನೀಡುವ ಯೋಜನೆಯನ್ನು ಜಾರಿಗೆ ತರಲಾಗಿದ್ದು, ಈ ಯೋಜನೆಗೆ ಸಂಬಂಧಿಸಿದಂತೆ ಮಾರ್ಗಸೂಚಿಯನ್ನು ಸಹ ಹೊರಡಿಸಲಾಗಿರುತ್ತದೆ.
ಮೇಲೆ (2) ರಲ್ಲಿ ಓದಲಾದ ಸರ್ಕಾರದ ಆದೇಶದಲ್ಲಿ 2018-19ನೇ ಸಾಲಿನ ಲೆಕ್ಕ ಶೀರ್ಷಿಕೆ 2250-00-103-5-08 ಮಾನಸ ಸರೋವರ ಯಾತ್ರಾರ್ಥಿಗಳಿಗೆ ನೆರವು 100 ಧನಸಹಾಯ/ಪರಿಹಾರ ಯೋಜನೆಯಡಿ ಒದಗಿಸಿರುವ `. 646.00 ಲಕ್ಷಗಳ ಅನುದಾನದಲ್ಲಿ `. 346.00 ಲಕ್ಷಗಳ ಅನುದಾನವನ್ನು ಚಾರ್ಧಾಮ್ ಯಾತ್ರಾರ್ಥಿಗಳಿಗೆ ಹಣ ವಿನಿಯೋಗಿಸಲು ಅನುಮತಿ ನೀಡಿ, ಪರಿಷ್ಕøತ ಮಾರ್ಗಸೂಚಿಗಳನ್ನು ಹೊರಡಿಸಿ ಆದೇಶಿಸಲಾಗಿರುತ್ತದೆ.
ಮೇಲೆ (3) ರಲ್ಲಿ ಓದಲಾದ ಆಯುಕ್ತರು, ಧಾರ್ಮಿಕ ದತ್ತಿ ಇಲಾಖೆ ಇವರ ಪತ್ರದಲ್ಲಿ 2019-20ನೇ ಸಾಲಿನಲ್ಲಿ ಕೈಲಾಸ ಮಾನಸ ಸರೋವರ ಹಾಗೂ ಚಾರ್ಧಾಮ್ ಯಾತ್ರೆಗಳ ಯಾತ್ರಾರ್ಥಿಗಳಿಗೆ ಧನಸಹಾಯ ನೀಡುವ ಯೋಜನೆಯಡಿ ಆಯವ್ಯಯದಲ್ಲಿ `. 1000.00 ಲಕ್ಷಗಳನ್ನು ಒದಗಿಸಲಾಗಿದ್ದು, ಸದರಿ ಅನುದಾನದಲ್ಲಿ `. 550.00 ಲಕ್ಷಗಳ ಅನುದಾನವನ್ನು ಚಾರ್ಧಾಮ್ ಯಾತ್ರೆ ಕೈಗೊಂಡ ಯಾತ್ರಾರ್ಥಿಗಳಿಗಾಗಿ ವಿನಿಯೋಗಿಸಲು ಅನುಮತಿ ನೀಡುವಂತೆ ಹಾಗೂ 2019-20ನೇ ಸಾಲಿನ ಆಯವ್ಯಯದಲ್ಲಿ ಮಂಜೂರಾಗಿರುವ ಅನುದಾನಕ್ಕನುಗುಣವಾಗಿ ಫಲಾನುಭವಿಗಳಿಗೆ ಧನಸಹಾಯವನ್ನು ಪಾವತಿಸಲು ಮಾರ್ಗಸೂಚಿ ಹೊರಡಿಸುವಂತೆ ಕೋರಿರುತ್ತಾರೆ.
ಆಯುಕ್ತರು, ಧಾರ್ಮಿಕ ದತ್ತಿ ಇಲಾಖೆ ಇವರ ಪ್ರಸ್ತಾವನೆಯನ್ನು ಪರಿಶೀಲಿಸಿ, ಈ ಕೆಳಕಂಡಂತೆ ಆದೇಶಿಸಿದೆ.
ಸರ್ಕಾರದ ಆದೇಶ ಸಂಖ್ಯೆ: ಕಂಇ 11 ಮುಅಬಿ 2019, ಬೆಂಗಳೂರು, ದಿನಾಂಕ: 15 ನೇ ಅಕ್ಟೋಬರ್, 2019
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, 2019-20ನೇ ಸಾಲಿನ ಲೆಕ್ಕ ಶೀರ್ಷಿಕೆ "2250-00-103-5-08 ಮಾನಸ ಸರೋವರ ಯಾತ್ರಾರ್ಥಿಗಳಿಗೆ ನೆರವು 100 ಧನಸಹಾಯ/ಪರಿಹಾರ" ಯೋಜನೆಯಡಿ ಒದಗಿಸಿರುವ `. 1000.00 ಲಕ್ಷಗಳ ಅನುದಾನದಲ್ಲಿ `. 550.00 ಲಕ್ಷಗಳ ಅನುದಾನವನ್ನು ಚಾರ್ಧಾಮ್ ಯಾತ್ರಾರ್ಥಿಗಳಿಗೆ ವಿನಿಯೋಗಿಸಲು ಅನುಮತಿ ನೀಡಿದೆ ಹಾಗೂ ಚಾರ್ಧಾಮ್ ಯಾತ್ರೆ ಕೈಗೊಂಡ ಯಾತ್ರಾರ್ಥಿಗಳಿಗೆ ಧನಸಹಾಯ ನೀಡುವ ಉದ್ದೇಶಕ್ಕಾಗಿ ಅನುಬಂಧದಲ್ಲಿ ಲಗತ್ತಿಸಿರುವ ಮಾರ್ಗಸೂಚಿಗಳನ್ನು ಅನುಸರಿಸುವಂತೆ ಆದೇಶಿದೆ.
ಕೈಲಾಸ ಮಾನಸ ಸರೋವರ ಮತ್ತು ಚಾರ್ಧಾಮ್ ಯಾತ್ರೆ ಕೈಗೊಳ್ಳುವ ಯಾತ್ರಾರ್ಥಿಗಳಿಗನುಗುಣವಾಗಿ ಇನ್ನು ಮುಂದೆ ಪ್ರತಿ ಆರ್ಥಿಕ ವರ್ಷದ ಆಯವ್ಯಯದಲ್ಲಿ ಲೆಕ್ಕ ಶೀರ್ಷಿಕೆ "2250-00-103-5-08 ಮಾನಸ ಸರೋವರ ಯಾತ್ರಾರ್ಥಿಗಳಿಗೆ ನೆರವು 100 ಧನಸಹಾಯ/ಪರಿಹಾರ" ಯೋಜನೆಯಡಿ ಒದಗಿಸಲಾಗುವ ಅನುದಾನವನ್ನು ಹೊಂದಾಣಿಕೆ ಮಾಡಿ ವಿನಿಯೋಗಿಸಿಕೊಳ್ಳಲು ಆಯುಕ್ತರು, ಧಾರ್ಮಿಕ ದತ್ತಿ ಇಲಾಖೆ ಇವರಿಗೆ ಅನುಮತಿ ನೀಡಿದೆ.
(೭೯೭)೭೯೮ ಕರ್ನಾಟಕ ರಾಜ್ಯಪತ್ರ, ಗುರುವಾರ, ಡಿಸೆಂಬರ್ ೫, ೨೦೧೯ ಭಾಗ ೧ ಮುಂದುವರೆದು ಇನ್ನು ಮುಂದೆ ಆಯುಕ್ತರು, ಧಾರ್ಮಿಕ ದತ್ತಿ ಇಲಾಖೆ ಇವರ ಹಂತದಲ್ಲಿಯೇ ಈ ಯಾತ್ರೆಗಳಿಗೆ ಸಂಬಂಧಿಸಿದಂತೆ ಅರ್ಜಿಗಳನ್ನು ಆಹ್ವಾನಿಸಿ ಪತ್ರಿಕೆಗಳಲ್ಲಿ ಪ್ರಕಟಣೆಯನ್ನು ಹೊರಡಿಸಿ ಕ್ರಮ ಕೈಗೊಳ್ಳತಕ್ಕದ್ದು.
ಚಾರ್ಧಾಮ್ ಯಾತ್ರೆ ಕೈಗೊಳ್ಳುವ ಯಾತ್ರಾರ್ಥಿಗಳಿಗೆ ಧನಸಹಾಯಕ ನೀಡುವ ಕುರಿತು ಈ ಹಿಂದೆ ಹೊರಡಿಸಲಾಗಿದ್ದ ಸರ್ಕಾರದ ಆದೇಶ ಸಂಖ್ಯೆ: ಕಂಇ 101 ಮುಅಬಿ 2018, ದಿನಾಂಕ: 05.09.2018ರ ಮಾರ್ಗಸೂಚಿಯನ್ನು ಹಿಂಪಡೆಯಲಾಗಿದೆ.
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,
ಕೆ.ಪಿ. ಹೇಮಂತರಾಜು
ಸರ್ಕಾರದ ಅಧೀನ ಕಾರ್ಯದರ್ಶಿ (ಪ್ರ)
ಕಂದಾಯ ಇಲಾಖೆ. (ಮುಜರಾಯಿ)
ಸರ್ಕಾರಿ ಆದೇಶ ಸಂಖ್ಯೆ: ಕಂಇ 11 ಮುಅಬಿ 2019, ಬೆಂಗಳೂರು, ದಿನಾಂಕ: 15 ನೇ ಅಕ್ಟೋಬರ್, 2019ರ
ಮಾರ್ಗಸೂಚಿ
ಅನುಬಂಧ
ಕರ್ನಾಟಕ ರಾಜ್ಯದ ವತಿಯಿಂದ ಚಾರ್ಧಾಮ್ (ಬದರಿನಾಥ್, ಕೇದಾರ್ನಾಥ್, ಗಂಗೋತ್ರಿ, ಯಮುನೋತ್ರಿ) ಯಾತ್ರೆಯನ್ನು ಕೈಗೊಳ್ಳುವ ಯಾತ್ರಾರ್ಥಿಗಳಿಗೆ ಧನ ಸಹಾಯ ನೀಡುವ ದೃಷ್ಠಿಯಿಂದ ಈ ಯೋಜನೆಯನ್ನು ರೂಪಿಸಲಾಗಿದೆ.
1. ಕರ್ನಾಟಕದಿಂದ ಚಾರ್ಧಾಮ್ ಯಾತ್ರೆ ಕೈಗೊಳ್ಳುವ ಯಾತ್ರಾರ್ಥಿಗಳಿಗೆ ಗರಿಷ್ಠ `.20,000/-ರಂತೆ ಧನ ಸಹಾಯವನ್ನು ನೀಡಲಾಗುವುದು.
2. ಚಾರ್ಧಾಮ್ ಯಾತ್ರಾರ್ಥಿಗಳು ನಾಲ್ಕು ಪುಣ್ಯ ಕ್ಷೇತ್ರಗಳ (ಬದರಿನಾಥ್, ಕೇದಾರ್ನಾಥ್, ಗಂಗೋತ್ರಿ, ಯಮುನೋತ್ರಿ) ದರ್ಶನವನ್ನು ಪೂರೈಸಿರುವ ಬಗ್ಗೆ ಉತ್ತರಖಂಡ ಪ್ರವಾಸೋದ್ಯಮ ಮಂಡಳಿ ನೀಡುವ (Tourist/Pilgrim Registration & Tracking Access Card) ಪಿಲಿಗ್ರೀಮ್ ಕಾರ್ಡ್ನ್ನು ಕಡ್ಡಾಯವಾಗಿ ಹಾಜರುಪಡಿಸತಕ್ಕದ್ದು.
3. ಕರ್ನಾಟಕದ ಖಾಯಂ ನಿವಾಸಿಗಳು ಮಾತ್ರ ಈ ಧನಸಹಾಯ ಸೌಲಭ್ಯ ಪಡೆಯಲು ಅರ್ಹರಾಗಿರುತ್ತಾರೆ.
4. ಯಾತ್ರಾರ್ಥಿಗಳು ಕರ್ನಾಟಕದ ಖಾಯಂ ನಿವಾಸಿಗಳಾಗಿರುವ ಬಗ್ಗೆ ಈ ಕೆಳಕಂಡ ದಾಖಲೆಗಳನ್ನು ಕಡ್ಡಾಯವಾಗಿ ಒದಗಿಸತಕ್ಕದ್ದು.
