೫ ಬೆ Bengal
ರ್ಷ ೧೯೪2)
kaVarsha 1942
ಸಂಪುಟ -೧೫೫
Volume - 155
ಸಂಚಿಕೆ
Issue
೨೦ 20 ಾಖ, 24, ಶಕವಷ akha 24, Shak
ೕ , 2020 (ವೈಶಾ
,2020 (Vaish
2)
ಬೆಂಗಳೂರು, ಗುರು
luru, THURSDA
ುವಾರ, ೧೪, ಮೆ
AY ,14, MAY ,
ಭಾ ಾಗ ೧
ರಾಜ್ಯ ಸಕ
ರ್ಕಾರದ ಮ
ದ
ಎಲ್ಲಾ ಇಲಾ
ುುಖ್ಯ ಆದೇಶ
ಲಾಖೆಗಳಿಗೂ
ಶಗಳು ಹಾಗೂ
ಸಂಬಂಧಿಸಿ
ೂ ಸುತ್ತೋಲ
ದ ಆದೇಶಗ
ಲೆ ಮುಂತಾದ
ಗಳು
ಕನ
ರ್ನಾಟಕ ಸಕಾ
ಾರ್ರದ ನಡವ
ವಳಿಗಳು
ವಿಷಯ
ಯ :-ಬಿಡಿಎ
ಎ ಎಂಪ್ಲಾಯಿ
ಯೀಸ್ ವೆ
ವ್ಲೆಫೇರ್
ಆಡಳಿ
ಳಿತಾಧಿಕಾರಿಯ
ಯನ್ನು ನೇಮಕ ಅಸೋಸಿಯೇ
ೕಷನ್ ಈ ಸಂಘಕ್ಕೆ
ಕ ಮಾಡುವ ಬ
ಸ
ಬಗ್ಗೆ.
ರ್ಕಾರದ ಆದೆ
ದೇಶ ಸಂಖ್ಯೆ: ಸ
ಸಇ 26 ಸಸಂ
ನೋ 2016 ಬ
ಬೆಂಗಳೂರು, ದಿ
ದಿನಾಂಕ: 04.
.05.2020
ಓದಲಾ
ಾಗಿದೆ:- 1.
ಶ್ರೀ ಬಿ.ಎಂ. ಚಿಕ್ಕಯ್ಯ ಹಾ ಗೂ ಇತರರು
ನಿವೃತ್ತ ನೌಕ
ಕರರು ಸರ್ಕಾರ ು, ಬೆಂಗಳೂರ
ರು ಅಭಿವೃದ್ದಿ ಪ
ಪ್ರಾಧಿಕಾರದ
ರಕ್ಕೆ ಸಲ್ಲಿಸಿದ
ಸರ್ಕಾರದ ಆ
ಆದೇಶ ಸಂಖ್ಯೆ ಮನವಿ ದಿನಾ
ಾಂಕ:23.06.2
2016.
19.05.2017.
ಯ್: ಸಇ 26 ಸ
2. 3.
ಶ್ರೀ ಎಸ್. ಸಿ.ಇಂಗಳಗಿ, ಸಂನೋ 201
16, ದಿನಾಂಕ:
ನಿವೃತ್ತ
ವಿಚಾರಣಾಧಿ
ಧಿಕಾರಿ ಇವರ ಜಿಲ್ಲಾ ನಾ
ಾಯ್ಯಾಧೀಶರ
ರು ಹಾಗೂ 07.2017 ರ ವ
ವರದಿ.
ದಿನಾಂಕ:18.0
4.
ನಗರಾಭಿವೃದಿ
ದ್ಧಿ ಇಲಾಖ
ಖೆ(ಬಿ.ಡಿ.ಎ)
ನಅಇ122ಬೆಂ
ಂಆಸೇ2019 ದಿ ಯ ಟಿಪ್ಪಣಿ ಸಂಖ್ಯೆ:
ದಿನಾಂಕ:26.1
5.
