Servants of Knowledge
Karnataka Weekly Gazette · Government of Karnataka

Gazette contains multiple Subjects

Published 17 September 2020

Ministry
Gazette contains multiple Departments/Organizations
Type
Weekly
Part
Part IVA
Reference
38
Identifier
in.gazette.karnataka_w.2020-09-17.38
Languages
English, Kannada
Published at
Original source ↗

click here for IIIF manifest

ಬೆಂಗಳ(cid:58)ರು,

ಗುರುವಾರ ,೧೭,(cid:177)ೆ(cid:164)ೆ(cid:190)ಂಬ(cid:349), 2020( ಭಾದ್ರಪದ,

26, ಶಕವರ್ಷ ೧೯೪2)

Bengaluru, THURSDAY,17,SEPTEMBER,2020( Bhadrapada,26, ShakaVarsha 1942)

ಸಂಪುಟ -೧೫೫

Volume - 155

ಸಂಚಿಕೆ ೩೮

Issue 38

ಭಾಗ ೪ಎ

ರಾಜ್ಯದ ವಿಧ

ೇಯಕಗಳ ಮತ್ತು ಅವುಗಳ ಮೇಲೆ ಪರಿಶೀಲನಾ ಸಮಿತಿಯ ವರದಿಗಳು, ರಾಜ್ಯದ

ಅಧಿನಿಯಮಗಳು ಮತ್ತು ಆಧ್ಯಾದೇಶಗಳು, ಕೇಂದ

್ರದ ಮತ್ತು ರಾಜ್ಯದ ಶಾಸನಗಳ ಮೇರೆಗೆ ರಾಜ್ಯ ಸರ್ಕಾರವು

ಹೊರಡಿಸಿದ ಸಾಮಾನ್ಯ ಶಾಸನಬದ್ಧ ನಿಯಮಗಳು ಮತು ್ತ ರಾಜ್ಯಾಂಗದ ಮೇರೆಗೆ ರಾಜ್ಯಪಾಲರು ಮಾಡಿದ

ನಿಯಮಗಳು ಹಾಗೂ ಕರ್ನಾಟಕ ಉಚ್ಛ ನ್ಯಾಯಾಲಯವು ಮಾಡಿದ ನಿಯಮಗಳು

ಕರ್ನಾಟಕ ಸರ್ಕಾರ

ಸಂಖ್ಯೆ: ಗ್ರಾಅಪ 331 ಗ್ರಾಪಂಅ 2019 ಕರ್ನಾಟಕ ಸರ್ಕಾರದ ಸಚಿವಾಲಯ, ಬಹುಮಹಡಿ ಕಟ್ಟಡ ಬೆಂಗಳೂರು, ದಿನಾಂಕ:27-07-2020.

ಅಧಿಸೂಚನೆ

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993 (1993ರ ಕರ್ನಾಟಕ ಅಧಿನಿಯಮ ಸಂಖ್ಯೆ 14)ರ ಪ್ರಕರಣ 243 ಮತ್ತು 244 ರೊಡನೆ ಓದಿಕೊಂಡಂತೆ ಪ್ರಕರಣ 311 ರ ಮೂಲಕ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಗ್ರಾಮ ಪಂಚಾಯತಿಗಳ ಆಯವ್ಯಯ ಮತ್ತು ಲೆಕ್ಕಪತ್ರಗಳು) (ತಿದ್ದುಪಡಿ) ನಿಯಮಗಳು, 2020 ರ ಕರಡನ್ನು ದಿನಾಂಕ:12-03-2020 ರ ಕರ್ನಾಟಕ ರಾಜ್ಯ ಪತ್ರದ ಭಾಗ-IV-A ರಲ್ಲಿ ಪ್ರಕಟಿಸಿ, ಅದರಿಂದ ಬಾಧಿತರಾಗುವ ವ್ಯಕ್ತಿಗಳಿಂದ ಸದರಿ ಕರಡಿಗೆ ಆಕ್ಷೇಪಣೆ ಮತ್ತು ಸಲಹೆಗಳನ್ನು ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟವಾದ ದಿನಾಂಕದಿಂದ ಮೂವತ್ತು ದಿನಗಳೊಳಗಾಗಿ ಸಲ್ಲಿಸಬೇಕೆಂದು ಕೋರಿರುವುದರಿಂದ;

ಮತ್ತು ಸದರಿ ರಾಜ್ಯ ಪತ್ರವು ಸಾರ್ವಜನಿಕರಿಗೆ ದಿನಾಂಕ:12-03-2020 ರಂದು ಲಭ್ಯವಾಗುವಂತೆ ಮಾಡಿರುವುದರಿಂದ;

ಮತ್ತು, ಸದರಿ ಕರಡಿನ ಸಂಬಂಧದಲ್ಲಿ ರಾಜ್ಯ ಸರ್ಕಾರಕ್ಕೆ ಯಾವುದೇ ಆಕ್ಷೇಪಣೆ ಅಥವಾ ಸಲಹೆಗಳು ಬಾರದಿರುವುದರಿಂದ;

ಈಗ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993 (1993ರ ಕರ್ನಾಟಕ ಅಧಿನಿಯಮ ಸಂಖ್ಯೆ 14)ರ 311 ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಕರ್ನಾಟಕ ಸರ್ಕಾರವು ಈ ಮೂಲಕ ನಿಯಮಗಳನ್ನು ರಚಿಸುತ್ತದೆ, ಎಂದರೆ;-

(೨೭೪೩)೨೭೪೪ ಕ£ಾಟಕ (cid:170)ಾಜ(cid:205)ಪತ(cid:206),ಗುರು(cid:174)ಾರ, ೧೭,(cid:177)ೆ(cid:164)ೆ(cid:190)ಂಬ(cid:349), 2020 ಭಾಗ ೪ಎ

ನಿಯಮಗಳು

:- (1) ಈ ನಿಯಮಗಳನ್ನು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಗ್ರಾಮ 1. ಹೆಸರು ಮತ್ತು ಪ್ರಾರಂಭ ಪಂಚಾಯತಿಗಳ ಆಯವ್ಯಯ ಮತ್ತು ಲೆಕ್ಕಪತ್ರಗಳು) (ತಿದ್ದುಪಡಿ) ನಿಯಮಗಳು, 2020 ಎಂದು ಕರೆಯತಕ್ಕದ್ದು.

(2) ಇವು ರಾಜ್ಯಪತ್ರದಲ್ಲಿ ಅಂತಿಮವಾಗಿ ಪ್ರಕಟಿಸಿದ ದಿನಾಂಕದಿಂದ ಜಾರಿಗೆ ಬರತಕ್ಕದ್ದು.

್ರತಿನಿಯೋಜನೆ,- ಕರ್ನಾಟಕ ಪಂಚಾಯತ್ ರಾಜ್ (ಗ್ರಾಮ ಪಂಚಾಯತಿಗಳ ಆಯವ್ಯಯ ಮತ್ತು 2. ಪದಾವಳಿಗಳ ಪ ಲೆಕ್ಕಪತ್ರಗಳು) ನಿಯಮಗಳು, 2006(ಇಲ್ಲಿ ಇನ್ನು ಮುಂದೆ ಮೂಲ ನಿಯಮಗಳೆಂದು ಉಲ್ಲೇಖಿತವಾಗಿದೆ)ರಲ್ಲಿ "ಪಂಚಾಯತ್ ರಾಜ್" ಎಂಬ ಪದಗಳು ಎಲ್ಲೆಲ್ಲಿ ಕಂಡುಬರುತ್ತವೊ ಅಲ್ಲಿ "ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್" ಎಂಬ ಪದಗಳನ್ನು ಪ್ರತ್ಯಾಯೋಜಿಸತಕ್ಕದ್ದು. 3. ನಿಯಮ 19ರ ಪ ್ರತಿ ನಿಯೋಜನೆ.- ಮೂಲ ನಿಯಮಗಳ ನಿಯಮ 19 ಕ್ಕೆ ಈ ಮುಂದಿನಂತೆ ಪ್ರತ್ಯಾನಿಯೋಜಿಸತಕ್ಕದ್ದು.

"19. ಆದಾಯಗಳ ನಗದು ಸಂಗ

್ರಹ.- ಗ್ರಾಮ ಪಂಚಾಯತಿಯ ಆದಾಯಗಳನ್ನು ಅಧಿಕೃತ ವ್ಯಕ್ತಿಗಳಿಂದ ಸಂಬಂಧಪಟ್ಟ ವ್ಯಕ್ತಿ ಅಥವಾ ಸಂಸ್ಥೆಗಳಿಂದ ನಗದು, ಚೆಕ್, ಡಿ.ಡಿ. ಕ್ರೆಡಿಟ್ ಕಾರ್ಡ್, ಡೆಬಿಡ್ ಕಾರ್ಡ್, ನೆಟ್ ಬ್ಯಾಂಕಿಂಗ್, ಯು.ಪಿ.ಐ, ಮೊಬೈಲ್ ವಾಲೆಟ್ ಮೂಲಕ ಸ್ವೀಕರಿಸಬಹುದು ಹಾಗೂ ಈ ರೀತಿ ಸ್ವೀಕರಿಸಿ ಸಂಗ್ರಹಿಸಿದ ವಸೂಲಾತಿಗಳಿಗೆ ಗ್ರಾಮ ಪಂಚಾಯತಿಯು ತಂತ್ರಾಂಶದ ಮೂಲಕ ಸ್ವೀಕರಿಸಲ್ಪಡುವ ಮುದ್ರಿತ ರಸೀತಿಯನ್ನು ನಮೂನೆ-3 ರಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಥವಾ ಕಾರ್ಯದರ್ಶಿ ಅಥವಾ ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಅಥವಾ ಅಧಿಕೃತ ಕರ ವಸೂಲಿಗಾರರಿಂದ ನೀಡುವುದು." 4. 20ನೇ ನಿಯಮದ ತಿದ್ದುಪಡಿ.- ಮೂಲ ನಿಯಮಗಳ, ನಿಯಮ 20 ರಲ್ಲಿ,-

1) "ತಾತ್ಕಾಲಿಕ ರಿಸೀತಿ" ಪದಗಳನ್ನು ಬಿಟ್ಟುಬಿಡತಕ್ಕದ್ದು; ಮತ್ತು 2) "ಅಧಿಕೃತ ರಿಸೀದಿ" ಎಂಬ ಪದಗಳಿಗೆ "ಗಣಕೀಕೃತ ರಸೀದಿ" ಎಂಬ ಪದಗಳನ್ನು ಪ್ರತಿಯೋಜಿಸತಕ್ಕದ್ದು.

5. 21ನೇ ನಿಯಮವನ್ನು ಬಿಟ್ಟು ಬಿಡುವುದು.- ಮೂಲ ನಿಯಮಗಳ, ನಿಯಮ 21 ಅನ್ನು ಬಿಟ್ಟುಬಿಡತಕ್ಕದ್ದು. 6. ನಮೂನೆ 3 ರ ತಿದ್ದುಪಡಿ.- ಮೂಲ ನಿಯಮಗಳ, ನಮೂನೆ-3 ರಲ್ಲಿ,-

1) "ಶಿಕ್ಷಣ ಕರ (10%)" ಎಂಬ ಪದಗಳನ್ನು, ಆವರಣ ಮತ್ತು ಅಂಕಿಗಳನ್ನು ಬಿಟ್ಟುಬಿಡತಕ್ಕದ್ದು; ಮತ್ತು 2) "5. ಜಾಹೀರಾತು ತೆರಿಗೆ" ಎಂಬ ಪದಗಳನ್ನು ಮತ್ತು ಅಂಕಿಯನ್ನು ಬಿಟ್ಟುಬಿಡತಕ್ಕದ್ದು.

7. ನಮೂನೆ 5 ಅನ್ನು ಬಿಟ್ಟುಬಿಡುವುದು.- ಮೂಲ ನಿಯಮಗಳ ನಮೂನೆ-5 ಅನ್ನು ಬಿಟ್ಟುಬಿಡತಕ್ಕದ್ದು.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು

ಅವರ ಹೆಸರಿನಲ್ಲಿ

(ಬಿ.ನವೀನ್ ಕುಮಾರ್) ಸರ್ಕಾರದ ಅಧೀನ ಕಾರ್ಯದರ್ಶಿ,(ಜಿ.ಪಂ.)(ಪ್ರ) ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ PR-337ಭಾಗ ೪ಎ ಕ£ಾಟಕ (cid:170)ಾಜ(cid:205)ಪತ(cid:206),ಗುರು(cid:174)ಾರ, ೧೭,(cid:177)ೆ(cid:164)ೆ(cid:190)ಂಬ(cid:349), 2020 ೨೭೪೫

ಕರ್ನಾಟಕ ಸರ್ಕಾರ

ಸಂಖ್ಯೆ : ಗ್ರಾ ಅಪ 507 ಗ್ರಾ ಪಂಅ 2019 ಕರ್ನಾಟಕ ಸರ್ಕಾರದ ಸಚಿವಾಲಯ, ಬಹುಮಹಡಿ ಕಟ್ಟ ಡ ಬೆಂಗಳೂರು, ದಿನಾಂಕ:09-09-2020.

ಅಧಿಸೂಚನೆ

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993 (1993ರ ಕರ್ನಾಟಕ ಅಧಿನಿಯಮ ಸಂಖ್ಯೆ 14) ರ ಪ್ರಕರಣ 58-ಇ, 61-ಎ, 75, 76, 77, 78, ಮತ್ತು 79ನೇ ಪ್ರಕರಣಗಳೊಂದಿಗೆ ಓದಿಕೊಂಡಂತೆ ಪ್ರಕರಣ 311ರ ಮೂಲಕ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಈ ಕೆಳಕಂಡಂತೆ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಗ್ರಾಮ ನೀರು ಸರಬರಾಜು ಮತ್ತು ನೈರ್ಮಲ್ಯ ಸಮಿತಿ) ನಿಯಮಗಳು, 2020ರ ಕರಡನ್ನು ಸದರಿ ಅಧಿನಿಯಮದ ಪ್ರಕರಣ 311 ಉಪಪ್ರಕರಣ (1) ರಲ್ಲಿ ನಿಗದಿಪಡಿಸಿದಂತೆ, ಇದರಿಂದ ಬಾಧಿತರಾಗುವ ಎಲ್ಲಾ ವ್ಯಕ್ತಿಗಳ ಮಾಹಿತಿಗಾಗಿ ಈ ಮೂಲಕ ಪ್ರಕಟಿಸಲಾಗಿದೆ ಮತ್ತು ಸದರಿ ಕರಡನ್ನು ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟಿತವಾದ ದಿನಾಂಕದಿಂದ ಮೂವತ್ತು ದಿನಗಳ ನಂತರ ಪರಿಗಣನೆಗೆ ತೆಗೆದುಕೊಳ್ಳಲಾಗುವುದೆಂದು ಈ ಮೂಲಕ ಸೂಚಿಸಲಾಗಿದೆ.

ಮೇಲೆ ನಿರ್ಧಿಷ್ಟಪಡಿಸಿದ ಅವಧಿಯು ಮುಕ್ತಾಯವಾಗುವ ಮೊದಲು ಸದರಿ ಕರಡು ನಿಯಮಗಳಿಗೆ ಸಂಬಂಧಿಸಿದಂತೆ ಯಾವೊಬ್ಬ ವ್ಯಕ್ತಿಯಿಂದ ರಾಜ್ಯ ಸರ್ಕಾರವು ಸ್ವೀಕರಿಸಬಹುದಾದ ಯಾವುದೇ ಆಕ್ಷೇಪಣೆ ಮತ್ತು ಸಲಹೆಗಳನ್ನು ರಾಜ್ಯ ಸರ್ಕಾರವು ಪರಿಗಣಿಸುವುದು. ಆಕ್ಷೇಪಣೆ ಅಥವಾ ಸಲಹೆಗಳನ್ನು ಸರ್ಕಾರದ ಪ್ರಧಾನ ಕಾರ್ಯದರ್ಶಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, 3ನೇಹಂತ, 3ನೇ ಮಹಡಿ, ಬಹುಮಹಡಿಗಳ ಕಟ್ಟಡ, ಡಾ.ಅಂಬೇಡ್ಕರ್ ವೀಧಿ, ಬೆಂಗಳೂರು-01 ಇವರಿಗೆ ಕಳುಹಿಸಲು ಕೋರಲಾಗಿದೆ.

ಕರಡು ನಿಯಮಗಳು

1. ಹೆಸರು ಮತ್ತು ಪ್ರಾರಂಭ.-(1) ಈ ನಿಯಮಗಳನ್ನು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಗ್ರಾಮ ನೀರು ಸರಬರಾಜು ಮತ್ತು ನೈರ್ಮಲ್ಯ ಸಮಿತಿ) ನಿಯಮಗಳು, 2020 ಎಂದು ಕರೆಯತಕ್ಕದ್ದು.

(2) ಇವು ರಾಜ್ಯಪತ್ರದಲ್ಲಿ ಅಂತಿಮವಾಗಿ ಪ್ರಕಟಿಸಿದ ದಿನಾಂಕದಿಂದ ಜಾರಿಗೆ ಬರುತ್ತದೆ.

2. ಪರಿಭಾಷೆಗಳು.- ಈ ನಿಯಮಗಳಲ್ಲಿ ವಿಷಯಕ್ಕೆ ಅಥವಾ ಸಂದರ್ಭಕ್ಕೆ ಬೇರೆ ಅರ್ಥದ ಅಗತ್ಯ ಇರದಿದ್ದರೆ,-

(ಎ) "ಅಧಿನಿಯಮ" ಎಂದರೆ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993 (1993 ರ ಕರ್ನಾಟಕ ಅಧಿನಿಯಮ ಸಂಖ್ಯೆ:14);

(ಬಿ) "ಅಧ್ಯಕ್ಷರು" ಎಂದರೆ ಸಂಬಂಧಪಟ್ಟ ಗ್ರಾಮದ ಗ್ರಾಮ ಪಂಚಾಯತಿಯ ಸದಸ್ಯರುಗಳಿಂದ ಗ್ರಾಮ ಸಭೆಯ ಮುಖಾಂತರ ಆಯ್ಕೆಯಾದ ಗ್ರಾಮ ಪಂಚಾಯತಿಯ ಒಬ್ಬ ಸದಸ್ಯನು;

೨೭೪೬ ಕ£ಾಟಕ (cid:170)ಾಜ(cid:205)ಪತ(cid:206),ಗುರು(cid:174)ಾರ, ೧೭,(cid:177)ೆ(cid:164)ೆ(cid:190)ಂಬ(cid:349), 2020 ಭಾಗ ೪ಎ

(ಸಿ) "ಉಪಾಧ್ಯಕ್ಷರು" ಎಂದರೆ ಸಂಬಂಧಪಟ್ಟ ಗ್ರಾಮದ ಗ್ರಾಮ ಪಂಚಾಯತಿಯ ಸದಸ್ಯರುಗಳಿಂದ ಗ್ರಾಮ

ಸಭೆಯ ಮುಖಾಂತರ ಆಯ್ಕೆಯಾದ ಗ್ರಾಮ ಪಂಚಾಯತಿಯ ಒಬ್ಬ ಸದಸ್ಯನು ಅಥವಾ ಗ್ರಾಮ ಸಭೆಯ ಮುಖಾಂತರ ನಾಮನಿರ್ದೇಶನ ಮಾಡಿದ ಸದಸ್ಯನು;

(ಡಿ) "ಸಮಿತಿ" ಎಂದರೆ ನಿಯಮ 4 ರಡಿಯಲ್ಲಿ ರಚಿಸಲ್ಪಟ್ಟಿರುವ ಗ್ರಾಮ ನೀರು ಸರಬರಾಜು ಮತ್ತು ನೈರ್ಮಲ್ಯ ಸಮಿತಿ; ಮತ್ತು

(ಇ) "ಸದಸ್ಯ ಕಾರ್ಯದರ್ಶಿ" ಎಂದರೆ ಪಂಚಾಯತಿ ಅಭಿವೃದ್ಧಿ ಅಧಿಕಾರಿ / ಗ್ರಾಮ ಪಂಚಾಯತಿಯ ಕಾರ್ಯದರ್ಶಿ ಗ್ರೇಡ್-1.

3. ಸಮಿತಿಯ ಕಾರ್ಯವ್ಯಾಪ್ತಿ.- ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಸಂಬಂಧಪಟ್ಟ ಪ್ರತಿಯೊಂದು

ಗ್ರಾಮ ಹಾಗೂ ಗ್ರಾಮಕ್ಕೆ ಹೊಂದಿಕೊಂಡಿರುವ ಉಪ-ಗ್ರಾಮಗಳು, ಜನವಸತಿ ಪ್ರದೇಶಗಳನ್ನು ಒಳಗೊಂಡಿರುತ್ತದೆ.

4. ಸಮಿತಿಯ ರಚನೆ.- (ಎ) ಸಂಬಂಧಪಟ್ಟ ಗ್ರಾಮದ ಎಲ್ಲಾ ಗ್ರಾಮ ಪಂಚಾಯಿತಿಯ ಸದಸ್ಯರು, ಸಮಿತಿ ಕಾರ್ಯದರ್ಶಿ, ನಾಮನಿರ್ದೇಶಿತ ಸದಸ್ಯರು ಎಲ್ಲರನ್ನು ಒಳಗೊಂಡು ಗರಿಷ್ಠ 10 ಸದಸ್ಯರನ್ನೊಳಗೊಂಡ ಗ್ರಾಮ ನೀರು ಸರಬರಾಜು ಮತ್ತು ನೈರ್ಮಲ್ಯ ಸಮಿತಿಯಾಗಿರಬೇಕು;

(ಬಿ) ಗ್ರಾಮ ಸಭೆಯಲ್ಲಿ ಸ್ಥಳೀಯ ಔಪಚಾರಿಕ / ಅನೌಪಚಾರಿಕ ಸಂಘ ಸಂಸ್ಥೆಗಳ ಅಂದರೆ ರೈತ ಸಂಘಗಳು, ಮಹಿಳಾ ಸ್ವ-ಸಹಾಯ ಸಂಘಗಳ ಪ್ರತಿನಿಧಿಗಳು ಮತ್ತು ಸರ್ಕಾರದಿಂದ ಮಾನ್ಯತೆ ಪಡೆದ ಇದೇ ತೆರನಾದ ಸಂಘಟನೆಗಳಿಗೆ ಸೇರಿದ ಸದಸ್ಯರುಗಳನ್ನು ಗ್ರಾಮ ಸಭೆಯ ಮುಖಾಂತರ ನಾಮನಿರ್ದೇಶನ ಮಾಡುವುದು;

(ಸಿ) ಗ್ರಾಮ ನೀರು ಸರಬರಾಜು ಮತ್ತು ನೈರ್ಮಲ್ಯ ಸಮಿತಿಯ ಒಟ್ಟಾರೆ ಸದಸ್ಯರ ಸಂಖ್ಯೆಯಲ್ಲಿ ಶೇಕಡ 50 ರಷ್ಟು ಮಹಿಳಾ ಸದಸ್ಯರುಗಳಿರಬೇಕು;

(ಡಿ) ಗ್ರಾಮ ನೀರು ಸರಬರಾಜು ಮತ್ತು ನೈರ್ಮಲ್ಯ ಸಮಿತಿಯ ಒಟ್ಟಾರೆ ಸದಸ್ಯರ ಸಂಖ್ಯೆಯಲ್ಲಿ ಶೇಕಡ 20 ರಷ್ಟು ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡದ ಸದಸ್ಯರುಗಳಿರಬೇಕು;

(ಇ) ಅಧ್ಯಕ್ಷರನ್ನು ಗ್ರಾಮ ಪಂಚಾಯಿತಿಯ ಸದಸ್ಯರುಗಳು ಗ್ರಾಮ ಸಭೆಯ ಮುಖಾಂತರ ಆ ಗ್ರಾಮದ ಗ್ರಾಮ ಪಂಚಾಯತಿಯ ಒಬ್ಬ ಸದಸ್ಯರನ್ನು ಆಯ್ಕೆಮಾಡುವುದು;

(ಎಫ್) ಉಪಾಧ್ಯಕ್ಷರನ್ನು ಗ್ರಾಮ ಸಭೆಯ ಮುಖಾಂತರ ಆ ಗ್ರಾಮದ ಗ್ರಾಮ ಪಂಚಾಯತಿಯ ಒಬ್ಬ ಸದಸ್ಯನು ಅಥವಾ ಗ್ರಾಮ ಸಭೆಯ ಮುಖಾಂತರ ನಾಮನಿರ್ದೇಶನ ಮಾಡಿದ ಸದಸ್ಯನು;

(ಜಿ) ಗ್ರಾಂ ಪಂಚಾಯತಿಯ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಅಥವಾ ಗ್ರಾಮ ಪಂಚಾಯತಿಯ ಕಾರ್ಯದರ್ಶಿ ಗ್ರೇಡ್-1 ರವರು ಸಮಿತಿಯ ಸದಸ್ಯ ಕಾರ್ಯದರ್ಶಿಯಾಗಿರಬೇಕು; ಮತ್ತು

(ಹೆಚ್)ಸಮಿತಿಯ ಯಾವೊಬ್ಬ ಸದಸ್ಯರಿಗೂ ಗೌರವಧನ ಅಥವಾ ಇತರೆ ಸಂಭಾವನೆ ಇರುವುದಿಲ್ಲ.

ಭಾಗ ೪ಎ ಕ£ಾಟಕ (cid:170)ಾಜ(cid:205)ಪತ(cid:206),ಗುರು(cid:174)ಾರ, ೧೭,(cid:177)ೆ(cid:164)ೆ(cid:190)ಂಬ(cid:349), 2020 ೨೭೪೭

5. ಸಮಿತಿಯ ಕಾಲಾವಧಿ.- (1) ಈ ಸಮಿತಿಯಲ್ಲಿನ ಗ್ರಾಮ ಪಂಚಾಯತಿ ಸದಸ್ಯರುಗಳ ಅವಧಿ ಸಮಿತಿ

ರಚನೆಯಾದ ದಿನಾಂಕದಿಂದ ಮೂವತ್ತು ತಿಂಗಳುಗಳ ಅವಧಿಯಾಗಿರತಕ್ಕದ್ದು. ಅಥವಾ ಗ್ರಾಮ

ಪಂಚಾಯತಿಯು, ಯಾವುದಾದರೂ ಕಾರಣಗಳಿಂದ ಅದರ ಅವಧಿಯು ಮುಕ್ತಾಯವಾದಲ್ಲಿ ಇದರಲ್ಲಿ

ಯಾವುದು ಮೊದಲೋ ಆ ಅವಧಿಯವರೆಗೆ ಕಾರ್ಯ ನಿರ್ವಹಿಸುವುದು.