I. ಕರ್ನಾಟಕ ರಾಜ್ಯ ಚುಣಾವಣಾ ಆಯೋಗ ನೀಡಿರುವ "ಗುರುತಿನ ಚೀಟಿ" (Voter ID) ಹಾಗೂ "ಆಧಾರ್ ಗುರುತಿನ ಚೀಟಿ" II. ಎರಡು ಭಾವಚಿತ್ರ.
5. ಈ ಯಾತ್ರೆಯು ಏಪ್ರಿಲ್ ಮಾಹೆಯಲ್ಲಿ ಪ್ರಾರಂಭವಾಗಿ, ನವಂಬರ್ 10ರಂದು ಅಂತಿಮ ಚಾರಣದ ಯಾತ್ರೆಯು ಮುಕ್ತಾಯಗೊಳ್ಳಲಿದ್ದು, ನವೆಂಬರ್ 30ರ ಅವಧಿಯೊಳಗಾಗಿ ಎಲ್ಲಾ ಅಗತ್ಯ ದಾಖಲೆಗಳನ್ನು ಆನ್ಲೈನ್/ ಮುದ್ದಾಂ ಮೂಲಕ ಸಲ್ಲಿಸತಕ್ಕದ್ದು. ನಂತರ ಸಲ್ಲಿಸಲಾದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.
6. ಕರ್ನಾಟಕ ರಾಜ್ಯದಿಂದ ನಾಲ್ಕು ಪುಣ್ಯ ಕ್ಷೇತ್ರಗಳ ಯಾತ್ರೆ ಕೈಗೊಳ್ಳುವ ಯಾತ್ರಾರ್ಥಿಗಳು ಆಯಾ ಆರ್ಥಿಕ ವರ್ಷದ ಮೊದಲ ದಿನಕ್ಕೆ ಅನ್ವಯಿಸುವಂತೆ ಏಪ್ರಿಲ್ 1 ಕ್ಕೆ 45 ವರ್ಷಗಳ ಮೇಲ್ಪಟ್ಟವರಾಗಿರತಕ್ಕದ್ದು. 45 ವರ್ಷ ವಯಸ್ಸಿನ ಕೆಳಗಿನವರ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ, 45 ವರ್ಷ ಮೇಲ್ಪಟ್ಟ ಯಾತ್ರಾರ್ಥಿಗಳು ವಯಸ್ಸಿಗೆ ಸಂಬಂಧಿಸಿದ ಸೂಕ್ತ ದಾಖಲೆಯನ್ನು ಹಾಜರುಪಡಿಸುವುದು.
7. ಯಾತ್ರಾರ್ಥಿಗಳು ಸಹಾಯಧನವನ್ನು ಒಂದು ಬಾರಿ ಪಡೆದ ನಂತರದಲ್ಲಿ, ಅದೇ ವ್ಯಕ್ತಿಗೆ ಎರಡನೇ ಬಾರಿ ಅನುದಾನ ನೀಡಲು ಪರಿಗಣಿಸಲಾಗುವುದಿಲ್ಲ. ಈ ಬಗ್ಗೆ ಯಾತ್ರಾರ್ಥಿಗಳು `. 20/-ಗಳ ಛಾಪಾ ಕಾಗದದಲ್ಲಿ ಈ ಹಿಂದೆ ಸಹಾಯಧನವನ್ನು ಪಡೆದಿಲ್ಲವೆಂದು ದೃಡೀಕರಣ ನೀಡತಕ್ಕದ್ದು.
8. ನಿಗದಿತ ಅವಧಿಯಲ್ಲಿ ಸ್ವೀಕರಿಸಿದ ಅರ್ಜಿಗಳನ್ನು ಪರಿಶೀಲಿಸಿ ಎಲ್ಲಾ ಅರ್ಹ ಅರ್ಜಿದಾರರ ಹೆಸರುಗಳನ್ನು ಲಾಟರಿ ಮುಖಾಂತರ ಅನುದಾನಕ್ಕನುಗುಣವಾಗಿ ಫಲಾನುಭವಿಗಳನ್ನು ಆಯ್ಕೆ ಮಾಡಿ ಸಹಾಯಧನವನ್ನು ಆರ್.ಟಿ.ಜಿ.ಎಸ್ ಮೂಲಕ ನೀಡಲಾಗುವುದು. ಸದರಿ ಲಾಟರಿಯನ್ನು ರಾಜ್ಯ ಧಾರ್ಮಿಕ ಪರಿಷತ್ತಿನ ನ್ಯಾಯಿಕ ಸದಸ್ಯರು, ಕೇಂದ್ರ ಸ್ಥಾನಿಕ ಸಹಾಯಕರು ಹಾಗೂ ಪ್ರವರ್ಗ 'ಎ' ದೇವಾಲಯದ ಮೂರು ಜನ ಕಾರ್ಯನಿರ್ವಾಹಕ ಅಧಿಕಾರಿಗಳನ್ನೊಳಗೊಂಡ 05 ಜನ ಸದಸ್ಯರ ಸಮಿತಿಯ ಸಮಕ್ಷಮದಲ್ಲಿ ಪೂರ್ಣವಾಗಿ ವೀಡಿಯೋ ಚಿತ್ರೀಕರಣದೊಂದಿಗೆ ಮಾಡುವುದು.
9. ಕರ್ನಾಟಕ ರಾಜ್ಯದಲ್ಲಿರುವ ಕೇಂದ್ರ/ ರಾಜ್ಯ ಸರ್ಕಾರಿ ನೌಕರರು ಸಹ ಈ ಸೌಲಭ್ಯವನ್ನು ಪಡೆಯಲು ಅರ್ಹರಾಗಿರುತ್ತಾರೆ.
10. ಚಾರ್ಧಾಮ್ ಯಾತ್ರೆ ಕೈಗೊಳ್ಳುವ ಯಾತ್ರಾರ್ಥಿಗಳಿಗೆ ಒಟ್ಟಾರೆ ಯೋಜನೆಯ ಬಗ್ಗೆ ಪ್ರಕಟಣೆ ನೀಡಿ ನಿರ್ದಿಷ್ಟ ಸಂಖ್ಯೆಯ ಫಲಾನುಭವಿಗಳಿಗೆ ಮಾತ್ರ ಸಹಾಯ ಧನ ನೀಡುವ ಬಗ್ಗೆ ಸಾರ್ವಜನಿಕರಿಗೆ ಸೂಚನೆ ನೀಡಿ ಅರ್ಜಿಗಳನ್ನು ಆಹ್ವಾನಿಸಿ ಅನುದಾನದ ಲಭ್ಯತೆಯ ಮೇರೆಗೆ ಮಾತ್ರ ಧನ ಸಹಾಯ ನೀಡತಕ್ಕದ್ದು.
PR-383
ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಡಿಸೆಂಬರ್ ೫, ೨೦೧೯ ೭೯೯ಕಂದಾಯ ಸಚಿವಾಲಯ
ವಿಷಯ : ಕೈಲಾಸ ಮಾನಸ ಸರೋವರ ಯಾತ್ರೆ ಕೈಗೊಳ್ಳುವ ಯಾತ್ರಾರ್ಥಿಗಳಿಗೆ ಸರ್ಕಾರದ ವತಿಯಿಂದ ಧನಸಹಾಯವನ್ನು ಪಾವತಿಸುವ ಕುರಿತು ಮಾರ್ಗಸೂಚಿ.
ಓದಲಾಗಿದೆ: (1) ಸರ್ಕಾರದ ಆದೇಶ ಸಂಖ್ಯೆ: ಕಂಇ 01 ಮುಅಬಿ 2006 ದಿನಾಂಕ: 03-06-2006.
(2) ಸರ್ಕಾರದ ಆದೇಶ ಸಂಖ್ಯೆ: ಕಂಇ 107 ಮುಅಬಿ 2010 ದಿನಾಂಕ: 02-07-2010.
(3) ಸರ್ಕಾರದ ಆದೇಶ ಸಂಖ್ಯೆ: ಕಂಇ 102 ಮುಅಬಿ 2018 ದಿನಾಂಕ: 05.09.2018.
(4) ಆಯುಕ್ತರು, ಧಾರ್ಮಿಕ ದತ್ತಿ ಇಲಾಖೆ ಇವರ ಪತ್ರ ಸಂಖ್ಯೆ: ಚಾರ್ಧಾಮ್ ಮಾನಸ ಸರೋವರ/ಸಿಆರ್/
01/2019-20, ದಿನಾಂಕ: 05.09.2018
ಪ್ರಸ್ತಾವನೆ :-
ಮೇಲೆ (1)ರಲ್ಲಿ ಓದಲಾದ ಸರ್ಕಾರದ ಆದೇಶ ಕರ್ನಾಟಕ ಸರ್ಕಾರವು 2006-07ನೇ ಸಾಲಿನ ಆಯವ್ಯಯ ಭಾಷಣದಲ್ಲಿ ಪ್ರಕಟಿಸಿರುವಂತೆ ಕೈಲಾಸ ಮಾನಸ ಸರೋವರ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಯೋಜನೆಯಡಿ ಕೈಲಾಸ ಮಾನಸ ಸರೋವರ ಯಾತ್ರೆ ಕೈಗೊಂಡ ಯಾತ್ರಾರ್ಥಿಗಳಿಗೆ ತಲಾ `. 25,000.00ಗಳ ಧನ ಸಹಾಯ ಮಂಜೂರು ಮಾಡಲು ಮಾರ್ಗಸೂಚಿಯನ್ನು ಹೊರಡಿಸಲಾಗಿರುತ್ತದೆ.
ಮೇಲೆ (2)ರಲ್ಲಿ ಓದಲಾದ ಸರ್ಕಾರದ ಆದೇಶದಲ್ಲಿ ಕೈಲಾಸ ಮಾನಸ ಸರೋವರ ಯೋಜನೆಯಡಿ ಕರ್ನಾಟಕದಿಂದ ಕೈಲಾಸ ಮಾನಸ ಸರೋವರ ಯಾತ್ರೆ ಕೈಗೊಳ್ಳುವ ಪ್ರತಿ ಯಾತ್ರಿಕರಿಗೆ ಸರ್ಕಾರವು ನೀಡುತ್ತಿರುವ ಧನಸಹಾಯ `.25.000.00ಗಳನ್ನು `.30,000.00ಗಳಿಗೆ ಹೆಚ್ಚಿಸಿ ಆದೇಶ ಹೊರಡಿಸಲಾಗಿರುತ್ತದೆ.
ಮೇಲೆ (3) ರಲ್ಲಿ ಓದಲಾದ ಸರ್ಕಾರದ ಆದೇಶದಲ್ಲಿ 2018-19ನೇ ಸಾಲಿನ ಲೆಕ್ಕ ಶೀರ್ಷಿಕೆ "2250-00-103-5-08 ಮಾನಸ ಸರೋವರ ಯಾತ್ರಾರ್ಥಿಗಳಿಗೆ ನೆರವು 100 ಧನ ಸಹಾಯ/ಪರಿಹಾರ" ಯೋಜನೆಯಡಿ ಒದಗಿಸಿರುವ `.646.00 ಲಕ್ಷಗಳ ಅನುದಾನದಲ್ಲಿ `.300.00 ಲಕ್ಷಗಳ ಅನುದಾನವನ್ನು ಕೈಲಾಸ ಮಾನಸ ಸರೋವರ ಯಾತ್ರೆ ಕೈಗೊಂಡ ಯಾತ್ರಾರ್ಥಿಗಳಿಗೆ ವಿನಿಯೋಗಿಸಲು ಅನುಮತಿ ನೀಡಿ, ಪರಿಷ್ಕøತ ಮಾರ್ಗಸೂಚಿಗಳನ್ನು ಹೊರಡಿಸಿ ಆದೇಶಿಸಲಾಗಿರುತ್ತದೆ.
ಮೇಲೆ (4)ರಲ್ಲಿ ಓದಲಾದ ಆಯುಕ್ತರು, ಧಾರ್ಮಿಕ ದತ್ತಿ ಇಲಾಖೆ ಇವರ ಪತ್ರದಲ್ಲಿ 2019-20ನೇ ಸಾಲಿನ ಆಯವ್ಯಯದಲ್ಲಿ ಕೈಲಾಸ ಮಾನಸ ಸರೋವರ ಹಾಗೂ ಚಾರ್ಧಾಮ್ ಯಾತ್ರೆಗಳ ಯಾತ್ರಾರ್ಥಿಗಳಿಗೆ ಧನ ಸಹಾಯ ನೀಡುವ ಯೋಜನೆಯಡಿ `. 1000.00 ಲಕ್ಷಗಳನ್ನು ಒದಗಿಸಲಾಗಿದ್ದು, ಸದರಿ ಅನುದಾನದಲ್ಲಿ `. 450.00 ಲಕ್ಷಗಳ ಅನುದಾನವನ್ನು ಕೈಲಾಸ ಮಾನಸ ಸರೋವರ ಯಾತ್ರೆ ಕೈಗೊಂಡ ಯಾತ್ರಾರ್ಥಿಗಳಿಗಾಗಿ ವಿನಿಯೋಗಿಸಲು ಅನುಮತಿ ನೀಡುವಂತೆ ಹಾಗೂ 2019-20 ನೇ ಸಾಲಿನ ಆಯವ್ಯಯದಲ್ಲಿ ಮಂಜೂರಾಗಿರುವ ಅನುದಾನಕ್ಕನುಗುಣವಾಗಿ ಫಲಾನುಭವಿಗಳಿಗೆ ಧನಸಹಾಯವನ್ನು ಪಾವತಿಸಲು ಮಾರ್ಗಸೂಚಿ ಹೊರಡಿಸುವಂತೆ ಕೋರಿರುತ್ತಾರೆ.