ಕಾನೂನು ಇಲಾಖೆ( 11.2019.
(ಅಭಿಪ್ರಾಯ)
ಲಾ/73/ಅಭಿ
ಭಿಪ್ರಾಯ/202 ಯ ಟಿಪ್ಪಣಿ ಸಂಖ್ಯೆ:
20 ದಿನಾಂಕ:2
*** *******
(೧೭೧) ( 26.02.2020.
.
೧೭೨ ಕರ್ನಾಟಕ ರಾಜ್ಯಪತ್ರ,ಗುರುವಾರ, ೧೪, ಮೇ , 2020 ಭಾಗ ೧ಪ್ರಸ್ತಾವನೆ:
ಮೇಲೆ (1) ರಲ್ಲಿ ಓದಲಾದ ಮನವಿಯಲ್ಲಿ ಶ್ರೀ ಬಿ.ಎಂ.ಚಿಕ್ಕಯ್ಯ ಮತ್ತು ಇತರರು ಬೆಂಗಳೂರು ಅಭಿವೃದ್ದಿ ಪ್ರಾಧಿಕಾರದ ಎಂಪ್ಲಾಯೀಸ್ ಅಸೋಸಿಯೇಷನ್ ನಲ್ಲಿ ನಿವೇಶನ ಹಂಚಿಕೆಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಗಳಿಗೆ ಸಂಬಂಧಿಸಿದಂತೆ ಒಟ್ಟು 31 ಆರೋಪಗಳನ್ನು ಮಾಡಿ ಸಂಘದ ಆಡಳಿತ ಮಂಡಳಿಯನ್ನು ರದ್ದುಗೊಳಿಸಿಸಂಘಗಳ ಕಾಯ್ದೆ 1960 ರ ಕಲಂ 27(ಎ) ರನ್ವಯ ಆಡಳಿತಾಧಿಕಾರಿಯನ್ನು ನೇಮಿಸಬೇಕೆಂದು ಕೋರಿರುತ್ತಾರೆ.
ಮೇಲೆ (2) ರಲ್ಲಿ ಓದಲಾದ ಆದೇಶದಲ್ಲಿ ಕರ್ನಾಟಕ ವಿಧಾನ ಪರಿಷತ್ತಿನ ಅರ್ಜಿ ಸಮಿತಿ (ಅರ್ಜಿ ಸಂಖ್ಯೆ:28/2012) ದಿನಾಂಕ:23.08.2016 ರಂದು ಬಿಡಿಎ ಎಂಪ್ಲಾಯಿಸ್ ವ್ಲೆಫೇರ್ ಅಸೋಸಿಯೇಷ್ನನ ಅವ್ಯವಹಾರಗಳ ಬಗ್ಗೆ ಮರು ವಿಚಾರಣೆ ಮಾಡಬೇಕೆಂದು ನಿರ್ದೇಶನ ನೀಡಿರುವ ಹಿನ್ನೆಲೆಯಲ್ಲಿ , ಕಾನೂನು ಇಲಾಖೆಯ ಅಭಿಪ್ರಾಯವನ್ನು ಪಡೆದು, ದಿನಾಂಕ:23.06.2016ರ ದೂರು ಅರ್ಜಿಯಲ್ಲಿನ ಎಲ್ಲಾ 31 ಅಪಾದನೆಗಳ ಕುರಿತು ವಿಚಾರಣೆ ನಡೆಸಿ, ವಸ್ತು ನಿಷ್ಠ ವರದಿಯನ್ನು (fact finding report) ಸರ್ಕಾರಕ್ಕೆ ಸಲ್ಲಿಸಲು, ಶ್ರೀ ಎಸ್.ಸಿ.ಇಂಗಳಗಿ, ನಿವೃತ್ತ ಜಿಲ್ಲಾ ನ್ಯಾಯಾಧೀಶರು ಬೆಂಗಳೂರು ಇವರನ್ನು ತನಿಖಾಧಿಕಾರಿ/ವಿಚಾರಣಾಧಿಕಾರಿಯನ್ನಾಗಿ ನೇಮಿಸಿ ಆದೇಶಿಸಲಾಗಿರುತ್ತದೆ.