(2) ಸಮಿತಿಯ ನಾಮನಿರ್ದೇಶಿತ ಸದಸ್ಯರುಗಳ ಅವಧಿಯು ನಾಮನಿರ್ದೇಶನಗೊಂಡ ದಿನಾಂಕದಿಂದ ಮೂವತ್ತು ತಿಂಗಳುಗಳ ಅವಧಿಗೆ ಇರತಕ್ಕದ್ದು. ಗ್ರಾಮ ಪಂಚಾಯತಿಯ ಅವಧಿಯು ಮುಕ್ತಾಯವಾದರೂ ಮತ್ತೆ ಗ್ರಾಮ ಪಂಚಾಯತಿಯ ರಚನೆಯಾಗುವವರೆಗೂ, ಸಮಿತಿಯ ಇತರ ಸದಸ್ಯರುಗಳು ಸಮಿತಿಯ ಜವಾಬ್ದಾರಿಗಳನ್ನು ನಿರ್ವಹಿಸತಕ್ಕದ್ದು.

6. ಸಮಿತಿಯ ಉದ್ದೇಶಗಳು, ಜವಾಬ್ದಾರಿಗಳು ಮತ್ತು ಕಾರ್ಯವಿಧಾನಗಳು.-(1) ನೀರು ಸರಬರಾಜು

ವ್ಯವಸ್ಥೆ, ಸಮಿತಿಯು ಈ ಕೆಳಕಂಡಂತೆ ಗ್ರಾಮದಲ್ಲಿ ನೀರು ಸರಬರಾಜನ್ನು ಮಾಡುವುದು,-

(i) ಸಾರ್ವಜನಿಕರಿಗೆ ಶುದ್ಧವಾದ ಮತ್ತು ಅಗತ್ಯ ಪ್ರಮಾಣದ ನೀರು ಸರಬರಾಜು ಮಾಡುವಲ್ಲಿ ಗ್ರಾಮ ಪಂಚಾಯತಿಗೆ ನೆರವಾಗುವುದು. ಕುಡಿಯುವ ನೀರಿಗಾಗಿ ನೀರಿನ ಮೂಲ, ಹರಿಯುವ ನದಿ, ಹೊಳೆಗಳನ್ನು ಸ್ವಚ್ಛಗೊಳಿಸುವ ಮತ್ತು ಸುಸ್ಥಿತಿಯಲ್ಲಿ ಇಡುವಲ್ಲಿ ಅಗತ್ಯ ಸಹಕಾರ ನೀಡಬೇಕು .

ಗ್ರಾಮದ ವ್ಯಾಪ್ತಿಯಲ್ಲಿರುವ ಕೆರೆ, ಬಾವಿ, ತೊರೆ ಹಾಗೂ ಇತರೆ ಜಲಮಾರ್ಗಗಳನ್ನು ಆಗಿಂದ್ದಾಗೆಯೇ ದುರಸ್ಥಿಗೊಳಿಸಲು ಹಾಗೂ ನೀರನ್ನು ಪಡೆಯಲು ಗ್ರಾಮ ಪಂಚಾಯತಿಗೆ ನೆರವಾಗುವುದು. ಕುಡಿಯುವ ನೀರಿನ ಸ್ಥಾವರಗಳ ಮುಂದೆ ಹಾಗೂ ಕುಡಿಯುವ ನೀರಿನ ಮೂಲ ಸ್ಥಾನದಲ್ಲಿ ಸ್ನಾನ ಮಾಡುವುದನ್ನು, ಬಟ್ಟೆ ಒಗೆಯುವುದನ್ನು, ಪ್ರಾಣಿಗಳನ್ನು ತೊಳೆಯುವುದನ್ನು ಅಥವಾ ಇತರೆ ಯಾವುದೇ ಕಾರಣದಿಂದ ನೀರನ್ನು ಕಲುಷಿತಗೊಳಿಸುವುದನ್ನು ತಡೆಗಟ್ಟುವುದು;

ಮತ್ತು

(ii) ಕುಡಿಯುವ ನೀರಿಗೆ ಸಂಬಂಧಿಸಿದ ಕಾಮಗಾರಿಗಳ ನಿರ್ವಹಣೆ, ಯಂತ್ರೋಪಕರಣಗಳನ್ನು ಸಂರಕ್ಷಣೆ ಮಾಡುವಲ್ಲಿ ಗ್ರಾಮ ಪಂಚಾಯತಿಗೆ ಸಹಕಾರ ನೀಡುವುದು. ನೀರನ್ನು ಸರಬರಾಜು ಮಾಡುವುದಕ್ಕೆ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಗಳೊಡನೆ ಗ್ರಾಮ ಪಂಚಾಯತಿಯು ಕರಾರು ಮಾಡಿಕೊಂಡಿದ್ದಲ್ಲಿ ಸದರಿ ಸಂಸ್ಥೆ/ವ್ಯಕ್ತಿಗೆ ಅಗತ್ಯ ಸಹಕಾರ ನೀಡುವುದು.

(iii) ಕುಡಿಯುವ ನೀರಿನ ಅಭಾವದ ಪರಿಸ್ಥಿತಿಯಲ್ಲಿ ಖಾಸಗಿ ವ್ಯಕ್ತಿಗಳಿಗೆ ಸಂಬಂಧಿಸಿದ ಬಾವಿಗಳು, ಕೊಳವೆ ಬಾವಿಗಳು ಮತ್ತು ಇತರೆ ಜಲ ಮೂಲಗಳಿಂದ ಗ್ರಾಮಕ್ಕೆ ನೀರು ಒದಗಿಸಬೇಕಾದ ಸಂದರ್ಭದಲ್ಲಿ ಖಾಸಗಿ ಬೋರ್ವೆಲ್ ಮಾಲೀಕರ ಮನವೊಲಿಸುವಲ್ಲಿ ಮತ್ತು ಕರಾರು ಪ್ರಕ್ರಿಯೆಯಲ್ಲಿ ಗ್ರಾಮ ಪಂಚಾಯತಿಗೆ ಅಗತ್ಯ ಸಹಕಾರ ನೀಡುವುದು.

(2) ಸ್ವಚ್ಛತೆ, ನೈರ್ಮಲ್ಯೀಕರಣ ಮತ್ತು ಚರಂಡಿ ವ್ಯವಸ್ಥೆಯ ಬಗ್ಗೆ,- ಗ್ರಾಮದಲ್ಲಿ ಸ್ವಚ್ಛತೆ

ನೈರ್ಮಲ್ಯೀಕರಣಕ್ಕಾಗಿ ಗ್ರಾಮ ಪಂಚಾಯತಿಗೆ ಈ ಸಮಿತಿಯು ಕೆಳಕಂಡ ಅಂಶಗಳನ್ನು ಕಾರ್ಯಗತಗೊಳಿಸಲು

ನೆರವಾಗುವುದು,-೨೭೪೮ ಕ£ಾಟಕ (cid:170)ಾಜ(cid:205)ಪತ(cid:206),ಗುರು(cid:174)ಾರ, ೧೭,(cid:177)ೆ(cid:164)ೆ(cid:190)ಂಬ(cid:349), 2020 ಭಾಗ ೪ಎ (i) ಗ್ರಾಮದ ಯಾವುದೇ ಕಟ್ಟಡ ಅಥವಾ ಗುಡಿಸಲಿನ ಮಾಲೀಕನು ಅಥವಾ ಅಂಗಡಿ ಮಾಲೀಕನು ಶೌಚ ಗೃಹಗಳನ್ನು ಸ್ವಚ್ಛವಾಗಿ ನಿರ್ವಹಿಸದಿದ್ದರೆ ಅಂಥವರಿಗೆ ಸ್ವಚ್ಛತೆಯ ಕುರಿತು ಅರಿವು ಮೂಡಿಸಲು ಯತ್ನಿಸುವುದು. ಸದರಿ ಅನೈರ್ಮಲ್ಯ ಪ್ರವೃತ್ತಿ ಮುಂದುವರೆದ ಸಂದರ್ಭದಲ್ಲಿ ಮುಂದಿನ ಅಗತ್ಯ ಕ್ರಮಕ್ಕಾಗಿ ಗ್ರಾಮ ಪಂಚಾಯತಿಯ ಗಮನಕ್ಕೆ ತರುವುದು. ನಿಗದಿತ ಸಮಯದೊಳಗೆ ಸ್ವಚ್ಛತೆಯನ್ನು ಮೂಡಿಸುವಂತೆ ಅಗತ್ಯಪಡಿಸಬಹುದು ಹಾಗೂ ನಿಗದಿತ ಸಮಯದಲ್ಲಿ ಸಂಬಂಧಪಟ್ಟವರು ಸ್ವಚ್ಛ ಮಾಡದಿದ್ದರೆ ಗ್ರಾಮ ಪಂಚಾಯತಿಯ ವತಿಯಿಂದ ಆ ಪ್ರದೇಶವನ್ನು ಸ್ವಚ್ಛಗೊಳಿಸಿ, ಅದಕ್ಕೆ ಭರಿಸುವ ವೆಚ್ಚವನ್ನು ಸಂಬಂಧಪಟ್ಟ ಪ್ರದೇಶದ ಮಾಲೀಕರಿಂದ ತೆರಿಗೆ ಬಾಕಿ ರೂಪದಲ್ಲಿ ವಸೂಲಿ ಮಾಡಲು ನೆರವಾಗುವುದು;

(ii) ಆರೋಗ್ಯಕ್ಕೆ ಹಾನಿಕರವಾದ ಅಥವಾ ನೆರಹೊರೆಯವರಿಗೆ ಅಸಹ್ಯಕರವಾಗಿರುವ ಅಥವಾ ಉಪದ್ರವವಾಗುವಂತ ಚಟುವಟಿಕೆಗಳನ್ನು ನಡೆಸುವ ಅಥವಾ ನಿವೇಶನಗಳನ್ನು ಹೊಲಸು ಸಂಗ್ರಹಣೆಗಾಗಿ ಉಪಯೋಗಿಸುವ ಅಥವಾ ನಿವೇಶನವನ್ನು ನಿರಂತರವಾಗಿ ನೀರು ನಿಲ್ಲಲು ಅವಕಾಶ ಮಾಡಿಕೊಟ್ಟಿರುವಂಥಹ ಸ್ಥಳದ ಮಾಲೀಕರಿಗೆ ಸೂಕ್ತ ತಿಳುವಳಿಕೆ ನೀಡಿ ಅಂತಹ ಖಾಲಿ ನಿವೇಶನಗಳನ್ನು ಸ್ವಚ್ಛಗೊಳಿಸುವಂತೆ ಅರಿವು ಮೂಡಿಸುವುದು;

(iii) ಖಾಲಿ ನಿವೇಶನದಲ್ಲಿ ಸಾರ್ವಜನಿಕರಿಗೆ ತೊಂದರೆಯುಂಟು ಮಾಡುವ ಕುರುಚಲು ಗಿಡಗಳು, ಪಾಪುಸುಕಳ್ಳಿಗಳು ಇನ್ನಿತರೆ ಅಸಯ್ಯಕರವಾದ ಮತ್ತು ಅಪಾಯಕಾರಿಯಾಗಿ ಬೆಳೆದಿರುವ ಕಳೆಗಳನ್ನು ತೆಗೆದು ಹಾಕುವಂತೆ ಸಂಬಂಧಪಟ್ಟ ನಿವೇಶನದ ಮಾಲಿಕರಿಗೆ ತಿಳುವಳಿಕೆ ನೀಡುವುದು;

(iv) ಸಮಿತಿಯು ನೀಡುವ ಸೂಚನೆಯನ್ನು ನಿರಾಕರಿಸಿದರೆ ಅಂತಹ ಪ್ರದೇಶವನ್ನು ಗ್ರಾಮ ಪಂಚಾಯತಿಯಿಂದ ಸ್ವಚ್ಛಗೊಳಿಸುವುದು ಹಾಗೂ ಆ ನಿವೇಶನದ ಅನುಭವದಾರರಿಂದ ಸ್ವಚ್ಛಕ್ಕೆ ವೆಚ್ಚವಾದ ಮೊತ್ತವನ್ನು ತೆರಿಗೆ ಬಾಕಿ ರೂಪದಲ್ಲಿ ವಸೂಲಿ ಮಾಡುವಲ್ಲಿ ಗ್ರಾಮ ಪಂಚಾಯತಿಗೆ ನೆರವಾಗುವುದು;

(v) ಗ್ರಾಮ ಪಂಚಾಯತಿ ವ್ಯಾಪ್ತಿಯ ದೇವಸ್ಥಾನ, ಚರ್ಚ್, ಮಸೀದಿ ಮುಂತಾದ ಆರಾಧನೆಯ ಸ್ಥಳದಲ್ಲಿ ಜಾತ್ರೆಗಳನ್ನು, ಉತ್ಸವಗಳನ್ನು ನಡೆಸಿದಾಗ ಆ ಪ್ರದೇಶದ ಸ್ವಚ್ಛತೆ ನಿರ್ವಹಣೆಗಾಗಿ ಸಂಬಂಧಪಟ್ಟ ಧಾರ್ಮಿಕ ಟ್ರಸ್ಟ್ಗಳು ಮುಂಗಡ ಹಣವನ್ನು ಗ್ರಾಮ ಪಂಚಾಯತಿಗೆ ಪಾವತಿಸುವಂತೆ ನೋಡಿಕೊಳ್ಳುವುದು;

(vi) ಈ ವಿಷಯಕ್ಕೆ ಸಂಬಂಧಿಸಿದಂತೆ ಅವಶ್ಯವಿದ್ದಲ್ಲಿ ಸಂಬಂಧಪಟ್ಟ ತಹಶೀಲ್ದಾರ್ ಅಥವಾ ಜಿಲ್ಲಾಧಿಕಾರಿಯವರ ಮಧ್ಯಸ್ಥಿಕೆಯ ಮೂಲಕ ವಂತಿಗೆಯನ್ನು ಪಡೆದುಕೊಳ್ಳುವಂತೆ ಗ್ರಾಮ ಪಂಚಾಯತಿಗೆ ಸಲಹೆ ನೀಡುವುದು;

(vii) ಗ್ರಾಮಗಳಲ್ಲಿ ನೀರು, ಕೊಳಚೆ ನೀರು ಸರಾಗವಾಗಿ ಹರಿದು ಹೋಗಲು ಅನುವಾಗುವಂತೆ ಪಂಚಾಯತಿ ಪ್ರದೇಶದಲ್ಲಿ ಅಥವಾ ಖಾಸಗಿ ವ್ಯಕ್ತಿಯ ಭೂಮಿಯಲ್ಲಿ ಮಾಲೀಕರ ಸಹಮತಿಯೊಡನೆ ಅಥವಾ ಅವರೊಡನೆ ಕರಾರು ಮಾಡಿಕೊಳ್ಳುವ ಮೂಲಕ ಚರಂಡಿ ವ್ಯವಸ್ಥೆಯನ್ನು ರೂಪಿಸುವಲ್ಲಿ ಗ್ರಾಮ ಪಂಚಾಯತಿಗೆ ಅನುವು ನೀಡುವುದು. ಗ್ರಾಮದಲ್ಲಿನ ಯಾವುದೇ ವ್ಯಕ್ತಿ ಅವರುಗಳ ಮನೆಯ ಮುಂದೆ ಇರುವ ಚರಂಡಿಯಲ್ಲಿ ಅಡ್ಡಿಯುಂಟುಭಾಗ ೪ಎ ಕ£ಾಟಕ (cid:170)ಾಜ(cid:205)ಪತ(cid:206),ಗುರು(cid:174)ಾರ, ೧೭,(cid:177)ೆ(cid:164)ೆ(cid:190)ಂಬ(cid:349), 2020 ೨೭೪೯ ಮಾಡಿದ್ದರೆ ಅಂಥಹ ವ್ಯಕ್ತಿಗೆ ಸ್ವಚ್ಛತೆಯ ಕುರಿತು ಅರಿವು ಮೂಡಿಸಲು ಯತ್ನಿಸುವುದು. ಸದರಿ ಅನೈರ್ಮಲ್ಯ ಪ್ರವೃತ್ತಿ ಮುಂದುವರೆದ ಸಂದರ್ಭದಲ್ಲಿ ಮುಂದಿನ ಅಗತ್ಯ ಕ್ರಮಕ್ಕಾಗಿ ಗ್ರಾಮ ಪಂಚಾಯತಿಯ ಗಮನಕ್ಕೆ ತರುವುದು;

(viii) ಜನ ವಸತಿ ಪ್ರದೇಶದಲ್ಲಿ ಮತ್ತು ಮುಖ್ಯ ರಸ್ತೆಗಳಲ್ಲಿ ಸ್ಥಾಪಿತವಾಗಿರುವ ಅಂಗಡಿಗಳು, ಹೋಟೆಲ್ಗಳು ಮತ್ತಿತರೆ ತಿಂಡಿ ತಿನಿಸಿನ ಅಂಗಡಿಗಳಲ್ಲಿ ಉಂಟಾಗುವ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಂಗಡಣೆ, ಸಂಗ್ರಹಣೆ, ಸಾಗಾಣಿಕೆ ಮತ್ತು ಸೂಕ್ತ ಸಂಸ್ಕರಣೆ ವ್ಯವಸ್ಥೆಯನ್ನು ರೂಪಿಸುವಲ್ಲಿ ಗ್ರಾಮ ಪಂಚಾಯತಿಗೆ ಅಗತ್ಯ ಸಹಕಾರ ನೀಡುವುದು;

(ix) ಜನ ವಸತಿ ಪ್ರದೇಶದಲ್ಲಿ ಮತ್ತು ಮುಖ್ಯ ರಸ್ತೆಗಳಲ್ಲಿ ಸ್ಥಾಪಿತವಾಗಿರುವ ಕೋಳಿ, ಮೀನು ಅಥವಾ ಇತರೆ ಮಾಂಸದ ಅಂಗಡಿಗಳಲ್ಲಿ ಉಂಟಾಗುವ ತ್ಯಾಜ್ಯವನ್ನು ವೈಜ್ಞಾನಿಕವಾಗಿ ಸಂಗ್ರಹಿಸಿ, ಸಾಗಾಣಿಕೆ ಮತ್ತು ಸೂಕ್ತ ಸಂಸ್ಕರಣೆ ವ್ಯವಸ್ಥೆಯನ್ನು ರೂಪಿಸುವಲ್ಲಿ ಗ್ರಾಮ ಪಂಚಾಯತಿಗೆ ಅನುವು ಮಾಡಿ ಕೊಡುವುದು;

(x) ಕುಡಿಯುವ ನೀರು ಮತ್ತು ನೈರ್ಮಲ್ಯಕ್ಕೆ ಸಂಬಂಧಿಸಿದ ಎಲ್ಲಾ ಬಳಕೆದಾರರ ಶುಲ್ಕವನ್ನು "ಕರ್ನಾಟಕ ರಾಜ್ಯ ನೈರ್ಮಲ್ಯ ಮತ್ತು ತ್ಯಾಜ್ಯ ನಿರ್ವಹಣಾ ನೀತಿ, ಕಾರ್ಯತಂತ್ರ ಹಾಗೂ ಉಪವಿಧಿಗಳು" ಅನ್ವಯ ನಿಗದಿಪಡಿಸಿ ವಸೂಲಾತಿ ಮಾಡುವಲ್ಲಿ ಗ್ರಾಮ ಪಂಚಾಯತಿಗೆ ಅಗತ್ಯ ಸಹಕಾರ ನೀಡಬೇಕು;

(xi) ಗ್ರಾಮದ ವ್ಯಾಪ್ತಿಯ ಮುಖ್ಯ ರಸ್ತೆಗಳಲ್ಲಿ ಅಪಘಾತದಿಂದ ಮೃತಪಡುವ ಯಾವುದೇ ಪ್ರಾಣಿಯ ದೇಹವನ್ನು ಹತ್ತಿರದಲ್ಲಿರುವ ಸರ್ಕಾರಿ ಅಥವಾ ಖಾಸಗಿ ಜಮೀನಿನಲ್ಲಿ ಹೂಳುವುದಕ್ಕೆ ವ್ಯವಸ್ಥೆ ಕಲ್ಪಿಸಲು ಅನುವು ಮಾಡಬೇಕು. ಇದರಿಂದಾಗಿ ರಸ್ತೆಯಲ್ಲಿ ದುರ್ವಾಸನೆಯಾಗುವುದನ್ನು ಮತ್ತು ಸಾಂಕ್ರಾಮಿಕ ಕಾಯಿಲೆ ಹರಡುವುದನ್ನು ನಿಯಂತ್ರಿಸಬಹುದಾಗಿರುತ್ತದೆ;

(xii) ಗ್ರಾಮದ ನೀರು ಸರಬರಾಜು ಮತ್ತು ನೈರ್ಮಲ್ಯಕ್ಕೆ ಸಂಬಂಧಿಸಿದ ಎಲ್ಲಾ ಕಾರ್ಯಚಟುವಟಿಕೆಗಳ ಜವಾಬ್ದಾರಿಯನ್ನು ನಿರ್ವಹಿಸಲು ಗ್ರಾಮ ಪಂಚಾಯಿತಿಗೆ ಈ ಸಮಿತಿಯು ನೆರವಾಗತಕ್ಕದ್ದು;

(xiii) ಗ್ರಾಮೀಣ ಜನತೆಯಲ್ಲಿ ನೀರು ಸರಬರಾಜು ಮತ್ತು ನೈರ್ಮಲ್ಯ ಬಗ್ಗೆ ತಿಳುವಳಿಕೆ, ಅರಿವು ಮೂಡಿಸುವುದು ಹಾಗೂ ಯೋಜನೆಯ ನೀತಿ-ನಿಯಮಗಳೊಂದಿಗೆ ವಿಶೇಷವಾಗಿ ಆರೋಗ್ಯ ಮತ್ತು ಶುಚಿತ್ವ ಕುರಿತು ಅರಿವು ಮೂಡಿಸುವುದು;

(xiv) ಪ್ಲಾಸ್ಟಿಕ್ ಬಳಕೆಯ ದುಷ್ಪರಿಣಾಮದ ಬಗ್ಗೆ ಸಮುದಾಯದಲ್ಲಿ ಜಾಗೃತಿ ಮೂಡಿಸುವುದು ಮತ್ತು ಪ್ಲಾಸ್ಟಿಕ್ ನಿಷೇಧಕ್ಕೆ ಕ್ರಮ ವಹಿಸುವಲ್ಲಿ ಸಹಕರಿಸುವುದು;

(xv) ಸಮುದಾಯವು ಕುಡಿಯುವ ನೀರನ್ನು ಪೋಲು(ವ್ಯರ್ಥ) ಮಾಡದಂತೆ ಜಾಗರೂಕತೆ ವಹಿಸಲು ಮತ್ತು ನೀರಿನ ಸದ್ಬಳಕೆಯ ಬಗ್ಗೆ ಅರಿವು ಮೂಡಿಸುವುದು;

೨೭೫೦ ಕ£ಾಟಕ (cid:170)ಾಜ(cid:205)ಪತ(cid:206),ಗುರು(cid:174)ಾರ, ೧೭,(cid:177)ೆ(cid:164)ೆ(cid:190)ಂಬ(cid:349), 2020 ಭಾಗ ೪ಎ

(xvi) ಯೋಜನೆಯ ಪ್ರಯೋಜನ/ಲಾಭ ಹೊಂದುವ ಸಮುದಾಯವನ್ನು ವಿಶೇಷವಾಗಿ ನೀರು ಸರಬರಾಜು ಮತ್ತು ನೈರ್ಮಲ್ಯ ಯೋಜನೆಗಳ ಅನುದಾನ ಮೂಲವಾಗಿ ಸಮುದಾಯ ವಂತಿಗೆ ಸಂಗ್ರಹಣೆಗಾಗಿ (ಯಾವುದಾದರೂ ಇದ್ದರೆ) ಸಕ್ರೀಯವಾಗಿ ತೊಡಗಿಸಿಕೊಳ್ಳುವಂತೆ ಮನವೊಲಿಸುವುದು;

(xvii) ನೀರು ಸರಬರಾಜು ಮತ್ತು ಸ್ವಚ್ಛತೆಗೆ ಸಂಬಂಧಪಟ್ಟ ಯೋಜನೆ, ನಿರ್ಮಾಣ, ಕಾರ್ಯಾಚರಣೆ, ನಿರ್ವಹಣೆ ಮತ್ತು ಮೇಲ್ವಿಚಾರಣೆಯಲ್ಲಿ ಗಾಮ ಪಂಚಾಯತಿಗೆ ಅನುವು ಮಾಡುವುದು.