ಆಯುಕ್ತರು, ಧಾರ್ಮಿಕ ದತ್ತಿ ಇಲಾಖೆ ಇವರ ಪ್ರಸ್ತಾವನೆಯನ್ನು ಪರಿಶೀಲಿಸಿ, ಈ ಕೆಳಕಂಡಂತೆ ಆದೇಶಿಸಿದೆ.
ಸರ್ಕಾರದ ಆದೇಶ ಸಂಖ್ಯೆ:ಕಂಇ 10 ಮುಅಬಿ 2019, ಬೆಂಗಳೂರು, ದಿನಾಂಕ: 15ನೇ ಅಕ್ಟೋಬರ್, 2019
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, 2019-20ನೇ ಸಾಲಿನ ಆಯವ್ಯಯದಲ್ಲಿ ಲೆಕ್ಕ ಶೀರ್ಷಿಕೆ "2250-00-103-5-08 ಮಾನಸ ಸರೋವರ ಯಾತ್ರಾರ್ಥಿಗಳಿಗೆ ನೆರವು 100 ಧನ ಸಹಾಯ/ಪರಿಹಾರ" ಯೋಜನೆಯಡಿ ಒದಗಿಸಿರುವ `.1000.00 ಲಕ್ಷಗಳ ಅನುದಾನದಲ್ಲಿ `. 450.00 ಲಕ್ಷಗಳ ಅನುದಾನವನ್ನು ಕೈಲಾಸ ಮಾನಸ ಸರೋವರ ಯಾತ್ರೆ ಕೈಗೊಂಡ ಯಾತ್ರಾರ್ಥಿಗಳಿಗೆ ವಿನಿಯೋಗಿಸಲು ಅನುಮತಿ ನೀಡಿದೆ ಹಾಗೂ ಕೈಲಾಸ ಮಾನಸ ಸರೋವರ ಯಾತ್ರೆ ಕೈಗೊಳ್ಳುವ ಯಾತ್ರಾರ್ಥಿಗಳಿಗೆ ಧನಸಹಾಯ ನೀಡುವ ಅನುಷ್ಠಾನಕ್ಕಾಗಿ ಅನುಬಂಧದಲ್ಲಿ ಲಗತ್ತಿಸಿರುವ ಮಾರ್ಗಸೂಚಿಗಳನ್ನು ಅನುಸರಿಸುವಂತೆ ಆದೇಶಿಸಿದೆ.
ಕೈಲಾಸ ಮಾನಸ ಸರೋವರ ಮತ್ತು ಚಾರ್ಧಾಮ್ ಯಾತ್ರೆ ಕೈಗೊಳ್ಳುವ ಯಾತ್ರಾರ್ಥಿಗಳಿಗನುಗುಣವಾಗಿ ಪ್ರತಿ ಆರ್ಥಿಕ ವರ್ಷದ ಆಯವ್ಯಯದಲ್ಲಿ ಲೆಕ್ಕ ಶೀರ್ಷಿಕೆ "2250-00-103-5-08 ಮಾನಸ ಸರೋವರ ಯಾತ್ರಾರ್ಥಿಗಳಿಗೆ ನೆರವು 100 ಧನಸಹಾಯ/ಪರಿಹಾರ" ಯೋಜನೆಯಡಿ ಒದಗಿಸಲಾಗುವ ಅನುದಾನವನ್ನು ಹೊಂದಾಣಿಕೆ ಮಾಡಿ ವಿನಿಯೋಗಿಸಿಕೊಳ್ಳಲು ಆಯುಕ್ತರು, ಧಾರ್ಮಿಕ ದತ್ತಿ ಇಲಾಖೆ ಇವರಿಗೆ ಅನುಮತಿ ನೀಡಿದೆ.
ಮುಂದುವರೆದು ಆಯುಕ್ತರು, ಧಾರ್ಮಿಕ ದತ್ತಿ ಇಲಾಖೆ ಇವರ ಹಂತದಲ್ಲಿಯೇ ಈ ಯಾತ್ರೆಗಳಿಗೆ ಸಂಬಂಧಿಸಿದಂತೆ ಅರ್ಜಿಗಳನ್ನು ಆಹ್ವಾನಿಸಿ ಪತ್ರಿಕೆಗಳಲ್ಲಿ ಪ್ರಕಟಣೆಯನ್ನು ಹೊರಡಿಸಿ ಕ್ರಮ ಕೈಗೊಳ್ಳತಕ್ಕದ್ದು.
ಕೈಲಾಸ ಮಾನಸ ಸರೋವರ ಯಾತ್ರೆ ಕೈಗೊಳ್ಳುವ ಯಾತ್ರಾರ್ಥಿಗಳಿಗೆ ಧನಸಹಾಯಕ ನೀಡುವ ಕುರಿತು ಈ ಹಿಂದೆ ಹೊರಡಿಸಲಾಗಿದ್ದ, ಸರ್ಕಾರದ ಆದೇಶ ಸಂಖ್ಯೆ:ಕಂಇ 102 ಮುಅಬಿ 2018 ದಿನಾಂಕ:05-09-2018ರ ಮಾರ್ಗಸೂಚಿಯನ್ನು ಹಿಂಪಡೆಯಲಾಗಿದೆ.
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ, ೮೦೦ ಕರ್ನಾಟಕ ರಾಜ್ಯಪತ್ರ, ಗುರುವಾರ, ಡಿಸೆಂಬರ್ ೫, ೨೦೧೯ ಭಾಗ ೧
ಸರ್ಕಾರಿ ಆದೇಶ ಸಂಖ್ಯೆ : ಕಂಇ 10 ಮುಅಬಿ 2019, ಬೆಂಗಳೂರು, ದಿನಾಂಕ: 15 ನೇ ಅಕ್ಟೋಬರ್, 2019ರ
ಮಾರ್ಗಸೂಚಿ
ಅನುಬಂಧ
2019-20ನೇ ಸಾಲಿನಲ್ಲಿ ಕರ್ನಾಟಕ ರಾಜ್ಯದ ವತಿಯಿಂದ ಕೈಲಾಸ ಮಾನಸ ಸರೋವರ ಯಾತ್ರೆಯನ್ನು ಕೈಗೊಳ್ಳುವ ಯಾತ್ರಾರ್ಥಿಗಳಿಗೆ ಧನಸಹಾಯ ಪಾವತಿಸಲು ಅನುಸರಿಸಬೇಕಾದ ಮಾರ್ಗಸೂಚಿಗಳು. 1. ಕರ್ನಾಟಕದಿಂದ ಕೈಲಾಸ ಮಾನಸ ಸರೋವರ ಯಾತ್ರೆ ಕೈಗೊಳ್ಳುವ ಯಾತ್ರಾರ್ಥಿಗಳಿಗೆ ಗರಿಷ್ಠ `.30,000/-ರಂತೆ ಧನ ಸಹಾಯವನ್ನು ನೀಡಲಾಗುವುದು.
2. ಕರ್ನಾಟಕದ ಖಾಯಂ ನಿವಾಸಿಗಳು ಮಾತ್ರ ಈ ಧನ ಸಹಾಯ ಸೌಲಭ್ಯ ಪಡೆಯಲು ಅರ್ಹರಾಗಿರುತ್ತಾರೆ. ಈ ಉದ್ದೇಶಕ್ಕಾಗಿ ಪಾಸ್ಪೋರ್ಟ್ನಲ್ಲಿ ನಮೂದಿಸಲಾಗಿರುವ ವಿಳಾಸವನ್ನು ಪರಿಗಣಿಸಲಾಗುವುದು.
3. ಯಾತ್ರಾರ್ಥಿಗಳು ಕರ್ನಾಟಕದ ಖಾಯಂ ನಿವಾಸಿಗಳಾಗಿರುವ ಬಗ್ಗೆ ಈ ಕೆಳಕಂಡ ದಾಖಲೆಗಳನ್ನು ಕಡ್ಡಾಯವಾಗಿ ಒದಗಿಸತಕ್ಕದ್ದು.
I. ಕರ್ನಾಟಕ ರಾಜ್ಯ ಚುಣಾವಣಾ ಆಯೋಗ ನೀಡಿರುವ "ಗುರುತಿನ ಚೀಟಿ" (Voter ID) ಹಾಗೂ "ಆಧಾರ್ ಗುರುತಿನ ಚೀಟಿ" II. ಎರಡು ಭಾವಚಿತ್ರ.
4. ಕೈಲಾಸ ಮಾನಸ ಸರೋವರ ಯಾತ್ರೆ ಕೈಗೊಂಡ ಯಾತ್ರಾರ್ಥಿಗಳು ಸರ್ಕಾರದ ಧನ ಸಹಾಯ ಪಡೆಯಲು ಇಚ್ಚಿಸಿದಲ್ಲಿ ಆಯಾ ಸಾಲಿನ ನವೆಂಬರ್ 30ರ ಒಳಗಾಗಿ ಎಲ್ಲಾ ಅಗತ್ಯ ದಾಖಲೆಗಳನ್ನು ಆನ್ಲೈನ್/ ಮುದ್ದಾಂ ಮೂಲಕ ಅರ್ಜಿಗಳನ್ನು ಸಲ್ಲಿಸತಕ್ಕದ್ದು, ನಿಗದಿತ ಅವಧಿ ಪೂರ್ಣಗೊಂಡ ನಂತರ ಸಲ್ಲಿಸಲಾದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.
5. ಕೇಂದ್ರ ಸರ್ಕಾರದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಆಯೋಜಿಸಿದ ಮಾರ್ಗವಾಗಿ ಯಾತ್ರೆ ಕೈಗೊಂಡ ಯಾತ್ರಾರ್ಥಿಗಳು ಕೇಂದ್ರ ಸರ್ಕಾರದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ನೀಡುವ ಪ್ರಮಾಣ ಪತ್ರ ಹಾಗೂ ಗ್ರೂಪ್ ವೀಸಾ, ಪಾಸ್ಪೋರ್ಟ್ನ ಮುಖಪ್ರತಿ ಹಾಗೂ ವಿಳಾಸ ಮತ್ತು ಮುದ್ರಿತ ಸೀಲಿನ ಕಲರ್ ಜೆóರಾಕ್ಸ್ ಪ್ರತಿ.
6. ನೇಪಾಳ ಮಾರ್ಗವಾಗಿ ಹೋಗಿ ಬಂದವರಿಗೆ ಚೀನಾ ಸರ್ಕಾರದ ಉದ್ದಿಮೆಯಾದ ಸಿ.ಐ.ಪಿ.ಎಸ್.ಸಿ (China India Pilgrim Service Center) ಲಾಸ್ಸಾ, ಟಿಬೆಟ್-ಚೀನಾ ನೀಡುವ ಪ್ರಮಾಣ ಪತ್ರ ಹಾಗೂ ಪಾಸ್ಪೋರ್ಟ್ನಲ್ಲಿ ಚೀನಾ ಸರ್ಕಾರದ ಮುದ್ರೆ ಹೊಂದಿರತಕ್ಕದ್ದು (ಪಾಸ್ಪೋರ್ಟ್ನ ಮುಖಪ್ರತಿ ಹಾಗೂ ವಿಳಾಸ ಮತ್ತು ಮುದ್ರಿತ ಸೀಲಿನ ಕಲರ್ ಜೆóರಾಕ್ಸ್ ಪ್ರತಿ) ಹಾಗೂ ಈ ಸಂಬಂಧ ಚೀನಾ ಸರ್ಕಾರ ನೀಡಿದ ವೀಸಾ (ಗ್ರೂಪ್ ವೀಸಾ) ಪ್ರತಿಯನ್ನು ಒದಗಿಸತಕ್ಕದ್ದು.