ಮೇಲೆ (3) ರಲ್ಲಿ ಓದಲಾದ ವರದಿಯಲ್ಲಿ ಶ್ರೀ ಎಸ್.ಪಿ.ಇಂಗಳಗಿ ಇವರು ನೀಡಿರುವ ವಿಚಾರಣಾ ವರದಿಯಲ್ಲಿ ಬೆಂಗಳೂರು ಅಭಿವೃದ್ದಿ ಪ್ರಾಧಿಕಾರದ ಎಂಪ್ಲಾಯೀಸ್ ಅಸೋಸಿಯೇಷನ್ ನಲ್ಲಿ ನಿವೇಶನ ಹಂಚಿಕೆಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಗಳಿಗೆ ಸಂಬಂಧಿಸಿದಂತೆ ಒಟ್ಟು 12 ಆರೋಪಗಳುಸಾಬೀತಾಗಿರುವುದಾಗಿ ವರದಿ ನೀಡಿರುತ್ತಾರೆ.
ಮೇಲೆ (4) ರಲ್ಲಿ ಓದಲಾದ ಅಭಿಪ್ರಾಯದಲ್ಲಿ, ನಗರಾಭಿವೃದ್ಧಿ ಇಲಾಖೆಯು ತಮ್ಮ ಟಿಪ್ಪಣಿಯಲ್ಲಿ ಬಿಡಿಎ ಎಂಪ್ಲಾಯಿಸ್ ವ್ಲೆಫೇರ್ ಅಸೋಸಿಯೇಷನ್ ನಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಗಳ ಬಗ್ಗೆ ತನಿಖೆಗಾಗಿ ನೇಮಿಸಲಾಗಿದ್ದ ಶ್ರೀ ಎಸ್.ಸಿ.ಇಂಗಳಗಿ, ಇವರ ವಿಚಾರಣಾ ವರದಿಯಂತೆ ಅಗತ್ಯ ಕ್ರಮ ಕೈಗೊಳ್ಳಬಹುದು ಎಂದು ಅಭಿಪ್ರಾಯಿಸಿರುತ್ತಾರೆ.
ಮೇಲೆ (5) ರಲ್ಲಿ ಓದಲಾದಅಭಿಪ್ರಾಯದಲ್ಲಿ, ಕಾನೂನು ಇಲಾಖೆಯು ಎಸ್.ಸಿ.ಇಂಗಳಗಿ, ನಿವೃತ್ತ ಜಿಲ್ಲಾ ನ್ಯಾಯಾಧೀಶರು ಸಲ್ಲಿಸಿರುವ ವಿಚಾರಣಾ ವರದಿಯಲ್ಲಿ ಸಂಘದ ವಿರುದ್ಧದ ಆರೋಪಗಳು ಸಾಬೀತಾಗಿರುವುದರಿಂದ, ಈ ವರದಿಯು ಇತ್ತೀಚಿನ ವರದಿಯಾಗಿರುವುದರಿಂದ ಹಾಗೂ ಸಮಂಜಸವಾಗಿರುವುದರಿಂದ, ಸದರಿ ವರದಿಯನ್ನು ಪರಿಗಣಿಸಬಹುದಾಗಿದೆ ಎಂದು ಅಭಿಪ್ರಾಯ ನೀಡಿರುತ್ತಾರೆ.