(xviii) ಎಲ್ಲಾ ಕುಟುಂಬಗಳು ಶೌಚಾಲಯಗಳನ್ನು ನಿರ್ಮಿಸಿ, ಕುಟುಂಬದ ಎಲ್ಲಾ ಸದಸ್ಯರು ಬಳಸಿಕೊಳ್ಳುವುದನ್ನು ಖಾತರಿಪಡಿಸಿಕೊಳ್ಳುವುದು. ಗ್ರಾಮದ ಪ್ರತಿ ಕುಟುಂಬವು ಶೌಚಾಲಯವನ್ನು ಬಳಸುತ್ತಿರುವ ಬಗ್ಗೆ ಖಾತರಿಪಡಿಸಿಕೊಳ್ಳುವುದು ಮತ್ತು ಶೌಚಾಲಯದ ನಿರ್ಮಾಣ ಹಾಗೂ ಬಳಕೆಗೆ ಪ್ರೇರೇಪಿಸುವುದು;

(xix) ಎಲ್ಲಾ ಕುಟುಂಬಗಳು ಮತ್ತು ವಾಣಿಜ್ಯ ಚಟುವಟಿಕೆಗಳಿಂದ ಉತ್ಪತ್ತಿಯಾಗುವ ತ್ಯಾಜ್ಯವನ್ನು ಹಸಿ ಮತ್ತು ಒಣ ಕಸವನ್ನು ವಿಂಗಡಿಸುವ ಮತ್ತು ಸಮರ್ಪಕವಾಗಿ ವಿಲೇ ಮಾಡುವ ಬಗ್ಗೆ ಅರಿವು ಮೂಡಿಸುವುದು. ಎಲ್ಲಾ ಮನೆಗಳಿಗೂ ಶುದ್ಧ ಕುಡಿಯುವ ನೀರು ಸರಬರಾಜು ವ್ಯವಸ್ಥೆ, ನೀರಿನ ಶುದ್ಧತೆಯ ಬಗ್ಗೆ ಸುರಕ್ಷಿತತೆಯ ಕ್ರಮ, ನೀರಿನ ಟ್ಯಾಂಕ್ಗಳನ್ನು ಶುಚಿಗೊಳಿಸುವಿಕೆ, ಶುದ್ಧ ಕುಡಿಯುವ ನೀರಿನ ಘಟಕಗಳ ದುರಸ್ಥಿಗೊಳಿಸುವಿಕೆ ಮತ್ತು ಸರಬರಾಜು ವ್ಯವಸ್ಥೆಯಲ್ಲಿ ನೀರು ಕಲುಷಿತವಾಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಗ್ರಾಮ ಪಂಚಾಯತಿಗೆ ಅನುವು ಮಾಡುವುದು;

(xx) ಪ್ರತೀ ವರ್ಷ ಮುಂಗಾರು ಪೂರ್ವ ಮತ್ತು ಹಿಂಗಾರು ನಂತರ ಕಡ್ಡಾಯವಾಗಿ ನೀರಿನ ಮಾದರಿಗಳನ್ನು ಪರೀಕ್ಷೆ ಮಾಡಿಸಲು ಮತ್ತು ವರದಿಯನ್ನು ಗ್ರಾಮದ ಸಾರ್ವಜನಿಕ ಸ್ಥಳಗಳಲ್ಲಿ ಪ್ರಕಟಿಸಲು ಮತ್ತು ಆ ಮೂಲಕ ಕುಡಿಯುವ ನೀರಿನ ಗುಣಮಟ್ಟ ಕಾಯ್ದುಕೊಳ್ಳುವಲ್ಲಿ ಗ್ರಾಮ ಪಂಚಾಯತಿಗೆ ನೆರವಾಗುವುದು;

(xxi) ಸಮಿತಿಯು ಗ್ರಾಮವನ್ನು ಬಯಲು ಬಹಿರ್ದೆಸೆ ಮುಕ್ತ ಸ್ಥಿತಿಯಲ್ಲಿಡುವ ಮತ್ತು ಸುಸ್ಥಿರತೆ ಕಾಯ್ದುಕೊಳ್ಳುವ ಜವಾಬ್ದಾರಿಯನ್ನು ವಹಿಸಿಕೊಳ್ಳುವುದು;

(xxii) ಸಮುದಾಯ ಶೌಚಾಲಯ, ಶಾಲಾ, ಅಂಗನವಾಡಿ, ಸರ್ಕಾರಿ ಆಸ್ಪತ್ರೆಗಳು, ಇತರೆ ಸಾರ್ವಜನಿಕ ಸ್ಥಳಗಳಲ್ಲಿ ನಿರ್ಮಿಸಿರುವ ಶೌಚಾಲಯಗಳ ಬಳಕೆ ಮತ್ತು ನಿರ್ವಹಣೆ ಬಗ್ಗೆ ಮೇಲ್ವಿಚಾರಣೆ ನಡೆಸುವಲ್ಲಿ ಗ್ರಾಮ ಪಂಚಾಯತಿಗೆ ಸಹಕಾರ ನೀಡುವುದು;

(xxiii) ಗ್ರಾಮ ಸಭೆಯೊಂದಿಗೆ ಸಮಾಲೋಚನೆ ನಡೆಸಿ, ತನ್ನ ವ್ಯಾಪ್ತಿಯಲ್ಲಿನ ಗ್ರಾಮ/ ಜನವಸತಿಗಳ ನೀರು ಸರಬರಾಜು ಮತ್ತು ನೈರ್ಮಲ್ಯ ಸೌಕರ್ಯಗಳ ಕಾರ್ಯಾಚರಣೆ ಮತ್ತು ನಿರ್ವಹಣೆ ಕುರಿತು ಯೋಜನೆ ರೂಪಿಸುವಲ್ಲಿ ಗ್ರಾಮ ಪಂಚಾಯತಿಗೆ ಸಹಕಾರ ನೀಡುವುದು;

(xxiv) ಗ್ರಾಮದ ವ್ಯಾಪ್ತಿಯಲ್ಲಿ ಸೃಜಿಸಲಾದ ಮೂಲಭೂತ ಸೌಕರ್ಯಗಳ ಕಾರ್ಯಾಚರಣೆ ಮತ್ತು ಮೇಲ್ವಿಚಾರಣೆಗೆ ಹಾಗೂ ಸುಸ್ಥಿರ ನಿರ್ವಹಣೆಗೆ ಬಳಕೆದಾರರ ಶುಲ್ಕ ವಸೂಲಿ ಮಾಡುವಲ್ಲಿ ಗ್ರಾಮ ಪಂಚಾಯತಿಗೆ ಅನುವಾಗುವುದು;

ಭಾಗ ೪ಎ ಕ£ಾಟಕ (cid:170)ಾಜ(cid:205)ಪತ(cid:206),ಗುರು(cid:174)ಾರ, ೧೭,(cid:177)ೆ(cid:164)ೆ(cid:190)ಂಬ(cid:349), 2020 ೨೭೫೧

(xxv) ಪ್ರತಿಯೊಂದು ಕುಟುಂಬವು / ವಿಭಾಗ ನೀರು ಸರಬರಾಜು ಮತ್ತು ನೈರ್ಮಲ್ಯ ಸೌಕರ್ಯಗಳನ್ನು ಸರಿಯಾದ ಪ್ರಮಾಣದಲ್ಲಿ ಪಡೆಯುತ್ತಿದೆಯೇ ಮತ್ತು ಅಂತಹ ಸೌಕರ್ಯ / ಸಂಪನ್ಮೂಲಗಳು ಸಂರಕ್ಷಿತವಾಗಿದೆಯೇ ಎಂಬುದನ್ನು ಖಾತರಿಪಡಿಸಿಕೊಳ್ಳುವುದು; ಮತ್ತು

(xxvi) ಅವಶ್ಯಕತೆ ಕಂಡು ಬಂದಾಗಲೆಲ್ಲಾ, ನೀರು ವಿತರಣಾ ವ್ಯವಸ್ಥೆ ಮೇಲ್ವಿಚಾರಣಾ ಯೋಜನೆಯನ್ನು ತಯಾರಿಸುವಲ್ಲಿ ಮತ್ತು ಪರಿಷ್ಕರಿಸುವಲ್ಲಿ ಗ್ರಾಮ ಪಂಚಾಯತಿಗೆ ಸಲಹೆ ನೀಡುವುದು.

7. ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸಮಿತಿ ಸದಸ್ಯರುಗಳ ಅಧಿಕಾರಗಳು.- (1) ಸಮಿತಿಯ ಅಧ್ಯಕ್ಷರು, ಉಪಾಧ್ಯಕ್ಷರು ಅಥವಾ ಸದಸ್ಯರು ವೈಯಕ್ತಿಕವಾಗಿ ಮತ್ತು ಒಟ್ಟಾಗಿ ನೀರು ಸರಬರಾಜು ಮತ್ತು ನೈರ್ಮಲ್ಯ ಕಾಮಗಾರಿಗಳ ಸಮರ್ಪಕ ಅನುಷ್ಠಾನದಲ್ಲಿ ಗ್ರಾಮ ಪಂಚಾಯತಿಗೆ ಅಗತ್ಯ ಸಹಕಾರ ನೀಡುವುದು. ಉಸ್ತುವಾರಿ ಮತ್ತು ನೀರು ಸರಬರಾಜು ಮತ್ತು ನೈರ್ಮಲ್ಯದ ಯಾವುದೇ ಕಾಮಗಾರಿಗಳಲ್ಲಿ ನಿರತರಾದ ಸಿಬ್ಬಂದಿ/ ಕೆಲಸಗಾರರ ಕಾರ್ಯನಿರ್ವಹಣೆ ಬಗ್ಗೆ ತೃಪ್ತಿಕರವಾಗಿಲ್ಲದಿದ್ದ ಪಕ್ಷದಲ್ಲಿ ಅಂತಹ ಸಿಬ್ಬಂದಿ / ಕೆಲಸಗಾರರ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಳ್ಳಲು ಗ್ರಾಮ ಪಂಚಾಯತಿಗೆ ಶಿಫಾರಸ್ಸು ಸಲ್ಲಿಸಬಹುದು.

(2) ಸಮಿತಿಯು ಗ್ರಾಮ ಸಮುದಾಯದಿಂದ ನೀರು ಸರಬರಾಜು ಮತ್ತು ನೈರ್ಮಲ್ಯ ಶುಲ್ಕ/ ಬಳಕೆ ಶುಲ್ಕವನ್ನು ವಸೂಲಿ ಮಾಡುವಲ್ಲಿ ಗ್ರಾಮ ಪಂಚಾಯಿತಿಗೆ ಸಹಕಾರ ನೀಡುವುದು ಮತ್ತು ಶುಲ್ಕಗಳನ್ನು ಪಾವತಿಸುವಂತೆ ಬಳಕೆದಾರರನ್ನು ಮನವೊಲಿಸುವುದು.

(3) ಗ್ರಾಮ ಪಂಚಾಯತಿಯು ಕುಡಿಯುವ ನೀರು ಸರಬರಾಜು ಯೋಜನೆಗಳ ಹಾಗೂ ಸ್ವಚ್ಛತೆ ನೈರ್ಮಲ್ಯ ರಕ್ಷಣೆಗಾಗಿ ಅನುಷ್ಠಾನಗೊಳಿಸುವ ಕಾರ್ಯಾಚರಣೆ ಮತ್ತು ಮೇಲ್ವಿಚಾರಣೆ ವೆಚ್ಚಗಳನ್ನು ಆಧರಿಸಿ, ಬಳಕೆ ಶುಲ್ಕವನ್ನು ನಿಗಧಿಪಡಿಸುವ ಸಂದರ್ಭದಲ್ಲಿ ಸಮಿತಿಯು ಗ್ರಾಮ ಪಂಚಾಯತಿಗೆ ಅಗತ್ಯ ಸಹಕಾರ ನೀಡುವುದು.

(4) ಸಮಿತಿಯ ಕಾರ್ಯಚಟುವಟಿಕೆಗಳ ಬಗ್ಗೆ ಸಮಿತಿಯ ಸದಸ್ಯ ಕಾರ್ಯದರ್ಶಿಯು ಪ್ರತಿ ತಿಂಗಳು ಗ್ರಾಮ ಪಂಚಾಯಿತಿಗೆ ವರದಿ ನೀಡುವುದು. ಈ ವರದಿಯ ಸಾರಾಂಶವನ್ನು ಪ್ರತಿ ಆರು ತಿಂಗಳಿಗೊಮ್ಮೆ ಪಂಚಾಯತಿ ಅಭಿವೃದ್ಧಿ ಅಧಿಕಾರಿಯು ಗ್ರಾಮ ಸಭೆಯಲ್ಲಿ ಮಂಡಿಸತಕ್ಕದ್ದು.

8. ಸಮಿತಿಯ ಸಭೆಗಳು.- (1) ನೀರು ಸರಬರಾಜು, ಸ್ವಚ್ಛತಾ ಸೌಕರ್ಯಗಳ ಮೇಲ್ವಿಚಾರಣೆ ಕುರಿತ ಪರಿಶೀಲನೆ ಮತ್ತು ನೀರು ಸೋರಿಕೆ, ಪೈಪ್ಲೈನ್, ನಲ್ಲಿವಾಲ್ವ್ ಮುಂತಾದ ಘಟಕಗಳ ಭಾಗಗಳು ಹಾನಿಗೊಳಗಾಗಿದ್ದಲ್ಲಿ ಅವುಗಳನ್ನು ದುರಸ್ತಿಪಡಿಸುವ ಮಾರ್ಗೋಪಾಯಗಳಿಗಾಗಿ ಸಮಿತಿಯು ಎರಡು ತಿಂಗಳಿಗೆ ಒಂದು ಬಾರಿ ಅಥವಾ ಅನಿವಾರ್ಯಕಾರಣಗಳಿಂದಾಗಿ ಸಭೆ ಸೇರುವುದು ಅಗತ್ಯವೆಂದು ಕಂಡು ಬಂದಾಗಲೆಲ್ಲಾ ಮೂರು ದಿನಗಳು ಮುಂಚಿತವಾಗಿ ನೋಟೀಸು ನೀಡಿ ಸಭೆ ಸೇರತಕ್ಕದ್ದು.

೨೭೫೨ ಕ£ಾಟಕ (cid:170)ಾಜ(cid:205)ಪತ(cid:206),ಗುರು(cid:174)ಾರ, ೧೭,(cid:177)ೆ(cid:164)ೆ(cid:190)ಂಬ(cid:349), 2020 ಭಾಗ ೪ಎ

(2)ಸಮಿತಿಯ ಸಭೆಗಳನ್ನು ಅಧ್ಯಕ್ಷರು, ತಪ್ಪಿದಲ್ಲಿ ಉಪಾಧ್ಯಕ್ಷರು ಅಥವಾ ಸಮಿತಿ ಸದಸ್ಯ ಕಾರ್ಯದರ್ಶಿ ಕರೆಯತಕ್ಕದ್ದು. ಇವರುಗಳು ತುರ್ತು ಕಾರ್ಯನಿರ್ವಹಣೆಯ ಸಂದರ್ಭಗಳಲ್ಲಿ ಸಭೆಯನ್ನು ಕರೆಯದಿದ್ದಾಗ 1/3 ಭಾಗದ ಸದಸ್ಯರು ಮೂರು ದಿನಗಳು ಮುಂಚಿತವಾಗಿ ನೋಟೀಸು ನೀಡಿ ವಿಶೇಷಸಭೆಯನ್ನು ಕರೆಯಬಹುದು. ಈ ಸಮಿತಿಯು ತೆಗೆದುಕೊಂಡ ನಿರ್ಣಯಗಳನ್ನು ಗ್ರಾಮ ಪಂಚಾಯತಿ ಅಧ್ಯಕ್ಷರ ಗಮನಕ್ಕೆ ತರಬೇಕು ಹಾಗೂ ಈ ನಿರ್ಣಯದ ಅನುಷ್ಠಾನಕ್ಕೆ ಗ್ರಾಮ ಪಂಚಾಯತಿಯ ಅಧ್ಯಕ್ಷರು ಸೂಕ್ತ ಕ್ರಮ ವಹಿಸುವುದು. ಸಮಿತಿಯ ಸದಸ್ಯ ಕಾರ್ಯದರ್ಶಿಗಳು ಸಮಿತಿ ಸಭಾ ನಡವಳಿಯನ್ನು ನಿರ್ವಹಿಸಿಕೊಂಡು ಬರತಕ್ಕದ್ದು.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು

ಅವರ ಹೆಸರಿನಲ್ಲಿ

(ಬಿ. ನವೀನ್ ಕುಮಾರ್)

ಸರ್ಕಾರದ ಅಧೀನ ಕಾರ್ಯದರ್ಶಿ,(ಜಿ.ಪಂ.) (ಪ್ರ)

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ PR-338

GOVERNMENT OF KARNATAKA

No: RD 10 LRD 2019 Karnataka Government Secretariat M.S Building Bengaluru, Dated:03-09-2020

NOTIFICATION

Whereas the draft of the Notification No.RD 10 LRD 2019, dated: 11- 02-2020 regarding alteration of the limits of Mangaluru B (Portion) and Panemangaluru (Portion) circle of Mangaluru and Bantwala Taluk of Dakshina Kannada District to constitute a new taluk called Ullala Taluk was published as required by section 6 of the Karnataka Land Revenue Act, 1964 (Karnataka Act No.12 of 1964) in part-IV-A of the Karnataka Gazette Extra-Ordinary, dated:27-02-2020 inviting objections or suggestion from all the persons likely to be affected thereby within thirty days from the date of its publication in the official Gazette.

Whereas the said Gazette was made available to the public on 27-02-2020.

Whereas no objections and suggestions have been received in this behalf by the State Government.

Now, therefore in exercise of the powers conferred by sub-section (4) of Section 4 of the Karnataka Land Revenue Act, 1964 (Karnataka Act 12 of 1964) the Government of Karnataka hereby makes the following notification, namely: -ಭಾಗ ೪ಎ ಕ£ಾಟಕ (cid:170)ಾಜ(cid:205)ಪತ(cid:206),ಗುರು(cid:174)ಾರ, ೧೭,(cid:177)ೆ(cid:164)ೆ(cid:190)ಂಬ(cid:349), 2020 ೨೭೫೩ SCHEDULE-I The Circles and Villages Specified in column (2) and (3) of the table below shall be excluded from the limits of Mangaluru and Bantwala taluk of Dakshina Kannada District and to form a new Taluk called as Ullala taluk in Dakshina Kannada District:-

Sl. No. Name of Circle (Hobli) Name of the Villages
(1) (2) (3)
(1) Mangaluru-B (Portion) (From Mangaluru taluk) (1) Permannur
(2) Ullala
(3) Manjanady
(4) Konaje
(5) Pavoor
(6) Kinya
(7) Talapady
(8) Munnur
(9) Harekala
(10) Belma
(2) Mangaluru-B (Portion) (From Mangaluru taluk) (11) Boliyar
(12) Someshwara
(13) Amblamogaru
(14) Kotekar
(3) Panemangaluru Portion) (From Bantwala taluk) (15) Naringana
(16) Balepuni
(17) Kairangala
(18) Pajeer
(19) Kurnadu
(20) Sajipanadu
(21) Ira
(22) Sajipapadu
(23) Chelur

Boundary details of newly formed Ullala taluk of

Dakshina Kannada District.

East: Bantwala Taluk West: Arabian Sea
North Mangaluru Taluk South: Kerala State
೨೭೫೪ ಕ£ಾಟಕ (cid:170)ಾಜ(cid:205)ಪತ(cid:206),ಗುರು(cid:174)ಾರ, ೧೭,(cid:177)ೆ(cid:164)ೆ(cid:190)ಂಬ(cid:349), 2020 ಭಾಗ ೪ಎ SCHEDULE-II

After formation of new taluk of Ullala as specified in Schedule-I, the remaining circles and villages specified in column (2) and (3) of the table below shall continue to remain in Mangaluru taluk in Dakshina Kannada District:-

Sl.No. Name of Circle Name of Village
(1) (2) (3)
(1) Mangaluru-A (1) Kasbabazar
(2) Padavu
(3) Attavara
(4) Mangaluru Thota
(5) Kasba Bengre
(6) Kadri A
(7) Kadri B
(8) Jeppinamogaru A
(9) Jeppinamogaru B
(10) Kodialbail A
(11) Kodialbail B
(12) Boloor A
(13) Boloor B
(14) Bajal
(Villages of Mangaluru- B Circle) (15) Kannur
(16) Derebail
(17) Bangrakulur
(18) Padukodi
(19) Kankanady A
(20) Kankanady B
(21) Alape
(22) Maroli
(2) Surathkal (23) Tenka Yekkar
(24) Badaga Yekkar
(25) Permude
(26) Kuthethur
(27) Delanthabettu
(28) Soorinje
(29) Madhya
(30) Chelairu
(31) Surathkal
(32) Idya
(33) Hosabettu
(34) Kulai
(35) Panambur
(36) Tannirbavi
(37) Kavoor
(38) Marakada
(39) Moodushedde
(40) Padushedde
(41) Kunjathabail
(42) Panjimogaru
(43) 62 Thokur
(44) Bala
(45) Kalavar
(46) Bajpe
(47) Kenjar
(48) Malavoor
(49) Katipalla
(50) Baikampady
(3) Gurupura (51) Badaga Yedapadavu
(52) Tenka Yedapadavu
(53) Adyar
(54) Arkula
(55) Muchur
(56) Kompadavu
(57) Muthuru
(58) Kilinjaru
(59) Kolavuru
(60) Tenka Ulipady
(61) Badaga Ulipady
(62) Mogaru
(63) Mooduperar
(64) Paduperar
(65) Addoor
(66) Moolur
(67) Ulaibettu
(68) Mallur
(69) Adyapady
(70) Kolambe
(71) Kandavara
(72) Kudupu
(73) Pachanady
(74) Tiruvail
(75) Neerumarga
(76) Bondanthila
ಭಾಗ ೪ಎ ಕ£ಾಟಕ (cid:170)ಾಜ(cid:205)ಪತ(cid:206),ಗುರು(cid:174)ಾರ, ೧೭,(cid:177)ೆ(cid:164)ೆ(cid:190)ಂಬ(cid:349), 2020 ೨೭೫೫ ೨೭೫೬ ಕ£ಾಟಕ (cid:170)ಾಜ(cid:205)ಪತ(cid:206),ಗುರು(cid:174)ಾರ, ೧೭,(cid:177)ೆ(cid:164)ೆ(cid:190)ಂಬ(cid:349), 2020 ಭಾಗ ೪ಎ

Boundary details of Mangaluru taluk of Dakshina Kannada District after

alteration and formation of new taluk Ullala.

East : Moodabidiri taluk West : Arabian Sea
North: Proposed Mulki taluk South : Proposed Ullala taluk

SCHEDULE-III

After formation of new taluk Ullala specified in Schedule-I, the remaining circles and villages specified in column (2) and (3) of the table below shall continue to remain in Bantwala taluk in Dakshina Kannada District:-

Sl.No. Name of Circle Name of Village
(1) (2) (3)
(1) Bantwala (1) Karpe
(2) Sangabettu
(3) Kukkipady
(4) Yeliyandugodu
(5) Chennaithodi
(6) Ajjibettu
(7) Pilathabettu
(8) Irvatthuru
(9) Kudambettu
(10) Pilimogru
(11) Budoli
(12) Koila
(13) Rayi
(14) Arala
(15) Kuriyala
(16) Amtady
(17) Panjikal
(18) B Kasba
(19) Mudanadugodu
(20) Kadabettu
(21) Kavalapaduru
(22) Mudapadukodi
(23) Kavalamuduru
(24) Badagakajekaru
(25) Tenkakajekaru
(26) Uli
(27) Maninalkuru
(28) Devasyamuduru
(29) Sarapady
(30) Devasyapaduru
(31) Navoor
(2) Panemangaluru (32) Badagabelluru
(33) Kariyangala
(34) Ammunje
(35) Thenkabelluru
(36) Narikombu
(37) Bantwal Mooda
(38) Kadeswalya
(39) Golthamajal
(40) Amturu
(41) Sajipamooda
(42) Manchi
(43) Kallige
(44) Sajipa Munnuru
(45) Panemangaluru
(46) Shamburu
(47) Balthila
(48) Barimaru
(49) Thumbe
(50) Pudu
(51) Kodman
(52) Meramajalu
(3) Vitla (53) Vitlakasba
(54) Idkidu
(55) Kedila
(56) Perne
(57) Biliyuru
(58) Kula
(59) Vitla Mudnuru
(60) Alike
(61) Peruvayi
(62) Manila
(63) Kepu
(64) Punacha
(65) Peraje
(66) Mani
(67) Bolanthuru
(68) Veerakamba
(69) Ananthadi
(70) Kanyana
(71) Karopady
(72) Kolnadu
(73) Saletthuru
(74) Vitla Padnuru
(75) Netlamudnuru
ಭಾಗ ೪ಎ ಕ£ಾಟಕ (cid:170)ಾಜ(cid:205)ಪತ(cid:206),ಗುರು(cid:174)ಾರ, ೧೭,(cid:177)ೆ(cid:164)ೆ(cid:190)ಂಬ(cid:349), 2020 ೨೭೫೭ ೨೭೫೮ ಕ£ಾಟಕ (cid:170)ಾಜ(cid:205)ಪತ(cid:206),ಗುರು(cid:174)ಾರ, ೧೭,(cid:177)ೆ(cid:164)ೆ(cid:190)ಂಬ(cid:349), 2020 ಭಾಗ ೪ಎ

Boundary details of Bantwala Taluk of Dakshina Kannada District after

alteration and formation of new taluk Ullala.

East : Belthangadi and Puttur taluk West : Mangaluru taluk
North: Moodubidiri taluk South: Kerala State

The above shall come into effect from the date of publication of this notification in the official Gazette.

By order and in the name of the Government of Karnataka

(V.T RAJYASHREE) Under Secretary to Government Revenue Department (SSLR) PR-339

ಕರ್ನಾಟಕ ಸರ್ಕಾರ

ಸಂಖ್ಯೆ : ಗ್ರಾ ಅಪ 870 ಗ್ರಾ ಪಂಅ 2019 ಕರ್ನಾಟಕ ಸರ್ಕಾರದ ಸಚಿವಾಲಯ, ಬಹುಮಹಡಿ ಕಟ್ಟ ಡ ಬೆಂಗಳೂರು, ದಿನಾಂಕ:11-09-2020.

ಅಧಿಸೂಚನೆ

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993 (1993ರ ಕರ್ನಾಟಕ ಅಧಿನಿಯಮ ಸಂಖ್ಯೆ 14) ರಪ್ರಕರಣ 58, 61A, 75, 76, 84, 89, 90, 91, 92, 99, 104, 105, 106, 108, 109 ಮತ್ತು 110ನೇ ಪ್ರಕರಣಗಳೊಂದಿಗೆ ಓದಿಕೊಂಡಂತೆ ಪ್ರಕರಣ 311ರ ಮೂಲಕ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಈ ಕೆಳಕಂಡಂತೆ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಗ್ರಾಮ ಆರೋಗ್ಯ, ನೈರ್ಮಲ್ಯ ಮತ್ತು ಪೌಷ್ಠಿಕ ಸಮಿತಿ) ನಿಯಮಗಳು, 2020 ರ ಕರಡನ್ನು ಸದರಿ ಅಧಿನಿಯಮದ ಪ್ರಕರಣ 311ರ ಉಪ ಪ್ರಕರಣ (1) ರಲ್ಲಿ ನಿಗದಿಪಡಿಸಿದಂತೆ, ಇದರಿಂದ ಬಾಧಿತರಾಗುವ ಎಲ್ಲಾ ವ್ಯಕ್ತಿಗಳ ಮಾಹಿತಿಗಾಗಿ ಈ ಮೂಲಕ ಪ್ರಕಟಿಸಲಾಗಿದೆ ಮತ್ತು ಸದರಿ ಕರಡನ್ನು ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟಿತವಾದ ದಿನಾಂಕದಿಂದ ಮೂವತ್ತು ದಿನಗಳ ನಂತರ ಪರಿಗಣನೆಗೆ ತೆಗೆದುಕೊಳ್ಳಲಾಗುವುದೆಂದು ಈ ಮೂಲಕ ಸೂಚಿಸಲಾಗಿದೆ.

ಮೇಲೆ ನಿರ್ಧಿಷ್ಟಪಡಿಸಿದ ಅವಧಿಯು ಮುಕ್ತಾಯವಾಗುವ ಮೊದಲು ಸದರಿ ಕರಡು ನಿಯಮಗಳಿಗೆ ಸಂಬಂಧಿಸಿದಂತೆ ಯಾವೊಬ್ಬ ವ್ಯಕ್ತಿಯಿಂದ ರಾಜ್ಯ ಸರ್ಕಾರವು ಸ್ವೀಕರಿಸ ಬಹುದಾದ ಯಾವುದೇ ಆಕ್ಷೇಪಣೆ ಮತ್ತು ಸಲಹೆಗಳನ್ನು ರಾಜ್ಯ ಸರ್ಕಾರವು ಪರಿಗಣಿಸುವುದು. ಆಕ್ಷೇಪಣೆ ಅಥವಾ ಸಲಹೆಗಳನ್ನು ಸರ್ಕಾರದ ಪ್ರಧಾನ ಕಾರ್ಯದರ್ಶಿ,(ಪಂಚಾಯತ್ರಾಜ್)ಭಾಗ ೪ಎ ಕ£ಾಟಕ (cid:170)ಾಜ(cid:205)ಪತ(cid:206),ಗುರು(cid:174)ಾರ, ೧೭,(cid:177)ೆ(cid:164)ೆ(cid:190)ಂಬ(cid:349), 2020 ೨೭೫೯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ 3ನೇಹಂತ, 3 ನೇಮಹಡಿ, ಬಹುಮಹಡಿಗಳ ಕಟ್ಟಡ, ಡಾ|| ಅಂಬೇಡ್ಕರ್ ವೀದಿ, ಬೆಂಗಳೂರು-01 ಇವರಿಗೆ ಕಳುಹಿಸಲು ಕೋರಲಾಗಿದೆ.

ಕರಡು ನಿಯಮಗಳು

1. ಹೆಸರು ಮತ್ತು ಪ್ರಾರಂಭ.- (1) ಈ ನಿಯಮಗಳನ್ನು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಗ್ರಾಮ ಆರೋಗ್ಯ, ನೈರ್ಮಲ್ಯ ಮತ್ತು ಪೌಷ್ಠಿಕ ಸಮಿತಿ) ನಿಯಮಗಳು, 2020 ಎಂದು ಕರೆಯತಕ್ಕದ್ದು.

(2) ಇವು ರಾಜ್ಯಪತ್ರದಲ್ಲಿ ಅಂತಿಮವಾಗಿ ಪ್ರಕಟಿಸಿದ ದಿನಾಂಕದಿಂದ ಜಾರಿಗೆಬರುತ್ತದೆ.

2. ಪರಿಭಾಷೆಗಳು.- ಈ ನಿಯಮಗಳಲ್ಲಿ ವಿಷಯಕ್ಕೆ ಅಥವಾ ಸಂದರ್ಭಕ್ಕೆ ಬೇರೆ ಅರ್ಥದ ಅಗತ್ಯ ಇರದಿದ್ದರೆ.- (ಎ) "ಅಧಿನಿಯಮ" ಎಂದರೆ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993.(1993 ರ ಕರ್ನಾಟಕ ಅಧಿನಿಯಮ ಸಂಖ್ಯೆ 14);

(ಬಿ) "ಅಧ್ಯಕ್ಷರು" ಎಂದರೆ ಸಂಬಂಧಪಟ್ಟ ಗ್ರಾಮದ ಚುನಾಯಿತ ಗ್ರಾಮ ಪಂಚಾಯತಿ ಸದಸ್ಯರುಗಳಿಂದ ಗ್ರಾಮ ಪಂಚಾಯತಿ ಮೂಲಕ ಆಯ್ಕೆಯಾದ ಗ್ರಾಮ ಆರೋಗ್ಯ, ನೈರ್ಮಲ್ಯ ಮತ್ತು ಪೌಷ್ಠಿಕ ಸಮಿತಿ ಅಧ್ಯಕ್ಷ;

(ಸಿ) "ಉಪಾಧ್ಯಕ್ಷರು" ಎಂದರೆ ಗ್ರಾಮ ಆರೋಗ್ಯ, ನೈರ್ಮಲ್ಯ ಮತ್ತು ಪೌಷ್ಠಿಕ ಸಮಿತಿಯ ಉಪಾಧ್ಯಕ್ಷ (ಸಮಿತಿಯ ಸದಸ್ಯರುಗಳಿಂದ ಆಯ್ಕೆಯಾದ ಆ ಗ್ರಾಮದ ಗ್ರಾಮ ಪಂಚಾಯತಿ ಒಬ್ಬ ಸದಸ್ಯ);

(ಡಿ) "ಗ್ರಾಮ" ಎಂದರೆ ಕಂದಾಯ ಇಲಾಖೆಯು ಗುರುತಿಸಿರುವ ಕಂದಾಯ ಗ್ರಾಮ ಹಾಗೂ ಅದರೊಡನೆ ಹೊಂದಿಕೊಂಡಿರುವ ಉಪ ಗ್ರಾಮಗಳು; ಮತ್ತು

(ಇ) "ಸಮಿತಿ" ಎಂದರೆ ನಿಯಮ 3 ರಡಿಯಲ್ಲಿ ರಚಿಸಲ್ಪಟ್ಟ ಗ್ರಾಮ ಆರೋಗ್ಯ, ನೈರ್ಮಲ್ಯ ಮತ್ತು ಪೌಷ್ಠಿಕ ಸಮಿತಿ.

(ಎಫ್) "ಸಮಿತಿ ಕಾರ್ಯದರ್ಶಿ" ಈ ಗ್ರಾಮದ ವ್ಯಾಪ್ತಿಯ ಆಶಾ ಕಾರ್ಯಕರ್ತೆ (ಒಬ್ಬರಿಗಿಂತ ಹೆಚ್ಚು ಆಶಾ ಕಾರ್ಯಕರ್ತೆಯರಿದ್ದರೆ ಹಿರಿತನ ಮತ್ತು ಅರ್ಹತೆಯ ಮೇಲೆ ಸಮಿತಿಯು ಆಯ್ಕೆ ಮಾಡಿದ ಆಶಾ ಕಾರ್ಯಕರ್ತೆ).

3. ಗ್ರಾಮ ಆರೋಗ್ಯ, ನೈರ್ಮಲ್ಯ ಮತ್ತು ಪೌಷ್ಠಿಕ ಸಮಿತಿಯ ರಚನೆ.- (1) ಗ್ರಾಮ ಆರೋಗ್ಯ, ನೈರ್ಮಲ್ಯ ಮತ್ತು ಪೌಷ್ಠಿಕ ಸಮಿತಿಯು ಈ ಕೆಳಕಂಡ ಸದಸ್ಯರನ್ನು ಒಳಗೊಂಡಿರತಕ್ಕದ್ದು.-

ಕ್ರ ಸಂ ಸದಸ್ಯರು ಪದನಾಮ
(1) ಗ್ರಾಮದ ಗ್ರಾಮ ಪಂಚಾಯತಿ ಸದಸ್ಯರಲ್ಲಿ ಗ್ರಾಮ ಪಂಚಾಯತಿಯು ಆಯ್ಕೆ ಮಾಡಿದ ಸದಸ್ಯ . ಅಧ್ಯಕ್ಷರು
(2) ಗ್ರಾಮದ ಗ್ರಾಮ ಪಂಚಾಯತಿ ಸದಸ್ಯರಲ್ಲಿ ಗ್ರಾಮ ಪಂಚಾಯತಿಯು ಆಯ್ಕೆ ಮಾಡಿದ ಸದಸ್ಯ . (ಸದಸ್ಯರು ಇಬ್ಬರಿಗಿಂತ ಹೆಚ್ಚಾದಲ್ಲಿ ಗ್ರಾಮ ಪಂಚಾಯತಿ ಮೂಲಕ ಆಯ್ಕೆ ಮಾಡುವುದು) ಉಪಾಧ್ಯಕ್ಷರು
(3) ಗ್ರಾಮ ಸಭೆಯಿಂದ ಆಯ್ಕೆಯಾದ ಈ ಕೆಳಕಂಡ ವರ್ಗದ 15 ಸದಸ್ಯರು. ಇವರಲ್ಲಿ ಕನಿಷ್ಠ 8 ಜನ ಮಹಿಳೆಯರು, ಕನಿಷ್ಠ 3 ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡದವರು, ಇಬ್ಬರು ಸಿ⁷ೕಶಕ್ತಿ ಸ್ವಸಹಾಯ ಸಂಘದ ಸದಸ್ಯರು, ಗ್ರಾಮದಲ್ಲಿ ಆರೋಗ್ಯ, ನೈರ್ಮಲ್ಯ ಮತ್ತು ಪೌಷ್ಠಿಕತೆಗೆ ಸಂಬಂಧಿಸಿದ ವಿಷಯದಲ್ಲಿ ಪರಿಣಿತಿಯುಳ್ಳ ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿ-ಒಬ್ಬರು, ಗ್ರಾಮದ ಯುವತಿ/ಯುವಕ ಮಂಡಳದ ಪ್ರತಿನಿಧಿ-ತಲಾ ಒಬ್ಬರು. ಸದಸ್ಯರು
(4) ಆಯಾ ಗ್ರಾಮಕ್ಕೆ ಸಂಬಂಧಿಸಿದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿ, ಕಿರಿಯ ಪುರುಷ ಆರೋಗ್ಯ ಸಹಾಯಕ, ಪ್ರಾಥಮಿಕ ಶಾಲಾ ಶಿಕ್ಷಕರು-ಒಬ್ಬರು (ಮಹಿಳೆಯರಿಗೆ ಆದ್ಯತೆ), ಗ್ರಾಮದಲ್ಲಿರುವ ಎಲ್ಲಾ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು. ಪದನಿಮಿತ್ತ ಸದಸ್ಯರು
(5) ಗ್ರಾಮದ ವ್ಯಾಪ್ತಿಯ ಆಶಾ ಕಾರ್ಯಕರ್ತೆಯರಲ್ಲಿ ಸಮಿತಿಯು ಆಯ್ಕೆ ಮಾಡಿದ ಆಶಾ ಕಾರ್ಯಕರ್ತೆ ಸದಸ್ಯ ಕಾರ್ಯದರ್ಶಿ
೨೭೬೦ ಕ£ಾಟಕ (cid:170)ಾಜ(cid:205)ಪತ(cid:206),ಗುರು(cid:174)ಾರ, ೧೭,(cid:177)ೆ(cid:164)ೆ(cid:190)ಂಬ(cid:349), 2020 ಭಾಗ ೪ಎ

(2) ಸಮಿತಿಯ ಯಾವೊಬ್ಬ ಸದಸ್ಯರಿಗೂ ಗೌರವಧನ ಅಥವಾ ಇತರೆ ಸಂಭಾವನೆ ಇರುವುದಿಲ್ಲ.

4. ಸದಸ್ಯತ್ವದ ಅವಧಿ.-(1) ಈ ಸಮಿತಿಯಲ್ಲಿನ ಗ್ರಾಮಪಂಚಾಯತಿ ಸದಸ್ಯರುಗಳ ಅವಧಿ ಸಮಿತಿ ರಚನೆಯಾದ ದಿನಾಂಕದಿಂದ ಮೂರು ವರ್ಷಗಳ ಅವಧಿಯಾಗಿರತಕ್ಕದ್ದು. ಅಥವಾ ಗ್ರಾಮ ಪಂಚಾಯತಿಯು, ಯಾವುದಾದರೂ ಕಾರಣಗಳಿಂದ ಅದರ ಅವಧಿಯು ಮುಕ್ತಾಯವಾದಲ್ಲಿ ಇದರಲ್ಲಿ ಯಾವುದು ಮೊದಲೋ ಆ ಅವಧಿಯವರೆಗೆ ಕಾರ್ಯನಿರ್ವಹಿಸುವುದು.

(2) ಸಮಿತಿಯ ನಾಮನಿರ್ದೇಶಿತ ಸದಸ್ಯರುಗಳ ಅವಧಿಯು ನಾಮನಿರ್ದೇಶಿತ ದಿನಾಂಕದಿಂದ ಮೂರು ವರ್ಷಗಳ ಅವಧಿಗೆ ಇರತಕ್ಕದ್ದು. ಗ್ರಾಮ ಪಂಚಾಯತಿಯ ಅವಧಿಯು ಮುಕ್ತಾಯವಾದರೂ ಮತ್ತೆ ಗ್ರಾಮ ಪಂಚಾಯತಿಯ ರಚನೆಯಾಗುವವರೆಗೂ, ಸಮಿತಿಯ ಇತರ ಸದಸ್ಯರುಗಳು ಸಮಿತಿಯ ಜವಾಬ್ದಾರಿಗಳನ್ನುನಿರ್ವಹಿಸತಕ್ಕದ್ದು.

5. ಸಮಿತಿಯ ಕಾರ್ಯವಿಧಾನ.- (1) ಗ್ರಾಮ ಆರೋಗ್ಯ, ನೈರ್ಮಲ್ಯ ಮತ್ತು ಪೌಷ್ಠಿಕ ಸಮಿತಿಯು ಪ್ರತಿ ತಿಂಗಳಿಗೊಮ್ಮೆ ಸಭೆ ಸೇರುವುದು ಅಥವಾ ಅವಶ್ಯವಿದ್ದಾಗ ಅಧ್ಯಕ್ಷರು ಮೂರು ದಿನಗಳು ಮುಂಚಿತವಾಗಿ ನೋಟೀಸ್ ನೀಡಿ ವಿಶೇಷ ಸಭೆ ಕರೆಯಬಹುದು.

(2) ಸಮಿತಿಯ ಸಭೆಯ ಕೋರಂ ಪದನಿಮಿತ್ತ ಸದಸ್ಯರನ್ನು ಹೊರತುಪಡಿಸಿ 1/3 ಭಾಗದ ಸದಸ್ಯರು ಆಗಿರತಕ್ಕದ್ದು.

(3) ಈ ಸಮಿತಿಯು ತೆಗೆದುಕೊಂಡ ನಿರ್ಣಯಗಳನ್ನು ಸಮಿತಿಯ ಕಾರ್ಯದರ್ಶಿಯು ನಿರ್ಣಯಗಳ ಮೇಲೆ ಕೈಗೊಂಡ ಕ್ರಮಗಳ ಸಮೇತ ಗ್ರಾಮ ಪಂಚಾಯತಿಗೆ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮೇಲಧಿಕಾರಿಗಳಿಗೆ ವರದಿ ಮಾಡುವುದು.

6. ಸಮಿತಿಯ ಉದ್ದೇಶಗಳು.- (1) ಗ್ರಾಮದಲ್ಲಿ ಆರೋಗ್ಯ, ನೈರ್ಮಲ್ಯ ಮತ್ತು ಪೌಷ್ಠಿಕಾಂಶದ ಮಹತ್ವದ ಬಗ್ಗೆ ತಿಳುವಳಿಕೆ ಮೂಡಿಸುವುದು.

(2) ಗ್ರಾಮದಲ್ಲಿ ಆರೋಗ್ಯ, ನೈರ್ಮಲ್ಯ ಮತ್ತು ಪೌಷ್ಠಿಕಾಂಶದ ಬಗ್ಗೆ ಇರುವ ಸರ್ಕಾರದ ಯೋಜನೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು. ಆರೋಗ್ಯ, ನೈರ್ಮಲ್ಯ ಮತ್ತು ಪೌಷ್ಠಿಕಾಂಶ ಯೋಜನೆಗಳ ಬಗ್ಗೆ ಸರ್ಕಾರದ ಪ್ರಚಾರ ಸಾಮಗ್ರಿಗಳನ್ನು ಪ್ರಚುರಪಡಿಸುವುದು. ಶಾಲೆ, ಅಂಗನವಾಡಿ, ಆಸ್ಪತ್ರೆಗಳಲ್ಲಿ ಹೆಚ್ಚಿನ ಮಟ್ಟದಲ್ಲಿ ತಿಳುವಳಿಕೆ ಮೂಡಿಸುವುದು.

(3) ಗ್ರಾಮದಲ್ಲಿ ಆರೋಗ್ಯ, ನೈರ್ಮಲ್ಯ ಮತ್ತು ಪೌಷ್ಠಿಕಾಂಶದ ಬಗ್ಗೆ ಇರುವ ಸರ್ಕಾರದ ಯೋಜನೆಗಳ ಪ್ರಯೋಜನಗಳು ಜನರಿಗೆ ತಲುಪುವಂತೆ ಮಾಡುವುದು.

(4) ಗ್ರಾಮದ ಆರೋಗ್ಯ ಯೋಜನೆಗಳ ಪ್ರಯೋಜನಗಳಿಗೆ ಸಂಬಂಧಿಸಿದಂತೆ ಗ್ರಾಮ ಸಭೆಯಲ್ಲಿ ಅರ್ಹ ಫಲಾನುಭವಿಗಳ ಆಯ್ಕೆಗೆ ಕ್ರಮ ವಹಿಸುವುದು.

ಭಾಗ ೪ಎ ಕ£ಾಟಕ (cid:170)ಾಜ(cid:205)ಪತ(cid:206),ಗುರು(cid:174)ಾರ, ೧೭,(cid:177)ೆ(cid:164)ೆ(cid:190)ಂಬ(cid:349), 2020 ೨೭೬೧

(5) ಹೆಚ್.ಐ.ವಿ/ಏಡ್ಸ್ ಮತ್ತಿತರ ಸೋಂಕು ರೋಗಗಳ ಬಗ್ಗೆ ಇರುವ ತಪ್ಪು ತಿಳುವಳಿಕೆ ಹೋಗಲಾಡಿಸಿ ಅವುಗಳನ್ನು ತಡೆಗಟ್ಟುವ ಕೆಲಸದಲ್ಲಿ ಜನರ ವಿಶ್ವಾಸ ಮತ್ತು ಪಾಲುದಾರಿಕೆ ಹೆಚ್ಚಿಸುವುದು.

(6) ಗ್ರಾಮದ ಆರೋಗ್ಯ, ನೈರ್ಮಲ್ಯ ಮತ್ತು ಪೌಷ್ಠಿಕಾಂಶದ ಯೋಜನೆಗಳ ಅನುಷ್ಠಾನದಲ್ಲಿ ಸಮುದಾಯದ ಸಹಬಾಗಿತ್ವ ಪಡೆಯುವುದು.

7. ಸಮಿತಿಯ ಪ್ರಕಾರ್ಯಗಳು.- (1) ಗ್ರಾಮದ ಆರೋಗ್ಯ, ನೈರ್ಮಲ್ಯ ಮತ್ತು ಪೌಷ್ಠಿಕತೆಯ ಸ್ಥಿತಿಗತಿಗಳ ಬಗ್ಗೆ ಅಧ್ಯಯನ ಮಾಡಿ ವಸ್ತುಸ್ಥಿತಿ ವರದಿ ಸಿದ್ಧಪಡಿಸುವುದು.

(2) ಗ್ರಾಮದ ಆರೋಗ್ಯ, ನೈರ್ಮಲ್ಯ ಮತ್ತು ಪೌಷ್ಠಿಕತೆಯ ಸ್ಥಿತಿಗತಿಗಳಲ್ಲಿ ಇರುವ ಕೊರತೆಗಳ ಬಗ್ಗೆ ಪಟ್ಟಿ ಮಾಡುವುದು.

(3) ಗ್ರಾಮದ ಆರೋಗ್ಯ, ನೈರ್ಮಲ್ಯ ಮತ್ತು ಪೌಷ್ಠಿಕತೆ ಬಗ್ಗೆ ವಾರ್ಷಿಕ ಸಮಗ್ರ ಕ್ರಿಯಾ ಯೋಜನೆ ತಯಾರಿಸುವುದು.

(4) ಗ್ರಾಮದ ಆರೋಗ್ಯ, ನೈರ್ಮಲ್ಯ ಮತ್ತು ಪೌಷ್ಠಿಕತೆ ಬಗ್ಗೆ ಸರ್ಕಾರದ ವಿವಿಧ ಯೋಜನೆಗಳಲ್ಲಿ ದೊರಕುವ ಸೌಲಭ್ಯಗಳ ಬಗ್ಗೆ ಕ್ರಿಯಾ ಯೋಜನೆಯಲ್ಲಿ ಅವಕಾಶ ಕಲ್ಪಿಸುವುದು.

(5) ಕೊರತೆ ಇರುವ ಸಂಪನ್ಮೂಲವನ್ನು ಸಾರ್ವಜನಿಕ ವಂತಿಗೆ, ಸಹಭಾಗಿತ್ವಗಳಿಂದ ಪಡೆಯಲು ಕ್ರಮ ಕೈಗೊಳ್ಳುವುದು.

(6) ಗ್ರಾಮದ ಎಲ್ಲಾ ಜನರಿಗೆ ಶುದ್ಧವಾದ ಕುಡಿಯುವ ನೀರು ದೊರೆಯುತ್ತಿರುವ ಬಗ್ಗೆ ಖಾತ್ರಿಪಡಿಸಿಕೊಳ್ಳುವುದು.

(7) ಗ್ರಾಮದ ಪ್ರತೀ ಕುಟುಂಬಗಳಿಗೂ ಶೌಚಾಲಯ ಇರುವ ಬಗ್ಗೆ ಮತ್ತು ಬಳಸುತ್ತಿರುವ ಬಗ್ಗೆ ಖಾತ್ರಿಪಡಿಸಿಕೊಳ್ಳುವುದು.

(8) ಗ್ರಾಮದ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ, ಅಂಗನವಾಡಿಗಳಲ್ಲಿ ಪೌಷ್ಠಿಕ ಆಹಾರ ದೊರಕುತ್ತಿರುವ ಬಗ್ಗೆ ಖಾತ್ರಿಪಡಿಸಿಕೊಳ್ಳುವುದು.

(9) ಗ್ರಾಮದ ಗರ್ಭಿಣಿಯರು, ಬಾಣಂತಿಯರಿಗೆ ದೊರಕುತ್ತಿರುವ ಪೌಷ್ಠಿಕ ಆಹಾರ ಸೇರಿದಂತೆ ಎಲ್ಲಾ ಸೌಲಭ್ಯಗಳು ದೊರಕುತ್ತಿರುವ ಬಗ್ಗೆ ಖಾತ್ರಿಪಡಿಸಿಕೊಳ್ಳುವುದು.

(10) ಗ್ರಾಮದ ಎಲ್ಲಾ ಪ್ರದೇಶದಲ್ಲಿ ರಸ್ತೆ, ಚರಂಡಿ, ಸಾರ್ವಜನಿಕ ಸ್ಥಳಗಳಲ್ಲಿ ಶುಚಿತ್ವ ಕಾಪಾಡುವ ಬಗ್ಗೆ ಖಾತ್ರಿಪಡಿಸಿಕೊಳ್ಳುವುದು.

(11) ಗ್ರಾಮದ ವ್ಯಾಪ್ತಿಯ ಸಾರ್ವಜನಿಕ ಕೆರೆ, ಕುಂಟೆ, ತೆರೆದ ಬಾವಿ, ಕೊಳವೆ ಬಾವಿಗಳಲ್ಲಿ (ಬೋರ್ವೆಲ್) ನೀರು ಮಲೀನವಾಗದಂತೆ ಕ್ರಮ ಕೈಗೊಳ್ಳುವುದು.

(12) ಪ್ರತಿ ತಿಂಗಳ ಮೂರನೇ ಶನಿವಾರದಂದು, ಗ್ರಾಮದಲ್ಲಿ 'ಗ್ರಾಮ ಆರೋಗ್ಯ ಮತ್ತು ಪೌಷ್ಠಿಕ ದಿನ' ಆಚರಿಸಿ ಗ್ರಾಮಸ್ಥರು ಈ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಕ್ರಮ ವಹಿಸುವುದು.

(13) ಗ್ರಾಮದಲ್ಲಿ ಅಪೌಷ್ಠಿಕತೆಯಿಂದ ಬಳಲುತ್ತಿರುವ ಎಲ್ಲಾ ಮಕ್ಕಳನ್ನು ಪ್ರಾರಂಭಿಕ ಹಂತದಲ್ಲೆ ಪತ್ತೆ ಹಚ್ಚಿ ಅಂತಹ ಮಕ್ಕಳಿಗೆ ಹತ್ತಿರದ ಪೌಷ್ಠಿಕ ಪುನರ್ವಸತಿ ಕೇಂದ್ರದಲ್ಲಿ ಚಿಕಿತ್ಸೆ/ಉಪಚಾರ ಮಾಡಿಸಿ, ಆ ಮಕ್ಕಳು ಗ್ರಾಮಕ್ಕೆ ಹಿಂತಿರುಗಿದ ನಂತರ ಅವರು ಸಾಮಾನ್ಯ ಪೌಷ್ಠಿಕ ಮಟ್ಟ ತಲುಪುವವರೆಗೆ ನಿಗಾವಹಿಸುವುದು.

(14) ಗ್ರಾಮದಲ್ಲಿ ಅಂಗನವಾಡಿಯು ನೀಡುತ್ತಿರುವ ಸೇವೆಗಳನ್ನು ಮೇಲ್ವಿಚಾರಣೆ ನಡೆಸುವುದು ಮತ್ತು ಗ್ರಾಮದ ಮಹಿಳೆಯರ ಮತ್ತು ಮಕ್ಕಳ ಪೌಷ್ಠಿಕ ಮಟ್ಟವನ್ನು ಉತ್ತಮಪಡಿಸಲು ಸಹಕರಿಸುವುದು.

೨೭೬೨ ಕ£ಾಟಕ (cid:170)ಾಜ(cid:205)ಪತ(cid:206),ಗುರು(cid:174)ಾರ, ೧೭,(cid:177)ೆ(cid:164)ೆ(cid:190)ಂಬ(cid:349), 2020 ಭಾಗ ೪ಎ

(15) ಗ್ರಾಮದಲ್ಲಿ ಸಾಂಕ್ರಾಮಿಕ ರೋಗಗಳ ನಿವಾರಣೆಗೆ ಸಾರ್ವತ್ರಿಕ ಚುಚ್ಚುಮದ್ದು ಕಾರ್ಯಕ್ರಮ ನಿಯಮಿತವಾಗಿ ನಡೆಯುವಂತೆ ಕ್ರಮ ವಹಿಸುವುದು.

(16) ಆರೋಗ್ಯ ಸಹಾಯಕರು (ಕಿರಿಯ ಆರೋಗ್ಯ ಸಹಾಯಕಿ/ಸಹಾಯಕ, ಆಶಾ ಕಾರ್ಯಕರ್ತೆಯರು) ನಿಯಮಿತವಾಗಿ ಗ್ರಾಮಕ್ಕೆ ಭೇಟಿ ನೀಡುವಂತೆ ನೋಡಿಕೊಳ್ಳಬೇಕು, ಆ ಮೂಲಕ ಜನರಿಗೆ ಆರೋಗ್ಯ ಸೇವೆ ಮತ್ತು ಸೌಲಭ್ಯಗಳ ಬಗ್ಗೆ ಮಾಹಿತಿ ಸಿಗುವಂತೆ ಮಾಡಬೇಕು.

(17) ಗರ್ಭಿಣಿ ಮಹಿಳೆಯರಿಗೆ ತುರ್ತಾಗಿ ಆಸ್ಪತ್ರೆಗೆ ಹೋಗಬೇಕಾದಾಗ ವಾಹನ ಸೌಲಭ್ಯದ ವ್ಯವಸ್ಥೆ ಮಾಡುವುದು, (18) ಪ್ರತಿ ಅಂಗನವಾಡಿ ಕೇಂದ್ರಗಳಲ್ಲಿ ಬಾಲವಿಕಾಸ ಸಮಿತಿ ರಚಿಸುವುದು ಮತ್ತು ಅಂಗನವಾಡಿಗಳಿಗೆ ಬೇಕಾದ ಸಹಾಯ, ನೆರವು ನೀಡುವುದು ಹಾಗೂ ಮಕ್ಕಳಿಗೆ ಪೌಷ್ಟಿಕ ಆಹಾರ ಸರಿಯಾಗಿ ಸಿಗುವಂತೆ ಮಾಡಲು ಸಂಬಂಧಪಟ್ಟ ಇಲಾಖೆಯೊಡನೆ ಸಮನ್ವಯ ಸಾಧಿಸುವುದು.

(19) ಗ್ರಾಮದ ಜನರಲ್ಲಿ ಹೆಣ್ಣು ಭ್ರೂಣ ಹತ್ಯೆ, ಬಾಲ್ಯ ವಿವಾಹ, ಅನಕ್ಷರತೆ, ಬಾಲ ಕಾರ್ಮಿಕ ಪದ್ಧತಿ ಹೋಗಲಾಡಿಸಲು ಕ್ರಮ ಹಮ್ಮಿಕೊಳ್ಳುವುದು.

8. ಗ್ರಾಮ ಆರೋಗ್ಯ, ನೈರ್ಮಲ್ಯ ಮತ್ತು ಪೌಷ್ಠಿಕ ಸಮಿತಿ ಮುಕ್ತ ನಿಧಿಯ ನಿರ್ವಹಣೆ.- (1) ಪ್ರತಿ ಗ್ರಾಮ ಆರೋಗ್ಯ, ನೈರ್ಮಲ್ಯ ಮತ್ತು ಪೌಷ್ಠಿಕ ಸಮಿತಿಗೆ ವಾರ್ಷಿಕ ಹತ್ತು ಸಾವಿರ ರೂಪಾಯಿಗಳ ಮುಕ್ತನಿಧಿ (ಅನಿರ್ಬಂಧಿತ ನಿಧಿ), ರಾಷಿ(cid:8315)ೕಯ ಆರೋಗ್ಯ ಅಭಿಯಾನದಿಂದ ನೀಡಲಾಗುವುದು.

(2) ಈ ನಿಧಿಯು ಸ್ಥಳೀಯ ಮಟ್ಟದಲ್ಲಿ ಕೈಗೊಳ್ಳುವ ಸಮುದಾಯ ಆರೋಗ್ಯ ಚಟುವಟಿಕೆಗಳಿಗೆ ಸಂಪನ್ಮೂಲವಾಗಿರುತ್ತದೆ. ಇದನ್ನು ಸಮುದಾಯ ಆರೋಗ್ಯ ಚಟುವಟಿಕೆಗಳಿಗೆ ಮಾತ್ರ ಒದಗಿಸಬೇಕು. ಈ ಚಟುವಟಿಕೆಗಳು ಒಂದು ಕುಟುಂಬಕ್ಕಿಂತ ಹೆಚ್ಚು ಕುಟುಂಬಗಳಿಗೆ ಅನುಕೂಲವಾಗುವಂತಿರಬೇಕು. ಈ ನಿಧಿಯನ್ನು ಬಳಸುವಾಗ ಜನಾರೋಗ್ಯ, ಪೌಷ್ಠಿಕತೆ, ಶಿಕ್ಷಣ ಮತ್ತು ನೈರ್ಮಲ್ಯ ಪರಿಸರ ಸಂರಕ್ಷಣೆಯಂತಹ ವಲಯಗಳಿಗೆ ಹೆಚ್ಚು ಆದ್ಯತೆ ನೀಡಬೇಕು.

(3) ಕೆಲವೊಂದು ಸಾಮಾನ್ಯ ಚಟುವಟಿಕೆಗಳಾದ ಗ್ರಾಮ ಮಟ್ಟದ ಸ್ವಚ್ಛತಾ ಚಟುವಟಿಕೆ, ನೈರ್ಮಲ್ಯ ಚಟುವಟಿಕೆಗಳು, ಆರೋಗ್ಯ ಚಟುವಟಿಕೆಗಳು, ಅಂಗನವಾಡಿ ಕೇಂದ್ರದ ಮಟ್ಟದ ಆರೋಗ್ಯ ಜಾಗೃತಿ ಕಾರ್ಯಕ್ರಮಗಳು, ಮನೆ ಮನೆ ಸಮೀಕ್ಷೆ, ರೋಗವಾಹಕ ಮೂಲಗಳನ್ನು ಕಡಿಮೆಗೊಳಿಸುವುದು, ತುರ್ತು ಸಮಯದಲ್ಲಿ ಸಾರಿಗೆ ವ್ಯವಸ್ಥೆ ಸೇವೆಗಳು (ಆರೋಗ್ಯ ಕವಚ ಸೇವೆ ಲಭ್ಯವಿಲ್ಲದಿದ್ದಲ್ಲಿ), ಮಾಹಿತಿ ಮತ್ತು ಶಿಕ್ಷಣ ಮತ್ತು ಸಂವಹನದ ಚಟುವಟಿಕೆಗಳು ಮತ್ತು ಕಾಲಕಾಲಕ್ಕೆ ಅಭಿಯಾನ ನಿರ್ದೇಶಕರು (ಎನ್ಹೆಚ್ಎಮ್) ಮತ್ತು ಯೋಜನಾ ನಿರ್ದೇಶಕರು (ಆರ್ಸಿಹೆಚ್) ನೀಡುವ ನಿರ್ದೇಶನದಂತೆ ಮುಕ್ತ ನಿಧಿಯನ್ನು ಬಳಸಬಹುದಾಗಿದೆ.

(4) ಈ ನಿಧಿಯನ್ನು ಸುತ್ತು ನಿಧಿಯನ್ನಾಗಿಯೂ ಬಳಸಬಹುದು. ಬಳಸುವ ಸಂದರ್ಭದಲ್ಲಿ, ಯಾವ ಕುಟುಂಬವು ಪಡೆದಿರುತ್ತದೆಯೇ, ಆ ಕುಟುಂಬದಿಂದ ಸಮಯಕ್ಕೆ ಸರಿಯಾಗಿ ವಂತಿಕೆಯನ್ನು ಕಂತುಗಳಲ್ಲಿ ಹಿಂಪಡೆಯಲು ಕ್ರಮ ಕೈಗೊಳ್ಳಬೇಕು.

(5) ವಿಶೇಷ ಸಂದರ್ಭಗಳಲ್ಲಿ ಅಂದರೆ ನಿರ್ಗತಿಕ ಮಹಿಳೆ ಅಥವಾ ಅತಿ ಬಡ ಕುಟುಂಬದವರಿಗೆ ಈ ನಿಧಿಯನ್ನು ನೀಡಿದ್ದರೆ , ಸಮಿತಿಯು ಚರ್ಚಿಸಿ ತೀರ್ಮಾನ ಕೈಗೊಂಡು ವಿನಾಯಿತಿ ನೀಡಬಹುದು.

(6) ಪ್ರತೀ ಸಮಿತಿಯು ಹತ್ತು ಸಾವಿರ ಮುಕ್ತ ನಿಧಿಯ ಜೊತೆಗೆ ಸಮಿತಿಯ ಉದ್ದೇಶಗಳನ್ನು ಈಡೇರಿಸಲು ಸಮುದಾಯದಿಂದ ವಂತಿಗೆಯನ್ನು ಪಡೆಯುವ ಸಂಪೂರ್ಣ ಸ್ವಾತಂತ್ರ್ಯವನ್ನು ಸಮಿತಿಯು ಹೊಂದಿರುತ್ತದೆ.

ಭಾಗ ೪ಎ ಕ£ಾಟಕ (cid:170)ಾಜ(cid:205)ಪತ(cid:206),ಗುರು(cid:174)ಾರ, ೧೭,(cid:177)ೆ(cid:164)ೆ(cid:190)ಂಬ(cid:349), 2020 ೨೭೬೩

9. ಬ್ಯಾಂಕ್ ಖಾತೆಗಳ ನಿರ್ವಹಣೆ.- (1) ಸಮಿತಿಗೆ ನೀಡುವ ಮುಕ್ತ ನಿಧಿಯನ್ನು, ಈ ಸಮಿತಿಯು ರಾಷಿ(cid:8315)ೕಕೃತ ಅಥವಾ ಷೆಡ್ಯೂಲ್ಡ್ ಬ್ಯಾಂಕಿನ ಜಂಟಿ ಖಾತೆಗೆ ಜಮಾ ಮಾಡುವುದು.

(2) ಇದನ್ನು ಸಮಿತಿಯ ಸದಸ್ಯ ಕಾರ್ಯದರ್ಶಿ (ಆಶಾ ಕಾರ್ಯಕರ್ತೆ) ಮತ್ತು ಅಧ್ಯಕ್ಷರ ಜಂಟಿ ಸಹಿಯೊಂದಿಗೆ ನಿರ್ವಹಿಸಬೇಕು.

(3) ಜಂಟಿ ಖಾತೆಯ ನಿರ್ವಹಣೆಯನ್ನು ಸಂಪೂರ್ಣವಾಗಿ ಗ್ರಾಮ ಆರೋಗ್ಯ ಮತ್ತು ನೈರ್ಮಲ್ಯ ಸಮಿತಿ ಅದರಲ್ಲೂ ವಿಶೇಷವಾಗಿ ಆಶಾ ಕಾರ್ಯಕರ್ತೆಯ ಜವಾಬ್ದಾರಿಯಾಗಿರುತ್ತದೆ.

(4) ಗ್ರಾಮ ಆರೋಗ್ಯ, ನೈರ್ಮಲ್ಯ ಮತ್ತು ಪೌಷ್ಠಿಕ ಸಮಿತಿಯು ಸರ್ಕಾರದಿಂದ ಬಿಡುಗಡೆಯಾದ ಅನುದಾನ ಹಾಗೂ ಸಾರ್ವಜನಿಕರಿಂದ ಪಡೆದ ವಂತಿಗೆಯ ಖರ್ಚಿಗೆ ಸಂಬಂಧಿಸಿದಂತೆ ಪ್ರತ್ಯೇಕ ವಹಿಯನ್ನು ನಿರ್ವಹಿಸಬೇಕು.

(5) ಈ ವಹಿಯು ಸಾರ್ವಜನಿಕ ಪರಿಶೀಲನೆಗೆ (ಸಾಮಾಜಿಕ ಪರಿಶೋಧನೆ) ಮುಕ್ತವಾಗಿರಬೇಕು.

(6) ಈ ವಹಿಯನ್ನು ಕಾಲಕಾಲಕ್ಕೆ ಕಿರಿಯ ಮಹಿಳಾ ಅರೋಗ್ಯ ಸಹಾಯಕಿ / ಹಿರಿಯ ಮಹಿಳಾ ಅಥವಾ ಪುರುಷ ಆರೋಗ್ಯ ಸಹಾಯಕರು/ಗ್ರಾಮ ಪಂಚಾಯತ್ ಅಧ್ಯಕ್ಷರು, ಪಂಚಾಯತಿ ಅಭಿವೃದ್ಧಿ ಅಧಿಕಾರಿ / ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು ಪರಿಶೀಲಿಸಬೇಕು.

(7) ಇದರ ವರದಿಯನ್ನು ಗ್ರಾಮ ಪಂಚಾಯಿತಿ ಸಭೆಯ ಮುಂದೆ ಮಂಡಿಸತಕ್ಕದ್ದು.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು

ಅವರ ಹೆಸರಿನಲ್ಲಿ

(ಬಿ. ನವೀನ್ ಕುಮಾರ್)

ಸರ್ಕಾರದ ಅಧೀನ ಕಾರ್ಯದರ್ಶಿ,(ಜಿ.ಪಂ.) (ಪ್ರ)

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ PR-340

ಕರ್ನಾಟಕ ಸರ್ಕಾರ

ಸಂಖ್ಯೆ: ಗ್ರಾಅಪ 660 ಗ್ರಾಪಂಅ 2020 ಕರ್ನಾಟಕ ಸರ್ಕಾರದ ಸಚಿವಾಲಯ, ಬಹುಮಹಡಿ ಕಟ್ಟಡ ಬೆಂಗಳೂರು, ದಿನಾಂಕ:11-09-2020.

ಅಧಿಸೂಚನೆ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993 (1993ರ ಕರ್ನಾಟಕ ಅಧಿನಿಯಮ ಸಂಖ್ಯೆ 14) ರ ಪ್ರಕರಣ 58, 61-ಎ ರೊಡನೆ ಓದಿಕೊಂಡಂತೆ ಪ್ರಕರಣ 311 ರಲ್ಲಿ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಈ ಕೆಳಕಂಡ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಮಹಿಳೆಯರ ಮತ್ತು ಮಕ್ಕಳ ರಕ್ಷಣೆಯ ಕಾವಲು ಸಮಿತಿ) ನಿಯಮಗಳು, 2020ರ ಕರಡನ್ನು ಸದರಿ ಅಧಿನಿಯಮದ ಪ್ರಕರಣ 311 ರ ಉಪ ಪ್ರಕರಣ (1) ರಲ್ಲಿ ನಿಗದಿಪಡಿಸಿದಂತೆ, ಇದರಿಂದ ಬಾಧಿತರಾಗುವ ಎಲ್ಲಾ ವ್ಯಕ್ತಿಗಳ ಮಾಹಿತಿಗಾಗಿ ಈ ಮೂಲಕ ಪ್ರಕಟಿಸಲಾಗಿದೆ ಮತ್ತು ಸದರಿ ಕರಡನ್ನು ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟಿತವಾದ ದಿನಾಂಕದಿಂದ ಮೂವತ್ತು ದಿನಗಳ ನಂತರ ಪರಿಗಣನೆಗೆ ತೆಗೆದುಕೊಳ್ಳಲಾಗುವುದೆಂದು ಈ ಮೂಲಕ ಸೂಚಿಸಲಾಗಿದೆ.

ಮೇಲೆ ನಿರ್ದಿಷ್ಟಪಡಿಸಿದ ಅವಧಿಯು ಮುಕ್ತಾಯವಾಗುವುದಕ್ಕೆ ಮೊದಲು ಕರಡು ನಿಯಮಗಳಿಗೆ ಸಂಬಂಧಿಸಿದಂತೆ, ಯಾವೊಬ್ಬ ವ್ಯಕ್ತಿಯಿಂದ ರಾಜ್ಯ ಸರ್ಕಾರವು ಸ್ವೀಕರಿಸಬಹುದಾದ ಯಾವುದೇ ಆಕ್ಷೇಪಣೆ ಮತ್ತು೨೭೬೪ ಕ£ಾಟಕ (cid:170)ಾಜ(cid:205)ಪತ(cid:206),ಗುರು(cid:174)ಾರ, ೧೭,(cid:177)ೆ(cid:164)ೆ(cid:190)ಂಬ(cid:349), 2020 ಭಾಗ ೪ಎ ಸಲಹೆಗಳನ್ನು ರಾಜ್ಯ ಸರ್ಕಾರವು ಪರಿಗಣಿಸುವುದು. ಆಕ್ಷೇಪಣೆ ಅಥವಾ ಸಲಹೆಗಳನ್ನು ಸರ್ಕಾರದ ಪ್ರಧಾನ ಕಾರ್ಯದರ್ಶಿ (ಪಂಚಾಯತ್ ರಾಜ್), ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ, ಬಹುಮಹಡಿಗಳ ಕಟ್ಟಡ, ಡಾ|| ಅಂಬೇಡ್ಕರ್ ವೀದಿ, ಬೆಂಗಳೂರು-01 ಇವರಿಗೆ ಕಳುಹಿಸಲು ಕೋರಲಾಗಿದೆ.

ಕರಡು ನಿಯಮಗಳು

ಅಧ್ಯಾಯ-1

1. ಹೆಸರು ಮತ್ತು ಪ್ರಾರಂಭ

.- (1)ಈ ನಿಯಮಗಳನ್ನು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಮಹಿಳೆಯರ ಮತ್ತು ಮಕ್ಕಳ ರಕ್ಷಣೆಯ ಕಾವಲು ಸಮಿತಿ) ನಿಯಮಗಳು, 2020 ಎಂದು ಕರೆಯತಕ್ಕದ್ದು. (2) ಈ ನಿಯಮಗಳು ಕರ್ನಾಟಕ ರಾಜ್ಯಪತ್ರದಲ್ಲಿ ಅಂತಿಮವಾಗಿ ಪ್ರಕಟಿಸಿದ ದಿನಾಂಕದಿಂದ ಜಾರಿಗೆ ಬರತಕ್ಕದ್ದು.

2. ಪರಿಭಾಷೆಗಳು.-ಈ ನಿಯಮಗಳಲ್ಲಿ ವಿಷಯಕ್ಕೆ ಅಥವಾ ಸಂದರ್ಭಕ್ಕೆ ಬೇರೆ ಅರ್ಥದ ಅಗತ್ಯ ಇರದಿದ್ದರೆ,- (i) "ಅಧಿನಿಯಮ" ಎಂದರೆ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 (1993ರ ಕರ್ನಾಟಕ ಅಧಿನಿಯಮ ಸಂಖ್ಯೆ: 14);

(ii) "ಅಧ ್ಯಕ್ಷರು" ಎಂದರೆ ಮಹಿಳೆಯರ ಮತ್ತು ಮಕ್ಕಳ ರಕ್ಷಣೆಯ ಕಾವಲು ಸಮಿತಿಯ ಅಧ್ಯಕ್ಷರು; (iii) "ಆಶಾ ಕಾರ್ಯಕರ್ತೆ" ಎಂದರೆ ಆರೋಗ್ಯ ಕಾರ್ಯಕರ್ತೆಯಾಗಿದ್ದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ನಿಯೋಜನೆಗೊಂಡು ಗ್ರಾಮ ಮಟ್ಟದಲ್ಲಿ ಮಹಿಳಾ ಮತ್ತು ಮಕ್ಕಳ ಆರೋಗ್ಯಕ್ಕೆ ಸಂಬಂಧಿಸಿದಂತೆ ಸೇವೆ ಸಲ್ಲಿಸುವವರು;

್ಯಕ್ಷರು" ಎಂದರೆ ಮಹಿಳೆಯರ ಮತ್ತು ಮಕ್ಕಳ ರಕ್ಷಣೆಯ ಕಾವಲು ಸಮಿತಿಯ ಉಪಾಧ್ಯಕ್ಷರು;

(iv) "ಉಪಾಧ

(v) "ಕಾಯಿದೆಯೊಡನೆ ಸಂಘರ್ಷದಲ್ಲಿರುವ ಮಗು" : (Child in Conflict with law) ಎಂದರೆ,

ಯಾವುದೇ ಮಗುವು ಅಪರಾಧವನ್ನು ಮಾಡಿದೆಯೆಂದು ದೂರಲಾದ ಅಥವಾ ಅಪರಾಧ ಮಾಡಿರುವುದು ಕಂಡುಬಂದಿದ್ದು ಅಪರಾಧ ಮಾಡಿದ ದಿನಾಂಕದಂದು ಹದಿನೆಂಟು ವರ್ಷ ವಯಸ್ಸನ್ನು ಮೀರದ ಮಗು;

(vi) "ಜಾಡು ಪತ್ತೆ ಮಾಡು (Track the Child Portal)" ಎಂದರೆ ಮಕ್ಕಳು ನಾಪತ್ತೆಯಾದ ಘಟನೆಗೆ ಪೂರಕವಾದ ಸರಣಿ ಕ್ರಿಯೆಗಳು / ಮಗುವಿನ ನಾಪತ್ತೆಯ ಮೂಲವನ್ನು ವಿಶ್ಲೇಷಿಸುವ ಸರಣಿ ಕ್ರಿಯೆಗಳು;

(vii) "ಜಿಲ್ಲಾ ನ್ಯಾಯಾಲಯ" ಎಂದರೆ ಕೌಟುಂಬಿಕ ನ್ಯಾಯಾಲಯಗಳ ಅಧಿನಿಯಮ, 1984 (1984ರ ಕೇಂದ್ರ ಅಧಿನಿಯಮ ಸಂಖ್ಯೆ:66)ರ ಪ್ರಕರಣ 3ರ ಮೇರೆಗೆ ಯಾವ ಪ್ರದೇಶಕ್ಕಾಗಿ ಕೌಟುಂಬಿಕ ನ್ಯಾಯಾಲಯಗಳನ್ನು ಸ್ಥಾಪಿಸಲಾಗಿದೆಯೋ ಮತ್ತು ಸಿವಿಲ್ ನ್ಯಾಯಾಲಯ ಇರುವಲ್ಲಿ ಆ ಸಿವಿಲ್ ನ್ಯಾಯಾಲಯ ಮತ್ತು ಯಾವುದೇ ಇತರ ಪ್ರದೇಶದಲ್ಲಿ ಮೂಲ ಅಧಿಕಾರ ವ್ಯಾಪ್ತಿ ಹೊಂದಿರುವ ಪ್ರಧಾನ ಸಿವಿಲ್ ನ್ಯಾಯಾಲಯ ಹಾಗೂ ರಾಜ್ಯ ಸರ್ಕಾರವು ರಾಜ್ಯಪತ್ರದಲ್ಲಿ ಅಧಿಸೂಚನೆಯ ಮೂಲಕ ಈ ಅಧಿನಿಯಮದಲ್ಲಿನ ವಿಷಯಗಳಿಗೆ ಸಂಬಂಧಿಸಿದಂತೆ ಅಧಿಕಾರ ವ್ಯಾಪ್ತಿ ಹೊಂದಿರುವುದೆಂದು ನಿರ್ಧಷ್ಟಪಡಿಸಬಹುದಾದಂತಹ ಯಾವುದೇ ಇತರ ಸಿವಿಲ್ ನ್ಯಾಯಾಲಯವನ್ನು ಒಳಗೊಳ್ಳುತ್ತದೆ;

(viii) "ಪ್ರಾಯ ಪೂರ್ವ" ಎಂದರೆ 10 ರಿಂದ 18 ವರ್ಷದೊಳಗಿನ ವ್ಯಕಿ; (ix) "ಪೊಲೀಸ್ ಅಧಿಕಾರಿ" ಎಂದರೆ ಗ್ರಾಮ ಪಂಚಾಯತ್ ಮಟ್ಟದ ಗ್ರಾಮಗಳಿಗೆ, ಆಯಾ ಪೊಲೀಸ್ ಠಾಣೆಯ, ಆರಕ್ಷಕ ಉಪನಿರೀಕ್ಷಕರಿಂದ ನಿಯೋಜಿಸಲ್ಪಡುವ ಪೊಲೀಸ್ ಅಧಿಕಾರಿ (ಮಕ್ಕಳ ಕಲ್ಯಾಣ ಪೊಲೀಸ್ ಅಧಿಕಾರಿ);

ಭಾಗ ೪ಎ ಕ£ಾಟಕ (cid:170)ಾಜ(cid:205)ಪತ(cid:206),ಗುರು(cid:174)ಾರ, ೧೭,(cid:177)ೆ(cid:164)ೆ(cid:190)ಂಬ(cid:349), 2020 ೨೭೬೫ (x) "ಬಾಲ್ಯವಿವಾಹ" ಎಂದರೆ ಗಂಡು ಆಗಿದ್ದರೆ 21 ವರ್ಷ ವಯಸ್ಸನ್ನು ಪೂರ್ಣಗೊಳಿಸಿರದ ಮತ್ತು ಹೆಣ್ಣು

ಆಗಿದ್ದರೆ 18 ವರ್ಷ ವಯಸ್ಸನ್ನು ಪೂರ್ಣಗೊಳಿಸಿರದ ವ್ಯಕ್ತಿಗಳು ವಿವಾಹವಾದಲ್ಲಿ ಅಥವಾ ಅವರಲ್ಲಿ ಒಬ್ಬರಾದರೂ ಮೇಲ್ಕಂಡ ವಯಸ್ಸಿನ ಕೆಳಗಿದ್ದರೆ ಬಾಲ್ಯ ವಿವಾಹ ಎಂದು ಅರ್ಥ;

(xi) "ಬಾಲ್ಯವಿವಾಹ ನಿಷೇಧ

ಅಧಿಕಾರಿ" ಎಂದರೆ ಬಾಲ್ಯವಿವಾಹ ನಿಷೇಧ ಅಧಿನಿಯಮ, 2006 (2007ರ ಕೇಂದ್ರ ಅಧಿನಿಯಮ ಸಂಖ್ಯೆ 6) 2006ರಡಿ ಬರುವ 16ನೇ ಪ್ರಕರಣದ (1)ನೇ ಉಪ ಪ್ರಕರಣದ ಮೇರೆಗೆ ನೇಮಕಗೊಂಡ ಬಾಲ್ಯವಿವಾಹ ನಿಷೇಧ ಅಧಿಕಾರಿಗಳು;

(xii) "ಬಾಲ ನ್ಯಾಯ ಮಂಡಳಿ" ಎಂದರೆ ಬಾಲನ್ಯಾಯ (ಮಕ್ಕಳ ಆರೈಕೆ ಮತ್ತು ಸಂರಕ್ಷಣೆ) ಅಧಿನಿಯಮ, 2015 (2016 ರ ಕೇಂದ್ರ ಅಧಿನಿಯಮ 2) ರ ಪ್ರಕರಣ 4ರಡಿಯಲ್ಲಿ ರಚಿಸಿದಂತಹ ಬಾಲ ನ್ಯಾಯ ಮಂಡಳಿ;

(ಅ)"ಜಿಲ್ಲಾ ಮಕ್ಕಳ ರಕ್ಷಣಾ ಘಟಕ" ಎಂದರೆ ಬಾಲನ್ಯಾಯ ಅಧಿನಿಯಮದ ಪ್ರಕರಣ 106 ರಡಿಯಲ್ಲಿ ರಾಜ್ಯ ಸರ್ಕಾರದಿಂದ ಸ್ಥಾಪಿಸಲ್ಪಟ್ಟ ಈ ಅಧಿನಿಯಮದ ಉಪ ಬಂಧಗಳನ್ನು ಜಾರಿಗೆ ತರಲು ಮತ್ತು ಇತರ ಮಕ್ಕಳ ಸಂರಕ್ಷಣಾ ಕ್ರಮಗಳನ್ನು ಜಿಲ್ಲಾ ಕೇಂದ್ರಗಳಲ್ಲಿ ಖಾತ್ರಿಪಡಿಸುವಂತಹ ಘಟಕ;

(ಆ)"ಅನಾಥ ಮಗು" ಎಂದರೆ ಹೆತ್ತ ತಂದೆ ತಾಯಿಯಾಗಲಿ ಅಥವಾ ದತ್ತಕದ ತಂದೆ ತಾಯಿಯಾಗಲಿ ಅಥವಾ ಪೋಷಕರಾಗಲಿ ಇಲ್ಲದಂತಹ ಮತ್ತು ಕಾನೂನಾತ್ಮಕ ಪೋಷಕರು ಪಾಲನೆ ಪೋಷಣೆ ಮಾಡಲು ಇಚ್ಚಿಸದಿದ್ದಲ್ಲಿ ಅಥವಾ ಮಗುವಿನ ಪಾಲನೆ ಪೋಷಣೆ ಮಾಡಲು ಸಮರ್ಥರಿಲ್ಲದಿದ್ದಲ್ಲಿ ಅಂತಹ ಮಗು;

(ಇ)"ಲೈಂಗಿಕ ಅತ್ಯಾಚಾರ / ಲೈಂಗಿಕ ಕಿರುಕುಳ" ಎಂದರೆ ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣೆ ಅಧಿನಿಯಮ, 2012 (2012 ರ ಕೇಂದ್ರ ಅಧಿನಿಯಮ ಸಂಖ್ಯೆ:32)ರ ಪ್ರಕರಣ 7 ಮತ್ತು 11ರ ಪ್ರಕಾರ ನೀಡಿರುವ ಅರ್ಥವನ್ನೇ ಹೊಂದಿರತಕ್ಕದ್ದು;

(xiii) "ಮಹಿಳಾ ಮತ್ತು ಮಕ್ಕಳ ಸಾಗಾಣಿಕೆ" ಎಂದರೆ ಮಾಲೀಕರು, ಸಾಗಾಣಿಕೆದಾರರು ಮತ್ತು ಅಪರಾಧಿ ಜಾಲಗಳು, ಮನೆಕೆಲಸ, ಸುಳ್ಳು ಮದುವೆ, ಗುಪ್ತ ಉದ್ಯೋಗಗಳು, ಲೈಂಗಿಕ ಶೋಷಣೆ, ಸುಳ್ಳು ದತ್ತುಗಳಂತಹ ಕಾನೂನು ಬಾಹಿರ ಚಟುವಟಿಕೆಗಳಿಗಾಗಿ ಮಹಿಳೆಯರನ್ನು ಮತ್ತು ಹೆಣ್ಣು ಮಕ್ಕಳನ್ನು ಶೋಚನೀಯ ಪರಿಸ್ಥಿತಿಗೆ ಬಲಾತ್ಕಾರದಿಂದ ತಳ್ಳುವುದು;

(xiv) "ಮಗು" ಎಂದರೆ, ಪ್ರಾಪ್ತ ವಯಸ್ಕ ಅಧಿನಿಯಮ 1875 (1875 ರ ಕೇಂದ್ರ ಅಧಿನಿಯಮ ಸಂಖ್ಯೆ: 9) ಮತ್ತು 9) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಅಧಿನಿಯಮ, 2012 (2012ರ ಕೇಂದ್ರ ಅಧಿನಿಯಮ ಸಂಖ್ಯೆ 32) ಮೇರೆಗೆ ಹದಿನೆಂಟು ವರ್ಷ ವಯಸ್ಸನ್ನು ಮೀರದ ಯಾರೇ ವ್ಯಕ್ತಿ; (xv) "ಮಕ್ಕಳ ಕಲ್ಯಾಣ ಸಮಿತಿ" ಎಂದರೆ ಬಾಲನ್ಯಾಯ (ಮಕ್ಕಳ ಆರೈಕೆ ಮತ್ತು ಸಂರಕ್ಷಣೆ) ಅಧಿನಿಯಮ, 2015 (2016 ರ ಕೇಂದ್ರ ಅಧಿನಿಯಮ 2) ರ ಪ್ರಕರಣ 27ರಡಿಯಲ್ಲಿ ರಚಿಸಿದಂತಹ ಸಮಿತಿ; (xvi) "ಮಕ್ಕಳ ಅಭಿವೃದ್ಧಿಗೆ ಮಾರಕವಾದ ಮೂಡನಂಬಿಕೆಗಳು" ಎಂದರೆ ಕರ್ನಾಟಕ ಅಮಾನವೀಯ ದುಷ್ಟ ಪದ್ಧತಿಗಳು ಹಾಗೂ ವಾಮಾಚಾರ ಇವುಗಳ ಪ್ರತಿಬಂಧ ಮತ್ತು ನಿರ್ಮೂಲನೆ ಅಧಿನಿಯಮ, 2017 ರಡಿಯಲ್ಲಿ ನಿಷೇಧಿಸಲ್ಪಟ್ಟಿರುವ ಮೂಡನಂಬಿಕೆಗಳು / ಕೆಟ್ಟ ನಂಬಿಕೆಗಳು, ಆಚಾರಗಳು ಮತ್ತು ಜೀವನ ಕ್ರಮಗಳು ಮತ್ತು ಮಕ್ಕಳ ಬದುಕು, ಬೆಳವಣಿಗೆ ಹಾಗೂ ಜೀವಕ್ಕೆ ಅಪಾಯಕಾರಿಯಾಗಿರುವ ಪದ್ಧತಿಗಳು;

ೆ" ಎಂದರೆ ಮಹಿಳೆಯರ ಮತ್ತು ಮಕ್ಕಳ ರಕ್ಷಣೆಯ ಕಾವಲು ಸಮಿತಿಯ ಸಭೆಗಳು;

೨೭೬೬ ಕ£ಾಟಕ (cid:170)ಾಜ(cid:205)ಪತ(cid:206),ಗುರು(cid:174)ಾರ, ೧೭,(cid:177)ೆ(cid:164)ೆ(cid:190)ಂಬ(cid:349), 2020 ಭಾಗ ೪ಎ (xvii) "ಸದಸ್ಯರು" ಎಂದರೆ ಸಮಿತಿಯ ಸದಸ್ಯರು; (xviii) "ಸಭ (xix) "ಸಮಿತಿ" ಎಂದರೆ ನಿಯಮ 3 ರಡಿಯಲ್ಲಿ ರಚಿಸಲ್ಪಟ್ಟ ಮಹಿಳೆಯರ ಮತ್ತು ಮಕ್ಕಳ ರಕ್ಷಣೆಯ ಕಾವಲು ಸಮಿತಿ;

(xx) "ಸಾಧಾರಣ ಕೋರಂ" ಎಂದರೆ ಹಾಜರಿದ್ದ ಸದಸ್ಯರ ಸಂಖ್ಯೆಯಲ್ಲಿ ಅರ್ಧಕ್ಕಿಂತ ಹೆಚ್ಚು ಸದಸ್ಯರ ಹಾಜರಿ; (xxi) "ಸಂರಕ್ಷಣೆ ಮತ್ತು ಪಾಲನೆಯ ಅಗತ್ಯವುಳ್ಳ ಮಗು" (Child in need of care and Protection) ಎಂದರೆ,-

(ಅ) ಯಾವುದೇ ನಿವಾಸ ಅಥವಾ ನೆಮ್ಮದಿಯ ನೆಲೆಯಿಲ್ಲದ ಮತ್ತು ಮೇಲ್ನೋಟಕ್ಕೆ ಜೀವನ ನಿರ್ವಹಣೆಗೆ ಯಾವುದೇ ಮಾರ್ಗವಿಲ್ಲದ; ಅಥವಾ

(ಆ) ತಾತ್ಕಾಲಿಕ ಜಾರಿಯಲ್ಲಿರುವ ಯಾವುದೇ ಕಾರ್ಮಿಕ ಅಧಿನಿಯಮಗಳ ಉಪ ಬಂಧಗಳನ್ನು ಉಲ್ಲಂಘಿಸಿ ಕೆಲಸ ನಿರ್ವಹಿಸುತ್ತಿರುವ ಅಥವಾ ಭಿಕ್ಷೆ ಬೇಡುತ್ತಿರುವ ಅಥವಾ ಬೀದಿಯಲ್ಲಿ ವಾಸಿಸುತ್ತಿರುವ; ಅಥವಾ

(ಇ) ಯಾರೇ ವ್ಯಕ್ತಿಯೊಂದಿಗೆ ವಾಸಿಸುತ್ತಿರುವ (ಅಂತಹ ವ್ಯಕ್ತಿಯು ಮಗುವಿನ ಪೋಷಕನಾಗಿರಬಹುದು ಅಥವಾ ಅಲ್ಲದಿರಬಹುದು) ಮತ್ತು ಅಂತಹ ವ್ಯಕ್ತಿಯು ಮಗುವನ್ನು ಘಾಸಿಗೊಳಿಸಿ, ಶೋಷಣೆ ಮಾಡಿ, ಹಿಂಸಿಸಿ ಅಥವಾ ಉದಾಸಿನ ಮಾಡಿ ಮಗುವಿನ ಸಂರಕ್ಷಣೆಗಾಗಿ ತತ್ಕಾಲದಲ್ಲಿ ಜಾರಿಯಲ್ಲಿರುವ ಯಾವುದೇ ಕಾಯಿದೆಯನ್ನು ಉಲ್ಲಂಘಿಸಿದ ಪ್ರಕರಣದಲ್ಲಿರುವಂತಹ ಮಗು.

3. ಮಕ್ಕಳ ಕಲ್ಯಾಣ ಸಮಿತಿಯ ರಚನೆ.-(1) ಈ ಸಮಿತಿಯು ಈ ಕೆಳಕಂಡ ಸದಸ್ಯರನ್ನು ಒಳಗೊಂಡಿರತಕ್ಕದ್ದು.

ಕ ್ರ ಸಂ ಸದಸ್ಯರು ಪ ದನಾಮ
(1) ಗ್ರಾಮ ಪ ಂಚಾಯತ್ ಅಧ್ಯಕ್ಷರು (ಸಮಿತಿಯ ಅಧ್ಯಕ್ಷರು ಕಡ್ಡಾಯವಾಗಿ ವ ುಹಿಳೆಯಾಗಿರಬೇಕು. ಗ್ರಾಮ ಪ ಂಚಾಯತ್ ಅಧ್ಯಕ್ಷರು ಪ ುರುಷರಾಗಿದ್ದಲ್ಲಿ ಉಪಾಧ ್ಯಕ್ಷರು. ಉಪಾಧ್ಯಕ್ಷರು ಪುರುಷರಾಗಿದ್ದಲ್ಲಿ, ಗ್ರಾಮ ಪಂಚಾಯತ್ ಆಯ್ಕೆ ವ iಾಡಿದ ಇತರ ಮಹಿಳಾ ಸದಸ್ಯರು). ಅಧ್ಯಕ್ಷರು
(2) ಗ್ರಾಮ ಪಂಚಾಯತ್ ಉಪಾಧ್ಯಕ್ಷರು (ಸಮತಿಯ ಉಪಾಧ ್ಯಕ್ಷರು ಕಡ್ಡಾಯವಾಗಿ ವ ುಹಿಳೆಯಾಗಿರಬೇಕು. ಗ್ರಾಮ ಪಂಚಾಯತ್ ಉಪಾಧ್ಯಕ್ಷರು ಪುರುಷರಾಗಿದ್ದಲ್ಲಿ, ಗ್ರಾಮ ಪ ಂಚಾಯತ್ ಆಯ್ಕೆ ಮಾಡಿದ ಇತರ ಮಹಿಳಾ ಸದಸ್ಯರು). ಉಪಾಧ ್ಯಕ್ಷರು
(3) ಗ್ರಾಮ ಪಂಚಾಯಿತಿಯು ಆಯ್ಕೆ ಮಾಡಿದ ಇಬ್ಬರು ಸದಸ್ಯರು (ಇವರಲ್ಲಿ ಒಬ್ಬರು ವ ುಹಿಳಾ ಸದಸ್ಯರು ಆಗಿರತಕ್ಕದ್ದು) ಸದಸ್ಯರು
(4) ಗ್ರಾಮ ಪಂಚಾಯಿತಿ ವ್ಯಾಪ್ತಿಯ ಒಬ್ಬರು ಪ್ರಾಥಮಿಕ ಶಾಲೆ ಹಾಗೂ ಒಬ್ಬರು ಪ್ರೌಡಶಾಲೆಯ ಮುಖ್ಯೋಪಾಧ್ಯಾಯರು (ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ಆಯ್ಕೆ ವ iಾಡುವುದು) ಸದಸ್ಯರು
(5) ಗ್ರಾಮ ಪ ಂಚಾಯಿತಿ ವ್ಯಾಪ್ತಿಯ ಒಬ್ಬರು ಗ್ರಾಮ ಲ ಕ್ಕಿಗರು ೆ (ತಹಶೀಲ್ದಾರರು ನ ೕಮಿಸುವುದು) ೆ ಸದಸ್ಯರು
(6) ಗ್ರಾಮ ಪ ಂಚಾಯಿತಿ ವ್ಯಾಪ್ತಿಯ ಎಲ್ಎಚ್‌ವಿ/ ಎಎನ್ಎಂ ವ ುತ್ತು ಆಶಾ ಕಾರ್ಯಕರ್ತೆಯರಲ್ಲಿ ಒಬ್ಬರು (ತಾಲ್ಲೂಕು ವೈದ್ಯಾಧಿಕಾರಿಗಳು ನಾಮ ನಿರ್ದೇಶನ ವ iಾಡುವುದು) ಸದಸ್ಯರು
(7) ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೀಟ್ ಪೊಲೀಸ್ ಅಧಿಕಾರಿ (ವೃತ್ತ ನಿರೀಕ್ಷಕರು ನಿಯೋಜಿಸುವುದು) ಸದಸ್ಯರು
(8) ಗ್ರಾಮ ಪಂಚಾಯಿತಿ ವ್ಯಾಪ್ತಿಯ ಐಸಿಡಿಎಸ್ (ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ) ವ ೆುೕಲ್ವಿಚಾರಕಿ (ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ನೇಮಿಸುವುದು) ಸದಸ್ಯರು
(9) ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಒಬ್ಬರು ಸ್ವಯಂ ಸೇವಾ ಸಂಸ್ಥೆಯ ಮಹಿಳಾ ಪ್ರತಿನಿಧಿ, ಒಬ್ಬರು ಸ್ತ್ರೀ ಶಕ್ತಿ ಸ್ವ-ಸಹಾಯ ಸಂಘಗಳ ಪ್ರತಿನಿಧಿ, (ಗ್ರಾಮ ಪಂಚಾಯಿತಿಯು ನಾಮ ನಿರ್ದೇಶನ ಮಾಡುವುದು) ಸದಸ್ಯರು
(10) ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರೌಡಶಾಲೆಯಲ್ಲಿ ಓದುತ್ತಿರುವ ಒಬ್ಬ ವಿದ್ಯಾರ್ಥಿ ಮತ್ತು ಒಬ್ಬಳು ವಿದ್ಯಾರ್ಥಿನಿ (ಇವರನ್ನು ಸಂಬಂಧಪಟ್ಟ ಪ್ರೌಡಶಾಲೆಯ ವ ುುಖ್ಯೋಪಾಧ್ಯಾಯರು ಸೂಚಿಸುವುದು) ಸದಸ್ಯರು
(11) ಗ್ರಾಮ ಪಂಚಾಯಿತಿ ವ್ಯಾಪ್ತಿಯ ಒಬ್ಬ ಅಂಗನವಾಡಿ ಕಾರ್ಯಕರ್ತೆ (ಇವರನ್ನು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ನೇಮಿಸುವುದು) ಸದಸ್ಯರು
(12) ಸಂಬಂಧ ಪಟ್ಟ ಗ್ರಾಮ ಪಂಚಾಯತಿಯ ಪಂಚಾಯತ್ ಅಭಿವೃದ್ಧಿ ಅಧಿಕಾರಿ / ಪ ಂಚಾಯತಿ ಕಾರ್ಯದರ್ಶಿ ಗ್ರೇಡ್-1. ಸದಸ್ಯ ಕಾರ್ಯದರ್ಶಿ

(2) ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಗ್ರಾಮ ಪಂಚಾಯತಿಯಲ್ಲಿ ಅವರುಗಳ ಸದಸ್ಯತ್ವ/ಪದಾಧಿಕಾರಿ ಹುದ್ದೆ ನಿಂತುಹೋಗುವವರೆಗೆ ಅಥವಾ ರದ್ದಾಗುವವರೆಗೆ ಇವೆರಡರಲ್ಲಿ ಯಾವುದು ಮೊದಲೋ, ಅಲ್ಲಿಯವರೆಗೆ ಅಧಿಕಾರವನ್ನು ಹೊಂದಿರತಕ್ಕದ್ದು.

(3) ಇತರ ನಾಮ ನಿರ್ದೇಶಿತ ಸದಸ್ಯರು ಎರಡು ವರ್ಷ ಅವಧಿ ಹೊಂದಿರತಕ್ಕದ್ದು. (4) ಸಮಿತಿಯು ಎರಡು ತಿಂಗಳಿಗೊಮ್ಮೆ ಅಥವಾ ಅಗತ್ಯವಿದ್ದಾಗ ಅದಕ್ಕೂ ಮೊದಲೆ ಸಭೆ ಸೇರುವುದು.

4. ಸಮಿತಿಯ ಜವಾಬ್ದಾರಿಗಳು.- (1) ಗ್ರಾಮ ಪಂಚಾಯ್ತಿ ಮಟ್ಟದಲ್ಲಿ 18 ವರ್ಷದೊಳಗಿನ ಹೆಣ್ಣು ಮಕ್ಕಳು ಮತ್ತು 21 ವರ್ಷದೊಳಗಿನ ಗಂಡು ಮಕ್ಕಳ ಮಾಹಿತಿ ಇಡಬೇಕು ಹಾಗೂ ಶಾಲೆಯಿಂದ ಹೊರಗುಳಿದಿರುವ ಮಕ್ಕಳ ಅಂಕಿ ಸಂಖ್ಯೆಗಳನ್ನು ದಾಖಲಿಸಿಕೊಂಡಿರಬೇಕು.

(2) ಪಂಚಾಯತಿ ಕಛೇರಿ, ಶಾಲೆ, ಪೊಲೀಸ್, ಅಂಗನವಾಡಿ ಮಹಿಳಾ ಸ್ವಸಹಾಯ ಸಂಘಗಳು, ಯುವ ಸಂಘಟನೆಗಳು ಮಕ್ಕಳ ಆರೋಗ್ಯ, ಶೈಕ್ಷಣಿಕ ಮಟ್ಟ ಹಾಗೂ ಕ್ರಿಡಾ ಚಟುವಟಿಕೆಗಳ ಮತ್ತು ಕೌಟುಂಬಿಕ ಹಿನ್ನೆಲೆಗಳ ಬಗ್ಗೆ ಪರಸ್ಪರ ವಿಚಾರ ವಿನಿಮಯ ಮಾಡಿಕೊಳ್ಳುವುದು.

(3) ಅನೈತಿಕ ಸಾಗಾಣಿಕೆಗೆ ಒಳಗಾದ ಮಹಿಳೆಯರಿಗೆ ಮತ್ತು ಮಕ್ಕಳಿಗೆ ರಕ್ಷಣೆ ನೀಡುವುದು ಮತ್ತು ಅವರಿಗೆ ಹಾಗೂ ಅವರ ಕುಟುಂಬಗಳಿಗೆ ಆರ್ಥಿಕ, ನೈತಿಕ, ಸಾಮಾಜಿಕ, ವೈದ್ಯಕೀಯ ಹಾಗೂ ಶೈಕ್ಷಣಿಕ ನೆರವು ದೊರೆಯುವಂತೆ ಮಾಡುವುದು.

(4) ಸಮುದಾಯದ ಎಲ್ಲರ ಭಾಗವಹಿಸುವಿಕೆಯೊಂದಿಗೆ ಮಹಿಳೆಯರು ಮತ್ತು ಮಕ್ಕಳ ಅನೈತಿಕ ಸಾಗಾಣಿಕೆಯನ್ನು ನಿಷೇಧಿಸುವ ಹಾಗೂ ಇಂಥಹ ಚಟುವಟಿಕೆಯ ಮೇಲೆ ನಿಗಾ ವಹಿಸುವುದು.

(5) ಮಹಿಳೆಯರು ಮತ್ತು ಮಕ್ಕಳ ಸಾಗಾಣಿಕೆ ತಡೆಯಲು ಗ್ರಾಮ ಮಟ್ಟದಲ್ಲಿ ಅರಿವು ಮೂಡಿಸಲು ಕಾರ್ಯಕ್ರಮ ಹಮ್ಮಿಕೊಳ್ಳುವುದು. ಸಾಗಾಣಿಕೆ ತಡೆಯಲು ಪ್ರಚಾರಕ್ಕಾಗಿ ಮಾಹಿತಿ ಸಂಗ್ರಹಿಸಿ, ಉತ್ತಮವಾದ ಸಾಮಾಜಿಕ ವ್ಯವಸ್ಥೆಗಾಗಿ ಬೇಕಾದ ಸಂಪನ್ಮೂಲಗಳ ಕ್ರೋಡಿಕರಣಗೊಳಿಸುವುದು.

(6) ಮಹಿಳೆಯರು ಮತ್ತು ಮಕ್ಕಳ ಅನೈತಿಕ ಸಾಗಾಣಿಕೆ ವಿರುದ್ಧ ಶಾಲೆಗಳಲ್ಲಿ ಮಕ್ಕಳಿಗೆ ಅರಿವು ಮತ್ತು ಜಾಗೃತಿ ಮೂಡಿಸುವುದು.

೨೭೬೮ ಕ£ಾಟಕ (cid:170)ಾಜ(cid:205)ಪತ(cid:206),ಗುರು(cid:174)ಾರ, ೧೭,(cid:177)ೆ(cid:164)ೆ(cid:190)ಂಬ(cid:349), 2020 ಭಾಗ ೪ಎ

(7) ಗ್ರಾಮಗಳಲ್ಲಿ ಮತ್ತು ಶಾಲೆಗಳ ಬಳಿ ಅನುಮಾನಸ್ಪದವಾಗಿ ಸಂಚರಿಸುವ ಹೊಸ ವ್ಯಕ್ತಿಗಳ ಬಗ್ಗೆ ಸಮಿತಿಯ ಸದಸ್ಯರು ನಿಗಾ ವಹಿಸುವುದು. ಅನುಮಾನ ಖಾತರಿಗೊಂಡಲ್ಲಿ ಸ್ಥಳೀಯ ಪೊಲೀಸರಿಗೆ ದೂರು ದಾಖಲಿಸುವುದು.

(8) ಗ್ರಾಮದಿಂದ ಕಾಣೆಯಾದ ಮಹಿಳೆಯರ ಮತ್ತು ಮಕ್ಕಳ ದಾಖಲೆ ಇಡುವುದು.

(9) ವಲಸೆ ಹೋದ ಕುಟುಂಬದವರ ಮಾಹಿತಿ ಇಡುವುದು ಮತ್ತು ಈ ಕುಟುಂಬದವರು ವಲಸೆ ಹೋಗಿರುವ ಪ್ರದೇಶದಲ್ಲಿ ಕುಟುಂಬ ನಿರ್ವಹಣೆಗಾಗಿ ಅನುಸರಿಸುತ್ತಿರುವ ಜೀವನದ ಬಗ್ಗೆ ಲಭ್ಯ ಮಾಹಿತಿಗಳನ್ನು ಅವರ ಪರಿಚಯಸ್ಥರಿಂದ ಪಡೆದುಕೊಳ್ಳುತ್ತಿರಬೇಕು. ಅವರುಗಳು ಹಿಂತಿರುಗಿದ ನಂತರ ಅವರೊಂದಿಗೆ ಇದ್ದ ಸದಸ್ಯರುಗಳೆಲ್ಲರೂ ಹಿಂತಿರುಗಿರುವ ಬಗ್ಗೆ ಖಾತರಿಪಡಿಸಿಕೊಳ್ಳುವುದು.

(10) ಬಾಲ್ಯವಿವಾಹದಿಂದ ಉಂಟಾಗುವ ದುಷ್ಪರಿಣಾಮಗಳ ಮತ್ತು ಬಾಲ್ಯವಿವಾಹ ನಿಷೇಧದ ಕಾನೂನಿನ ಬಗ್ಗೆ ವ್ಯಾಪಕ ಪ್ರಚಾರ ಕೈಗೊಳ್ಳುವುದು.

(11) ಗ್ರಾಮದಲ್ಲಿ ಯಾವುದೇ ಬಾಲ್ಯವಿವಾಹ ನಡೆಯುತ್ತಿರುವುದು ಕಂಡುಬಂದಲ್ಲಿ ಕೂಡಲೇ ಸಂಬಂಧಪಟ್ಟ ಬಾಲ್ಯವಿವಾಹ ನಿಷೇಧಾಧಿಕಾರಿಗಳ ಗಮನಕ್ಕೆ ತಂದು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸುವ ಪ್ರಕ್ರಿಯೆ ಒಳಗೊಂಡಂತೆ ಅಗತ್ಯವಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳುವುದು.

(12) ಬೇಸಿಗೆ ರಜೆ ಅವಧಿ ಮುಗಿದ ನಂತರ ಶಾಲೆಗೆ ದಾಖಲಾದ/ದಾಖಲಾಗಬೇಕಾದ ಮಕ್ಕಳ ಸಮೀಕ್ಷೆ ನಡೆಸುವುದು.

(13) ಸಾರ್ವಜನಿಕ ಶಿಕ್ಷಣ ಇಲಾಖೆಯೊಂದಿಗೆ ಸಹಕರಿಸಿ ಶಾಲೆಯಿಂದ ಹೊರಗುಳಿದ ಮಕ್ಕಳ ಪೋಷಕರ ಮನವೋಲಿಸಿ, ಶಾಲೆಗೆ ಮರಳಿ ದಾಖಲಾಗುವ ಬಗ್ಗೆ ಕ್ರಮ ವಹಿಸುವುದು.

(14) ಗ್ರಾಮ ಸಭೆಗಳಲ್ಲಿ ಮಕ್ಕಳ ವಿದ್ಯಾಭ್ಯಾಸದ ಮಹತ್ವ ಮತ್ತು ವಿವಿಧ ಇಲಾಖೆಗಳಿಂದ ಸಿಗುವ ಸೌಲಭ್ಯ ಮುಂತಾದವುಗಳನ್ನು ಸಾರ್ವಜನಿಕರ ಗಮನಕ್ಕೆ ತರುವುದು.

(15) ಶಾಲೆಯಿಂದ ಹೊರಗುಳಿದ ಪ್ರಾಯಪೂರ್ವ ಮಕ್ಕಳಿಗೆ ವಿವಿಧ ರೀತಿಯ ಕೌಶಲ್ಯ ತರಬೇತಿಯನ್ನು ನೀಡಲು ಕ್ರಮವಹಿಸುವುದು.

(16) ಉತ್ತಮ ಅಂಕಗಳನ್ನು ಪಡೆದ ಮಕ್ಕಳನ್ನು ಗ್ರಾಮ ಸಭೆಗಳಲ್ಲಿ ಗುರುತಿಸಿ ಗ್ರಾಮ ಪಂಚಾಯತಿಯಿಂದ ಬಹುಮಾನ ಕೊಡುವ ಮೂಲಕ ಪ್ರೋತ್ಸಾಹಿಸುವುದು.

(17) ಹೆಣ್ಣುಮಕ್ಕಳ ದಾಖಲಾತಿ ಹೆಚ್ಚಿರುವ ಶಾಲೆಗಳನ್ನು ಗುರುತಿಸಿ, ಗ್ರಾಮ ಸಭೆಗಳಲ್ಲಿ ಸನ್ಮಾನಿಸುವುದು.

(18) ಗ್ರಾಮ ಸಭೆಗಳ ಮೂಲಕ ಉತ್ತಮ ಶಿಕ್ಷಣ ತಜ್ಞರಿಂದ ವಿದ್ಯಾಭ್ಯಾಸದ ಮಹತ್ವದ ಕುರಿತು ಮಕ್ಕಳಿಗೆ ಮತ್ತು ಪೋಷಕರಿಗೆ ಅರಿವು ಮೂಡಿಸುವುದು.

(19) 7ನೇ ತರಗತಿಯಿಂದ 8ನೇ ತರಗತಿ ಮತ್ತು 10ನೇ ತರಗತಿಯಿಂದ ಪಿಯುಸಿ ತರಗತಿಗಳಿಗೆ ಮಕ್ಕಳು ದಾಖಲಾಗುವಂತೆ ಸಮಿತಿಯ ಸದಸ್ಯರು ಖಚಿತಪಡಿಸಿಕೊಳ್ಳುವುದು.

(20) ಪಂಚಾಯತ್ ವ್ಯಾಪ್ತಿಯಲ್ಲಿ ಸರಕಾರಿ ಸೌಲಭ್ಯಗಳನ್ನು ನೀಡುವಾಗ ಫಲಾನುಭವಿಗಳಿಂದ ಅವರ ಕುಟುಂಬಗಳಲ್ಲಿ ಬಾಲ ಕಾರ್ಮಿಕದಂತಹ ಅನಿಷ್ಠ ಪದ್ಧತಿಯನ್ನು ಅನುಸರಿಸುವುದಿಲ್ಲವೆಂದು ಕರಾರು ಪತ್ರ ಬರೆಯಿಸಿಕೊಳ್ಳುವುದು.

(21) ಮಕ್ಕಳನ್ನು ದುಡಿಸುವ ಮಾಲೀಕರುಗಳಿಗೆ ಮತ್ತು ಅವರಿಗೆ ಸಹಕರಿಸುವವರ ವಿರುದ್ಧ ಕ್ರಮ ಜರುಗಿಸಲು ಸಂಬಂಧಪಟ್ಟ ಇಲಾಖೆಗೆ ಹಾಗೂ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡುವುದು.

(22) ಗ್ರಾಮ ಪಂಚಾಯತ್ ವ್ಯಾಪ್ತಿಯ 18 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡಲು ಸಮುದಾಯದ, ವಿವಿಧ ಇಲಾಖೆಗಳ, ಸ್ಥಳೀಯ ನಾಗರಿಕ ಸಂಘ ಸಂಸ್ಥೆಗಳಿಂದ ಅಗತ್ಯ ನೆರವನ್ನು ಪಡೆದುಕೊಳ್ಳುವುದು.

ಪ್ರತಿಭಾವಂತ ಬಡ ವಿದ್ಯಾರ್ಥಿಗಳನ್ನು ಗುರುತಿಸಿ, ಅವರುಗಳ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಅನುವಾಗುವಂತೆ ವಿವಿಧ ರೀತಿಯ ಸಹಾಯಗಳನ್ನು ಸಂಘ ಸಂಸ್ಥೆಗಳಿಂದ, ಸ್ಥಳೀಯ ಕೈಗಾರಿಕೋದ್ಯಮಿಗಳಿಂದ ಪಡೆದುಕೊಳ್ಳಲು ಪ್ರಯತ್ನಿಸುವುದು.

ಭಾಗ ೪ಎ ಕ£ಾಟಕ (cid:170)ಾಜ(cid:205)ಪತ(cid:206),ಗುರು(cid:174)ಾರ, ೧೭,(cid:177)ೆ(cid:164)ೆ(cid:190)ಂಬ(cid:349), 2020 ೨೭೬೯

(23) ಗ್ರಾಮ ಪಂಚಾಯತ್ ಮಟ್ಟದಲ್ಲಿ ರೈತರು / ಕಾರ್ಮಿಕರು ಹೊಲ, ಗದ್ದೆ, ಜೀತ, ಸಂಬಳಕ್ಕೆ 18 ವರ್ಷದೊಳಗಿನ ಮಕ್ಕಳನ್ನು ದುಡಿಸದಂತೆ ಹಾಗೂ ದನ, ಕುರಿ, ಎಮ್ಮೆ ಮೇಯಿಸಲು ಮಕ್ಕಳನ್ನು ಬಳಸದಂತೆ ನಿರಂತರ ನಿಗಾವಹಿಸಿ 18 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ನಿರಂತರ ಶಿಕ್ಷಣ ದೊರೆಯುವಂತೆ ಕ್ರಮ ಕೈಗೊಳ್ಳುವುದು.

(24) ವಿಕೃತ ಮೂಡನಂಬಿಕೆಗಳಿಗೆ ಮತ್ತು ಇತರೆ ಕಂದಾಚಾರಗಳಿಗೆ 18 ವರ್ಷದೊಳಗಿನ ಮಕ್ಕಳು ಬಲಿಯಾಗದಂತೆ ರಕ್ಷಣೆ ನೀಡುವುದು ಹಾಗೂ ಈ ಕುರಿತು ಸಮುದಾಯದಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು.

(25) ಪೋಷಕರಿಗೆ ಬೇಡವಾದ ಮಕ್ಕಳು ಮತ್ತು ರಸ್ತೆಯಲ್ಲಿ ಅನಾಥವಾಗಿ ಕಂಡು ಬಂದ ಮಕ್ಕಳನ್ನು ಗುರುತಿಸಿ, ಮಾಹಿತಿಯನ್ನು ಮಕ್ಕಳ ಕಲ್ಯಾಣ ಸಮಿತಿಗೆ ನೀಡುವುದು. ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಕುಟುಂಬಗಳಲ್ಲಿ ರಕ್ಷಣೆಯಿಲ್ಲದೇ, ಒಬ್ಬಂಟಿಯಾಗಿರುವ ಹೆಣ್ಣು ಮಕ್ಕಳನ್ನು ಗುರುತಿಸುವುದು ಹಾಗೂ ಪೋಷಕರುಗಳ ದುಶ್ಚಟದಿಂದಾಗಿ ರಕ್ಷಣೆ ಇಲ್ಲದ ಮಕ್ಕಳನ್ನು ಗುರುತಿಸಿ ಅಂಥಹ ಕುಟುಂಬದ ಮಕ್ಕಳ ವಿವರ ಮತ್ತು ಮಾಹಿತಿಯನ್ನು ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ತಿಳಿಸುವುದು. ಸಂಕಷ್ಟದಲ್ಲಿರುವ ಮಹಿಳೆ/ಹೆಣ್ಣು ಮಕ್ಕಳು ಗರ್ಭಿಣಿಯಾದಾಗ ಅವರನ್ನು ನಿರಂತರವಾಗಿ ಅನುಸರಣೆ ಮಾಡುವುದು ಹಾಗೂ ಮಕ್ಕಳ ಪೋಷಣೆಯ ಬಗ್ಗೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ತಿಳಿಸುವುದು.

(26) ಮಕ್ಕಳಿಗೆ ಸಂಬಂಧಿಸಿದ ಎಲ್ಲಾ ವಿಷಯಗಳನ್ನು ಪರಿಶೀಲಿಸಿ, ಅವುಗಳಲ್ಲಿನ ಸಮಸ್ಯೆಗಳನ್ನು ಗುರುತಿಸಿ ಪರಿಹರಿಸಲು ನೆರವಾಗುವುದು.

(27) ಲೈಂಗಿಕ ದೌರ್ಜನ್ಯಕ್ಕೊಳಗಾದ ಮಕ್ಕಳು ಕಂಡುಬಂದಲ್ಲಿ, ಮಗುವಿಗೆ ರಕ್ಷಣೆ ನೀಡಿ ತಕ್ಷಣ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸುವುದು.

(28) ಕಡ್ಡಾಯವಾಗಿ ಮಕ್ಕಳ ಗ್ರಾಮ ಸಭೆ ನಡೆಸಲು ಮತ್ತು ಸದರಿ ಸಭೆಯಲ್ಲಿ ಚರ್ಚಿಸಿದ ಅಂಶಗಳ ಬಗ್ಗೆ ಕ್ರಮ ಕೈಗೊಳ್ಳುವುದು.

(29) ಮಕ್ಕಳಿಗೆ ಸಂಬಂಧಿಸಿದ ಸೂಕ್ತ ಯೋಜನೆಗಳಲ್ಲಿ ಅವಶ್ಯಕವಾದ ಸೌಲಭ್ಯ ಪರಿಹಾರ, ಪುನರ್ವಸತಿ ಮತ್ತು ಪರ್ಯಾಯ ವ್ಯವಸ್ಥೆಗಳನ್ನು ಆಯಾ ಇಲಾಖೆಗಳ ಅನುಸಾರವಾಗಿ ಮಕ್ಕಳಿಗೆ / ಕುಟುಂಬಗಳಿಗೆ ಒದಗಿಸುವುದು.

(30) ಗ್ರಾಮ ಪಂಚಾಯಿತಿಯ ಪ್ರತಿ ಶಾಲೆಗಳಲ್ಲಿ ಮಕ್ಕಳ ಹಕ್ಕುಗಳ ಕ್ಲಬ್/ಮೀನಾ ತಂಡ (ಬಾಲಕಿಯರ ಗುಂಪು) ಮಕ್ಕಳ ಸುರಕ್ಷಾ ಸಮಿತಿಗಳ ಕಾರ್ಯ ವೈಖರಿಯ ಬಗ್ಗೆ ಮೇಲ್ವಿಚಾರಣೆ ಮಾಡುವುದು ಮತ್ತು ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಶೌಚಾಲಯ, ವಿಕಲಚೇತನ ಮಕ್ಕಳಿಗೆ ಅನುವಾಗುವ ಶೌಚಾಲಯ ಹಾಗೂ ಇತರೆ ಮೂಲಭೂತ ಸೌಕರ್ಯಗಳು ಲಭ್ಯವಾಗುವಂತೆ ನೋಡಿಕೊಳ್ಳುವುದು.

5. ಅಧಿಕೃತ ಸಂವಹನ ಮತ್ತು ಒಪ್ಪಂದಗಳು.- (1) ಸದಸ್ಯ ಕಾರ್ಯದರ್ಶಿಯು ಸಮಿತಿಯ ಪೂರ್ವಾನುಮೋದನೆಯನ್ನು ಪಡೆದು ನಿಯಮ 4ರಲ್ಲಿ ನಿರ್ದಿಷ್ಟ ಪಡಿಸದ ಯಾವುದೇ ಪ್ರಕಾರ್ಯಗಳನ್ನು ನಿರ್ವಹಿಸಲು ಸಮಿತಿಯ ಪರವಾಗಿ ಲಿಖಿತ ಒಪ್ಪಂದಗಳನ್ನು ಮಾಡಿಕೊಳ್ಳತಕ್ಕದ್ದು.

(2)ಸಮಿತಿಯ ಎಲ್ಲಾ ಅಧಿಕೃತ ಪತ್ರಗಳಿಗೆ ಸದಸ್ಯ ಕಾರ್ಯದರ್ಶಿಯು ಸಹಿ ಮಾಡತಕ್ಕದ್ದು.

6. ಆರ್ಥಿಕ ವ್ಯವಹಾರಗಳ ನಿರ್ವಹಣೆ .- (1) ಮಹಿಳೆಯರು ಮತ್ತು ಮಕ್ಕಳ ರಕ್ಷಣೆಯ ಕಾವಲು ಸಮಿತಿಯು ಮಕ್ಕಳ ಸಾಗಾಣಿಕೆ ತಡೆಗಟ್ಟುವಿಕೆ ಅಧಿನಿಯಮ ಹಾಗೂ ಬಾಲ್ಯವಿವಾಹ ನಿಷೇಧ ಅಧಿನಿಯಮ ಮತ್ತು ಸಮಗ್ರ ಮಕ್ಕಳ ರಕ್ಷಣಾ ಯೋಜನೆಯ ಅಧಿನಿಯಮದಡಿ ಬಿಡುಗಡೆಯಾಗುವ ಅನುದಾನವನ್ನು ಕರ್ನಾಟಕ ಪಂಚಾಯತ್ ರಾಜ್ (ಗ್ರಾಮ ಪಂಚಾಯತಿಗಳ ಆಯವ್ಯಯ ಮತ್ತು ಲೆಕ್ಕಪತ್ರಗಳು) ನಿಯಮಗಳು 2006ರ ಅನುಸಾರ ವೆಚ್ಚ ಮಾಡುವುದು. ಗ್ರಾಮ ಮಟ್ಟದ ಸಮಿತಿಯ ಅಧಕ್ಷರು ಮತ್ತು ಸದಸ್ಯ ಕಾರ್ಯದರ್ಶಿಯವರ ಹೆಸರಿನಲ್ಲಿ ರಾಷ್ಟ್ರೀಕೃತ / ಷೆಡ್ಯೂಲ್ಡ್ ಬ್ಯಾಂಕ್‌ಗಳಲ್ಲಿ ಜಂಟಿ ಖಾತೆಯನ್ನು ತೆರೆದು ಹಣಕಾಸಿನ ವ್ಯವಹಾರ ನಿರ್ವಹಿಸುವುದು.

೨೭೭೦ ಕ£ಾಟಕ (cid:170)ಾಜ(cid:205)ಪತ(cid:206),ಗುರು(cid:174)ಾರ, ೧೭,(cid:177)ೆ(cid:164)ೆ(cid:190)ಂಬ(cid:349), 2020 ಭಾಗ ೪ಎ

(2) ಜಂಟಿ ಖಾತೆಗೆ ಬಿಡುಗಡೆ ಮಾಡಲಾದ ಅನುದಾನದಲ್ಲಿ ವೆಚ್ಚ ಭರಿಸಿದ ಬಗ್ಗೆ ಲೆಕ್ಕ ಪತ್ರಗಳನ್ನು ಸಮಿತಿಯ ಸದಸ್ಯ ಕಾರ್ಯದರ್ಶಿಯವರು ನಿರ್ವಹಿಸುವುದು. ಸಮಿತಿಯ ಸಭೆಯಲ್ಲಿ ಸದರಿ ಲೆಕ್ಕ ಪತ್ರಗಳನ್ನು ಅಧ್ಯಕ್ಷರು ದೃಡೀಕರಿಸುವುದು ಹಾಗೂ ಸಭೆಯಲ್ಲಿ ಗಮನಕ್ಕೆ ತರುವುದು.

(3) ಅಧ್ಯಕ್ಷರು ಮತ್ತು ಸದಸ್ಯರುಗಳು ಸೇವಾ ಮನೋಭಾವನೆಯಿಂದ ಸಾಮಾಜಿಕ ಕಳಕಳಿಯುಳ್ಳವರಾಗಿ ಯಾವುದೇ ಆರ್ಥಿಕ ಸೌಲಭ್ಯವನ್ನು ನಿರೀಕ್ಷಿಸದೆ ಸಭೆಗಳಲ್ಲಿ ಭಾಗವಹಿಸಬೇಕು ಮತ್ತು ಅವರುಗಳ ಜವಾಬ್ದಾರಿಗಳನ್ನು ನಿರ್ವಹಿಸಬೇಕು.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ

(ಬಿ. ನವೀನ್ ಕುಮಾರ್)

ಸರ್ಕಾರದ ಅಧೀನ ಕಾರ್ಯದರ್ಶಿ (ಜಿ.ಪಂ.) (ಪ್ರ) ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ.

PR-341

ಕರ್ನಾಟಕ ಸರ್ಕಾರ

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ

ಅಧಿಸೂಚನೆ

ಸಂಖ್ಯೆ:ಗ್ರಾಅಪಂರಾ 64 ಜಿಪಸ 2019, ಬೆಂಗಳೂರು, ದಿನಾಂಕ:15-09-2020

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಜಿಲ್ಲಾ ಪಂಚಾಯಿತಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ವಿರುದ್ಧ

ಅವಿಶ್ವಾಸ ಸೂಚನೆ ಮಂಡನೆ) ನಿಯಮಗಳು, 2020

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993 (1993ರ ಕರ್ನಾಟಕ ಅಧಿನಿಯಮ ಸಂಖ್ಯೆ 14)ರ ಪ್ರಕರಣ 311 ಹಾಗೂ ಪ್ರಕರಣ 179 (3)ರಲ್ಲಿ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಈ ಕೆಳಕಂಡ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಜಿಲ್ಲಾ ಪಂಚಾಯಿತಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ವಿರುದ್ಧ ಅವಿಶ್ವಾಸ ಸೂಚನೆ ಮಂಡನೆ) ನಿಯಮಗಳು, 2020ರ ಕರಡನ್ನು ಸದರಿ ಅಧಿನಿಯಮದ ಪ್ರಕರಣ 311ನೇ ಪ್ರಕರಣದ ಉಪ-ಪ್ರಕರಣ (1)ರಡಿಯಲ್ಲಿ ಅಗತ್ಯಪಡಿಸಲಾದಂತೆ, ಅದರಿಂದ ಬಾಧಿತರಾಗಬಹುದಾದ ವ್ಯಕ್ತಿಗಳ ಮಾಹಿತಿಗಾಗಿ ದಿನಾಂಕ:13.08.2020 ರಂದು ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಿಸಿರುವುದರಿಂದ,

ಕರಡು ನಿಯಮಗಳಿಗೆ ಸಲ್ಲಿಸಿರುವ ಆಕ್ಷೇಪಣೆಗಳನ್ನು ಕಾನೂನಿನ ಪ್ರಕಾರ ಪರಿಶೀಲಿಸಿ ವಿಲೇಪಡಿಸಿರುವುದರಿಂದ, ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 179(3)ರಲ್ಲಿ ನಿಗದಿಪಡಿಸಿರುವಂತೆ ನಿಯಮಗಳನ್ನು ಪ್ರಕಟಿಸಿದೆ.

ಭಾಗ ೪ಎ ಕ£ಾಟಕ (cid:170)ಾಜ(cid:205)ಪತ(cid:206),ಗುರು(cid:174)ಾರ, ೧೭,(cid:177)ೆ(cid:164)ೆ(cid:190)ಂಬ(cid:349), 2020 ೨೭೭೧

ನಿಯಮಗಳು

1.ಹೆಸರು ಮತ್ತು ಪ್ರಾರಂಭ .-(1) ಈ ನಿಯಮಗಳನ್ನು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಜಿಲ್ಲಾ ಪಂಚಾಯಿತಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ವಿರುದ್ಧ ಅವಿಶ್ವಾಸ ಸೂಚನೆ ಮಂಡನೆ) ನಿಯಮಗಳು, 2020 ಎಂದು ಕರೆಯತಕ್ಕದ್ದು.

(2) ಇವು ಕೂಡಲೇ ಜಾರಿಗೆ ಬರತಕ್ಕದ್ದು.

2.ಪರಿಭಾಷೆಗಳು.-(1) ಈ ನಿಯಮಗಳಲ್ಲಿ ಸಂದರ್ಭಕ್ಕೆ ಬೇರೆ ಅರ್ಥದ ಅಗತ್ಯವಿರದಿದ್ದರೆ.-

(ಎ) "ಅಧಿನಿಯಮ" ಎಂದರೆ 1993 ರ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ (1993ರ ಕರ್ನಾಟಕ ಅಧಿನಿಯಮ ಸಂಖ್ಯೆ14);

(ಬಿ)"ತತ್ಸಮಾನ ಹುದ್ದೆಯ ಅಧಿಕಾರಿ" ಎಂದರೆ ಸರ್ಕಾರದ ಅಧಿಸೂಚನೆಯ ಮೂಲಕ ಈ ಪರವಾಗಿ ಅಧಿಕಾರ ಪಡೆದ ಪ್ರಾದೇಶಿಕ ಆಯುಕ್ತರಿಗೆ ತತ್ಸಮಾನ ಅಧಿಕಾರಿ.

(ಸಿ) "ನಮೂನೆ" ಎಂದರೆ ಈ ನಿಯಮಗಳಿಗೆ ಅನುಬಂಧಿಸಿದ ನಮೂನೆ;

(ಡಿ) "ಪ

್ರಕರಣ" ಎಂದರೆ ಅಧಿನಿಯಮದ ಪ್ರಕರಣ.

(2) ಈ ನಿಯಮಗಳಲ್ಲಿ ಬಳಸಲಾದ ಆದರೆ ವ್ಯಾಖ್ಯಾನಿಸಲಾದ ಇತರ ಪದಗಳು ಮತ್ತು ಅಭಿವ್ಯಕ್ತಿಗಳು ಕಾಯ್ದೆಯಲ್ಲಿ ಅವರಿಗೆ ನಿಗದಿಪಡಿಸಿದ ಅರ್ಥವನ್ನು ಹೊಂದಿರುತ್ತವೆ.

3)ಅವಿಶ್ವಾಸ ಸೂಚನೆ.- (1) ಜಿಲ್ಲಾ ಪಂಚಾಯಿತಿಯ ಚುನಾಯಿತ ಒಟ್ಟು ಸದಸ್ಯರ ಪೈಕಿ ಅರ್ಧದಷು(cid:190) ಸದಸ್ಯರು ಸಹಿ ಮಾಡಿರುವ ನೋಟೀಸ್‌ನ್ನು ಪ್ರಕರಣ 179ರ ಉಪಪ್ರಕರಣ (3) ರ ಪರಂತುಕದಡಿಯಲ್ಲಿ ಮಂಡಿಸುವ ಉದ್ದೇಶದ ನೋಟೀಸನ್ನು ಬರಹದಲ್ಲಿ ನಮೂನೆ 1ರಲ್ಲಿ ಉದ್ದೇಶಿತ ಸೂಚನೆಯ ಒಂದು ಪ್ರತಿಯೊಂದಿಗೆ ಆ ನೋಟೀಸಿಗೆ ಸಹಿ ಹಾಕಿರುವ ಯಾರಾದರೂ ಇಬ್ಬರು ಸದಸ್ಯರು ಸಂಬಂಧಪಟ್ಟ ಪ್ರಾದೇಶಿಕ ಆಯುಕ್ತರಿಗೆ ಅಥವಾ ತತ್ಸಮಾನ ಹುದ್ದೆಯ ಅಧಿಕಾರಿಗೆ ಖುದ್ದಾಗಿ ಸಲ್ಲಿಸತಕ(cid:180)ದ್ದು.

(2) ಆ ತರುವಾಯ ಪ್ರಾದೇಶಿಕ ಆಯುಕ್ತರು ಅಥವಾ ತತ್ಸಮಾನ ಹುದ್ದೆಯ ಅಧಿಕಾರಿಯು (1)ನೇ ಉಪ-ನಿಯಮದಡಿಯಲ್ಲಿ ನೋಟೀಸನ್ನು ಸ್ವೀಕರಿಸಿದ ದಿನಾಂಕದಿಂದ ಹದಿನೈದು ದಿನಗಳಿಗೆ ಮೀರದಂತೆ ಅವನು ನಿರ್ಧರಿಸಿದ ದಿನಾಂಕದಂದು ಜಿಲ್ಲಾ ಪಂಚಾಯಿತಿಯ ಕಛೇರಿಯಲ್ಲಿ ಅವಿಶ್ವಾಸ ಸೂಚನೆಯ ಪರ್ಯಾಲೋಚನೆಗಾಗಿ ಸಭೆಯನ್ನು ಕರೆಯತಕ್ಕದ್ದು. ಅವನು ಅಂತಹ ಸಭೆಯ ಬಗ್ಗೆ ಉಪ- ನಿಯಮ (3) ರಲ್ಲಿ ನಿರ್ಧಿಷ್ಟಪಡಿಸಿದ ರೀತಿಯಲ್ಲಿ ಹತ್ತು ಪೂರ್ಣ ದಿನಗಳಿಗೆ ಕಡಿಮೆ ಇಲ್ಲದ ದಿನಾಂಕದ ನೋಟೀಸನ್ನು ನಮೂನೆ 2ರಲ್ಲಿ ಜಿಲ್ಲಾ ಪಂಚಾಯಿತಿಯ ಚುನಾಯಿತ ಸದಸ್ಯರಿಗೆ ಕೊಡತಕ್ಕದ್ದು;

ಪರಂತು, ಅಂತಹ ಸಭೆ ನಡೆಸುವುದನ್ನು ನ್ಯಾಯಾಲಯದ ಆದೇಶದ ಮೂಲಕ ತಡೆಹಿಡಿದಲ್ಲಿ ಅದನ್ನು ಮುಂದೆ ಹಾಕತಕ್ಕದ್ದು ಮತ್ತು ಸದರಿ ಅಧಿಕಾರಿ ಅಥವಾ ತತ್ಸಮಾನ ಹುದ್ದೆಯ ಅಧಿಕಾರಿಯು ತಡೆಯಾಜ್ಞೆಯನ್ನು ತೆರವು ಮಾಡಿದ ಬಗ್ಗೆ ಅವನು ಮಾಹಿತಿಯನ್ನು ಸ್ವೀಕರಿಸಿದ ದಿನಾಂಕದಿಂದ ಹದಿನೈದು ದಿನಗಳನ್ನು ಮೀರದ ದಿನಾಂಕದಂದು ಮುಂದಕ್ಕೆ ಹಾಕಲಾದ ಅಂತಹ ಸಭೆಯ ಬಗ್ಗೆ ಹತ್ತು ಪೂರ್ಣ ದಿನಗಳಿಗೆ ಕಡಿಮೆ ಇಲ್ಲದ ದಿನಾಂಕದ ನೋಟೀಸನ್ನು ಜಿಲ್ಲಾ ಪಂಚಾಯಿತಿಯ ಚುನಾಯಿತ ಸದಸ್ಯರಿಗೆ ಉಪ ನಿಯಮ (3)ರಲ್ಲಿ ನಿರ್ದಿಷ್ಟಪಡಿಸಿದ ರೀತಿಯಲ್ಲಿ ಕೊಟ್ಟ ತರುವಾಯ ಮುಂದೆ ಹಾಕಿದ ಆ ಸಭೆಯನ್ನು ನಡೆಸತಕ್ಕದ್ದು.

೨೭೭೨ ಕ£ಾಟಕ (cid:170)ಾಜ(cid:205)ಪತ(cid:206),ಗುರು(cid:174)ಾರ, ೧೭,(cid:177)ೆ(cid:164)ೆ(cid:190)ಂಬ(cid:349), 2020 ಭಾಗ ೪ಎ

ಮತ್ತು ಪರಂತು, ಮೇಲೆ ತಿಳಿಸಿದ ರೀತಿಯಲ್ಲಿ ನಿಗಧಿಗೊಳಿಸಿದ ದಿನಾಂಕದಂದು ಅ(cid:298)(cid:312)ೕಕ್ಷಿತ ಕಾರಣಗಳಿಂದಾಗಿ ಸಾರ್ವಜನಿಕ ರಜೆ ಘೋಷಿಸಿದ್ದರೆ, ನಿಗಧಿಗೊಳಿಸಿದ ದಿನಾಂಕದ ಮಾರನೆಯ ಕರ್ತವ್ಯ ದಿನಾಂಕದಂದು ಸಭೆಯನ್ನು ಏರ್ಪಡಿಸುವುದು.

(3)ಪ್ರಾದೇಶಿಕ ಆಯುಕ್ತರು ಅಥವಾ ತತ್ಸಮಾನ ಹುದ್ದೆಯ ಅಧಿಕಾರಿಯು ನಮೂನೆ-2 ರಲ್ಲಿ ನೋಟೀಸನ್ನು ಅಧ್ಯಕ್ಷ ಮತ್ತು ಉಪಾಧ್ಯಕ್ಷನು ಸೇರಿದಂತೆ ಪ್ರತಿಯೊಬ್ಬ ಜಿಲ್ಲಾ ಪಂಚಾಯಿತಿಯ ಚುನಾಯಿತ ಸದಸ್ಯನಿಗೆ ಈ ಕೆಳಕಂಡ ವಿಧಾನವನ್ನು ಅನುಸರಿಸಿ ನೀಡತಕ್ಕದ್ದು.ಅಂದರೆ,-

(ಎ) ಸದರಿ ನೋಟೀಸನ್ನು ಅಂತಹ ಸದಸ್ಯನಿಗೆ ನೇರವಾಗಿ ಕೊಡುವುದರ ಮೂಲಕ;

ಅಥವಾ

(ಬಿ)ಅಂತಹ ಸದಸ್ಯನುಮುಖತಃಸಿಗದಿದ್ದರೆ ಅಂತಹ ನೋಟೀಸನ್ನು ಜಿಲ್ಲಾ ಪಂಚಾಯಿತಿಯ ವ್ಯಾಪ್ತಿಯಲ್ಲಿ ಅವನು ವಾಸಿಸುತ್ತಿದ್ದಾನೆಂದು ತಿಳಿದು ಬಂದ ಕೊನೆಯ ವಾಸಸ್ಥಳ ಅಥವಾ ವ್ಯವಹಾರದ ಸ್ಥಳದಲ್ಲಿ ಇರುವ ಅವನ ಕುಟುಂಬದ ಯಾರಾದರೊಬ್ಬ ವಯಸ್ಕ ಸದಸ್ಯರಿಗೆ ಅಥವಾ ನೌಕರನಿಗೆ ಕೊಡುವುದರ ಮೂಲಕ ಅಥವಾ ಕೊಡ ಮಾಡುವುದರ ಮೂಲಕ; ಅಥವಾ

(ಸಿ) ನೋಂದಾಯಿತ ಅಂಚೆಯ ಮೂಲಕ; ಅಥವಾ ಇ-ಮೇಲ್ ಅಥವಾ

(ಡಿ) ಮೇಲೆ ಹೇಳಿದ ಯಾವುದೇ ವಿಧಾನವು ಲಭ್ಯವಾಗದಿದ್ದಲ್ಲಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯೊಳಗೆ ಆ ಸದಸ್ಯನು ಹಿಂದೆ ವಾಸವಾಗಿದ್ದನೆಂದು ಅಥವಾ ವ್ಯವಹಾರವನ್ನು ನಡೆಸುತ್ತಿದ್ದನೆಂದು ತಿಳಿದು ಬಂದ ಮನೆ ಅಥವಾ ವ್ಯವಹಾರದ ಸ್ಥಳ ಯಾವುದಾದರೂ ಇದ್ದರೆ ಆ ಮನೆಯ ಎದ್ದು ಕಾಣುವ ಭಾಗದಲ್ಲಿ ಅಂತಹ ನೋಟೀಸನ್ನು ಅಂಟಿಸುವ ಮೂಲಕ-ಕೊಡತಕ್ಕದ್ದು.

(4)ಪ್ರಾದೇಶಿಕ ಆಯುಕ್ತರು ಅಂತ ಸಭೆಯ ಅಧ್ಯಕ್ಷತೆ ವಹಿಸತಕ್ಕದ್ದು, ಅಂತಹ ಸಭೆಗೆ ಕೋರಂ, ಜಿಲ್ಲಾ ಪಂಚಾಯಿತಿಯ ಚುನಾಯಿತ ಸದಸ್ಯರ ಒಟ್ಟು ಸಂಖ್ಯೆಯ ಅರ್ಧದಷ್ಟು ಇರತಕ್ಕದ್ದು.

ವಿವರಣೆ.- ಈ ಉಪ-ನಿಯಮದ ಮೇರೆಗೆ ಒಟ್ಟು ಸದಸ್ಯರ ಸಂಖ್ಯೆಯ ಅರ್ಧದಷ್ಟು ನಿರ್ಧರಿಸುವಾಗ ಬರುವ ಯಾವುದೇ ಭಿನ್ನಾಂಶವನ್ನು ಒಂದು ಎಂದು ಅರ್ಥೈಸತಕ್ಕದ್ದು.

(5) ಅಧಿನಿಯಮದಲ್ಲಿ ಅಥವಾ ಈ ನಿಯಮಗಳಲ್ಲಿ ಅನ್ಯಥಾ ಉಪಬಂಧಿಸಿರುವುದನ್ನು ಹೊರತು ಪಡಿಸಿ ಉಪ-ನಿಯಮ (2)ರಡಿಯಲ್ಲಿ ಅವಿಶ್ವಾಸ ಸೂಚನೆಯನ್ನು ಪರ್ಯಾಲೋಚಿಸುವ ಉದ್ದೇಶಕ್ಕಾಗಿ ಕರೆಯಲಾದ ಸಭೆಯನ್ನು ಯಾವುದೇ ಕಾರಣಕ್ಕಾಗಿ ಮುಂದಕ್ಕೆ ಹಾಕತಕ್ಕದ್ದಲ್ಲ.

(6)(ಎ)ಸಭೆಗಾಗಿ ಗೊತ್ತುಪಡಿಸಲಾದ ಕಾಲ ಮುಗಿದ ತರುವಾಯ ಅರ್ಧ ಘಂಟೆಯೊಳಗೆ ಕೋರಂ ಇಲ್ಲದಿದ್ದರೆ ಆ ಸಭೆಯು ಮುಂದೂಡುವುದು.

(ಬಿ) ನಿಯಮ 6 (ಎ)ರಡಿ ಮುಂದೂಡಲ್ಪಟ್ಟ ಸಭೆಯನ್ನು ಮುಂದಿನ ಏಳು ದಿನಕ್ಕೆ ಮೀರದ ಒಂದು ದಿನಾಂಕಕ್ಕೆ (ರಜಾ ದಿನ ಹೊರತುಪಡಿಸಿ) ನಿಗಧಿಗೊಳಿಸತಕ್ಕದ್ದು. ಇದು ಸಭಾ ನಡವಳಿಯ ಭಾಗವಾಗತಕ್ಕದ್ದು.

(ಸಿ) ಮುಂದೂಡಿದ ಸಭೆಗೆ ಪ್ರತ್ಯೇಕ ನೋಟೀಸನ್ನು ಸಿದ್ಧ ಪಡಿಸಿ ಕಳುಹಿಸುವ ಅಗತ್ಯವಿರುವುದಿಲ್ಲ. ಸಭಾ ನಡವಳಿಯನ್ನು ಜಿಲ್ಲಾ ಪಂಚಾಯಿತಿಯ ಪ್ರಕಟಣಾ ಫಲಕದಲ್ಲಿ ಪ್ರಕಟಿಸತಕ್ಕದ್ದು. ಸಭಾ ನಡವಳಿಯು ಸಭಾ ಸೂಚನೆಯೆಂದು ಭಾವಿಸತಕ್ಕದ್ದು.

(ಡಿ) ಒಂದು ವೇಳೆ ಮುಂದೂಡಲ್ಪಟ್ಟ ಸಭೆಯು ಕೋರಂ ಅಭಾವದಿಂದ ನಡೆಯದಿದ್ದರೆ ಅಧ್ಯಕ್ಷ ಅಥವಾ ಉಪಾಧ್ಯಕ್ಷನ ನಿರ್ಣಯವು ಜಿಲ್ಲಾ ಪಂಚಾಯಿತಿಯಿಂದ ನಕಾರಾತ್ಮಕವಾಗಿದೆಯೆಂದು ಭಾವಿಸತಕ್ಕದ್ದು.

(7)(2)ನೇ ಉಪ-ನಿಯಮದಡಿಯಲ್ಲಿ ಕರೆಯಲಾಗಿರುವ ಸಭೆಯು ಪ್ರಾರಂಭವಾದ ಕೂಡಲೇ ಪ್ರಾದೇಶಿಕ ಆಯುಕ್ತರು ಅಥವಾ ತತ್ಸಮಾನ ಹುದ್ದೆಯ ಅಧಿಕಾರಿಯು ಯಾವ ಸೂಚನೆಯ ಪರ್ಯಾಲೋಚನೆಗಾಗಿ ಸಭೆಯನ್ನು ಕರೆಯಲಾಗಿದೆಯೋ ಆ ಸೂಚನೆಯನ್ನು ಜಿಲ್ಲಾಭಾಗ ೪ಎ ಕ£ಾಟಕ (cid:170)ಾಜ(cid:205)ಪತ(cid:206),ಗುರು(cid:174)ಾರ, ೧೭,(cid:177)ೆ(cid:164)ೆ(cid:190)ಂಬ(cid:349), 2020 ೨೭೭೩ ಪಂಚಾಯಿತಿಯ ಚುನಾಯಿತ ಸದಸ್ಯರಿಗೆ ಓದಿ ಹೇಳತಕ್ಕದ್ದು ಮತ್ತು ಯಾವುದೇ ಚರ್ಚೆ ಇಲ್ಲದೆ ಅದನ್ನು ಮತಕ್ಕೆ ಹಾಕತಕ್ಕದ್ದು.

(8)ಪ್ರಾದೇಶಿಕ ಆಯುಕ್ತರು ಅಥವಾ ತತ್ಸಮಾನ ಹುದ್ದೆಯ ಅಧಿಕಾರಿಯು ಈ ಸೂಚನೆಯ ಗುಣಾವಗುಣಗಳ ಬಗ್ಗೆ ಮಾತನಾಡತಕ್ಕದ್ದಲ್ಲ ಮತ್ತು ಅವನು ಮತ ಕೊಡಲು ಹಕ್ಕುಳ್ಳವನಾಗತಕ್ಕದ್ದಲ್ಲ.

(9)ಮಂಡಿಸಲಾದ ಸೂಚನೆಯು ಜಿಲ್ಲಾ ಪಂಚಾಯಿತಿಯ ಸದಸ್ಯರ ಒಟ್ಟು ಸಂಖ್ಯೆಯಲ್ಲಿ ಮೂರನೇ ಎರಡು ಭಾಗಕ್ಕಿಂತಲೂ ಕಡಿಮೆ ಇಲ್ಲದ ಸದಸ್ಯರ ಬೆಂಬಲದೊಡನೆ ಅಂಗೀಕೃತವಾದರೆ ಸಂದರ್ಭಾನುಸಾರ ಅಧ್ಯಕ್ಷ ಅಥವಾ ಉಪಾಧ್ಯಕ್ಷನು ತಕ್ಷಣ ಹುದ್ದೆಯನ್ನು ತೆರವು ಮಾಡಿರುವುದಾಗಿ ಭಾವಿಸತಕ್ಕದ್ದು ಮತ್ತು ಪ್ರಾದೇಶಿಕ ಆಯುಕ್ತರು ಅಥವಾ ತತ್ಸಮಾನ ಹುದ್ದೆಯ ಅಧಿಕಾರಿಯು ಸಭೆಯ ನಿರ್ಣಯವನ್ನು ಸಭಾ ನಡವಳಿಯ ಪುಸ್ತಕದಲ್ಲಿ ದಾಖಲಿಸತಕ್ಕದ್ದು.

ವಿವರಣೆ: ಈ ಉಪನಿಯಮದ ಮೇರೆಗೆ ಒಟ್ಟು ಸದಸ್ಯರ ಸಂಖ್ಯೆಯ ಮೂರನೇ ಇರಡು ಭಾಗವನ್ನು ನಿರ್ಧರಿಸುವಾಗ ಬರುವ ಯಾವುದೇ ಭಿನ್ನಾಂಶವನ್ನು ಒಂದು ಎಂದು ಅರ್ಥೈಸತಕ್ಕದ್ದು. (10) (9)ನೇ ಉಪ-ನಿಯಮದ ಮೇರೆಗೆ ಅಧ್ಯಕ್ಷ ಅಥವಾ ಉಪಾಧ್ಯಕ್ಷನ ಸ್ಥಾನವು ನಿಂತು ಹೋದಮೇಲೆ ಸಂದರ್ಭಾನುಸಾರ ಅಧ್ಯಕ್ಷ, ಉಪಾಧ್ಯಕ್ಷನುಅವನ ಅಭಿರಕ್ಷೆಯಲ್ಲಿರುವ ಜಿಲ್ಲಾ ಪಂಚಾಯಿತಿಯ ಎಲ್ಲಾ ದಸ್ತಾವೇಜುಗಳು, ಹಣ ಅಥವಾ ಇತರ ಸ್ವತ್ತುಗಳನ್ನು ಕೂಡಲೇ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರಿಗೆ ಒಪ್ಪಿಸತಕ್ಕದ್ದು.

(11)ಪ್ರಾದೇಶಿಕ ಆಯುಕ್ತರು, ಮುಂದುವರೆದು ಸಂದರ್ಭಾನುಸಾರ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯನ್ನು ನಿಯಮಾನುಸಾರ ನಡೆಸಲು ಅಗತ್ಯ ಕ್ರಮ ಕೈಗೊಳ್ಳತಕ್ಕದ್ದು.

ನಮೂನೆ 1

(ನಿಯಮ 3ರ ಉಪ ನಿಯಮ (1) ನ್ನು ನೋಡಿ)

ಗೆ, ಪ್ರಾದೇಶಿಕ ಆಯುಕ್ತರು ಅಥವಾ . . . . . . . . . . . . . . . . . . . . . . . . . .

ಮಾನ್ಯರೆ,

ವಿಷಯ: ---------------ಜಿಲ್ಲಾ ಪಂಚಾಯಿತಿಯ ಅಧ್ಯಕ್ಷ ಅಥವಾ ಉಪಾಧ್ಯಕ್ಷರ ವಿರುದ್ಧ ಅವಿಶ್ವಾಸ ಸೂಚನೆ.

ಈ ಕೆಳಗೆ ಸಹಿ ಮಾಡಿರುವ ………………………ಜಿಲ್ಲಾ ಪಂಚಾಯಿತಿಯಚುನಾಯಿತ ಸದಸ್ಯರುಗಳಾದ ನಾವುಗಳು ಅಧ್ಯಕ ಅಥವಾ ಉಪಾಧ್ಯಕ್ಷನ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993, ಪ್ರಕರಣ 179 (3) ರಡಿ ಅವಿಶ್ವಾಸಗೊತ್ತುವಳಿ ಮಂಡಿಸಲು ನೋಟೀಸ್ ನೀಡುತ್ತಿದ್ದೇವೆ.

ತಮ್ಮ ವಿಶ್ವಾಸಿ,

ಕ ಮ ್ರ ಸಂಖ್ಯೆ ಸದಸ್ಯರ ಹೆಸರು ಕ್ಷೇತ್ರದ ಹೆಸರು ಸಹಿ

ಇತ್ಯಾದಿ೨೭೭೪ ಕ£ಾಟಕ (cid:170)ಾಜ(cid:205)ಪತ(cid:206),ಗುರು(cid:174)ಾರ, ೧೭,(cid:177)ೆ(cid:164)ೆ(cid:190)ಂಬ(cid:349), 2020 ಭಾಗ ೪ಎ

ನಮೂನೆ 2

(ನಿಯಮ 3ರ ಉಪ ನಿಯಮ (2) ನ್ನು ನೋಡಿ)

ನೋಟೀಸು

ವಿಷಯ:---------------ಜಿಲ್ಲಾ ಪಂಚಾಯಿತಿಯ ಅಧ್ಯಕ್ಷ ಅಥವಾ ಉಪಾಧ್ಯಕ್ಷರ ವಿರುದ್ಧ ಅವಿಶ್ವಾಸ ಸೂಚನೆಯ ಬಗ್ಗೆ

********

. . . . . . ..ಜಿಲ್ಲಾ ಪಂಚಾಯಿತಿಯ ಅಧ್ಯಕ್ಷ ಅಥವಾ ಉಪಾಧ್ಯಕ್ಷರಾದ ಶ್ರೀ …………………ರವರ ವಿರುದ್ಧ ಅವಿಶ್ವಾಸ ಸೂಚನೆಯನ್ನು ಪರ್ಯಾಲೋಚಿಸಲು . . . . . . . ದಿನಾಂಕ . . . . . . . ವಾರದ . . . . . . .

ಸಮಯದಂದು ಸದರಿ ಜಿಲ್ಲಾ ಪಂಚಾಯಿತಿಯ………………. ಕಛೇರಿಯಲ್ಲಿ ಸಭೆಯನ್ನು ನಡೆಸಲಾಗುವುದು.

ಆದುದರಿಂದ, ನೀವು ಮೇಲೆ ತಿಳಿಸಲಾದ ದಿನಾಂಕದಂದು ಮತ್ತು ಸ್ಥಳದಲ್ಲಿ ಹಾಗೂ ಆ ಸಮಯಕ್ಕೆ ಸದರಿ ಸಭೆಗೆ ಹಾಜರಾಗಿ ಭಾಗವಹಿಸಲು ಕೋರಿದೆ.

ಪ್ರಾದೇಶಿಕ ಆಯುಕ್ತರು

ಗೆ ಶ್ರೀ/ಶ್ರೀಮತಿ . . . . . . .

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ

ಮತ್ತು ಅವರ ಹೆಸರಿನಲ್ಲಿ,

(ಪಿ.ಶಿವಶಂಕರ್) ನಿರ್ದೇಕರು(ಪಂ.ರಾಜ್) ಹಾಗೂ ಪದನಿಮಿತ್ತ ಸರ್ಕಾರದ ಜಂಟಿ ಕಾರ್ಯದರ್ಶಿ,

ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆ PR-342

No.RDP 64 ZPS 2019 Karnataka Government Secretariat,

Vidhanasoudha, Bengaluru, dated:15-09-2020.

NOTIFICATION

The draft of Karnataka Gram Swaraj and Panchayat Raj (Motion of No-Confidence against Adhyaksha & Upadhyaksha of Zilla Panchayat) Rules, 2020 which the Government of Karnataka proposes to make in exercise of the powers conferred by section311 read with sub-section (3) of section179 of the Karnataka Gram Swaraj and Panchayat Raj Act, 1993 (Karnataka 14 of 1993) is hereby published as required by sub-section (1) of section 311 ofಭಾಗ ೪ಎ ಕ£ಾಟಕ (cid:170)ಾಜ(cid:205)ಪತ(cid:206),ಗುರು(cid:174)ಾರ, ೧೭,(cid:177)ೆ(cid:164)ೆ(cid:190)ಂಬ(cid:349), 2020 ೨೭೭೫ the said Act, for the information for all persons likely to be affected thereby and requested to give objection and suggestion for their said draft rules within 30 days from of its publication in the official Gazette. And whereas, the said Gazette was made available to the public on 13-08-2020.

And whereas, the received objections are examined in accordance with law and disposed.

These rules are published as required under section 179(3) of the Karnataka Grama Swaraj and Panchayath Raj Act 1993.

Rules

1. Title and Commencement. -(1) These rules may be called the Karnataka Gram Swaraj and Panchayat Raj (Motion of No-confidence against Adhyaksha and Upadhyaksha of Zilla Panchayat) Rules, 2020.

(2) They shall come into force on the date of their publication is the official Gazette.

2. Definitions. -(1) In these rules unless the context otherwise requires, -

(a) "Act" means the Karnataka Gram Swaraj and Panchayat Raj Act, 1993 (Karnataka Act 14 of 1993).

(b) "Equivalent Officer" means an officer equivalent to the Regional Commissioner Authorised in this behalf by notification the Government.

(c) "Form" means form appended to these rules; and

(d) "Section" means a section of the Act.

(2) Other Words and expressions used in these rules but not defined shall have the same meaning as assigned to them in the Act.

3. Motion of No-confidence. - (1) A written notice of intention to move the motion under the proviso to sub-Section (3) of Section 179 shall be in Form-I Signed by half of the members of the total elected number of members together with a copy of the proposed motion shall be delivered in person by any two of the members signing the notice to the Regional Commissioner or the equivalent officer as the case may be.

೨೭೭೬ ಕ£ಾಟಕ (cid:170)ಾಜ(cid:205)ಪತ(cid:206),ಗುರು(cid:174)ಾರ, ೧೭,(cid:177)ೆ(cid:164)ೆ(cid:190)ಂಬ(cid:349), 2020 ಭಾಗ ೪ಎ

(2) The Regional Commissioner or the equivalent officer as the case may be shall thereafter convene a meeting for the consideration of the said motion at the office of the Zilla Panchayath on the date appointed by him which shall not be later than fifteen days from the date on which the notice under sub-rule (1) was given to him. He shall give to the members a notice of not less than ten clear days of such meeting in Form II:

Provided that, where the holding of such meeting is stayed by an order of a Court, the Regional Commissioner or the equivalent officer authorized by the Government shall adjourn the said meeting and shall hold the adjourned meeting on a date not later than fifteen days from the date on which he receives the intimation about the vacation of stay, after giving to the members a notice of not less than ten clear days of such adjourned meeting.

Provided also that, if any general holiday is declared for any unforeseen reason on that particular date, if the meeting is not commenced, the said meeting has to be held on next working day.

(3) A notice in Form-II shall be given by the Regional commissioner or the equivalent officer as the case may be to every member including the Adhyaksha and Upadhyaksha in one of the following modes namely: -

(a) by delivering or tendering the said notice to such member; or

(b) if such member is not found, by leaving such notice at his last known place of residence or business within the Zilla Panchayat or by giving or tendering the same to some adult member or servant of his family; or (c) by registered post; or email. or

(d) if none of the means aforesaid be available, by affixing such notice on some conspicuous part of the house, if any, in which the member is known to have last resided or carried on business within the Zilla panchayat area.

ಭಾಗ ೪ಎ ಕ£ಾಟಕ (cid:170)ಾಜ(cid:205)ಪತ(cid:206),ಗುರು(cid:174)ಾರ, ೧೭,(cid:177)ೆ(cid:164)ೆ(cid:190)ಂಬ(cid:349), 2020 ೨೭೭೭

(4) The quorum for such meeting shall be half of the total elected number of members of the Zilla Panchayat. The Regional Commissioner or the equivalent officer as the case may be shall preside over at such meeting.

Explanation. - For determination of half of total elected number of members under this sub-rule any fraction arrived at shall be construed as one.

(5) Save as otherwise provided in the Act or rules made thereunder a meeting convened for the purpose of consideration of a motion under sub-rules (2) shall not be adjourned for any reason.

(6) (a) If there is no quorum, within half an hour after the time specified for the meeting, the meeting shall be adjourned.

(b) The adjourned meeting shall be fixed on any day (expect on General Holiday) within seven days of the adjourned meeting day. This shall be the part of the proceedings.

(c) It is necessary to issue separate notice for this adjourned meeting.

Proceedings of the meeting shall be displayed on the notice board of the Zilla Panchayat office. Proceedings its self shall be deemed to be notice for the next meeting.

(d) If the adjourned meeting is not held for the want of quorum, it is understood that a resolution expressing want of confidence in any Adhyaksha or Upadhyaksha has been negative by the Zilla Panchayat.

(7) As soon as the meeting is convened under sub-rule (2) the Regional Commissioner or the equivalent officer as the case may be shall read to the members of the Zilla Panchayat, the motion of no-confidence for the consideration of which the meeting has been convened and shall put it to vote without any debate.

(8) The Regional Commissioner or the equivalent officer as the case may be shall not speak on the merits of the motion and he shall not be entitled to vote thereon.

೨೭೭೮ ಕ£ಾಟಕ (cid:170)ಾಜ(cid:205)ಪತ(cid:206),ಗುರು(cid:174)ಾರ, ೧೭,(cid:177)ೆ(cid:164)ೆ(cid:190)ಂಬ(cid:349), 2020 ಭಾಗ ೪ಎ

(9) If the motion is passed by a majority of two third of the total number of elected members of the Zilla Panchayath, the Adhyaksha or Upadhyaksha, as the case may be, shall forthwith cease to hold office and function as such and the Regional Commissioner or the equivalent officer as the case may be shall record the proceedings in the proceeding book of the Zilla Panchayat.

Explanation: For determination of two third of total elected number of members under this sub-rule, any fraction arrived at shall be construed as one.

(10) The Adhyaksha or Upadhyaksha as the case may be shall, immediately hand over all documents, cash or other properties of the Zilla Panchayat in his custody to the Chief Executive Officer of the Zilla Panchayat.

(11) The Regional Commissioner shall proceed further as per rules to hold an election to the post of the Adhyaksha or Upadhyaksha, as the case may be.

Form 1

(See Sub-rule (1) of rule 3)

To, The Regional Commissioner or ……………………………………. …………………………. Sir,

Subject: Motion of No-confidence against the Adhyaksha or Upadhyaksha

of …………. Zilla panchayat.

We, the following members of…………………. Zilla Panchayat have signed the this notice and are hereby submitting this notice for moving the no-confidence motion against Adhyaksha or Upadhyaksha of Zilla Panchayat in accordance the provision under sub section (3) of section 179 of the Act.

Yours faithfully,

Sl. No. Name of the member Name of the constituency Signature

Etc.

R.N.I. No. KARBIL/2001/47147 POSTAL REGN. No. RNP/KA/BGS/2202/2017-19

Licensed to post without prepayment WPP No. 297

ಭಾಗ ೪ಎ ಕ£ಾಟಕ (cid:170)ಾಜ(cid:205)ಪತ(cid:206),ಗುರು(cid:174)ಾರ, ೧೭,(cid:177)ೆ(cid:164)ೆ(cid:190)ಂಬ(cid:349), 2020 ೨೭೭೯

Form 2

(See Sub-rule (2) of rule 3)

Notice

Subject: No-confidence motion against Adhyaksha or Upadhyaksha

of . . . . . . Zilla Panchayat.

A meeting to consider the no-confidence motion against the Shri……………., the Adhyaksha or Upadhyaksha of …………………. Zilla Panchayat will be held on………………. day…………………at……………………….am/pm in the office of the said Zilla Panchayat.

You are therefore requested to attend the said meeting on the date and at the place and time mentioned above.

Regional Commissioner

To, Sri/Smt. ___________________.

By order and in the name of the Governor of Karnataka

(P.Shivashankar) Director (Panchayat Raj) and Ex-officio Joint Secretary to the Government Rural Development and Panchayat Raj Department PR-343

ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾ(cid:219)ಕಾ(cid:234)ಗಳ(cid:55), ಕರ್ನಾಟಕ ರಾಜ್ಯಪತ್ರ, ಸರ್ಕಾ(cid:234) ಕೇಂದ್ರ ಮುದ್ರಣಾಲಯ, ಬೆಂಗಳ(cid:58)ರು-೫೯.

Cite this issue. Karnataka Weekly Gazette, Government of Karnataka, 17 September 2020. Indian Gazettes, https://egazette.servantsofknowledge.in/details/in.gazette.karnataka_w.2020-09-17.38/. Archive identifier in.gazette.karnataka_w.2020-09-17.38.