7. ಯಾತ್ರೆಯನ್ನು ಕೈಗೊಳ್ಳುವ ಬಗ್ಗೆ ಭಾರತ ಸರ್ಕಾರಕ್ಕೆ ಅರ್ಜಿ ಸಲ್ಲಿಸುವ ಮತ್ತು ಸದರಿ ಅರ್ಜಿಯ ಬಗ್ಗೆ ಸಂಬಂಧಿಸಿದ ಪ್ರಕ್ರಿಯೆಗಳಿಗೆ ತಗಲುವ ಸಂಪೂರ್ಣ ವೆಚ್ಚವನ್ನು ಹಾಗೂ ಚೀನಾ ದೇಶಕ್ಕೆ ಪಾವತಿಸಬೇಕಾಗಿರುವ ಮೊತ್ತವನ್ನು ಸಂಬಂಧಪಟ್ಟ ಯಾತ್ರಿಕರೇ ಭರಿಸತಕ್ಕದ್ದು, ಆಯ್ಕೆಯಾದ ನಂತರ ಪ್ರವಾಸದ ಇತರೆ ವೆಚ್ಚಗಳ ಸಂಬಂಧ ಗರಿಷ್ಠ `. 30,000/-ಗಳ ಸಹಾಯಧನವನ್ನು ನೀಡಲಾಗುವುದು.
8. ಯಾತ್ರಾರ್ಥಿಗಳು ಸಹಾಯಧನವನ್ನು ಒಂದು ಬಾರಿ ಪಡೆದ ನಂತರದಲ್ಲಿ ಅದೇ ವ್ಯಕ್ತಿಗೆ ಎರಡನೇ ಬಾರಿ ಅನುದಾನ ನೀಡಲು ಪರಿಗಣಿಸಲಾಗುವುದಿಲ್ಲ, ಈ ಬಗ್ಗೆ ಯಾತ್ರಾರ್ಥಿಗಳು `. 20/-ಗಳ ಛಾಪಾ ಕಾಗದದಲ್ಲಿ ಈ ಹಿಂದೆ ಸಹಾಯಧನವನ್ನು ಪಡೆದಿಲ್ಲವೆಂದು ದೃಡೀಕರಣ ನೀಡತಕ್ಕದ್ದು.
9. ನಿಗದಿತ ಅವಧಿಯಲ್ಲಿ ಸ್ವೀಕರಿಸಿದ ಎಲ್ಲಾ ಅರ್ಹ ಅರ್ಜಿದಾರರ ಹೆಸರುಗಳನ್ನು ಪರಿಶೀಲಿಸಿ ಅರ್ಜಿಗಳ ಸಂಖ್ಯೆಯು 1500ಕ್ಕಿಂತ ಕಡಿಮೆ ಇದ್ದಲ್ಲಿ, ಎಲ್ಲಾ ಅರ್ಹ ಫಲಾನುಭವಿಗಳಿಗೆ ಸಹಾಯ ಧನ ವಿತರಿಸುವುದು. ಅರ್ಜಿಗಳ ಸಂಖ್ಯೆ 1500ಕ್ಕಿಂತ ಹೆಚ್ಚಾದಲ್ಲಿ, ಲಾಟರಿ ಮುಖಾಂತರ ಅನುದಾನಕ್ಕನುಗುಣವಾಗಿ ಫಲಾನುಭವಿಗಳನ್ನು ಆಯ್ಕೆ ಮಾಡಿ ಸಹಾಯ ಧನವನ್ನು ಆರ್.ಟಿ.ಜಿ.ಎಸ್ ಮೂಲಕ ನೀಡಲಾಗುವುದು. ಸದರಿ ಲಾಟರಿಯನ್ನು ರಾಜ್ಯ ಧಾರ್ಮಿಕ ಪರಿಷತ್ತಿನ ನ್ಯಾಯಿಕ ಸದಸ್ಯರು, ಕೇಂದ್ರ ಸ್ಥಾನಿಕ ಸಹಾಯಕರು ಹಾಗೂ ಪ್ರವರ್ಗ 'ಎ' ದೇವಾಲಯದ ಮೂರು ಜನ ಕಾರ್ಯನಿರ್ವಾಹಕ ಅಧಿಕಾರಿಗಳನ್ನೊಳಗೊಂಡ 05 ಜನ ಸದಸ್ಯರ ಸಮಿತಿಯ ಸಮಕ್ಷಮದಲ್ಲಿ ಪೂರ್ಣವಾಗಿ ವೀಡಿಯೋ ಚಿತ್ರೀಕರಣದೊಂದಿಗೆ ಮಾಡುವುದು.
10. ಸಹಾಯಾನುದಾನ ಕೋರಿ ಬಂದಂತಹ ಅರ್ಜಿಗಳನ್ನು ಧಾರ್ಮಿಕ ದತ್ತಿ ಆಯುಕ್ತರು ಸ್ವೀಕರಿಸಿ ಪರಿಶೀಲಿಸಿ, ಅನುದಾನ ಮಂಜೂರು ಮಾಡಲು ಕ್ರಮ ಕೈಗೊಳ್ಳುವುದು.
PR-384
SC-25
ಕೆ.ಪಿ. ಹೇಮಂತರಾಜು ಸರ್ಕಾರದ ಅಧೀನ ಕಾರ್ಯದರ್ಶಿ,(ಪ್ರ) ಕಂದಾಯ ಇಲಾಖೆ. (ಮುಜರಾಯಿ)
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ತಿದ್ದುಪಡಿ
ಸಂಖ್ಯೆ: ಆಕುಕ 69 ಸಿಜಿಇ 2018, ಬೆಂಗಳೂರು, ದಿನಾಂಕ: 10.10.2019.
ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ನ ಟ್ರಸ್ಟಿಗಳ ಮಂಡಳಿಗೆ ಹೆಚ್ಚುವರಿ ಸದಸ್ಯರನ್ನು ಸೇರಿಸುವ ಕುರಿತು ಹೊರಡಿಸಲಾದ ಸರ್ಕಾರದ ಆದೇಶ ಸಂಖ್ಯೆ: ಆಕುಕ 91 ಸಿಜಿಇ 2018, ದಿನಾಂಕ: 26.09.2018ರಲ್ಲಿ ಆದೇಶದ ಸಂಖ್ಯೆ: "ಆಕುಕ 91 ಸಿಜಿಇ 2018" ಎಂಬುದರ ಬದಲಾಗಿ "ಆಕುಕ 69 ಸಿಜಿಇ 2018" ಎಂದು ತಿದ್ದಿ ಓದಿಕೊಳ್ಳತಕ್ಕದು.
PR-385
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಡಿಸೆಂಬರ್ ೫, ೨೦೧೯ ೮೦೧
ಉನ್ನತ ಶಿಕ್ಷಣ ಸಚಿವಾಲಯ
ವಿಷಯ : ಚಿಕ್ಕಬಳ್ಳಾಪುರದ ಕೆ. ವೆಂಕಟಪತೆಪ್ಪ ದೈಹಿಕ ಶಿಕ್ಷಣ ಮಹಾವಿದ್ಯಾಲಯದ ಸಿಬ್ಬಂದಿಗಳನ್ನು ವೇತನಾನುದಾನಕ್ಕೆ ಒಳಪಡಿಸುವ ಬಗ್ಗೆ.
ಓದಲಾಗಿದೆ : 1. ನಿರ್ದೇಶಕರು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ಬೆಂಗಳೂರು ಇವರ ಪತ್ರ
ಸಂಖ್ಯೆ: ಶಿತ3/ಇತರೆ/ಅನುದಾನ/03/2006-07, ದಿನಾಂಕ: 17.4.2012, 30.1.2013 ಮತ್ತು 5.2.2013.
2. ಜಂಟಿ ನಿರ್ದೇಶಕರು, ಕಾಲೇಜು ಶಿಕ್ಷಣ ಇಲಾಖೆ, ಬೆಂಗಳೂರು ಇವರ ಪರಿಶೀಲನಾ ವರದಿ ಸಂಖ್ಯೆ
:ಕಾಶಿಇ/01/
ವೇಅನುದಾನ/2012-13/ಜಂನಿಶೈ, ದಿನಾಂಕ: 25.03.2013.
3. ಪ್ರಾದೇಶಿಕ ಜಂಟಿ ನಿರ್ದೇಶಕರು, ಕಾಲೇಜು ಶಿಕ್ಷಣ ಇಲಾಖೆ, ಮೈಸೂರು ಇವರ ಪತ್ರ ಸಂಖ್ಯೆ:
ಪ್ರಾಕಮೈ/ಕಾಶಿಇ/
402/ಜಂನಿವೈಕ/2013-14, ದಿನಾಂಕ: 28.1.2014.
4. ಸರ್ಕಾರದ ಆದೇಶ ಸಂಖ್ಯೆ: ಇಡಿ 141 ಯುಆರ್ಸಿ 2015, ದಿನಾಂಕ: 09.11.2016.
5. ಆಯುಕ್ತರು, ಕಾಲೇಜು ಶಿಕ್ಷಣ ಇಲಾಖೆ ಇವರ ಪತ್ರ ಸಂಖ್ಯೆ: ಕಾಶಿಇ/ಶಿತ/ಇತೆ/ಅನುದಾನ03/06-07/ನೇವಿ-2, ದಿನಾಂಕ: 06.09.2018.
ಪ್ರಸ್ತಾವನೆ :-
ಮೇಲೆ ಓದಲಾದ (1)(2)(3)ರ ಪತ್ರಗಳಲ್ಲಿ ಸರ್ಕಾರಕ್ಕೆ ಸಲ್ಲಿಸಿರುವ ಪ್ರಸ್ತಾವನೆಗಳನ್ನು ಪರಿಶೀಲಿಸಿ ಯುಜಿಸಿ/ಎನ್.ಸಿ.ಟಿ.ಇ ಮಾರ್ಗಸೂಚಿಗಳನ್ವಯ ಶ್ರೀ ಕೆ. ವೆಂಕಟಪತೆಪ್ಪ ದೈಹಿಕ ಶಿಕ್ಷಣ ಮಹಾವಿದ್ಯಾಲಯ ಚಿಕ್ಕಬಳ್ಳಾಪುರ, ಇಲ್ಲಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯನ್ನು ವೇತನಾನುದಾನಕ್ಕೆ ಒಳಪಡಿಸುವ ಕುರಿತು ದಿನಾಂಕ: 12-03-2013ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಿದಂತೆ ಸದರಿ ದೈಹಿಕ ಶಿಕ್ಷಣ ಮಹಾವಿದ್ಯಾಲಯವನ್ನು ಅನುದಾನಕ್ಕೆ ಒಳಪಡಿಸಿ ಮೇಲೆ ಓದಲಾದ (4)ರಲ್ಲಿ ಆದೇಶ ಹೊರಡಿಸಲಾಗಿದೆ.
ಮೇಲೆ ಓದಲಾದ (5) ರ ಪತ್ರದಲ್ಲಿ ಆಯುಕ್ತರು ಕಾಲೇಜು ಶಿಕ್ಷಣ ಇಲಾಖೆ, ಬೆಂಗಳೂರು, ಇವರು ಎನ್.ಸಿ.ಟಿ.ಇ ನಿಯಮಗಳಂತೆ ಕೆ.
ವೆಂಕಟಪತೆಪ್ಪ ದೈಹಿಕ ಶಿಕ್ಷಣ ಮಹಾವಿದ್ಯಾಲಯ, ಚಿಕ್ಕಬಳ್ಳಾಪುರ ಇಲ್ಲಿ ಕಾರ್ಯನಿರ್ವಹಿಸುತ್ತಿರುವ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳನ್ನು ವೇತನಾನುದನಕ್ಕೆ ಒಳಪಡಿಸುವಂತೆ ಸರ್ಕಾರಕ್ಕೆ ಸಲ್ಲಿಸಿರುವ ಪ್ರಸ್ತಾವನೆಯನ್ವಯ ಸದರಿ ಕಾಲೇಜು 1983ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಸಂಯೋಜನೆ ಪಡೆದು ಸತತವಾಗಿ ನಡೆಯುತ್ತಿರುವುದರಿಂದ ಹಾಗೂ ಸದರಿ ಕಾಲೇಜಿನ ಮೇಲೆ ಯಾವುದೇ ನ್ಯಾಯಾಲಯ ಪ್ರಕರಣಗಳು ಇಲ್ಲದಿರುವುದನ್ನು ಹಾಗೂ ಸದರಿ ಕಾಲೇಜು NCTE ನಿಯಮದಂತೆ ಸ್ವಂತ ಕಟ್ಟಡ ಹೊಂದಿರುವುದರಿಂದ ಹಾಗೂ ಸದರಿ ಕಾಲೇಜು ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳನ್ನು ಹೊಂದಿರುವುದರಿಂದ ಹಾಗೆಯೇ ಈ ಕಾಲೇಜಿನಲ್ಲಿ ಸೇವೆ ಸಲ್ಲಿಸುತ್ತಿರುವ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಎನ್.ಸಿ.ಟಿ.ಇ / ರಾಜ್ಯ ನೇಮಕಾತಿ ನಿಯಮಗಳನ್ವಯ ಹೊಂದಿರುವ ಶೈಕ್ಷಣಿಕ ವಿದ್ಯಾರ್ಹತೆ ಇತ್ಯಾದಿಗಳನ್ನು ನಿಯಮಾನುಸಾರ ವಿವರವಾಗಿ ಪರಿಶೀಲಿಸಲಾಗಿದ್ದು ಈ ಕೆಳಕಂಡ ಅರ್ಹ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳನ್ನು ವೇತನಾನುದಾನಕ್ಕೆ ಒಳಪಡಿಸಲು ಸರ್ಕಾರವು ತೀರ್ಮಾನಿಸಿದೆ ಅದರಂತೆ ಈ ಕೆಳಕಂಡ ಆದೇಶ.