ಮೇಲ್ಕಂಡ ಅಂಶಗಳನ್ನು ಪರಿಶೀಲಿಸಿ, ಬೆಂಗಳೂರು ಅಭಿವೃದ್ದಿ ಪ್ರಾಧಿಕಾರದ ಎಂಪ್ಲಾಯೀಸ್ ಅಸೋಸಿಯೇಷನ್ ನಲ್ಲಿ ನಿವೇಶನ ಹಂಚಿಕೆಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಗಳ ಸಾಬೀತಾಗಿರುವುದರಿಂದ, ಸಂಘದ ಆಡಳಿತ ಮಂಡಳಿಯನ್ನು ರದ್ದುಗೊಳಿಸಿ ಸಂಘ ಮತ್ತು ಸಂಘದಸದಸ್ಯರಭಾಗ ೧ ಕರ್ನಾಟಕ ರಾಜ್ಯಪತ್ರ,ಗುರುವಾರ, ೧೪, ಮೇ , 2020 ೧೭೩ ಹಿತದೃಷ್ಟಿಯಿಂದ ಸಂಘಕ್ಕೆ ಆಡಳಿತಾಧಿಕಾರಿಯನ್ನು ನೇಮಿಸುವುದು ಸೂಕ್ತವಾಗಿರುವುದನ್ನು ಮನಗಂಡು, ಬೆಂಗಳೂರು ಅಭಿವೃದ್ದಿ ಪ್ರಾಧಿಕಾರದ ಎಂಪ್ಲಾಯೀಸ್ ಅಸೋಸಿಯೇಷನ್ , ಬೆಂಗಳೂರು ಈ ಸಂಘಕ್ಕೆ ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ 1960 ರ ಕಲಂ 27(ಎ) ರನ್ವಯ ಶ್ರೀ. ಆರ್. ಲೋಕೇಶ್, ಸಹಕಾರ ಸಂಘಗಳ ಜಂಟಿ ನಿಬಂಧಕರು ಹಾಗೂ ಸಮಾಪನಾಧಿಕಾರಿ, ಗೌರಿಬಿದನೂರು ಸಹಕಾರಿ ಸಕ್ಕರೆ ಕಾರ್ಖಾನೆ ಇವರನ್ನು ಆಡಳಿತಾಧಿಕಾರಿಯನ್ನು ನೇಮಿಸಲು ಸರ್ಕಾರವು ತೀರ್ಮಾನಿಸಿದೆ. ಆದ್ದರಿಂದ, ಈ ಆದೇಶ.
-: ಆದೇಶ :-
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ 1960ರ ಕಲಂ 27-ಎ ರನ್ವಯ ಬೆಂಗಳೂರು ಅಭಿವೃದ್ದಿ ಪ್ರಾಧಿಕಾರದ ಎಂಪ್ಲಾಯೀಸ್ ಅಸೋಸಿಯೇಷನ್, ಬೆಂಗಳೂರು ಈ ಸಂಘಕ್ಕೆ ಶ್ರೀ. ಆರ್. ಲೋಕೇಶ್, ಸಹಕಾರ ಸಂಘಗಳ ಜಂಟಿ ನಿಬಂಧಕರು ಹಾಗೂ ಸಮಾಪನಾಧಿಕಾರಿ, ಗೌರಿಬಿದನೂರು ಸಹಕಾರಿ ಸಕ್ಕರೆ ಕಾರ್ಖಾನೆ ಇವರನ್ನು ಮುಂದಿನ ಆರು ತಿಂಗಳ ಅವಧಿಗೆ ಆಡಳಿತಾಧಿಕಾರಿಯಾಗಿ ನೇಮಿಸಿ ಆದೇಶಿಸಿದೆ.
ಆಡಳಿತಾಧಿಕಾರಿಯು ಕೂಡಲೇ ಸಂಘದ ಪ್ರಭಾರವನ್ನು ವಹಿಸಿಕೊಂಡು, ಸಂಘದಲ್ಲಿನ ನ್ಯೂನ್ಯತೆಗಳನ್ನು ಸರಿಪಡಿಸಿ, ನಿಯಮಾನುಸಾರ ಸಂಘದ ಆಡಳಿತ ಮಂಡಳಿಗೆ ಚುನಾವಣೆ ನಡೆಸಿ, ಚುನಾಯಿತ ನೂತನ ಆಡಳಿತ ಮಂಡಳಿಗೆ ಅಧಿಕಾರ ಹಸ್ತಾಂತರಿಸಿ, ಸರ್ಕಾರಕ್ಕೆ ವರದಿ ನೀಡಲು ಆದೇಶಿಸಲಾಗಿದೆ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ
ಮತ್ತು ಅವರ ಹೆಸರಿನಲ್ಲಿ
(ಮನೋರಮ ಡಿ.ಸಿ.)
ಸರ್ಕಾರದ ಅಧೀನ ಕಾರ್ಯದರ್ಶಿ-3,
ಸಹಕಾರ ಇಲಾಖೆ.
PR‐69
೧೭೪ ಕರ್ನಾಟಕ ರಾಜ್ಯಪತ್ರ,ಗುರುವಾರ, ೧೪, ಮೇ , 2020 ಭಾಗ ೧ಕರ್ನಾಟಕ ಸರ್ಕಾರ
ಸಂಖ್ಯೆ: ಸಇ 26 ಸಸಂನೋ 2016 ಕರ್ನಾಟಕ ಸರ್ಕಾರದ ಸಚಿವಾಲಯ,
ಬಹುಮಹಡಿ ಕಟ್ಟಡ,
ಬೆಂಗಳೂರು, ದಿನಾಂಕ: 07.05.2020
ತಿದ್ದುಪಡಿ ಆದೇಶ
ಬೆಂಗಳೂರು ಅಭಿವೃದ್ದಿ ಪ್ರಾಧಿಕಾರದ ಎಂಪ್ಲಾಯೀಸ್ ವ್ಲೆಫೇರ್ ಅಸೋಸಿಯೇಷನ್, ಬಿಡಿಎ ಪ್ರಧಾನ ಕಚೇರಿ ಆವರಣ, ಟಿ.ಚೌಡಯ್ಯ ರಸ್ತೆ, ಕುಮಾರ ಪ್ಕ್ರಾ ಪಶ್ಚಿಮ, ಬೆಂಗಳೂರು-20 ಈ ಸಂಘಕ್ಕೆ ಆಡಳಿತಾಧಿಕಾರಿ ನೇಮಿಸಲಾಗಿರುವ ಸರ್ಕಾರದ ಆದೇಶ ಸಂಖ್ಯೆ: ಸಇ 26 ಸಸಂನೋ 2016 ಬೆಂಗಳೂರು, ದಿನಾಂಕ:04.05.2020 ರಲ್ಲಿ "ಬೆಂಗಳೂರು ಅಭಿವೃದ್ದಿ ಪ್ರಾಧಿಕಾರದ ಎಂಪ್ಲಾಯೀಸ್ ಅಸೋಸಿಯೇಷನ್, ಬೆಂಗಳೂರು" ಎಂದು ನಮೂದಾಗಿರುವ ಕಡೆಗಳೆಲ್ಲಾ "ಬೆಂಗಳೂರು ಅಭಿವೃದ್ದಿ ಪ್ರಾಧಿಕಾರದ ಎಂಪ್ಲಾಯೀಸ್ ವ್ಲೆಫೇರ್ ಅಸೋಸಿಯೇಷನ್(ನೋಂದಣಿ ಸಂಖ್ಯೆ:653/2001-02)" ಎಂದು ತಿದ್ದಿ ಓದಿಕೊಳ್ಳತಕ್ಕದ್ದು. ಇನ್ನುಳಿದಂತೆ ಯಾವುದೇ ಬದಲಾವಣೆ ಇರುವುದಿಲ್ಲ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ
ಮತ್ತು ಅವರ ಹೆಸರಿನಲ್ಲಿ
(ಮನೋರಮ ಡಿ.ಸಿ.)
ಸರ್ಕಾರದ ಅಧೀನ ಕಾರ್ಯದರ್ಶಿ-3,
ಸಹಕಾರ ಇಲಾಖೆ.