ಸರ್ಕಾರಿ ಆದೇಶ ಸಂಖ್ಯೆ: ಇಡಿ 411 ಯುಆರ್ಸಿ 2018, ಬೆಂಗಳೂರು, ದಿನಾಂಕ: 18-10-2019.
ಮೇಲೆ ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನಲೆಯಲ್ಲಿ, ಶ್ರೀ ಕೆ.ವೆಂಕಟಪತೆಪ್ಪ ದೈಹಿಕ ಶಿಕ್ಷಣ ಮಹಾವಿದ್ಯಾಲಯ, ಚಿಕ್ಕಬಳ್ಳಾಪುರ ಇಲ್ಲಿನ ಈ ಕೆಳಕಂಡ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳ ಹುದ್ದೆಗಳನ್ನು ಕೆಳಗೆ ಹೇಳಿರುವ ಷರತ್ತುಗಳಿಗೊಳಪಟ್ಟು ರಾಜ್ಯ ವೇತನ ಶ್ರೇಣಿಯಲ್ಲಿ ವೇತನಾನುದಾನಕ್ಕೆ ಒಳಪಡಿಸಿ ಆದೇಶಿಸಲಾಗಿದೆ.
| ಕ್ರ.ಸಂ. | ಸಿಬ್ಬಂದಿಯ ಹೆಸರು ಮತ್ತು ಹುದ್ದೆ | ಜನ್ಮ ದಿನಾಂಕ | ನ ೕಮಕಾತಿ ದಿನಾಂಕ ೆ |
| 1 | ಡಾ. ಎ.ಎಸ್. ಅಮರೇಂದ್ರ, ಸ ಹಾಯಕ ಪ್ರಾಧ್ಯಾಪಕರು | 16.07.1973 | 02.06.1997 |
| 1 | ಶ್ರೀ ವೆಂಕಟರಾಂ, ಬಿ.ಕೆ. ಗ್ರಂಥಪಾಲಕರು | 12.07.1963 | 02.08.1999 |
| 2 | ಶ್ರೀ ಪುನೀತ ಕುಮಾರ್ ವೈ.ಎಸ್. ಪ ಥಮ ದರ್ಜೆ ಸಹಾಯಕರು ್ರ | 21.10.1987 | 03.10.2013 |
ಷರತ್ತುಗಳು : -
(1) ಪ್ರಸ್ತಾಪಿತ ಕಾಲೇಜು ದಿನಾಂಕ: 01.06.1987ರ ಪೂರ್ವದಲ್ಲಿ ಪ್ರಾರಂಭಿಸಿ ಯಾವುದೇ ವಿಚ್ಚಿನ್ನತೆ ಇಲ್ಲದೆ ಸತತವಾಗಿ ನಡೆದಿರಬೇಕು. (2) ಎನ್.ಸಿ.ಟಿ.ಇ. ಮಾರ್ಗಸೂಚಿ-2014 ರನ್ವಯ ಅಗತ್ಯವಾದ ಎಲ್ಲಾ ಮೂಲಭೂತ ಸೌಲಭ್ಯ ಹೊಂದಿರಬೇಕು. ಹಾಗೂ ನಿಯಮಾನುಸಾರ ವಿದ್ಯಾರ್ಥಿಗಳ ಸಂಖ್ಯೆ ಪಡೆದಿರಬೇಕು.
(3) ಎನ್.ಸಿ.ಟಿ.ಇ. ಮಾನದಂಡ ಪ್ರಕಾರ ಬೋಧಕ ಮತ್ತು ಬೋಧಕೇತರ ಹುದ್ದೆಗಳನ್ನು ವರ್ಗೀಕರಿಸಿ ನಿಗದಿಪಡಿಸಿರಬೇಕು.
೮೦೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಡಿಸೆಂಬರ್ ೫, ೨೦೧೯ ಭಾಗ ೧(4) ಬೋಧಕ ಮತ್ತು ಬೋಧಕೇತರ ಹುದ್ದೆಗಳನ್ನು ವೇತನಾನುದಾನಕ್ಕೆ ಒಳಪಡಿಸುವ ಮೊದಲು ಎನ್.ಸಿ.ಟಿ.ಇ. ನಿಯಮಾನುಸಾರ ವಿದ್ಯಾರ್ಹತೆ, ವಯೋಮಿತಿ ಹಾಗೂ ನೇಮಕಾತಿ ನಿಯಮಗಳನ್ನು ಪಾಲಿಸಿ ಪಾರದರ್ಶಕವಾಗಿ ಪ್ರಕ್ರಿಯೆ ಪೂರ್ಣಗೊಳಿಸಿ ನೇಮಕಾತಿ ಮಾಡಿಕೊಂಡಿರುವ ಬಗ್ಗೆ ಪರಿಶೀಲಿಸಿ ಅನುಮೋದಿಸಿರಬೇಕು. ನಂತರವೇ ಸದರಿ ಕಾಲೇಜಿನಿಂದ ನೇಮಕಾತಿ ಮಾಡಿಕೊಂಡಿರುವ ಅರ್ಹ ಅಭ್ಯರ್ಥಿಗಳ ನೇಮಕಾತಿಗೆ ವೇತನಾನುದಾನ ಸಹಿತ ಅನುಮೋದನೆ ನೀಡಬೇಕು.
(5) ಮೀಸಲಾತಿಗೆ ಸಂಬಂಧಿಸಿದಂತೆ ಶಿಕ್ಷಣ ಇಲಾಖೆ ಹೊರಡಿಸಿರುವ ಆದೇಶ ಸಂಖ್ಯೆ:ಇಡಿ 227 ಎಸ್ಇಪಿ 94, ದಿನಾಂಕ:21.04.1995 ಹಾಗೂ ಕಾಲಕಾಲಕ್ಕೆ ಹೊರಡಿಸಿರುವ ಆದೇಶಗಳು ಹಾಗೂ ಸಿಆಸುಇ ಆದೇಶ ಸಂಖ್ಯೆ:ಸಿಆಸುಇ 8 ಸೆಹಿಮ 95, ದಿನಾಂಕ:20.06.1995ರಲ್ಲಿ ನಿಗಧಿಪಡಿಸಿದ 100 ಬಿಂದುಗಳ ರೋಸ್ಟರ್ ಪ್ರಕಾರ ಮೀಸಲಾತಿ ಪಾಲಿಸಬೇಕು. ಪ್ರಸ್ತಾಪಿತ ಪ್ರಕರಣ ಮೀಸಲಾತಿ ಪಾಲಿಸಿರುವ ಬಗ್ಗೆ ಸಂಬಂಧಿಸಿದ ಅಧಿಕಾರಿ ದೃಡೀಕರಿಸಿರಬೇಕು. ಇದರ ಜೊತೆಗೆ ದಿನಾಂಕ:01.06.1992ರ ನಂತರ ಎಲ್ಲಾ ನೇಮಕಾತಿಗಳಲ್ಲಿಯೂ ನಿಯಮಾನುಸಾರ ಮೀಸಲಾತಿ ಪಾಲನೆಯಾಗಿರುವ ಬಗ್ಗೆಯೂ ಸಹ ಪರಿಶೀಲಿಸಿ ದೃಡಪಡಿಸಿಕೊಳ್ಳುವುದು. ಆನಂತರವೇ ವೇತನಾನುದಾನ ನೀಡಲು ಕ್ರಮವಹಿಸತಕ್ಕದ್ದು.
(6) ಸದರಿ ಕಾಲೇಜನ್ನು ವೇತನಾನುದಾನಕ್ಕೆ ಒಳಪಡಿಸಲಾಗಿರುವ ಸರ್ಕಾರಿ ಆದೇಶ ಸಂಖ್ಯೆ: ಇಡಿ 141 ಯುಆರ್ಸಿ 2015, ದಿನಾಂಕ: 09.12.2016ರಲ್ಲಿನ ಎಲ್ಲಾ ಷರತ್ತುಗಳನ್ನು ಪೂರೈಸಿರುವ ಬಗ್ಗೆ ಖಚಿತಪಡಿಸಿಕೊಂಡ ನಂತರವೇ ಸದರಿ ಬೋಧಕ ಮತ್ತು ಬೋಧಕೇತರ ಹುದ್ದೆಗಳನ್ನು ವೇತನಾನುದಾನಕ್ಕೆ ಒಳಪಡಿಸುವ ಬಗ್ಗೆ ಪರಿಶೀಲಿಸಬೇಕು.
(7) ಆಯುಕ್ತರು, ಕಾಲೇಜು ಶಿಕ್ಷಣ ಇಲಾಖೆಯ ಪತ್ರ ಸಂಖ್ಯೆ:ಕಾಶಿಇ/ಶಿತ/3/ಇತರೆ/ಅನುದಾನ/03/06-07/ನೇ.ವಿ-2, ದಿನಾಂಕ: 06.09.2018ರಲ್ಲಿ ಸದರಿ ಕಾಲೇಜಿನ ಬೋಧಕ ಮತ್ತು ಬೋಧಕೇತರ ಹುದ್ದೆಗಳನ್ನು ವೇತನಾನುದಾನಕ್ಕೆ ಒಳಪಡಿಸುವ ಬಗ್ಗೆ ಸರ್ಕಾರಕ್ಕೆ ಸಲ್ಲಿಸಲಾಗಿರುವ ವರದಿಯ ಹಿನ್ನೆಲೆಯಲ್ಲಿ ಆಡಳಿತ ಇಲಾಖೆಯು ಹುದ್ದೆಗಳನ್ನು ವೇತನಾನುದಾನಕ್ಕೆ ಒಳಪಡಿಸಿ ಅನುಮೋದಿಸುವ ಮೊದಲು ಅಗತ್ಯ ವಿದ್ಯಾರ್ಹತೆ, ಮೀಸಲಾತಿ ಮತ್ತು ನಿಯಮಾನುಸಾರ ಇತರೆ ಷರತ್ತುಗಳನ್ನು ಪೂರೈಸಿಕೊಂಡಿರುವುದನ್ನು ಖಚಿತಪಡಿಸಿಕೊಳ್ಳತಕ್ಕದ್ದು.
(8) ಸದರಿ ದೈಹಿಕ ಶಿಕ್ಷಣ ಮಹಾವಿದ್ಯಾಲಯದಲ್ಲಿ ವೇತನಾನುದಾನ ವ್ಯಾಪ್ತಿಗೆ ತರಲಾಗುವ ಉಪನ್ಯಾಸಕರುಗಳ ಕಾರ್ಯಭಾರದಲ್ಲಿ ಕೊರತೆ ಉದ್ಭವಿಸಿದ ಪಕ್ಷದಲ್ಲಿ ಅಂತಹ ಉಪನ್ಯಾಸಕರುಗಳನ್ನು ಕಾರ್ಯಭಾರ ಇರುವಂತಹ ಅನುದಾನಿತ ಇತರೆ ದೈಹಿಕ ಶಿಕ್ಷಣ ಮಹಾವಿದ್ಯಾಲಯ ಅಥವಾ ಶಿಕ್ಷಣ ಮಹಾವಿದ್ಯಾಲಯಗಳಲ್ಲಿ ಕಾರ್ಯಭಾರದ ಎದುರಾಗಿ ನಿಯೋಜನೆ ಮೇಲೆ ಮರು ಹಂಚಿಕೆ ಮಾಡಿಕೊಳ್ಳಬಾರದು.
(9) ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರೆ ಹಿಂದುಳಿದ ವರ್ಗಗಳ ಪ್ರಾತಿನಿಧ್ಯದಲ್ಲಿ ಮೀಸಲಾತಿ ಕೊರತೆಯನ್ನು ಭವಿಷ್ಯತ್ತಿನಲ್ಲಿ ತೆರವಾಗುವ ಎಲ್ಲಾ ಹುದ್ದೆಗಳನ್ನು ಮೀಸಲಾತಿ ಸರಿದೂಗುವವರೆಗೂ ಸಂಬಂಧಪಟ್ಟ ಮೀಸಲಾತಿ ಅಭ್ಯರ್ಥಿಗಳಿಂದಲೇ ಕಡ್ಡಾಯವಾಗಿ ನೇಮಕಾತಿ ಮಾಡಿಕೊಳ್ಳತಕ್ಕದ್ದು.
(10) ಈ ಕಾಲೇಜಿನ ಬೋಧಕ/ಬೋಧಕೇತರ ಸಿಬ್ಬಂದಿಗಳ ಶೈಕ್ಷಣಿಕ ಅರ್ಹತೆಗೆ ಸಂಬಂಧಿಸಿದ ಎಲ್ಲಾ ಅಂಕಪಟ್ಟಿ/ಪ್ರಮಾಣ ಪತ್ರಗಳ ಸತ್ಯಾಸತ್ಯತೆಯನ್ನು ಸಂಬಂಧಿಸಿದ ಪ್ರಾಧಿಕಾರಗಳಿಂದ ದೃಡೀಕರಿಸಿಕೊಂಡು ನಂತರವೇ ವೇತನ ಪಾವತಿಗೆ ಕ್ರಮ ಕೈಗೊಳ್ಳುವುದು.
(11) ಹುದ್ದೆ ಅನುಮೋದನೆಗೊಂಡಿರುವ ಸಿಬ್ಬಂದಿಯು ಯಾವುದೇ ಹಂತದಲ್ಲಿ ತಪ್ಪು ಹೇಳಿಕೆ/ಅಸತ್ಯವಾದ ಮಾಹಿತಿಯನ್ನು ಒದಗಿಸಿದಲ್ಲಿ, ಅಂತಹ ನೇಮಕಾತಿಯನ್ನು ರದ್ದುಪಡಿಸಲಾಗುವುದು.
(12) ಸಿಬ್ಬಂದಿಯ ಸೇವಾ ಭದ್ರತೆಯನ್ನು ಒದಗಿಸುವ ಬಗ್ಗೆ ಹೆಚ್.ಆರ್.ಎಂ.ಎಸ್. ನಲ್ಲಿ ಅಳವಡಿಸಿಕೊಳ್ಳಬೇಕು. (13) ಆರ್ಥಿಕ/ಶಿಕ್ಷಣ ಇಲಾಖೆ ನಿಗದಿಪಡಿಸಿರುವ ಎಲ್ಲಾ ಷರತ್ತುಗಳು/ನಿಯಮಗಳು/ಅನುದಾನ ಸಂಹಿತೆಯಲ್ಲಿ ನಿಗದಿಪಡಿಸಿರುವ ಷರತ್ತುಗಳನ್ನು ಪಲಿಸಿರುವುದನ್ನು ಖಚಿತಪಡಿಸಿಕೊಳ್ಳಬೇಕು.
(14) ಸದರಿ ಸಂಸ್ಥೆಯ ಕಟ್ಟಡ ಹಾಗೂ ಇನ್ನಿತರ ಮೂಲಭೂತ ಸೌಲಭ್ಯಗಳನ್ನು ಅನುದಾನ ಸಂಹಿತೆಯನ್ವಯ ಜರೂರಾಗಿ ಒದಗಿಸಿಕೊಳ್ಳಬೇಕಾಗುತ್ತದೆ. (15) The Karnataka Educational Institutions (recruitment terms and conditions etc.,) Rules 1999 ಅನುಬಂಧ-II ರಲ್ಲಿ Benefits not available for service rendered during the un-aided period for purpose of fixation of pay. Leave and pension or any other service benefits by the Government. ಈ ನಿಯಮಗಳನ್ವಯ ನೌಕರರು ಅನುದಾನರಹಿತ ಅವಧಿಯಲ್ಲಿ ಸಲ್ಲಿಸಿದ ಸೇವೆಯನ್ನು ಯಾವುದೇ ಸೇವಾ ಸೌಲಭ್ಯಗಳಿಗೆ ಪರಿಗಣಿಸಲಾಗುವುದಿಲ್ಲ ಎಂಬ ಷರತ್ತಿಗೆ ಬದ್ದನಾಗಿರುತ್ತೇನೆಂದು ನೌಕರರುಗಳಿಂದ `.50/-ರ ಮುಚ್ಚಳಿಕೆ ಪತ್ರವನ್ನು ಸಂಬಂಧಿಸಿದ ಸಕ್ಷಮ ಪ್ರಾಧಿಕಾರವು ಬರೆಸಿಕೊಂಡು ನಂತರವೇ ಸಹಾಯಾನುದಾನಕ್ಕೆ ಒಳಪಡಿಸುವ ಬಗ್ಗೆ ಕ್ರಮವಹಿಸುವುದು.
(16) ಆಡಳಿತ ಮಂಡಳಿಯಲ್ಲಿ ವ್ಯಾಜ್ಯ ಇರತಕ್ಕದ್ದಲ್ಲ. ಒಂದು ವೇಳೆ ಅಂತಹ ವ್ಯಾಜ್ಯ ಇದ್ದಲ್ಲಿ ಅಂತಹ ಸಂಸ್ಥೆಯನ್ನು ಅನುದಾನಕ್ಕೆ ಒಳಪಡಿಸಲು ಅರ್ಹತೆ ಪಡೆಯುವುದಿಲ್ಲ.
(17) ಕರ್ನಾಟಕ ಸಂಘಗಳ ನೊಂದಣಿ ನಿಯಮಾವಳಿಯಲ್ಲಿ ನಮೂದಿಸಿರುವ ಅವಕಾಶಗಳ ಪ್ರಕಾರ ಪ್ರತಿ ವರ್ಷ ಆಡಿಟ್ ನಡೆಸಿ ವರದಿಯನ್ನು ಸಕ್ಷಮ ಪ್ರಾಧಿಕಾರಕ್ಕೆ ಸಲ್ಲಿಸಬೇಕು ಹಾಗೂ ಸಂಬಂಧಿಸಿದ ಆಯುಕ್ತರಿಗೆ ಮಾಹಿತಿಗಾಗಿ ಪಿ.ಟಿ.ಆರ್. ಮತ್ತು ಸಂಘದ ಕಾರ್ಯಕಾರಿ ಸದಸ್ಯರ ಅಧಿಕೃತ ಪಟ್ಟಿಯನ್ನು ಸಲ್ಲಿಸತಕ್ಕದ್ದು, (ಸಕ್ಷಮ ಪ್ರಾಧಿಕಾರದಿಂದ ದೃಡೀಕರಿಸಲ್ಪಟ್ಟಿರಬೇಕು).
(18) ಈ ಅನುಮೋದನೆಯು ಈಗಾಗಲೇ ಸರ್ಕಾರವು ಅನುಮೋದಿಸಿರುವ ಅಂಗೀಕೃತ ಸಿಬ್ಬಂದಿ ರೂಪಿಕೆಯಲ್ಲಿರಬೇಕು. (19) ಶೈಕ್ಷಣಿಕ ಮಾನ್ಯತೆಯನ್ನು ಸಂಬಂಧಿಸಿದ ನಿಯಮ/ಆದೇಶಗಳನ್ವಯ ನಿಗದಿಪಡಿಸಿದಂತೆ ಪಡೆಯತಕ್ಕದ್ದು, ನಿಗದಿತ ವಿದ್ಯಾರ್ಥಿಗಳ ಸಂಖ್ಯಾಬಲವನ್ನು ಕಾಪಾಡಿಕೊಳ್ಳತಕ್ಕದ್ದು, ತಪ್ಪಿದಲ್ಲಿ ವೇತನಾನುದಾನ ನಿಲ್ಲಿಸಲಾಗುವುದು.
(20) ಆಡಳಿತ ಮಂಡಳಿಯು ಈ ಆದೇಶದ ಪ್ರಕಾರ ವಿಧಿಸಿರುವ ಷರತ್ತುಗಳನ್ನು ಪಾಲಿಸುವ ಬಗ್ಗೆ ರೂ. 50-00ರ ದಾಸ್ತಾವೇಜು ಕಾಗದ (Document sheet) ದಲ್ಲಿ ನೋಟರಿಯವರ ಮುಂದೆ ಪ್ರಮಾಣೀಕರಿಸಿದ ಕರಾರು ಪತ್ರವನ್ನು ನೀಡತಕ್ಕದ್ದು. ಈ ಕರಾರು ಪತ್ರವನ್ನು ನೀಡಿದ ನಂತರವೇ ಅನುದಾನ ಪಾವತಿ ಮಾಡಲು ಕ್ರಮ ತೆಗೆದುಕೊಳ್ಳುವುದು.
(21) ಆಡಳಿತ ಮಂಡಳಿಯವರು ಒಪ್ಪಂದದಲ್ಲಿನ ಹಾಗೂ ಮೇಲೆ ಹೇಳಲಾದ ಎಲ್ಲಾ ಅಥವಾ ಯಾವುದೇ ಒಂದು ಷರತ್ತು ಮತ್ತು ನಿಬಂಧನೆಗಳನ್ನು ಉಲ್ಲಂಘಿಸಿದರೆ ಅಥವಾ ತಪ್ಪು ಲೆಕ್ಕ ಪತ್ರಗಳನ್ನು ಅಥವಾ ತಪ್ಪು ದಾಖಲೆಗಳನ್ನು ಒದಗಿಸಿದರೆ ಅಥವಾ ತಪ್ಪು ಮಾಹಿತಿಗಳನ್ನು ನೀಡಿದರೆ ಅಥವಾ ಯಾವುದೇ ಮೋಸ ಎಸಗಿರುವುದು ಕಂಡು ಬಂದಲ್ಲಿ ಸರ್ಕಾರವು ಆಡಳಿತ ಮಂಡಳಿಗೆ ಅಥವಾ ಸಿಬ್ಬಂದಿಗೆ ಈ ಕರಾರಿನಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಡಿಸೆಂಬರ್ ೫, ೨೦೧೯ ೮೦೩ ಮೇರೆಗೆ ಈಗಾಗಲೇ ನೀಡಲಾದ ಪೂರ್ಣ ಅಥವಾ ಭಾಗಶಃ ಅನುದಾನವನ್ನು ಮುಂದುವರಿಸದಿರುವ ಅಥವಾ ತಡೆಹಿಡಿಯುವ ಹಾಗೂ ಈ ಕರಾರಿನ ಮೇರೆಗೆ ಸರ್ಕಾರಕ್ಕೆ ಬಾಕಿ ಎಂದು ಕಂಡು ಬಂದ ಮೊಬಲಗನ್ನು ಆಡಳಿತ ಮಂಡಳಿಯಿಂದ ವಸೂಲು ಮಾಡುವ ಅಧಿಕಾರವನ್ನು ಹೊಂದಿರುತ್ತದೆ.
(22) ಹುದ್ದೆ ಅನುಮೋದನೆಗೊಂಡಿರುವ ಸಿಬ್ಬಂದಿಯು ಯಾವುದೇ ಹಂತದಲ್ಲಿ ತಪ್ಪು ಹೇಳಿಕೆ/ ಅಸತ್ಯವಾದ ಮಾಹಿತಿಯನ್ನು ಒದಗಿಸಿದಲ್ಲಿ, ಅಂತಹ ನೇಮಕಾತಿಯನ್ನು ರದ್ದುಪಡಿಸಲಾಗುವುದು.
(23) ಸದರಿ ಸಿಬ್ಬಂದಿಗಳ ವೇತನಾನುದಾನವನ್ನು ಸರ್ಕಾರದ ಆದೇಶ ಸಂಖ್ಯೆ: ಇಡಿ 141 ಯುಆರ್ಸಿ 2016, ದಿನಾಂಕ:09.12.2016ರಲ್ಲಿನ ಷರತ್ತಿನ ಕ್ರಮ ಸಂಖ್ಯೆ: 08ರಲ್ಲಿ ಸೂಚಿಸಿರುವಂತೆ ನಿಗದಿಪಡಿಸಲು ಕ್ರಮವಹಿಸುವುದು ಯಾವುದೇ ಕಾರಣಕ್ಕೂ ಹಿಂದಿನ ಸೇವೆಯನ್ನು ವೇತನಾನುದಾನಕ್ಕೆ ಪರಿಗಣಿಸಬಾರದು.
(24) ಸದರಿ ಕಾಲೇಜನ್ನು ವೇತನಾನುದಾನಕ್ಕೆ ಒಳಪಡಿಸಲು ತಗುಲುವ ವೆಚ್ಚವನ್ನು ಇಲಾಖೆಗೆ ಒದಗಿಸಿದ ಯೋಜನಾ ಅನುದಾನದ ಮಿತಿಯಲ್ಲಿಯೇ ಭರಿಸಲು ಹೊಂದಾಣಿಕೆ ಮಾಡಿಕೊಳ್ಳತಕ್ಕದ್ದು.