PR‐70
ಭಾಗ ೧ ಕರ್ನಾಟಕ ರಾಜ್ಯಪತ್ರ,ಗುರುವಾರ, ೧೪, ಮೇ , 2020 ೧೭೫ಕರ್ನಾಟಕ ಸರ್ಕಾರದ ನಡವಳಿಗಳು
ವಿಷಯ :- ಉದಯ ವಿದ್ಯಾ ಕೇಂದ್ರ, ಭುವನೇಶ್ವರಿ ನಗರ, ಆರ್.ಟಿ.ನಗರ(ಪೋ) ಬೆಂಗಳೂರು ಈ ಸಂಘದ ಆಡಳಿತಾಧಿಕಾರಿ ಅವಧಿಯನ್ನು ವಿಸ್ತರಿಸುವ ಬಗ್ಗೆ.
ಸರ್ಕಾರದ ಆದೇಶ ಸಂಖ್ಯೆ: ಸಇ 08 ಸಸಂನೋ 2018 ಬೆಂಗಳೂರು, ದಿನಾಂಕ: 04.05.2020
ಓದಲಾಗಿದೆ:- 6. ಸರ್ಕಾರದ ಆದೇಶ ಸಂಖ್ಯೆ: ಸಇ 08 ಸಸಂನೋ 2018, ದಿನಾಂಕ:
04.05.2018, 07.12.2018, 20.04.2019 ಮತ್ತು 31.10.2019.
7. ಶ್ರೀ ಎಂ.ಪಿ.ಮಂಜುನಾಥ್ , ಆಡಳಿತಾಧಿಕಾರಿ, ಉದಯ ವಿದ್ಯಾ ಕೇಂದ್ರ ಹಾಗೂ ಸಹಕಾರ ಸಂಘಗಳ ಸಹಾಯಕ ನಿಬಂಧಕರು, ಪಟ್ಟಣ ಬ್ಯಾಂಕುಗಳ ವಿಭಾಗ ಇವರ ಪತ್ರ ಸಂಖ್ಯೆ: UVK/GEN/015/2019-20, ದಿನಾಂಕ:20.04.2020.
**********
ಪ್ರಸ್ತಾವನೆ:
ಮೇಲೆ ಓದಲಾದ 01ರ ಆದೇಶಗಳಲ್ಲಿ ಉದಯ ವಿದ್ಯಾ ಕೇಂದ್ರ, ಬೆಂಗಳೂರು ಈ ಸಂಘಕ್ಕೆ ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ 1960ರ ಕಲಂ 27(ಎ) ರನ್ವಯ ಶ್ರೀ ಎಂ.ಪಿ. ಮಂಜುನಾಥ್, ಸಹಕಾರ ಸಂಘಗಳ ಸಹಾಯಕ ನಿಬಂಧಕರು (ಪಟ್ಟಣ ಬ್ಯಾಂಕುಗಳ ವಿಭಾಗ), ನಿಬಂಧಕರ ಕಛೇರಿ, ಬೆಂಗಳೂರು ಇವರನ್ನು ದಿನಾಂಕ:04.05.2018 ರಿಂದ ಮುಂದಿನ 06 ತಿಂಗಳವರೆಗೆ ಆಡಳಿತಾಧಿಕಾರಿಯನ್ನಾಗಿ ನೇಮಿಸಲಾಗಿತ್ತು ನಂತರ ದಿನಾಂಕ: 07.12.2018, 20.04.2019 ಮತ್ತು 31.10.2019 ರ ಆದೇಶಗಳಲ್ಲಿ ಆಡಳಿತಾಧಿಕಾರಿಗಳ ಅವಧಿಯನ್ನು ತಲಾ 6 ತಿಂಗಳ ಅವಧಿಗೆ ವಿಸ್ತರಿಸಲಾಗಿತ್ತು.
ಮೇಲೆ ಓದಲಾದ 02ರಲ್ಲಿ ಸಂಘದ ಆಡಳಿತಾಧಿಕಾರಿಗಳ ಪತ್ರದಲ್ಲಿ ಸರ್ಕಾರದ ಆದೇಶದ ದಿನಾಂಕ:31.10.2019 ರ ಪ್ರಕಾರ ಆಡಳಿತಾಧಿಕಾರಿಯ ಅವಧಿಯು ದಿನಾಂಕ:03.05.2020 ಕ್ಕೆ ಅಂತ್ಯಗಳ್ಳಲಿದೆಯೆಂದು, ಸಂಘದ ಹಿಂದಿನ ಮಾಜಿ ಅಧ್ಯಕ್ಷರು ಮತ್ತು ಕಾರ್ಯದರ್ಶಿಯವರು ಹಣದುರುಪಯೋಗ ಮಾಡಿರುವುದು ಸಾಬೀತಾಗಿರುತ್ತದೆಂದು, ಸಂಸ್ಥೆಯ ದಾಖಲೆಗಳನ್ನು ಆಡಳಿತಾಧಿಕಾರಿಗಳ ವಶಕ್ಕೆ ನೀಡಲು ಹಾಗೂ ಆಡಳಿತ ಮಂಡಳಿ ರಚನೆ ಮಾಡವ ಬಗ್ಗೆ ಸಂಘದ ಹಿಂದಿನ ಕಾರ್ಯದರ್ಶಿ ಮತ್ತು ಹಿಂದಿನ ಕಾರ್ಯಕಾರಿ ಸಮಿತಿ ಸದಸ್ಯರಿಗೆ ಪದೆಪದೆ ಪತ್ರ ಬರೆಯಲಾಗಿದ್ದರೂ ಈವರೆಗೆ ಸಂಬಂಧಿಸಿದ ದಾಖಲೆಗಳನ್ನು ಹಾಗೂ ಸದಸ್ಯರ ಪಟ್ಟಿಯನ್ನು ನೀಡಿರುವುದಿಲ್ಲವೆಂದು, ಆದುದರಿಂದ ಹೊಸ ಆಡಳಿತ ಮಂಡಳಿ ರಚನೆಗೆ ಕ್ರಮ ಕೈಗೊಳ್ಳಲು ಸಾಧ್ಯವಾಗಿರುವುದಿಲ್ಲವೆಂದು, ಈ ಹಿನ್ನೆಲೆಯಲ್ಲಿ ತಾಂತ್ರಿಕವಾಗಿ ಮತ್ತು ಕಾನೂನುಬದ್ಧವಾಗಿ ಕ್ರಮ ಜರುಗಿಸಲು ಉದಯ ವಿದ್ಯಾ ಕೇಂದ್ರ ಸಂಸ್ಥೆಯ ಆಡಳಿತಾಧಿಕಾರಿಯ ಅವಧಿಯನ್ನು ದಿನಾಂಕ:04.05.2020 ರಿಂದ ಮುಂದಿನ 06 ತಿಂಗಳ ಅವಧಿಗೆ ವಿಸ್ತರಿಸಬೇಕೆಂದು ಕೋರಿರುತ್ತಾರೆ.