ಈ ಆದೇಶವನ್ನು ಆರ್ಥಿಕ ಇಲಾಖೆಯ ಟಿಪ್ಪಣಿ ಸಂಖ್ಯೆ: ಆಇ 371 ವೆಚ್ಚ-8/2009, ದಿನಾಂಕ: 20.07.2019ರಲ್ಲಿ ನೀಡಿರುವ ಅಭಿಪ್ರಾಯ/ಸಹಮತಿಯನ್ವಯ ಹೊರಡಿಸಲಾಗಿದೆ.
PR-409
SC-50
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ, ಮಹೇಶ್ ಆರ್. ಸರ್ಕಾರದ ಅಧೀನ ಕಾರ್ಯದರ್ಶಿ, ಉನ್ನತ ಶಿಕ್ಷಣ ಇಲಾಖೆ. (ವಿಶ್ವ ವಿದ್ಯಾಲಯಗಳು-2)
ಒಳಾಡಳಿತ ಸಚಿವಾಲಯ
ವಿಷಯ : ಮಡಿಕೇರಿ ಜಿಲ್ಲಾ ಕಾರಾಗೃಹದ ಸಂದರ್ಶಕರ ಮಂಡಳಿಗೆ ಅಧಿಕಾರೇತರ ಸದಸ್ಯರನ್ನು ನಾಮನಿರ್ದೇಶನ ಮಾಡುವ ಕುರಿತು.
ಓದಲಾಗಿದೆ: ಮಹಾನಿರ್ದೇಶಕರು, ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖಾ ಮುಖ್ಯಸ್ಥರ ಪತ್ರ ಸಂಖ್ಯೆ:ಜೆ2/ಸಿಆರ್-07/2017-18, ದಿನಾಂಕ: 17/12/2018.
ಪ್ರಸ್ತಾವನೆ :-
ಮೇಲೆ ಓದಲಾದ ಪತ್ರದಲ್ಲಿ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖಾ ಮುಖ್ಯಸ್ಥರು ಮಡಿಕೇರಿ ಜಿಲ್ಲಾಧಿಕಾರಿಯವರು ಕೆ.ಪಿ.ಆರ್. 1974ರ ನಿಯಮ 187(3)ರನ್ವಯ ಶಿಫಾರಸ್ಸು ಮಾಡಿರುವ ಸ್ಥಳೀಯ ಅಧಿಕಾರೇತರ ಸದಸ್ಯರನ್ನು ಮಡಿಕೇರಿ ಜಿಲ್ಲಾ ಕಾರಾಗೃಹದ ಸಂದರ್ಶಕರ ಮಂಡಳಿಗೆ
| ಕ್ರ.ಸಂ | ಹ ಸರು ೆ | ವಿಳಾಸ |
| 1 | ಶ್ರೀ ಎಂ.ಪಿ. ಅಪ್ಪಚ್ಚು ರಂಜನ್ | ವ iಾನ್ಯ ಶಾಸಕರು, 208 ಮಡಿಕೇರಿ ವಿಧಾನ ಸಭಾ ಕ್ಷೇತ್ರ. |
| 2 | ಶ್ರೀ ಕೆ.ಜಿ. ಬೋಪಯ್ಯ | ವ iಾನ್ಯ ಶಾಸಕರು, 209 ಮಡಿಕೇರಿ ವಿಧಾನ ಸಭಾ ಕ್ಷೇತ್ರ. |
ಮಾನ್ಯ ಮುಖ್ಯಮಂತ್ರಿಯವರು ಸದರಿಯವರನ್ನು ಅಧಿಕಾರೇತರ ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಲು ಅನುಮೋದನೆ ನೀಡಿರುತ್ತಾರೆ.
ಅದರನ್ವಯ ಈ ಕೆಳಕಂಡಂತೆ ಆದೇಶಿಸಿದೆ.
ಸರ್ಕಾರದ ಆದೇಶ ಸಂಖ್ಯೆ: ಹೆಚ್ಡಿ 326 ಪಿಆರ್ಎ 2018, ಬೆಂಗಳೂರು, ದಿನಾಂಕ: 07/11/2019
ಪ್ರಸ್ತಾವನೆಯಲ್ಲಿ ವಿವರಿಸಿರುವಂತೆ, 1974ನೇ ಕರ್ನಾಟಕ ಕಾರಾಗೃಹಗಳ ನಿಯಮಗಳ ನಿಯಮ 187(3)ರ ಅನ್ವಯ ಮಡಿಕೇರಿ ಜಿಲ್ಲಾ ಕಾರಾಗೃಹದ ಸಂದರ್ಶಕರ ಮಂಡಳಿಗೆ ಕೆಳಕಂಡ ಅಧಿಕಾರೇತರ ಸದಸ್ಯರುಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ
| ಕ್ರ.ಸಂ | ಹ ಸರು ೆ | ವಿಳಾಸ |
| 1 | ಶ್ರೀ ಎಂ.ಪಿ. ಅಪ್ಪಚ್ಚು ರಂಜನ್ | ವ iಾನ್ಯ ಶಾಸಕರು, 208 ಮಡಿಕೇರಿ ವಿಧಾನ ಸಭಾ ಕ್ಷೇತ್ರ. |
| 2 | ಶ್ರೀ ಕೆ.ಜಿ. ಬೋಪಯ್ಯ | ವ iಾನ್ಯ ಶಾಸಕರು, 209 ಮಡಿಕೇರಿ ವಿಧಾನ ಸಭಾ ಕ್ಷೇತ್ರ. |
ಮೇಲ್ಕಂಡ ಅಧಿಕಾರೇತರ ಸದಸ್ಯರ ಅಧಿಕಾರಾವಧಿಯು ಎರಡು ವರ್ಷಗಳಾಗಿರುತ್ತದೆ.
ಈ ಸಂದರ್ಶಕರ ಮಂಡಳಿಯ ಅಧಿಕಾರೇತರ ಸದಸ್ಯರು ಸರ್ಕಾರದ ಆದೇಶ ಸಂಖ್ಯೆ: ಎಫ್ಡಿ 3 ಎಸ್ಆರ್ಎ 2015 ದಿನಾಂಕ: 03.08.2015ರಲ್ಲಿ ಹೊರಡಿಸಿದ ನಿಯಮಗಳನ್ವಯ ಹಾಗೂ ಸದರಿ ನಿಯಮಗಳಲ್ಲಿ ತಿಳಿಸಲಾಗಿರುವ ಷರತ್ತುಗಳಿಗೆ ಬದ್ಧವಾಗಿ ಭತ್ಯೆಗಳನ್ನು ಪಡೆಯಲು ಅರ್ಹರಿರುತ್ತಾರೆ.
PR-411
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, ೮೦೪ ಕರ್ನಾಟಕ ರಾಜ್ಯಪತ್ರ, ಗುರುವಾರ, ಡಿಸೆಂಬರ್ ೫, ೨೦೧೯ ಭಾಗ ೧
ಒಳಾಡಳಿತ ಸಚಿವಾಲಯ
ವಿಷಯ : ಬಳ್ಳಾರಿ ಕೇಂದ್ರ ಕಾರಾಗೃಹದ ಸಂದರ್ಶಕರ ಮಂಡಳಿಗೆ ಅಧಿಕಾರೇತರ ಸದಸ್ಯರನ್ನು ನಾಮನಿರ್ದೇಶನ
ಮಾಡುವ ಬಗ್ಗೆ.
ಓದಲಾಗಿದೆ : ಮಹಾನಿರ್ದೇಶಕರು ಕಾರಾಗೃಹ ಮತ್ತು ಸುಧಾರಣಾ ಸೇವೆಗಳು, ಇವರ ಪತ್ರ ಸಂಖ್ಯೆ: ಜೆ2/ಸಿಆರ್-
06/2017-18, ದಿನಾಂಕ: 02/08/2019.
ಪ್ರಸ್ತಾವನೆ :-
ಮೇಲೆ ಓದಲಾದ ಪತ್ರದಲ್ಲಿ ಕಾರಾಗೃಹ ಮತ್ತು ಸುಧಾರಣಾ ಸೇವೆಗಳು ಇಲಾಖಾ ಮುಖ್ಯಸ್ಥರು ಬಳ್ಳಾರಿ ಕೇಂದ್ರ ಕಾರಾಗೃಹದ ಸಂದರ್ಶಕರ ಮಂಡಳಿಗೆ ಅಧಿಕಾರೇತರ ಸದಸ್ಯರನ್ನು ಬಳ್ಳಾರಿ ಜಿಲ್ಲಾಧಿಕಾರಿಯವರು ಶಿಫಾರಸ್ಸು ಮಾಡಿರುವ ಸ್ಥಳೀಯ ಅಧಿಕಾರೇತರ ಸದಸ್ಯರನ್ನು ಬಳ್ಳಾರಿ ಕೇಂದ್ರ ಕಾರಾಗೃಹದ ಸಂದರ್ಶಕರ ಮಂಡಳಿಗೆ ನಾಮನಿರ್ದೇಶನ ಮಾಡಲು ಪ್ರಸ್ತಾವನೆ ಸಲ್ಲಿಸಿರುತ್ತಾರೆ:-
| ಕ್ರ.ಸಂ | ಹ ಸರು ೆ | ವಿಳಾಸ |
| 1. | ಶಿ ್ರ ೕ ಜಿ. ಸೋಮಶೇಖರ್ ರೆಡ್ಡಿ | ವ iಾನ್ಯ ಶಾಸಕರು, ಬಳ್ಳಾರಿ ನಗರ ವಿಧಾನ ಸಭಾ ಕ್ಷೇತ್ರ. |
| 2. | ಶಿ ೕ ಬಿ. ನಾಗೇಂದ್ರ ್ರ | ವ iಾನ್ಯ ಶಾಸಕರು, ಬಳ್ಳಾರಿ (ಗ್ರಾ) ವಿಧಾನಸಭಾ ಕ್ಷೇತ್ರ. |
| 3 | ಶಿ ೕ ಈ. ತುಕಾರಾಂ ್ರ | ವ iಾನ್ಯ ಶಾಸಕರು, ಸಂಡೂರು ವಿಧಾನ ಸಭಾ ಕ್ಷೇತ್ರ. |
| 6 ಜನ ಇತರೆ ಅಧಿಕಾರೇತರ ಸದಸ್ಯರು | ||
| 1. | ಶಿ ್ರ ೕ ಠಾಕೂರ್ ರಾಮನಾಥ | ನಿವೃತ್ತ ಪ್ರಿನ್ಸಿಪಾಲರು, ವಿಮ್ಸ್ ಆಸ್ಪತ್ರೆ, ಬಳ್ಳಾರಿ. |
| 2. | ಶಿ ೕ ಲಕ್ಷ್ಮಣಸಿಂಗ್ ್ರ | ನಿವೃತ್ತ ತಹಶೀಲ್ದಾರ್, ಬಳ್ಳಾರಿ ಜಿಲ್ಲೆ. |
| 3. | ಶಿ ೕ ಜಿ. ವಿಠಲ್ ್ರ | ಕಾರ್ಯದರ್ಶಿಗಳು, ಮಲ್ಲ ಸ ಜ್ಜನ ವ್ಯಾಯಾಮ ಶಾಲೆ, ಗಾಂಧಿಭವನ, ಬಳ್ಳಾರಿ. |
| 4. | ಶಿ ೕ ಪೋಲಾರಾಧಾಕೃಷ್ಣ ್ರ | ವ ್ಯವಸ್ಥಾಪಕ ನಿರ್ದೇಶಕರು, ಹೋಟೆಲ್ ಬಾಲ ರೆಸಿಡೆನ್ಸಿ, ಪಾರ್ವತಿನಗರ, ಬಳ್ಳಾರಿ. |
| 5. | ಶಿ ೕಮತಿ ಜಿ. ಪದ್ಮಿನಿ ್ರ | ಸಮಾಜ ಸ ೕವಕರು, ೆ #405,4ನೇ ಮಹಡಿ, ಕಾಕತೀಯ ರ ಸಿಡೆನ್ಸಿ, ಭರತ್ ನರ್ಸಿಂಗ್ ಹೋಂ ಎದುರುಗಡೆ, ಬಳ್ಳಾರಿ. ೆ |
| 6. | ಶಿ ೕಮತಿ ಪ್ರೇಮ ಎಸ್. ್ರ | ಶ್ರೀ ರೇಣುಕಾ ಗ್ರಾಮೀಣ ಅಭಿವೃದ್ಧಿ ಕೇಂದ್ರ # 04/18, ಗಾಂಧಿನಗರ ಮೈನ್ ರೋಡ್, ಬಳ್ಳಾರಿ. |
ಮಾನ್ಯ ಮುಖ್ಯಮಂತ್ರಿಯವರು ಅಧಿಕಾರೇತರ ಸದಸ್ಯರನ್ನು ನಾಮನಿರ್ದೇಶನ ಮಾಡಲು ಅನುಮೋದನೆ ನೀಡಿರುತ್ತಾರೆ.
ಅದರನ್ವಯ ಈ ಕೆಳಕಂಡಂತೆ ಆದೇಶಿಸಿದೆ.
ಸರ್ಕಾರದ ಆದೇಶ ಸಂಖ್ಯೆ:ಹೆಚ್ಡಿ 239 ಪಿಆರ್ಎ 2018, ಬೆಂಗಳೂರು, ದಿನಾಂಕ: 07/11/2019
ಪ್ರಸ್ತಾವನೆಯಲ್ಲಿ ವಿವರಿಸಿರುವಂತೆ, 1974ನೇ ಕರ್ನಾಟಕ ಕಾರಾಗೃಹಗಳ ನಿಯಮಗಳ ನಿಯಮ 187(2)ರ ಅನ್ವಯ ಬಳ್ಳಾರಿ ಕೇಂದ್ರ ಕಾರಾಗೃಹದ ಸಂದರ್ಶಕರ ಮಂಡಳಿಗೆ ಕೆಳಕಂಡ ಅಧಿಕಾರೇತರ ಸದಸ್ಯರುಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನಾಮನಿರ್ದೇಶನ ಮಾಡಿ ಆದೇಶಿಸಿದೆ :-
| ಕ್ರ.ಸಂ | ಹ ಸರು ೆ | ವಿಳಾಸ |
| 1. | ಶಿ ೕ ಜಿ. ಸೋಮಶೇಖರ್ ರೆಡ್ಡಿ ್ರ | ವ iಾನ್ಯ ಶಾಸಕರು, ಬಳ್ಳಾರಿ ನಗರ ವಿಧಾನ ಸಭಾ ಕ್ಷೇತ್ರ. |
| 2. | ಶಿ ್ರ ೕ ಬಿ. ನಾಗೇಂದ್ರ | ವ iಾನ್ಯ ಶಾಸಕರು, ಬಳ್ಳಾರಿ (ಗ್ರಾ) ವಿಧಾನಸಭಾ ಕ್ಷೇತ್ರ. |
| 3 | ಶಿ ೕ ಈ. ತುಕಾರಾಂ ್ರ | ವ iಾನ್ಯ ಶಾಸಕರು, ಸಂಡೂರು ವಿಧಾನ ಸಭಾ ಕ್ಷೇತ್ರ. |
| 6 ಜನ ಇತರೆ ಅಧಿಕಾರೇತರ ಸದಸ್ಯರು | ||
| 1. | ಶಿ ್ರ ೕ ಠಾಕೂರ್ ರಾಮನಾಥ | ನಿವೃತ್ತ ಪ್ರಿನ್ಸಿಪಾಲರು, ವಿಮ್ಸ್ ಆಸ್ಪತ್ರೆ, ಬಳ್ಳಾರಿ. |
| 2. | ಶಿ ್ರ ೕ ಲಕ್ಷ್ಮಣಸಿಂಗ್ | ನಿವೃತ್ತ ತಹಶೀಲ್ದಾರ್, ಬಳ್ಳಾರಿ ಜಿಲ್ಲೆ. |
| 3. | ಶಿ ೕ ಜಿ. ವಿಠಲ್ ್ರ | ಕಾರ್ಯದರ್ಶಿಗಳು, ಮಲ್ಲ ಸ ಜ್ಜನ ವ್ಯಾಯಾಮ ಶಾಲೆ, ಗಾಂಧಿಭವನ, ಬಳ್ಳಾರಿ. |
| 4. | ಶಿ ೕ ಪೋಲಾರಾಧಾಕೃಷ್ಣ ್ರ | ವ ್ಯವಸ್ಥಾಪಕ ನಿರ್ದೇಶಕರು, ಹೋಟೆಲ್ ಬಾಲ ರೆಸಿಡೆನ್ಸಿ, ಪಾರ್ವತಿನಗರ, ಬಳ್ಳಾರಿ. |
| 5. | ಶಿ ೕಮತಿ ಜಿ. ಪದ್ಮಿನಿ ್ರ | ಸಮಾಜ ಸ ೕವಕರು, ೆ #405,4ನೇ ಮಹಡಿ, ಕಾಕತೀಯ ರ ಸಿಡೆನ್ಸಿ, ಭರತ್ ನರ್ಸಿಂಗ್ ಹೋಂ ಎದುರುಗಡೆ, ಬಳ್ಳಾರಿ. ೆ |
| 6. | ಶಿ ೕಮತಿ ಪ್ರೇಮ ಎಸ್. ್ರ | ಶ್ರೀ ರೇಣುಕಾ ಗ್ರಾಮೀಣ ಅಭಿವೃದ್ಧಿ ಕೇಂದ್ರ # 04/18, ಗಾಂಧಿನಗರ ಮೈನ್ ರೋಡ್, ಬಳ್ಳಾರಿ. |
ಮೇಲ್ಕಂಡ ಅಧಿಕಾರೇತರ ಸದಸ್ಯರ ಅಧಿಕಾರಾವಧಿಯು ಎರಡು ವರ್ಷಗಳಾಗಿರುತ್ತದೆ.
ಈ ಸಂದರ್ಶಕರ ಮಂಡಳಿಯು ಕರ್ನಾಟಕ ಕಾರಾಗೃಹಗಳ ನಿಯಮಾವಳಿಗಳ 1974ರ ನಿಯಮ 188ರಲ್ಲಿ ತಿಳಿಸಿರುವಂತೆ ನಿಗಧಿತ ಕಾರ್ಯವನ್ನು ನಿರ್ವಹಿಸತಕ್ಕದ್ದಾಗಿರುತ್ತದೆ.
ಗೌ|| ಉಚ್ಛ ನ್ಯಾಯಾಲಯದ ರಿಟ್ ಅರ್ಜಿ ಸಂಖ್ಯೆಃ 406/2013 ಮತ್ತು ಕೇಂದ್ರ ಗೃಹ ಮಂತ್ರಾಲಯದ ದಿನಾಂಕಃ 18/02/2011ರ ಪತ್ರದಲ್ಲಿ ನೀಡಿರುವ ನಿರ್ದೇಶನದನ್ವಯ ಕ್ರಮ ಕೈಗೊಳ್ಳತಕ್ಕದ್ದು.
ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಡಿಸೆಂಬರ್ ೫, ೨೦೧೯ ೮೦೫ಈ ಸಂದರ್ಶಕರ ಮಂಡಳಿಯ ಅಧಿಕಾರೇತರ ಸದಸ್ಯರು ಸರ್ಕಾರದ ಆದೇಶ ಸಂಖ್ಯೆ:ಎಫ್ಡಿ 2 ಎಸ್ಆರ್ಎ 2000 ದಿನಾಂಕ:03.02.2001ರಲ್ಲಿ ಹೊರಡಿಸಿದ ನಿಯಮಗಳನ್ವಯ ಹಾಗೂ ಸದರಿ ನಿಯಮಗಳಲ್ಲಿ ತಿಳಿಸಲಾಗಿರುವ ಷರತ್ತುಗಳಿಗೆ ಬದ್ಧವಾಗಿ ಭತ್ಯೆಗಳನ್ನು ಪಡೆಯಲು ಅರ್ಹರಿರುತ್ತಾರೆ.
PR-412
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, SC-10
ಎಂ. ಆರ್. ಶೋಭಾ
ಸರ್ಕಾರದ ಅಧೀನ ಕಾರ್ಯದರ್ಶಿ,
ಒಳಾಡಳಿತ ಇಲಾಖೆ. (ಸೆರೆಮನೆ ಮತ್ತು ಸಿನಿಮಾ) FOREST, ECOLOGY AND ENVIRONMENT SECRETARIAT
Sub : Transfer of forest clearance of Karadikolla Iron Ore Mines (ML No. 2487) in respect of diversion of 86.12 hectare of forest land in North-Eastern Block (NEB) Range, Karadikolla Village, Sandur Taluk, Ballari District Range, present FC lease holder M/s Lakshminarayan Mines Company to M/s MSPL Limited, Hosapet, the successful bidder in e-auction conducted by Mines and Geology Department – reg.
R.N.I. No. KARBIL/2001/47147 POSTAL REGN. No. RNP/KA/BGS/2202/2017-19
Licensed to post without prepayment WPP No. 297
೮೦೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಡಿಸೆಂಬರ್ ೫, ೨೦೧೯ ಭಾಗ ೧ (xii) The new user agency shall abide by any other condition that may be stipulated, with the approval of competentauthority, by the Central Government/Concerned Regional Office/State Government in future in the interest of conservation, protection and development of forests and wildlife.
(xiii) The User Agency shall submit the annual self-compliance report in respect of the stipulated conditions to the State Government, concerned Regional Office and to the Ministry of Environment, Forests and Climate Change, Government of India by the end of March every year; and
(xiv) The User Agency shall comply all the provisions of the all Acts, Rules, Regulations, Guidelines, Hon'ble Court Order(s) and National Green Tribunal Order(s) pertaining to this project, if any, for the time being in force, as applicable to the project.
PR-413
By order and in the name of the Governor of Karnataka
K. MANJUNATH
SC-100
Under Secretary to Government (I/c)
Forest, Ecology and Environment Department (Forest-C) MINORITY WELFARE, HAJ AND WAKF SECRETARIAT
Sub: Delegation of special powers to the District Wakf Registration of Wakf properties in
the State-Orders regarding.
Read: 1. Karnataka Wakf Regulation 2010 as Amended Karnataka State Wakf (Am endment)
Regulation 2013
2. Letter No.KTW/09/ADM/10-11,dt:19-10-2019 of the Chief Executive Officer,
Karnataka State Board of Wakf, Bengaluru.
PREAMBLE:
The Chief Executive Officer Karnataka State Board of Wakf, Bengaluru in his letter read at (2) above has stated that there are 31,333 Wakf Institution and 41,291 Wakf Properties registered with the Karnataka State Board of Wakf. The process of registration of Wakf properties is very cumbersome and consumes lot of time. Due to it approximately more than 50,000 properties are not yet registered with Karnataka State Board of Auqaf. Earlier the Registration of Wakf properties which were under the ambit of the Wakf Board was delegated to the Additional Chief Executive Officer at the Head Office, Bengaluru vide order No.KBW/09/ADM/10-11, Dt:19- 05-2016.
The Chief Executive Officer, Karnataka State Board of Wakf, Bengaluru has further stated that to simplify the process and to optimise the registration of Wakf properties, it is felt necessary to delegate the powers of registration of Wakf properties to the District Wakf Officers of the respective Districts in the State.
Secondly the Registration of Wakf properties involving apart from the individual Waqifs (donors) and also from various other Governm ent Departments particularly the Revenue Department for Publication of Notification of registered Wakf properties in the Official Gazette as well as for making regular entries in the RTCs of the concerned jurisdictional area where the Wakf properties are registered.
Hence the Order,
GGOOVVEERRNNMMEENNTT OORRDDEERR NNOO:: MMWWDD 115588 WWEESS 22001199,, BENGALURU, DATED:08-11-2019
In view of the circumstances explained above Government is pleased to delegate special powers to the District Wakf Officers comes under the Karnataka State Board of Wakf for registration of Wakf properties in their jurisdiction of the State as per section 27 of the Wakf (Amendment) Act 2013 on the following terms and conditions.
1. The District Wakf Officer should make available the application for registration of Wakf as per section 36 of the Wakf Act 1995 as amended Wakf (Amendment) Act 2013. Form No.1 as per Regulation 21(1) (shown as Annexure-"A")
2. Issue Public Notice to the concerned Mutawallies as per Section 36 in Form No.2 asper Regulation 21(2) (shown as Annexure-"B".)
3. Issue of Certificate of Registration in Form No. 3 as per Regulation 21 (3) (Shown as Annexure-"C".)
4. These powers will not in any way effect the powers of Board under Section 40 of the Wakf Act 1995. In such cases the District Wakf Officer shall refer the matter to the Board in case, if any dispute arises with regard to the registration of Wakf.
5. The District Wakf Officer shall maintain a Register of Auqaf as required under Section 37 and to submit the certified copy of the entire file to the Board for record.
6. Once Registered as Wakf any addition /deletion /alteration/Corrigendum amendment to the Wakf registered properties shall be done only at Head Office by the Chief Executive Officer.
7. Entire process of the registration shall be completed within a period of two months.
8. The District Wakf Officer shall furnish the monthly statement of the Wakf properties registered to the Head Office in the format shown as Annexure-"D." The Chief Executive Officer shall publish the sam e in the Official Gazette every month and shall maintain combined Register of Wakf properties of the all the Districts.
This order is effective from the date of publication in the Official Gazette.
By Order and in the Name of the Governor of Karnataka PR-420
Y.S. DALAWAI
SC-200
Deputy Secretary to Government,
Minority Welfare, Haj & Wakf Department. ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು-59.