R.N.I. No. KARBIL/2001/47147 POSTAL REGN. No. RNP/KA/BGS/2202/2017-19
Licensed to post without prepayment WPP No. 297
೧೭೬ ಕರ್ನಾಟಕ ರಾಜ್ಯಪತ್ರ,ಗುರುವಾರ, ೧೪, ಮೇ , 2020 ಭಾಗ ೧ಮೇಲೆ ವಿವರಿಸಿರುವ ಅಂಶಗಳನ್ನು ಕೂಲಂಕಷವಾಗಿ ಪರಿಶೀಲಿಸಲಾಗಿ, ಉದಯ ವಿದ್ಯಾ ಕೇಂದ್ರ, ಭುವನೇಶ್ವರಿ ನಗರ, ಆರ್.ಟಿ.ನಗರ(ಪೋ), ಬೆಂಗಳೂರು ಈ ಸಂಸ್ಥೆಯಲ್ಲಿ ನಡೆದಿರುವ ಹಣ ದುರುಪಯೋಗದ ಕುರಿತು ವಿಚಾರಣಾ ವರದಿಯನ್ವಯ ಕ್ರಮಕೈಗೊಳ್ಳಲು ಮತ್ತು ಸಂಘದಲ್ಲಿನ ನ್ಯೂನ್ಯತೆಗಳನ್ನು ಸರಿಪಡಿಸಿ ಸಂಘಕ್ಕೆ ಚುನಾವಣೆ ನಡೆಸಿ ಆಡಳಿತ ಮಂಡಳಿಗೆ ಅಧಿಕಾರ ಹಸ್ತಾಂತರಿಸಲು ಕಾಲಾವಕಾಶದ ಅವಶ್ಯಕತೆ ಇರುವುದನ್ನು ಮನಗಂಡು ಸಂಘದ ಆಡಳಿತಾಧಿಕಾರಿ ಅವಧಿಯನ್ನು ವಿಸ್ತರಿಸಲು ಸರ್ಕಾರವು ತೀರ್ಮಾನಿಸಿದೆ.
ಆದ್ದರಿಂದ, ಈ ಆದೇಶ.
-: ಆದೇಶ :-
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ 1960ರ ಕಲಂ 27(ಎ) ರನ್ವಯ ಉದಯ ವಿದ್ಯಾ ಕೇಂದ್ರ, ಭುವನೇಶ್ವರಿ ನಗರ, ಆರ್.ಟಿ.ನಗರ(ಪೋ), ಬೆಂಗಳೂರು ಈ ಸಂಘದ ಆಡಳಿತಾಧಿಕಾರಿ ಅವಧಿಯನ್ನು ದಿನಾಂಕ:04.05.2020 ರಿಂದ ಮುಂದಿನ 03 ತಿಂಗಳ ಅವಧಿಗೆ ವಿಸ್ತರಿಸಿ ಆದೇಶಿಸಿದೆ. ಈ ಆದೇಶವು ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟವಾದ ದಿನಾಂಕದಿಂದ ಜಾರಿಗೆ ಬರುತ್ತದೆ.
ಆಡಳಿತಾಧಿಕಾರಿಗಳು ಸದರಿ ಅವಧಿಯಲ್ಲಿ ಸಂಘದಲ್ಲಿ ನಡೆದಿರುವ ಹಣ ದುರುಪಯೋಗದ ಕುರಿತು ವಿಚಾರಣಾ ವರದಿಯನ್ವಯ ನಿಯಮಾನುಸಾರ ಕ್ರಮಕೈಗೊಂಡು ಸಂಘದಲ್ಲಿನ ನ್ಯೂನ್ಯತೆಗಳನ್ನು ಸರಿಪಡಿಸಿ, ಸರ್ಕಾರಕ್ಕೆ ವರದಿ ಸಲ್ಲಿಸುವುದರೊಂದಿಗೆ, ಸಂಘದ ಆಡಳಿತ ಮಂಡಳಿಗೆ ಚುನಾವಣೆ ನಡೆಸಿ, ಚುನಾಯಿತ ನೂತನ ಆಡಳಿತ ಮಂಡಳಿಗೆ ಅಧಿಕಾರ ಹಸ್ತಾಂತರಿಸುವಂತೆ ಸೂಚಿಸಿದೆ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ
ಮತ್ತು ಅವರ ಹೆಸರಿನಲ್ಲಿ
(ಮನೋರಮ ಡಿ.ಸಿ.)
ಸರ್ಕಾರದ ಅಧೀನ ಕಾರ್ಯದರ್ಶಿ-3,
ಸಹಕಾರ ಇಲಾಖೆ.
PR‐71
ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು.