Servants of Knowledge
Karnataka Gazette · Government of Karnataka

Karnataka Gazette, Part Part-1, 12 September 2013

Published 12 September 2013

Part
Part-1
Identifier
in.gazette.karnataka_new.2013-09-12.Part-1
Languages
English, Kannada
Published at
Original source ↗

click here for IIIF manifest

RNI No. KARBIL/2001/47147

ಸಂಪುಟ ೧೪೮

Volume 148

ಬೆಂಗಳೂರು, ಗುರುವಾರ, ಸೆಪ್ಟೆಂಬರ್ ೧೨, ೨೦೧೩ (ಭಾದ್ರಪದ ೨೧, ಶಕ ವರ್ಷ ೧೯೩೫)

Bangalore, Thursday, September 12, 2013 (Bhadrapada 21, Shaka Varsha 1935)

ಸಂಚಿಕೆ ೩೭

Issue 37

ಭಾಗ ೧

ರಾಜ್ಯ ಸರ್ಕಾರದ ಮುಖ್ಯ ಆದೇಶಗಳು ಹಾಗೂ ಸುತ್ತೋಲೆ ಮುಂತಾದ

ಎಲ್ಲಾ ಇಲಾಖೆಗಳಿಗೂ ಸಂಬಂಧಿಸಿದ ಆದೇಶಗಳು

ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವಾಲಯ

ವಿಷಯ: ಶ್ರೀ ಜಿ. ಜಿ. ಹೆಗಡೆ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಇವರಿಗೆ ದಂಡನೆ ವಿಧಿಸುವ ಬಗ್ಗೆ – ಆದೇಶ.

ಓದಲಾಗಿದೆ: 1. ಕಾರಣ ಕೇಳುವ ನೋಟೀಸಿನ ಸಂಖ್ಯೆ : ಕೃತೋಇ 18 ಕೃಪವಿ 2006, ದಿನಾಂಕ : 06-09-2007. 2. ಕಾರಣ ಕೇಳುವ ನೋಟೀಸಿನ ಸಂಖ್ಯೆ : ಕೃತೋಇ 12 ಕೃಪವಿ 2007, ದಿನಾಂಕ : 20-06-2007. 3. ಸರ್ಕಾರಿ ಆದೇಶ ಸಂಖ್ಯೆ : ಕೃತೋಇ 18 ಕೃಪವಿ 2006, ದಿನಾಂಕ : 01-04-2008. 4. ಎರಡನೇ ಕಾರಣ ಕೇಳುವ ನೋಟೀಸ್ ಸಂಖ್ಯೆ : ಕೃತೋಇ 18 ಕೃಪವಿ 2006, ದಿನಾಂಕ : 18-03-2009. 5. ಸರ್ಕಾರದ ಆದೇಶ ಸಂಖ್ಯೆ : ಕೃತೋಇ 12 ಕೃಪವಿ 2007, ದಿನಾಂಕ : 27-05-2008. 6. ಎರಡನೇ ಕಾರಣ ಕೇಳುವ ನೋಟೀಸ್ ಸಂಖ್ಯೆ : ಕೃತೋಇ 12 ಕೃಪವಿ 2007, ದಿನಾಂಕ : 14-12-2009. 7. ಸರ್ಕಾರಿ ಆದೇಶ ಸಂಖ್ಯೆ : ಅಪಜೀ 51 ಅಇವಿ 2006, ದಿನಾಂಕ : 03-05-2010. 8. ಸರ್ಕಾರಿ ಆದೇಶ ಸಂಖ್ಯೆ : ಅಪಜೀ 132 ಅಇವಿ 2010, ದಿನಾಂಕ : 05-03-2011. 9. ಕಾರಣ ಕೇಳುವ ನೋಟೀಸಿನ ಸಂಖ್ಯೆ : ಅಪಜೀ 132 ಅಇವಿ 2010, ದಿನಾಂಕ : 27-06-2012. 10. ಕಾರಣ ಕೇಳುವ ನೋಟೀಸಿಗೆ ಆರೋಪಿತ ಅಧಿಕಾರಿಯು ದಿನಾಂಕ : 20-11-2012 ರಂದು ಸಲ್ಲಿಸಿದ ಲಿಖಿತ ಉತ್ತರ. 11. ಲೋಕಸೇವಾ ಆಯೋಗದ ಪತ್ರ ಸಂಖ್ಯೆ : ಪಿಎಸ್‌ಸಿ 145 ಸಿಎನ್ಎಸ್ 2012, ದಿನಾಂಕ : 24-12-2012 ಶ್ರೀ ಜಿ. ಜಿ. ಹೆಗಡೆ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಇವರು ಈ ಹಿಂದೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಕೊಪ್ಪಳದ ಜಲಾನಯನ ಅಭಿವೃದ್ಧಿ ಇಲಾಖೆಯಲ್ಲಿ 2003-04 ಮತ್ತು 2004-05 ಅವಧಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾಗ ಸರ್ಕಾರಿ ಹಣ ದುರ್ಬಳಕೆ ಮಾಡುವ ಮೂಲಕ ದುರ್ನಡತೆ ಎಸಗಿದ ಆರೋಪದ ಬಗ್ಗೆ ಮೇಲೆ ಕ್ರ. ಸಂ. (1)ರಲ್ಲಿ ಓದಲಾದ ದಿನಾಂಕ : 06-09-2007ರ ನೋಟೀಸನ್ನು ದೋಷಾರೋಪಣೆ ಪಟ್ಟಿಯೊಂದಿಗೆ ಜಾರಿ ಮಾಡುವ ಮೂಲಕ ಇಲಾಖಾ ವಿಚಾರಣೆಯನ್ನು ಪ್ರಾರಂಭಿಸಲಾಯಿತು. ಅದೇ ರೀತಿ 2005-2006ರ ಅವಧಿಯಲ್ಲಿ ಉಡುಪಿ ಜಲಾನಯನ ಅಭಿವೃದ್ಧಿ ಇಲಾಖೆಯಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾಗ ಎಸಗಿದರೆನ್ನಲಾದ ಅಕ್ರಮಗಳ ಹಾಗೂ ಹಣಕಾಸಿನ ಅವ್ಯವಹಾರಗಳ ಬಗ್ಗೆ ದೋಷಾರೋಪಣೆ ಪಟ್ಟಿಯೊಂದಿಗೆ ಮೇಲೆ ಕ್ರ.ಸಂ. (2)ರಲ್ಲಿ ಓದಲಾದ ದಿನಾಂಕ : 20-06-2007ರ ನೋಟೀಸನ್ನು ಜಾರಿ ಮಾಡುವ ಮೂಲಕ ಇಲಾಖಾ ವಿಚಾರಣೆಯನ್ನು ಪ್ರಾರಂಭಿಸಲಾಯಿತು. ಅವರ ವಿರುದ್ಧ ಎರಡೂ ಪ್ರಕರಣಗಳಲ್ಲಿ ಈ ಕೆಳಕಂಡ ಆರೋಪಗಳ ಮೇಲೆ ಇಲಾಖಾ ವಿಚಾರಣೆಯನ್ನು ಕೈಗೊಳ್ಳಲಾಗಿತ್ತು.

ಕೊಪ್ಪಳದ ಪ್ರಕರಣ :

ಆರೋಪ :-ಶ್ರೀ ಜಿ. ಜಿ. ಹೆಗಡೆ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಆದ ನೀವು ಈ ಹಿಂದೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಆಗಿ ಕೊಪ್ಪಳದಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ ವಿವಿಧ ಯೋಜನೆಗಳಡಿಯಲ್ಲಿ 2003-04 ಮತ್ತು 2004-05ನೇ ಸಾಲಿನಲ್ಲಿ ಚೆಕ್‌ಗಳ ಮೂಲಕ ಪಡೆದ ಹಣಕ್ಕೆ ಎನ್.ಡಿ.ಸಿ. ಬಿಲ್ಲುಗಳು ರೂ. 65,32,000-00 ಮತ್ತು ರೂ. 45,46,800-00ಗಳ ಒಟ್ಟು ರೂ. 1,10,78,800-00ಗಳನ್ನು ಮೇಲುರುಜುವಿಗಾಗಿ ಸಲ್ಲಿಸಿರುವುದಿಲ್ಲ ಮತ್ತು ಎಂ.ಸಿ.ಎ. ನಿಯಮಗಳ ಉಲ್ಲಂಘನೆಯಾಗಿದ್ದು, ಲೆಕ್ಕ ಪತ್ರ ಸಲ್ಲಿಸದೇ ಈ ವಿಷಯಕ್ಕೆ ಮೌನವಾಗಿದ್ದೀರಿ, ಸರ್ಕಾರಿ ಹಣವನ್ನು ಕಾಮಗಾರಿಗಳಿಗೆ ಪಡೆದುಕೊಂಡು ಲೆಕ್ಕ ಪತ್ರ ಸಲ್ಲಿಸದೇ ಇರುವುದು ಸರ್ಕಾರಿ ಹಣ ದುರ್ಬಳಕೆ ಮತ್ತು ದುರ್ನಡತೆಯನ್ನು ಎಸಗಿರುತ್ತೀರಿ.

(೧೪೩೩)

ಕರ್ನಾಟಕ ರಾಜ್ಯಪತ್ರ, ಗುರುವಾರ, ಸೆಪ್ಟೆಂಬರ್ ೧೨, ೨೦೧೩ ಭಾಗ ೧ ೧೪೩೪

ಉಡುಪಿ ಪ್ರಕರಣ :

ಆರೋಪ–1 :-ಶ್ರೀ ಜಿ. ಜಿ. ಹೆಗಡೆ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಜಲಾನಯನ ಅಭಿವೃದ್ಧಿ ಇಲಾಖೆ ಕೊಪ್ಪಳ ಆದ ನೀವು ಈ ಹಿಂದೆ ಉಡುಪಿ ಜಲಾನಯನ ಅಭಿವೃದ್ಧಿ ಇಲಾಖೆಯಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾಗ 2005-06ನೇ ಸಾಲಿನಲ್ಲಿ ಐ.ಡಬ್ಲ್ಯೂ.ಡಿ.ಪಿ. ಯೋಜನೆ, ಅಡಿಯಲ್ಲಿ ಯೋಜನೆಯ ಅನುಷ್ಠಾನಕ್ಕಾಗಿ ಜಿಲ್ಲಾ ಪಂಚಾಯತ್, ಮಂಗಳೂರುರವರಿಂದ ರೂ. 45.00 ಲಕ್ಷ ಅನುದಾನವನ್ನು ಪಡೆದಿರುತ್ತೀರಿ. ಈ ಮೊಬಲಗಿನಲ್ಲಿ ಪ್ರತಿ ಜಲಾನಯನ ಸಂಘಕ್ಕೆ ರೂ. 2.70 ಲಕ್ಷದಂತೆ ಒಟ್ಟು ರೂ. 27.00 ಲಕ್ಷಗಳನ್ನು ಬಿಡುಗಡೆ ಮಾಡಿರುತ್ತೀರಿ. ಉಳಿದ ಮೊಬಲಗು ರೂ. 18.00 ಲಕ್ಷಗಳನ್ನು ವಿವಿಧ ಬಾಬುಗಳಿಗಾಗಿ ವೆಚ್ಚ ಮಾಡಿರುವುದಾಗಿ ನಗದು ಪುಸ್ತಕದಲ್ಲಿ ದಾಖಲಿಸಿರುತ್ತೀರಿ. ಜಲಾನಯನ ಸಂಘಗಳಿಗೆ ಹಣ ಬಿಡುಗಡೆ ಮಾಡಿದ ಬಗ್ಗೆ ಅವರಿಂದ ಪಡೆದ ಸ್ವೀಕೃತಿಗಳಾಗಲೀ ರೂ. 18.00 ಲಕ್ಷಗಳಿಗೆ ಸಂಬಂಧಿಸಿದ ಓಚರ್‌ಗಳನ್ನು ನಿರ್ವಹಿಸಿ ನಿಮ್ಮ ಉತ್ತರಾಧಿಕಾರಿಗಳಿಗೆ ವಹಿಸಿಕೊಟ್ಟಿರುವುದಿಲ್ಲ. ಆರೋಪ–2 :-ಶ್ರೀ ಜಿ. ಜಿ. ಹೆಗಡೆ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಜಲಾನಯನ ಅಭಿವೃದ್ಧಿ ಇಲಾಖೆ ಕೊಪ್ಪಳ ಆದ ನೀವು ಈ ಹಿಂದೆ ಉಡುಪಿಯ ಜಲಾನಯನ ಅಭಿವೃದ್ಧಿ ಇಲಾಖೆಯಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾಗ ಈ ಕೆಳಕಂಡ ಯೋಜನೆಗಳು ಅನುದಾನವನ್ನು ಪಡೆದಿದ್ದು, ಈ ಬಗ್ಗೆ ಈವರೆವಿಗೂ ಲೆಕ್ಕ ಪತ್ರಗಳನ್ನು ಸಲ್ಲಿಸಿರುವುದಿಲ್ಲ.

ಕ್ರ.ಸಂ. ಯೋಜನೆ ಲ ೆಕ್ಕಪತ್ರ ಸಲ್ಲಿಸಬೇಕಾದ ಒಟ್ಟು ಮೊಬಲಗು
1 ಪಶ್ಚಿಮ ಘಟ್ಟ ಅಭಿವೃದ್ಧಿ ಯೊಜನೆ 2004-05 ರೂ. 3,03,000-00
2 ಪಶ್ಚಿಮ ಘಟ್ಟ ಅಭಿವೃದ್ಧಿ ಯೊಜನೆ 2005-06 ರೂ. 9,75,622-00
3 ಸಂಪೂರ್ಣ ಗ್ರಾಮೀಣ ರೋಜ್‌ಗಾರ್ ಯೋಜನೆ 2005-06 ರೂ. 7,05,497-00
ಒಟ್ಟು ರೂ. 22,87,119-00

ಆರೋಪ–3 :-ಶ್ರೀ ಜಿ. ಜಿ. ಹೆಗಡೆ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಜಲಾನಯನ ಅಭಿವೃದ್ಧಿ ಇಲಾಖೆ ಕೊಪ್ಪಳ ಆದ ನೀವು ಈ ಹಿಂದೆ ಉಡುಪಿಯ ಜಲಾನಯನ ಅಭಿವೃದ್ಧಿ ಇಲಾಖೆಯಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾಗ ಯೋಜನಾಧಿಕಾರಿಗಳಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಸ್ಥೆಗೆ ತರಬೇತಿಗಾಗಿ ರೂ. 1,50,000-00 ಗಳನ್ನು ನೀಡಿದ್ದು, ಈ ಬಗ್ಗೆ ಸಂಸ್ಥೆಯಿಂದ ಬೇಡಿಕೆ ಪತ್ರವಾಗಲೀ, ಎಷ್ಟು ಜನಕ್ಕೆ ತರಬೇತಿ ನೀಡಬೇಕೆಂಬುದಕ್ಕಾಗಿ ವಿವರವಾಗಲೀ ಪಡೆದು ನಿರ್ವಹಿಸಿರುವುದಿಲ್ಲ ಹಾಗೂ ಹಣವನ್ನು ಸಂಸ್ಥೆ ಪಡೆದುಕೊಂಡ ಬಗ್ಗೆ ಸ್ವೀಕೃತಿಯಾಗಲೀ ಪಡೆದಿರುವುದಿಲ್ಲ.

ಆರೋಪ–4 :-ಶ್ರೀ ಜಿ. ಜಿ. ಹೆಗಡೆ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಜಲಾನಯನ ಅಭಿವೃದ್ಧಿ ಇಲಾಖೆ ಕೊಪ್ಪಳ ಆದ ನೀವು ಈ ಹಿಂದೆ ಉಡುಪಿಯ ಜಲಾನಯನ ಅಭಿವೃದ್ಧಿ ಇಲಾಖೆಯಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾಗ ಚೆಕ್ ನಂ. 751363 ದಿನಾಂಕ : 27-03-06ರಲ್ಲಿ ತರಬೇತಿಗಾಗಿ ರೂ. 94,000-00ಗಳನ್ನು ಮತ್ತು ಚೆಕ್ ನಂ. 751365 ದಿನಾಂಕ : 28-03-06ರಲ್ಲಿ ರೂ. 12,500-00ಗಳನ್ನು ಗೌರವಧನಕ್ಕಾಗಿ ಮತ್ತು ಗಣಕಯಂತ್ರ ಸಹಾಯಕರಿಗೆ ರೂ. 10,000-00ಗಳನ್ನು ನೀಡಿರುವುದಾಗಿ ನಗದು ಪುಸ್ತಕದಲ್ಲಿ ದಾಖಲಿಸಿದೆ. ಆದರೆ ಅವರಿಂದ ಸ್ವೀಕೃತಿಯನ್ನು ಪಡೆದಿರುವುದಿಲ್ಲ ಹಾಗೂ ತರಬೇತಿದಾರರನ್ನು ನೇಮಿಸಿಕೊಳ್ಳುವ ಪ್ರಕ್ರಿಯೆಯನ್ನು ನಿಯಮಾನುಸಾರ ಅನುಸರಿಸಿ ಮೇಲಾಧಿಕಾರಿಗಳಿಂದ ಅನುಮೋದನೆ ಪಡೆದಿರುವುದಿಲ್ಲ.

ಆರೋಪ–5 :-ಶ್ರೀ ಜಿ. ಜಿ. ಹೆಗಡೆ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಜಲಾನಯನ ಅಭಿವೃದ್ಧಿ ಇಲಾಖೆ ಕೊಪ್ಪಳ ಆದ ನೀವು ಈ ಹಿಂದೆ ಉಡುಪಿಯ ಜಲಾನಯನ ಅಭಿವೃದ್ಧಿ ಇಲಾಖೆಯಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾಗ ಸಸ್ಯ ಕ್ಷೇತ್ರ ರಚನೆಗೆ ಚೆಕ್ ನಂ. 751368, ದಿನಾಂಕ : 31-03-06ರಲ್ಲಿ ರೂ. 50,000-00ಗಳನ್ನು ಶ್ರೀ ಅಯ್ಯಪ್ಪ, ವಲಯ ಅರಣ್ಯಾಧಿಕಾರಿಗಳಿಗೆ ನೀಡಿರುತ್ತೀರಿ. ಇದಕ್ಕೆ ಸಂಬಂಧಿಸಿದಂತೆ ಬೇಡಿಕೆ ಪತ್ರವಾಗಲೀ ವೆಚ್ಚದ ಉಪ ಓಚರ್‌ಗಳಾಗಲೀ ಕಛೇರಿಯಲ್ಲಿ ಲಭ್ಯವಿರುವುದಿಲ್ಲ.

ಆರೋಪ–6 :-ಶ್ರೀ ಜಿ. ಜಿ. ಹೆಗಡೆ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಜಲಾನಯನ ಅಭಿವೃದ್ಧಿ ಇಲಾಖೆ ಕೊಪ್ಪಳ ಆದ ನೀವು ಈ ಹಿಂದೆ ಉಡುಪಿಯ ಜಲಾನಯನ ಅಭಿವೃದ್ಧಿ ಇಲಾಖೆಯಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾಗ 2005-06ನೇ ಸಾಲಿನಲ್ಲಿ ಐ.ಡಬ್ಲ್ಯೂ.ಡಿ.ಪಿ. ಯೋಜನೆಯಡಿ ಯೋಜನೆಗಳ ಅನುಷ್ಠಾನಕ್ಕಾಗಿ ಈ ಕೆಳಕಂಡ ಮೊಬಲಗುಗಳನ್ನು ಸ್ವಂತ ಚೆಕ್‌ಗಳಲ್ಲಿ ಡ್ರಾ ಮಾಡಿ ವಿತರಿಸಿರುತ್ತೀರಿ. ಸ್ವಂತ ಚೆಕ್‌ನಲ್ಲಿ ಡ್ರಾ ಮಾಡಬಾರದೆಂದು ಸ್ಪಷ್ಟ ಸೂಚನೆ ಇದ್ದರೂ ಸಹ ನೀವು ಉಲ್ಲಂಘಿಸಿರುತ್ತೀರಿ.

ಹಾಗೂ ಇವುಗಳಿಗೆ ಸಂಬಂಧಿಸಿದಂತೆ ಓಚರ್‌ಗಳನ್ನು ಪಡೆದು ನಿರ್ವಹಿಸಿರುವುದಿಲ್ಲ.

ಕ್ರ. ಸ ಂ. ಚೆಕ್ ನಂ. ಮತ್ತು ದಿನಾಂಕ ವ ೂಬಲಗು ೆ (ರೂ.ಗಳಲ್ಲಿ) ವ ಚ್ಚದ ವಿವರ ೆ ಲ ೂೕಪದೋಷಗಳು ೆ
1 751364/28-03-2006 2,00,000 ತರಬೇತಿಗಾಗಿ ಓಚರ್‌ಗಳನ್ನು ಪಡೆದು ನಿರ್ವಹಿಸಿರುವುದಿಲ್ಲ
751366/31-03-2006 1,40,000 ಸಾಗುವಾನಿ ಗಿಡಗಳನ್ನು ಖರೀದಿಸಲು ಓಚರ್‌ಗಳನ್ನು ಪಡೆದು ನಿರ್ವಹಿಸಿರುವುದಿಲ್ಲ
751370/02-05-2006 3,00,000 ಸಮುದಾಯ ಸಂಘಟನೆಗಾಗಿ ಓಚರ್‌ಗಳನ್ನು ಪಡೆದು ನಿರ್ವಹಿಸಿರುವುದಿಲ್ಲ
751371/10-05-2006 1,80,000 ಸಮುದಾಯ ಸಂಘಟನೆಗಾಗಿ ಓಚರ್‌ಗಳನ್ನು ಪಡೆದು ನಿರ್ವಹಿಸಿರುವುದಿಲ್ಲ
751361/20-03-2006 6,00,000 ಸಸ್ಯಗಳನ್ನು ಬೆಳೆಸಲು ಓಚರ್‌ಗಳನ್ನು ಪಡೆದು ನಿರ್ವಹಿಸಿರುವುದಿಲ್ಲ
ಒಟ್ಟು 14,20,000
ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಸೆಪ್ಟೆಂಬರ್ ೧೨, ೨೦೧೩ ೧೪೩೫

ಆರೋಪ–7 :-ಶ್ರೀ ಜಿ. ಜಿ. ಹೆಗಡೆ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಜಲಾನಯನ ಅಭಿವೃದ್ಧಿ ಇಲಾಖೆ ಕೊಪ್ಪಳ ಆದ ನೀವು ಈ ಹಿಂದೆ ಉಡುಪಿಯ ಜಲಾನಯನ ಅಭಿವೃದ್ಧಿ ಇಲಾಖೆಯಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾಗ ಈ ಕೆಳಕಂಡ ಯೋಜನೆಗಳಡಿಯಲ್ಲಿ ಅನುದಾನ ಬಿಡುಗಡೆಯಾಗಿದ್ದು, ಈ ಬಗ್ಗೆ ತನಿಖೆಗಾಗಿ ಮೇ|| ನರಸಿಂಹ ನಾಯಕ್ ಮತ್ತು ಅಸೋಸಿಯೇಟ್ಸ್ ಚಾರ್ಟರ್ಡ್

ಕ್ರ.ಸಂ. ಯೋಜನೆ ಅನುದಾನ ಬಿಡುಗಡೆ ಲಕ್ಷಗಳಲ್ಲಿ
1 ಪಶ್ಚಿಮ ಘಟ್ಟ ಅಭಿವೃದ್ಧಿ ಯೋಜನೆ 2004-05 7.85
2 ಪಶ್ಚಿಮ ಘಟ್ಟ ಅಭಿವೃದ್ಧಿ ಯೋಜನೆ 2005-06 20.75
3 ಸಂಪೂರ್ಣ ಗ್ರಾಮೀಣ ರೋಜ್‌ಗಾರ್ ಯೋಜನೆ 2005-06 9.594
ಒಟ್ಟು 38.194

ಆರೋಪ–8 :-ಶ್ರೀ ಜಿ. ಜಿ. ಹೆಗಡೆ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಜಲಾನಯನ ಅಭಿವೃದ್ಧಿ ಇಲಾಖೆ ಕೊಪ್ಪಳ ಆದ ನೀವು ಈ ಹಿಂದೆ ಉಡುಪಿಯ ಜಲಾನಯನ ಅಭಿವೃದ್ಧಿ ಇಲಾಖೆಯಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾಗ ಅಧ್ಯಕ್ಷರು, ಅಮರ ಪಡ್ನೂರ ಗ್ರಾಮ ಪಂಚಾಯತ್, ಸುಳ್ಯ ತಾಲ್ಲೂಕು ಇವರು ನಿಮಗೆ ಕಸಿಗೇರು ಗಿಡ ಪೂರೈಸಲು ಚೆಕ್ ನಂ. 3703, ದಿನಾಂಕ : 06-02-2006ರ ಮೂಲಕ ರೂ. 17,000-00ಗಳನ್ನು ಪಾವತಿಸಿರುತ್ತಾರೆ. ಆದರೆ ನೀವು ಇದುವರೆವಿಗೂ ಸದರಿಯವರಿಗೆ ಗಿಡಗಳನ್ನು ಪೂರೈಸಿರುವುದಿಲ್ಲ.

ಆರೋಪ–9 :-ಶ್ರೀ ಜಿ. ಜಿ. ಹೆಗಡೆ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಜಲಾನಯನ ಅಭಿವೃದ್ಧಿ ಇಲಾಖೆ ಕೊಪ್ಪಳ ಆದ ನೀವು ಈ ಹಿಂದೆ ಉಡುಪಿಯ ಜಲಾನಯನ ಅಭಿವೃದ್ಧಿ ಇಲಾಖೆಯಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾಗ ನಿಮ್ಮ ಪ್ರಭಾರವನ್ನು ಜಿಲ್ಲಾ ಜಲಾನಯನ ಅಭಿವೃದ್ಧಿ ಅಧಿಕಾರಿ ಉಡುಪಿ ಕಛೇರಿಯ ಶ್ರೀ ಸುಂದರ, ಗ್ರೂಪ್ 'ಡಿ' ನೌಕರರ ಮೂಲಕ ಅಪೂರ್ಣ ಪ್ರಭಾರವನ್ನು ಕಳುಹಿಸಿರುತ್ತೀರಿ.

ಅಲ್ಲದೇ ಕಛೇರಿ ದಾಖಲೆಗಳನ್ನು ನಿಮ್ಮ ಮನೆಗೆ ತೆಗೆದುಕೊಂಡು ಹೋಗಿರುವುದು ಕಾನೂನು ಬಾಹಿರವಾಗಿದೆ. ನೀವು ಒಬ್ಬ ಜವಾಬ್ದಾರಿಯ ಅಧಿಕಾರಿಯಾಗಿ ಸರ್ಕಾರಿ ನೌಕರರಿಗೆ ತರವಲ್ಲದ ರೀತಿಯಲ್ಲಿ ವರ್ತಿಸುತ್ತೀರಿ.

ಆರೋಪ–10 :-ಶ್ರೀ ಜಿ. ಜಿ. ಹೆಗಡೆ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಜಲಾನಯನ ಅಭಿವೃದ್ಧಿ ಇಲಾಖೆ ಕೊಪ್ಪಳ ಆದ ನೀವು ಈ ಹಿಂದೆ ಉಡುಪಿಯ ಜಲಾನಯನ ಅಭಿವೃದ್ಧಿ ಇಲಾಖೆಯಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾಗ ಕೃಷಿ ಅಧಿಕಾರಿ, ಸುಳ್ಯ ಇವರು ವಿವಿಧ ಜಲಾನಯನ ಅಭಿವೃದ್ಧಿ ಉಪ ಸಮಿತಿಗಳಿಗೆ ನಿಮಗೆ ಅರಣ್ಯ ಸಸಿಗಳನ್ನು ಪೂರೈಸಲು ಚೆಕ್ ಮೂಲಕ ಫೆಬ್ರವರಿ 2006ರಲ್ಲಿ ರೂ. 1.37 ಲಕ್ಷಗಳನ್ನು ಪಾವತಿಸಿರುತ್ತಾರೆ. ಆದರೆ ನೀವು ಆಗಸ್ಟ್ 2006 ಮಾಹೆಯಲ್ಲಿ ಸದರಿ ಗಿಡಗಳನ್ನು ಪೂರೈಸಿರುತ್ತೀರಿ. ಸದರಿ ಗಿಡ ಪೂರೈಕೆದಾರರಾದ ಪರಿವಾರ್ ಫರ್ಟಿಲೈಸರ್ಸ್, ನರ್ಸರಿ ಡಿವಿಜನ್, ಉಡುಪಿ ಇವರು ಬಳ್ಳ, ಅಜ್ಞಾವರ, ಎಣ್ಣೂರು, ಅಮರಪಡ್ನೂರು, ಜಲಾನಯನ ಅಭಿವೃದ್ಧಿ ಸಮಿತಿಗಳಿಂದ ಹಣ ಪಾವತಿಸಲು ಒತ್ತಾಯಿಸುತ್ತಿದ್ದಾರೆ. ಆದರೆ ಈಗ ಪೂರೈಕೆಯಾದ ಗಿಡಗಳು ಈಗಾಗಲೇ ನಿಮಗೆ ಪಾವತಿಸಿದ ಹಣದಲ್ಲಿ ಪೂರೈಕೆಯಾಗಿದ್ದೋ ಅಥವಾ 2006-07ನೇ ಸಾಲಿನ ಜಲಾನಯನ ಕಾರ್ಯಕ್ರಮದ್ದೇ ಎಂಬುದು ಸ್ಪಷ್ಟವಾಗಿಲ್ಲ.

ಕೊಪ್ಪಳದ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿತ ಅಧಿಕಾರಿಯು ಆರೋಪವನ್ನು ನಿರಾಕರಿಸಿದ್ದರಿಂದ ಆರೋಪದ ಸತ್ಯಾಸತ್ಯತೆಯನ್ನು ವಿಚಾರಣೆ ಮೂಲಕ ಕಂಡುಕೊಳ್ಳಲು ಮೇಲೆ ಕ್ರಮ ಸಂಖ್ಯೆ (3)ರಲ್ಲಿ ಓದಲಾದ ದಿನಾಂಕ : 01-04-2008ರ ಆದೇಶದಲ್ಲಿ ವಿಚಾರಣಾಧಿಕಾರಿಯನ್ನು ನೇಮಿಸಲಾಯಿತು. ವಿಚಾರಣಾಧಿಕಾರಿಗಳು ಇಲಾಖಾ ವಿಚಾರಣೆ ನಡೆಸಿ ದಿನಾಂಕ : 12-11-2008ರನ್ವಯ ಸಲ್ಲಿಸಿದ ವಿಚಾರಣಾ ವರದಿಯಲ್ಲಿ ಆರೋಪಿತ ಅಧಿಕಾರಿಯ ಮೇಲೆ ಹೊರಿಸಲಾಗಿದ್ದ ಆರೋಪವು ರುಜುವಾತಾಗಿದೆ ಎಂಬ ನಿರ್ಣಯವನ್ನು ನೀಡಿದ್ದರು. ಈ ಬಗ್ಗೆ ವಿಚಾರಣಾ ವರದಿಯನ್ನು ಲಗತ್ತಿಸುವುದರೊಂದಿಗೆ ಮೇಲೆ ಕ್ರಮ ಸಂಖ್ಯೆ (4)ರಲ್ಲಿ ಓದಲಾದ ದಿನಾಂಕ : 18-03-2009ರ ಎರಡನೇ ಕಾರಣ ಕೇಳುವ ನೋಟೀಸನ್ನು ಆರೋಪಿತ ಅಧಿಕಾರಿಗೆ ಜಾರಿ ಮಾಡಿ ಆ ಬಗ್ಗೆ ಉತ್ತರ/ಹೇಳಿಕೆ ಏನಾದರೂ ಇದ್ದಲ್ಲಿ ಸಲ್ಲಿಸುವಂತೆ ಸೂಚಿಸಲಾಯಿತು. ಇದಕ್ಕೆ ಉತ್ತರವಾಗಿ ಆರೋಪಿತ ಅಧಿಕಾರಿಯು ದಿನಾಂಕ : 20-07-2009ರಂದು ಸಲ್ಲಿಸಿದ ಲಿಖಿತ ಉತ್ತರದಲ್ಲಿ ಪ್ರತಿಪಾದಿಸಿದ ಅಂಶಗಳನ್ನು ಪರಿಶೀಲಿಸಿ ಆರೋಪಿತ ಅಧಿಕಾರಿಗೆ ಈ ಕೆಳಗೆ ತೋರಿಸಿದಂತೆ, ದಂಡನೆಯನ್ನು ವಿಧಿಸಲಾಯಿತು.

ಕರ್ನಾಟಕ ರಾಜ್ಯಪತ್ರ, ಗುರುವಾರ, ಸೆಪ್ಟೆಂಬರ್ ೧೨, ೨೦೧೩ ಭಾಗ ೧ ೧೪೩೬

ಅದೇ ರೀತಿ ಉಡುಪಿ ಜಲಾನಯನ ಅಭಿವೃದ್ಧಿ ಇಲಾಖೆಯಲ್ಲಿ ಎಸಗಿದ ಅವ್ಯವಹಾರ/ಅಕ್ರಮಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿತ ಅಧಿಕಾರಿಯು ಆರೋಪಗಳನ್ನು ನಿರಾಕರಿಸಿದ್ದರಿಂದ ಆರೋಪಗಳ ಸತ್ಯಾಸತ್ಯತೆಯನ್ನು ವಿಚಾರಣೆ ಮೂಲಕ ಕಂಡುಕೊಳ್ಳಲು ಮೇಲೆ ಕ್ರಮ ಸಂಖ್ಯೆ (5)ರಲ್ಲಿ ಓದಲಾದ ದಿನಾಂಕ : 27-05-2008ರ ಸರ್ಕಾರಿ ಆದೇಶದಲ್ಲಿ ವಿಚಾರಣಾಧಿಕಾರಿಗಳನ್ನು ನೇಮಿಸಲಾಯಿತು. ಈ ಬಗ್ಗೆ ವಿಚಾರಣಾಧಿಕಾರಿಗಳು ವಿಚಾರಣೆ ನಡೆಸಿ ಸಲ್ಲಿಸಿದ ವರದಿಯಲ್ಲಿ ಆರೋಪ 1, 2, 3, 4, 5, 6, 7 ಮತ್ತು 9 ಇವುಗಳು ರುಜುವಾತಾಗಿವೆ ಎಂದು ಮತ್ತು ಆರೋಪ 8 ಮತ್ತು 10 ರುಜುವಾತಾಗಿಲ್ಲವೆಂಬ ನಿರ್ಣಯಗಳನ್ನು ನೀಡಿದ್ದರು. ಈ ಬಗ್ಗೆ ಆರೋಪಿತ ಅಧಿಕಾರಿಗೆ ವಿಚಾರಣಾ ವರದಿಯೊಂದಿಗೆ ಮೇಲೆ ಕ್ರಮ ಸಂಖ್ಯೆ : (6)ರಲ್ಲಿ ಓದಲಾದ ದಿನಾಂಕ : 14-12-2009ರ ಎರಡನೇ ಕಾರಣ ಕೇಳುವ ನೋಟೀಸ್‌ನ್ನು ಜಾರಿ ಮಾಡಿ ಆ ಬಗ್ಗೆ ಉತ್ತರ/ಹೇಳಿಕೆ ಏನಾದರೂ ಇದ್ದಲ್ಲಿ ಸಲ್ಲಿಸುವಂತೆ ತಿಳಿಸಲಾಗಿತ್ತು. ಈ ಬಗ್ಗೆ ಆರೋಪಿತ ಅಧಿಕಾರಿಯು ಕಾರಣ ಕೇಳುವ ನೋಟೀಸ್‌ಗೆ ಸಲ್ಲಿಸದಂತ ಉತ್ತರವನ್ನು ಪರಿಗಣಿಸಿ ಅಂತಿಮವಾಗಿ ಉಡುಪಿ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ, ಈ ಕೆಳಗೆ ತೋರಿಸಿದ ದಂಡನೆಯನ್ನು ವಿಧಿಸಲಾಯಿತು.

ಕೊಪ್ಪಳ ಪ್ರಕರಣದಲ್ಲಿ ವಿಧಿಸಲಾದ ದಂಡನೆ :

ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮ 1957ರ ನಿಯಮ 8(iii)ರಲ್ಲಿ ಪ್ರದತ್ತವಾದ ಅಧಿಕಾರವನ್ನು ಸರ್ಕಾರವು ಚಲಾಯಿಸಿ ಶ್ರೀ ಜಿ. ಜಿ. ಹೆಗಡೆ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಇವರ ಮುಂದಿನ ಮೂರು ವಾರ್ಷಿಕ ಬಡ್ತಿಗಳನ್ನು ಸಂಚಿತ ಪರಿಣಾಮ ಬೀರುವಂತೆ ತಡೆ ಹಿಡಿಯುವ ದಂಡನೆಯನ್ನು ಮೇಲೆ ಕ್ರಮ ಸಂಖ್ಯೆ : (7)ರಲ್ಲಿ ಓದಲಾದ ದಿನಾಂಕ : 03-05-2010ರ ಆದೇಶದಲ್ಲಿ ವಿಧಿಸಲಾಯಿತು.

ಉಡುಪಿಯ ಪ್ರಕರಣದಲ್ಲಿ ವಿಧಿಸಲಾದ ದಂಡನೆ :

ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) 1957ರ ನಿಯಮ 8(iv)ರಲ್ಲಿ 8(iv-ಎ)ರನ್ವಯ ಪ್ರದತ್ತವಾದ ಅಧಿಕಾರವನ್ನು ಸರ್ಕಾರವು ಚಲಾಯಿಸಿ ಮೇಲೆ ಕ್ರಮ ಸಂಖ್ಯೆ : (8)ರಲ್ಲಿ ಓದಲಾದ ದಿನಾಂಕ : 05-03-2011ರಂದು ಹೊರಡಿಸಿದ ಆದೇಶದಲ್ಲಿ ಆರೋಪಿತ ಅಧಿಕಾರಿಗೆ ಈ ಕೆಳಕಂಡ ದಂಡನೆಯನ್ನು ವಿಧಿಸಲಾಯಿತು.

i) ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) 1957ರ ನಿಯಮ 8(iv)ರಡಿಯಲ್ಲಿ ಆಪಾದಿತರಿಂದ ಸರ್ಕಾರಕ್ಕೆ ಉಂಟಾಗಿರುವ ಆರ್ಥಿಕ ನಷ್ಟದ ಮೊತ್ತ ರೂ. 95,36,629-00 (ತೊಂಬತ್ತೈದು ಲಕ್ಷ ಮೂವತ್ತಾರು ಸಾವಿರದ ಆರು ನೂರ ಇಪ್ಪತ್ತೊಂಬತ್ತು ರೂಪಾಯಿಗಳು ಮಾತ್ರ)ಗಳನ್ನು ಕಾರಣ ಕೇಳುವ ನೋಟೀಸನ್ನು ಜಾರಿ ಮಾಡಿದ ದಿನಾಂಕದಿಂದ ಶೇಕಡ 8ರ ಬಡ್ಡಿಯೊಂದಿಗೆ ವಸೂಲು ಮಾಡತಕ್ಕದ್ದು.

ಹಾಗೂ

ii) ಕರ್ತವ್ಯ ಚ್ಯುತಿ, ನಿರ್ಲಕ್ಷತೆ ಹಾಗೂ ಸರ್ಕಾರದ ಹಣ ದುರುಪಯೋಗದ ಆರೋಪಗಳು ರುಜುವಾತಾಗಿರುವುರಿಂದ ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) 1957ರ ನಿಯಮ 8(iv-a)ರ ಪ್ರಕಾರ ಅವರ ವೇತನವನ್ನು ಅವರು ಈಗ ಹೊಂದಿರುವ ಹುದ್ದೆಯ ಕಾಲಿಕ ವೇತನ ಶ್ರೇಣಿಯಲ್ಲಿ ಎರಡು ವರ್ಷದ ಅವಧಿಗೆ ಮಾತ್ರ ಸೀಮಿತಗೊಳಿಸಿ ಒಂದು ಹಂತಕ್ಕೆ ಕೆಳಗೆ ಇಳಿಸತಕ್ಕದ್ದು ;

ಕೊಪ್ಪಳದ ಇಲಾಖಾ ವಿಚಾರಣೆ ಪ್ರಕರಣ ಸಂಬಂಧ ಆರೋಪಿತ ಅಧಿಕಾರಿಗೆ ವಿಧಿಸಿದ ದಂಡನೆಯ ವಿಷಯದಲ್ಲಿ ಅವರಿಗೆ ಮೂರು ವಾರ್ಷಿಕ ವೇತನ ಬಡ್ತಿಗಳನ್ನು ಸಂಚಿತ ಪರಿಣಾಮ ಬೀರುವಂತೆ ದಂಡನೆಯನ್ನು ದಿನಾಂಕ : 03-05-2010ರ ಆದೇಶದನ್ವಯ ವಿಧಿಸಿದ್ದರೂ ಅವರ ಮುಂದಿನ ವಾರ್ಷಿಕ ವೇತನ ಬಡ್ತಿಯು ದಿನಾಂಕ : 01-04-2011 ರಿಂದ ಪ್ರಾಪ್ತವಾಗಲಿದೆ. ತರುವಾಯ ಅವರು ದಿನಾಂಕ : 31-12-2012 ರಿಂದ ಜಾರಿಗೆ ಬರುವಂತೆ ಸೇವೆಯಿಂದ ನಿವೃತ್ತಿ ಹೊಂದಲಿದ್ದಾರೆ. ಹೀಗಾಗಿ ಈ ಆದೇಶವನ್ನು ಸಹ ಜಾರಿಗೆ ಬರಲು ಅಸಮರ್ಥವಾಗಿರುತ್ತದೆ.

ಉಡುಪಿಯ ಇಲಾಖಾ ವಿಚಾರಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿತ ಅಧಿಕಾರಿಗೆ ವಿಧಿಸಿದ ದಂಡನೆಯ ಪರಿಣಾಮವಾಗಿ ಅವರಿಂದ ಬಡ್ತಿ ಮೊತ್ತ ಸೇರಿ ಒಟ್ಟಾರೆ 123.96-00 ಲಕ್ಷ ರೂ.ಗಳನ್ನು ಆರೋಪಿತ ಅಧಿಕಾರಿಯಿಂದ ವಸೂಲು ಮಾಡಬೇಕಾಗಿರುತ್ತದೆ. ಏತನ್ಮಧ್ಯೆ ಸದರಿ ಅಧಿಕಾರಿಯು ದಿನಾಂಕ : 31-12-2012ರಂದು ಸೇವಾ ವಯೋನಿವೃತ್ತಿ ಹೊಂದಲಿದ್ದಾರೆ. ಸದರಿ ಮೊತ್ತವನ್ನು ಆರೋಪಿತ ಅಧಿಕಾರಿಯ ನಿವೃತ್ತಿ ವೇತನ ಸೌಲಭ್ಯಗಳಿಂದ ವಸೂಲು ಮಾಡಲು ಸಾಧ್ಯವಿರುವುದಿಲ್ಲ. ಉದ್ದೇಶಿತ ಮೊತ್ತವನ್ನು ವಸೂಲು ಮಾಡಬೇಕಾದರೆ ಅವರ ವಿರುದ್ಧ ಸಿವಿಲ್ ಮೊಕದ್ದಮೆಯನ್ನು ದಾಖಲು ಮಾಡಬೇಕಾಗಿರುತ್ತದೆ. ಅಧಿಕಾರಿಯ ಹೆಸರಿನಲ್ಲಿ ಹೇಳಿಕೊಳ್ಳುವಂತಹ ಸ್ಥಿರಾಸ್ತಿಗಳು ಇರುವುದಿಲ್ಲ. ಹೀಗಿರುವಾಗ ಒಂದು ವೇಳೆ ಸಿವಿಲ್ ಮೊಕದ್ದಮೆಯನ್ನು ದಾಖಲು ಮಾಡಿ ಅದರಲ್ಲಿ ಯಶಸ್ವಿಯಾದರೂ ಅವರಿಂದ ಆ ಮೊತ್ತವನ್ನು ವಸೂಲು ಮಾಡುವುದು ಸಂದೇಹಾಸ್ಪದವಾಗಿರುತ್ತದೆ.

ಈ ಎಲ್ಲಾ ಕಾರಣಗಳಿಂದಾಗಿ ಉಡುಪಿ ಪ್ರಕರಣದ ಸಂಬಂಧ ಆರೋಪಿತ ಅಧಿಕಾರಿಗೆ ವಿಧಿಸಿದ ದಂಡನೆಯು ಜಾರಿಗೆ ತರಲು ಯೋಗ್ಯವಾಗಿರುವುದಿಲ್ಲ.

ಈ ಮೇಲ್ಕಂಡ ಸಂದರ್ಭ/ಸನ್ನಿವೇಶಗಳನ್ನು ಗಮನದಲ್ಲಿರಿಸಿ ಎರಡು ಪ್ರಕರಣಗಳಲ್ಲಿ ವಿಧಿಸಿರುವ ದಂಡನೆಯು ಜಾರಿಗೆ ತರಲು ಯೋಗ್ಯವಾಗಿರುವುದಿಲ್ಲವಾದ್ದರಿಂದ ವಿಧಿಸಿರುವ ಸದರಿ ಎರಡು ದಂಡನೆಗಳ ಬದಲಿಗೆ ಬೇರೊಂದು ದಂಡನೆಯನ್ನು ವಿಧಿಸುವುದನ್ನು ಸಿಸಿಎ ನಿಯಮಗಳ ನಿಯಮ 26ರನ್ವಯ ಪುನಾವರಲೋಕಿಸಿ ಆರೋಪಿತ ಅಧಿಕಾರಿಗೆ ಮೇಲೆ ಕ್ರಮ ಸಂಖ್ಯೆ : (9)ರಲ್ಲಿ ಓದಲಾದ ದಿನಾಂಕ : 27-06-2012ರ ಕಾರಣ ಕೇಳುವ ನೋಟಿಸ್‌ನ್ನು ಜಾರಿ ಮಾಡಿ ಆ ಬಗ್ಗೆ ಉತ್ತರ/ಹೇಳಿಕೆ ಏನಾದರೂ ಇದ್ದಲ್ಲಿ ಅದನ್ನು ನೋಟೀಸು ತಲುಪಿದ ದಿನಾಂಕದಿಂದ 15 ದಿನಗಳೊಳಗೆ ಸಲ್ಲಿಸುವಂತೆ ಅವರಿಗೆ ತಿಳಿಸಲಾಗಿತ್ತು. ಆದರೆ, ಇದಕ್ಕೆ ಪ್ರತಿಯಾಗಿ ಆರೋಪಿತ ಅಧಿಕಾರಿಯು ಸದರಿ ನೋಟೀಸ್‌ಗೆ ನಿಗಧಿತ ಅವಧಿಯಲ್ಲಿ ಯಾವುದೇ ಉತ್ತರವನ್ನು ಸಲ್ಲಿಸಿರುವುದಿಲ್ಲ. ತದನಂತರ, ಆರೋಪಿತ ಅಧಿಕಾರಿಯು ಮೇಲೆ ಕ್ರಮ ಸಂಖ್ಯೆ : (11)ರಲ್ಲಿ ಓದಲಾದ ದಿನಾಂಕ : 20-11-2012ರಂದು ಸಲ್ಲಿಸಿರುವ ಲಿಖಿತ ಉತ್ತರವು ಸರ್ಕಾರಕ್ಕೆ ದಿನಾಂಕ : 14-12-2012ರಂದು ಬಂದಿರುತ್ತದೆ. ಸದರಿ ಉತ್ತರದಲ್ಲಿ ಅವರು ಈ ಕೆಳಕಂಡ ಅಂಶಗಳನ್ನು ಪ್ರತಿಪಾದಿಸಿರುತ್ತಾರೆ.

"ನನ್ನ ಮೇಲೆ ನನ್ನಿಂದ ವಸೂಲಾತಿಗೆ ಆದೇಶಿಸಿದ್ದ ಸರ್ಕಾರಿ ಮೊತ್ತದ ನಷ್ಟದ ಪ್ರಮಾಣವು ನಾನು ಕೆಲಸ ನಿರ್ವಹಿಸಿದ ಅವಧಿಯಲ್ಲಿ ಪಡೆದುಕೊಂಡ ಮೊತ್ತಕ್ಕಿಂತ ರೂ. 10,35,129-00 ಮೊತ್ತವು ಹೆಚ್ಚಾಗಿರುತ್ತದೆ. ಸದರಿಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಸೆಪ್ಟೆಂಬರ್ ೧೨, ೨೦೧೩ ೧೪೩೭ ಆದೇಶವು ತಪ್ಪು ಆದೇಶವಾಗಿರುತ್ತದೆ. ನಾನು ನನ್ನ ಅವಧಿಯಲ್ಲಿ ಅರಣ್ಯೀಕರಣಕ್ಕೆ ಬಿಡುಗಡೆಯಾದ ಎಲ್ಲಾ ಮೊತ್ತವನ್ನು ದುರುಪಯೋಗಪಡಿಸಿಕೊಂಡಿದ್ದರೆ ರೂ. 85,01,500-00 ಆಗುತ್ತದೆ.

ನನ್ನ ಅವಧಿಯಲ್ಲಿ ಬಿಡುಗಡೆಯಾದ ಮೊತ್ತವು ದುರುಪಯೋಗವಾಗಿರುವುದಿಲ್ಲ ಎನ್ನುವುದನ್ನು ದೃಡಪಡಿಸಲು ದಾಖಲಾತಿಗಳನ್ನು ಸಲ್ಲಿಸುತ್ತಿದ್ದೇನೆ. ಇವುಗಳನ್ನು ಪರಿಶೀಲಿಸಿ ಮತ್ತು ಸದರಿ ಪ್ರಕರಣವು ಜಲಾನಯನ ಇಲಾಖೆಗೆ ಸಂಬಂಧಪಟ್ಟಿರುವುದರಿಂದ ಸದರಿ ಇಲಾಖೆಯಿಂದ ಹೆಚ್ಚಿನ ಮಾಹಿತಿ ಪಡೆದು ಮುಂದಿನ ಕ್ರಮ ಕೈಗೊಳ್ಳಲು ಆಗ್ರಹ ಪೂರ್ವಕವಾಗಿ ಬೇಡಿಕೊಳ್ಳುತ್ತೇನೆ."

ಆರೋಪಿತ ಅಧಿಕಾರಿಯು ಈ ಮೇಲಿನಂತೆ ಪ್ರತಿಪಾದಿಸಿದ ಅಂಶಗಳಲ್ಲಿ ಸತ್ಯಾಂಶವಿದೆಯೇ ? ಅಥವಾ ಇಲ್ಲವೇ ? ಎಂಬುದರ ಬಗ್ಗೆ ಪರಿಶೀಲಿಸಲಾಗಿ ಆರೋಪಿತ ಅಧಿಕಾರಿಯಿಂದ ವಸೂಲಾತಿಗೆ ಆದೇಶಿಸಿದ್ದ ಸರ್ಕಾರಿ ಮೊತ್ತದ ನಷ್ಟದ ಪ್ರಮಾಣವು ಉಡುಪಿ ಇಲಾಖಾ ವಿಚಾರಣಾ ಪ್ರಕರಣದಲ್ಲಿ 95.36 ಲಕ್ಷಗಳಾಗಿದ್ದು, ಈ ಮೊತ್ತದ ದುರುಪಯೋಗವು ನಿರ್ಣಯಾತ್ಮಕವಾಗಿ ವಿಚಾರಣೆಯಲ್ಲಿ ಸಾಬೀತಾಗಿರುತ್ತದೆ. ಮುಂದುವರೆದು, ಸದರಿ 95,36,629-00 ರೂಗಳ ವಸೂಲಾತಿಯ ಮೊತ್ತಕ್ಕೆ ದಿನಾಂಕ : 05-03-2011ರ ಆದೇಶದಲ್ಲಿ ತಿಳಿಸಿರುವಂತೆ ಬಡ್ಡಿ ಮೊತ್ತವನ್ನು ಸೇರಿಸಿದಾಗ ಅದು ಒಟ್ಟಾರೆ 123.96 ಲಕ್ಷ ರೂಗಳಾಗುತ್ತದೆ. ಮುಂದುವರೆದು, ಆರೋಪಿತ ಅಧಿಕಾರಿಯು ತಮ್ಮ ಉತ್ತರದಲ್ಲಿ ಅರಣ್ಯೀಕರಣಕ್ಕೆ ಬಿಡುಗಡೆಯಾದ ಎಲ್ಲಾ ಮೊತ್ತವನ್ನು ದುರುಪಯೋಗಪಡಿಸಿಕೊಂಡಿದ್ದರೆ ಅದು 85,01,500-00 ಆಗುತ್ತದೆ ಎಂಬುದನ್ನು ಗಮನಿಸಿದರೆ ಆರೋಪಿತ ಅಧಿಕಾರಿಯು ಪ್ರಕರಣದಲ್ಲಿ ಸರ್ಕಾರಿ ಮೊತ್ತವನ್ನು ದುರುಪಯೋಗ ಪಡಿಸಿಕೊಂಡಿರುವುದು ಸ್ಪಷ್ಟವಾಗುತ್ತದೆ. AIR 2005 SC 3742 ರಲ್ಲಿ ವರದಿಯಾದ National Fertilizers Ltd., And V/s P.K. Khanna ಪ್ರಕರಣದಲ್ಲಿ ಸರ್ವೋಚ್ಛ ನ್ಯಾಯಾಲಯವು ನೀಡಿದ ತೀರ್ಪಿನ ಪ್ರಕಾರ ಒಮ್ಮೆ ಶಿಸ್ತು ಪ್ರಾಧಿಕಾರವು ವಿಚಾರಣಾಧಿಕಾರಿಯ ವರದಿಯನ್ನು ಒಪ್ಪಿಕೊಂಡಲ್ಲಿ ಆ ಬಗ್ಗೆ ಮತ್ತೊಮ್ಮೆ ವಿಷಧೀಕರಿಸುವ ಅಗತ್ಯವಿಲ್ಲ. ಇದಲ್ಲದೆ 1994 KSLJ 380 ರಲ್ಲಿ ವರದಿಯಾದ ಶ್ರೀ ಲಕ್ಷ್ಮೀಪತಿ ಪುಟ್ಟಣ್ಣ ಹೆಚ್. ಕೆ.

ವಿರುದ್ಧ ರಾಜ್ಯ ಸರ್ಕಾರ ಪ್ರಕರಣದಲ್ಲಿ ಘನ ಕೆ.ಎ.ಟಿ.ಯು. ದಿನಾಂಕ : 18-02-1994ರಲ್ಲಿ ನೀಡಿದ ಆದೇಶದಲ್ಲಿ ಶಿಸ್ತು ಪ್ರಾಧಿಕಾರವು ವಿಚಾರಣಾಧಿಕಾರಿಯ ನಿರ್ಣಯಗಳನ್ನು ಒಪ್ಪಿಕೊಂಡಲ್ಲಿ ಆ ಬಗ್ಗೆ ವಿವರವಾಗಿ ಚರ್ಚಿಸುವ ಅಗತ್ಯವಿಲ್ಲವೆಂದು ಆದೇಶಿಸಿದೆ. ಸದರಿ ನ್ಯಾಯಾಲಯಗಳ ತೀರ್ಪಿನಿಂದಾಗಿ ಆರೋಪಿತ ಅಧಿಕಾರಿಯು ತಮ್ಮ ಮರುತ್ತರದಲ್ಲಿ ಪ್ರತಿಪಾದಿಸಿರುವ ಅಂಶಗಳು ಪರಿಗಣನಾರ್ಹವಾಗಿರುವುದಿಲ್ಲ. ಹೀಗಾಗಿ, ಬೇರೊಂದು ದಂಡನೆ ವಿಧಿಸುವ ಬಗ್ಗೆ ಅವರ ಹೇಳಿಕೆ ಏನೂ ಇಲ್ಲವೆಂದು ಪರಿಗಣಿಸಿದೆ.

ILR 1995 KAR 3599 ರಲ್ಲಿ ವರದಿಯಾದ ಶ್ರೀ ನಾಗೇಂದ್ರರಾವ್ ವಿರುದ್ಧ ಇಂಡಿಯನ್ ಬ್ಯಾಂಕ್ ಪ್ರಕರಣದಲ್ಲಿ ರಾಜ್ಯ ಉಚ್ಛ ನ್ಯಾಯಾಲಯವು ನೀಡಿದ ತೀರ್ಪಿನಲ್ಲಿ, ಆರೋಪಿತರೊಬ್ಬರ ಮೇಲೆ ಬಾಕಿ ಇರಬಹುದಾದಂತ ಇಲಾಖಾ ವಿಚಾರಣೆ ಪ್ರಕರಣಗಳಲ್ಲಿ ಆರೋಪಗಳು ರುಜುವಾತಾದಲ್ಲಿ ಆ ಎಲ್ಲಾ ಪ್ರಕರಣಗಳನ್ನು ಒಳಗೊಂಡಂತೆ ಸಾಮಾನ್ಯವಾದಂತ ಒಂದು ಆದೇಶವನ್ನು ಹೊರಡಿಸಲು ಅಡ್ಡಿ ಇರುವುದಿಲ್ಲವೆಂದು ನಿರ್ಣಯ ನೀಡಿದೆ.

ಈ ಮೇಲ್ಕಂಡ ಸಂದರ್ಭ/ಸನ್ನಿವೇಶಗಳನ್ನು ಒಟ್ಟಾಗಿ ತೆಗೆದುಕೊಂಡಾಗ ಶ್ರೀ ಜಿ. ಜಿ. ಹೆಗಡೆ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯವರು ಈ ಹಿಂದೆ ಕೊಪ್ಪಳದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾಗ ಹಾಗೂ ಉಡುಪಿ ಜಲಾನಯನ ಅಭಿವೃದ್ಧಿ ಇಲಾಖೆಯಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾಗ ಆರೋಪಗಳಲ್ಲಿ ಆರೋಪಿಸಿರುವಂತೆ ಅಕ್ರಮಗಳನ್ನು ಹಾಗೂ ಹಣಕಾಸಿನ ಅವ್ಯವಹಾರಗಳನ್ನು ಎಸಗುವ ಮೂಲಕ ಸರ್ಕಾರಿ ಹಣವನ್ನು ದುರುಪಯೋಗ ಮಾಡಿಕೊಂಡಿರುವುದು ನಿರ್ಣಾಯಾತ್ಮಕವಾಗಿ ಸಾಬೀತಾಗಿರುತ್ತದೆ. ಸರ್ಕಾರಿ ಹಣಕಾಸಿನ ದುರ್ಬಳಕೆ ಬಗ್ಗೆ ಸಾಬೀತಾದ ಆರೋಪಗಳ ತೀವ್ರತೆಯ ಅನುಸಾರವಾಗಿ ಹಾಗೂ ಸಾಕಷ್ಟು ಮತ್ತು ಒಳ್ಳೆಯ ಕಾರಣಗಳಿಗಾಗಿ ಶಿಸ್ತು ಪ್ರಾಧಿಕಾರವು/ಸರ್ಕಾರವು ತಕ್ಕ ದಂಡನೆಯನ್ನು ವಿಧಿಸಬಹುದಾಗಿರುತ್ತದೆ ಅದರಂತೆ, ಆರೋಪಿತ ಅಧಿಕಾರಿಯ ಪ್ರಕರಣದಲ್ಲಿ ಕೊಪ್ಪಳ ಮತ್ತು ಉಡುಪಿ ಪ್ರಕರಣದ ಇಲಾಖಾ ವಿಚಾರಣೆಗಳಿಗೆ ಸಂಬಂಧಿಸಿದಂತೆ ವಿಧಿಸಲಾದ ದಂಡನೆಯು ಸಾಬೀತಾದ ಆರೋಪಗಳ ತೀವ್ರತೆಯ ಪ್ರಮಾಣಕ್ಕೆ ನಿಶ್ಚಿತವಾಗಿ ಅನುಸಾರವಾಗಿರುವುದಿಲ್ಲ. (2010) 2 SCC(L&S) 239ರಲ್ಲಿ ವರದಿಯಾದ U.P. State Road Transport Corporation V/s Suresh Chand Sharma ಪ್ರಕರಣದಲ್ಲಿ ಮತ್ತು (2012)1 SCC(L&S) 171ರಲ್ಲಿ ವರದಿಯಾದ Division Controller Karnataka State Road Transport Corporation V/s M. G. Vittal Rao ಪ್ರಕರಣದಲ್ಲಿ ಘನ ಸರ್ವೋಚ್ಛ ನ್ಯಾಯಾಲಯವು ನೀಡಿದ ತೀರ್ಪಿನಲ್ಲಿ ಹಣ ದುರುಪಯೋಗದಂತ ಭ್ರಷ್ಠಾಚಾರದ ಪ್ರಕರಣದಲ್ಲಿ ಸಾಬೀತಾದ ಆರೋಪದ ತೀವ್ರತೆಗೆ ಅನುಗುಣವಾಗಿ ಸೇವೆಯಿಂದ ವಜಾ ಮಾಡುವ ಗರಿಷ್ಠ ದಂಡನೆಯನ್ನು ವಿಧಿಸಬಹುದಾಗಿದೆ ಎಂದು ನಿರ್ಣಯ ನೀಡಿರುತ್ತದೆ. ಇದಲ್ಲದೆ, 1957ರ ಸಿಸಿಎ ನಿಯಮಗಳ ನಿಯಮ 8(viii)ರಡಿ ವಿವರಣೆ-1ರ ಪ್ರಕಾರ ಸರ್ಕಾರಿ ಹಣ ದುರುಪಯೋಗವು ಭ್ರಷ್ಠಾಚಾರವೇ ಆಗಿರುತ್ತದೆ. ಈ ಹಿನ್ನೆಲೆಯಲ್ಲಿ ಆರೋಪಿತ ಅಧಿಕಾರಿಗೆ ಸೇವೆಯಿಂದ ವಜಾಗೊಳಿಸುವ ದಂಡನೆಯನ್ನು ವಿಧಿಸುವ ಬಗ್ಗೆ ತೀರ್ಮಾನಿಸಿ ಅದರಂತೆ ಲೋಕ ಸೇವಾ ಆಯೋಗದ ಸಹಮತಿಯನ್ನು ಕೋರಲಾಯಿತು. ಈ ಬಗ್ಗೆ ಮೇಲೆ ಕ್ರಮ ಸಂಖ್ಯೆ (11)ರಲ್ಲಿ ಓದಲಾದ ದಿನಾಂಕ : 24-12-2012ರ ಪತ್ರದಲ್ಲಿ ಸರ್ಕಾರದ ಪ್ರಸ್ತಾವನೆಗೆ ಕರ್ನಾಟಕ ಲೋಕಸೇವಾ ಆಯೋಗವು ತನ್ನ ಸಹಮತಿಯನ್ನು ನೀಡಿರುತ್ತದೆ. ಆದುದರಿಂದ, ಕೊಪ್ಪಳದ ಮತ್ತು ಉಡುಪಿಯ ಎರಡು ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆದ ಇಲಾಖಾ ವಿಚಾರಣೆಗಳಲ್ಲಿ ಅಂತಿಮವಾಗಿ ಎರಡು ಸರ್ಕಾರಿ ಆದೇಶಗಳಲ್ಲಿ ವಿಧಿಸಲಾದ ದಂಡನೆಗಳನ್ನು ಮಾರ್ಪಡಿಸಿ, ಅವುಗಳ ಬದಲಿಗೆ ಆಪಾದಿತ ಅಧಿಕಾರಿಯಾದ ಶ್ರೀ ಜಿ. ಜಿ. ಹೆಗಡೆ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಸಾಮಾಜಿಕ ಅರಣ್ಯ ಉಪ ವಿಭಾಗ ಗಂಗಾವತಿ ಇವರನ್ನು ಸೇವೆಯಿಂದ ವಜಾ ಮಾಡುವ ದಂಡನೆಯನ್ನು ವಿಧಿಸಲು ಹಾಗೂ ಅವರಿಂದ ಸರ್ಕಾರಕ್ಕೆ ಉಂಟಾದ ಆರ್ಥಿಕ ನಷ್ಟವನ್ನು ಕಾನೂನಿನ ಪ್ರಕಾರ ವಸೂಲು ಮಾಡಲು ಸಚಿವ ಸಂಪುಟದ ಅನುಮೋದನೆಯನ್ನು ಬಾಕಿ ಇಟ್ಟು ಈ ಕೆಳಕಂಡ ಆದೇಶ.

ಸರ್ಕಾರದ ಆದೇಶ ಸಂಖ್ಯೆ : ಅಪಜೀ 132 ಅಇವಿ 2010, ಬೆಂಗಳೂರು, ದಿನಾಂಕ : 26-12-2012

ಪ್ರಸ್ತಾವನೆಯಲ್ಲಿ ವಿವರಿಸಲ್ಪಟ್ಟ ಸಂದರ್ಭ ಮತ್ತು ಸನ್ನಿವೇಶಗಳ ಹಿನ್ನೆಲೆಯಲ್ಲಿ, ಸರ್ಕಾರಿ ಆದೇಶ ಸಂಖ್ಯೆ : ಅಪಜೀ 51 ಅಇವಿ 2006, ದಿನಾಂಕ : 03-05-2010ರ ಆದೇಶದಲ್ಲಿ ಆಪಾದಿತ ಅಧಿಕಾರಿಗೆ ಮುಂದಿನ ಮೂರು ವಾರ್ಷಿಕ ವೇತನ ಬಡ್ತಿಗಳನ್ನು ಸಂಚಿತ ಪರಿಣಾಮ ಬೀರುವಂತೆ ರೂ. 95,36,629-00ಗಳ ಮೊತ್ತವನ್ನು ಕಾರಣ ಕೇಳುವ ನೋಟಿಸ್‌ನ್ನು ಜಾರಿ ಮಾಡಿದ ದಿನಾಂಕದಿಂದ ಶೇಕಡ 8ರ ಬಡ್ಡಿಗೆ ವಸೂಲು ಮಾಡಲು ಹಾಗೂ ಅಧಿಕಾರಿಯು ಈಗ ಹೊಂದಿರುವ ಹುದ್ದೆಯ ಕಾಲಿಕ ವೇತನ ಶ್ರೇಣಿಯಲ್ಲಿ ಅವರ ವೇತನವನ್ನು ಎರಡು ವರ್ಷದ ಅವಧಿಗೆ ಮಾತ್ರ ಸೀಮಿತಗೊಳಿಸಿ ಒಂದುಕರ್ನಾಟಕ ರಾಜ್ಯಪತ್ರ, ಗುರುವಾರ, ಸೆಪ್ಟೆಂಬರ್ ೧೨, ೨೦೧೩ ಭಾಗ ೧ ೧೪೩೮ ಹಂತಕ್ಕೆ ಕೆಳಗೆ ಇಳಿಸಲು ವಿಧಿಸಿರುವ ದಂಡನೆಯ ಬದಲಿಗೆ ಸರ್ಕಾರವು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮ 1957ರ ನಿಯಮ 8(viii) ರನ್ವಯ ಆಪಾದಿತ ಅಧಿಕಾರಿಯಾದ ಶ್ರೀ ಜಿ. ಜಿ. ಹೆಗಡೆ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಸಾಮಾಜಿಕ ಅರಣ್ಯ ಉಪ ವಿಭಾಗ, ಗಂಗಾವತಿ ಇವರನ್ನು ತತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ವಜಾಗೊಳಿಸಿದೆ. ಹಾಗೂ, ಅವರಿಂದ ಸರ್ಕಾರಕ್ಕೆ ನಷ್ಟವಾಗಿರುವ ಹಣ ರೂ. 95,36,629-00 (ರೂ.ತೊಂಬತ್ತೈದು ಲಕ್ಷದ ಮೂವತ್ತಾರು ಸಾವಿರದ ಆರು ನೂರ ಇಪ್ಪತ್ತೊಂಬತ್ತು ಮಾತ್ರ)ಗಳನ್ನು ಶೇಕಡ 8ರ ಬಡ್ಡಿಯೊಂದಿಗೆ ವಸೂಲು ಮಾಡಲು ಕಾನೂನಿನ ಪ್ರಕಾರ ಕ್ರಮ ತೆಗೆದುಕೊಳ್ಳಲು ಆದೇಶಿಸಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಎಸ್. ಬಾಲಕೃಷ್ಣಯ್ಯ, ಸರ್ಕಾರದ ಅಧೀನ ಕಾರ್ಯದರ್ಶಿ (ಸೇವೆಗಳು), P.R. 676

ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ.

ಅಲ್ಪಸಂಖ್ಯಾತರ ಕಲ್ಯಾಣ ಸಚಿವಾಲಯ

ವಿಷಯ : ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ಪತ್ರಾಂಕಿತವಲ್ಲದ (ಗ್ರೂಪ್ 'ಸಿ') ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗಲು ತರಬೇತಿ ನೀಡುವ ಬಗ್ಗೆ.

ಓದಲಾಗಿದೆ : 1. ಸರ್ಕಾರಿ ಆದೇಶ ಸಂಖ್ಯೆ : ಅಸಂಕಇ 68 ಡಬ್ಲ್ಯೂಎಫ್ ಡಬ್ಲ್ಯೂ 2010, ದಿನಾಂಕ : 26-05-2010.

2. ದಿನಾಂಕ : 29-01-2013 ರಂದು ನಡೆದ ಪ್ರಧಾನ ಮಂತ್ರಿ 15 ಅಂಶಗಳ ಕಾರ್ಯಕ್ರಮದ ಪುನರ್

ಪರಿಶೀಲನಾ ಸಭೆ.

3. ನಿರ್ದೇಶಕರು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಇವರ ಪತ್ರ ಸಂಖ್ಯೆ : ಅಸಂನಿ. ಸ್ವಪಕ/ಸಿಆರ್-28/2011-12, ದಿನಾಂಕ : 19-07-2012.

ಪ್ರಸ್ತಾವನೆ :

ರಾಜ್ಯದ ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ಐಎಎಸ್ ಮತ್ತು ಕೆಎಎಸ್ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿಯನ್ನು ನೀಡಲು ಹಾಗೂ 3 ವರ್ಷಗಳ ನಂತರ ಯೋಜನೆಯ ಮೌಲ್ಯ ನಿರ್ಧರಿಸುವ ಬಗ್ಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿ ಮೇಲೆ (1)ರಲ್ಲಿ ಓದಲಾದ ಸರ್ಕಾರದ ಆದೇಶವನ್ನು ಹೊರಡಿಸಲಾಗಿದೆ.

ದಿನಾಂಕ : 29-01-2013 ರಂದು ಪ್ರಧಾನಮಂತ್ರಿಗಳ 15 ಅಂಶಗಳ ಕಾರ್ಯಕ್ರಮದ ಪುನರ್ ಪರಿಶೀಲನಾ ಸಭೆಯಲ್ಲಿ ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ಗ್ರೂಪ್ 'ಸಿ' ಹುದ್ದೆಗಳಿಗೆ (ಪತ್ರಾಂಕಿತವಲ್ಲದ) ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗಲು ಪರೀಕ್ಷಾಪೂರ್ವ ತರಬೇತಿಯನ್ನು ನೀಡಲು ನಿರ್ಧರಿಸಲಾಗಿದೆ.

ನಿರ್ದೇಶಕರು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಇವರು ಮೇಲೆ (3)ರಲ್ಲಿ ಓದಲಾದ ಪತ್ರದಲ್ಲಿ ಪ್ರಸ್ತಾವನೆಯನ್ನು ಕಳುಹಿಸಿ ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ಗ್ರೂಪ್ 'ಸಿ' ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪರೀಕ್ಷಾಪೂರ್ವ ತರಬೇತಿಯನ್ನು ನೀಡುವಂತೆ ಹಾಗೂ ಇದಕ್ಕಾಗಿ ಈ ಹಿಂದೆ ದಿನಾಂಕ :

26-05-2010ರ ಆದೇಶದೊಂದಿಗೆ ಹೊರಡಿಸಲಾದ ಮಾರ್ಗಸೂಚಿಗಳನ್ನು ತಿದ್ದುಪಡಿಮಾಡಲು ಪ್ರಸ್ತಾವನೆಯನ್ನು ಸಲ್ಲಿಸಿರುತ್ತಾರೆ.

ನಿರ್ದೇಶಕರು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಇವರ ಪ್ರಸ್ತಾವನೆಯನ್ನು ಪರಿಶೀಲಿಸಿ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ : MWD 303 MDS 2012, ಬೆಂಗಳೂರು, ದಿನಾಂಕ : 13-02-2013.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ರಾಜ್ಯದ ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ಪತ್ರಾಂಕಿತವಲ್ಲದ ಗ್ರೂಪ್ ಸಿ ಹುದ್ದೆಗಳ ಪರೀಕ್ಷೆಗಳಿಗೆ ಹಾಜರಾಗಲು ಪರೀಕ್ಷಾಪೂರ್ವ ತರಬೇತಿಯನ್ನು ನೀಡಲು ಈ ಆದೇಶದೊಂದಿಗೆ ಲಗತ್ತಿಸಿರುವ ಅನುಬಂಧದಲ್ಲಿ ನಿಗಧಿಪಡಿಸಿರುವ ಷರತ್ತುಗಳಿಗೆ ಒಳಪಟ್ಟು ಸರ್ಕಾರದ ಮಂಜೂರಾತಿ ನೀಡಲಾಗಿದೆ. ಈ ತರಬೇತಿಗೆ ತಗಲುವ ವೆಚ್ಚವನ್ನು ಲೆಕ್ಕಶೀರ್ಷಿಕೆ 2225-03-277-03-05 ರಡಿಯಲ್ಲಿ ಒದಗಿಸಿರುವ ಅನುದಾನದಲ್ಲಿಯೇ ಭರಿಸತಕ್ಕದ್ದು ಯಾವುದೇ ಕಾರಣಕ್ಕೂ ಹೆಚ್ಚುವರಿ ಅನುದಾನವನ್ನು ಕೋರತಕ್ಕದಲ್ಲ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಎಂ. ನಾಗರತ್ನ

ಸರ್ಕಾರದ ಉಪ ಕಾರ್ಯದರ್ಶಿ,

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ.

ಸರ್ಕಾರದ ಆದೇಶ ಸಂಖ್ಯೆ : ಎಂಡಬ್ಲ್ಯೂಡಿ 303 ಎಂಡಿಎಸ್ 2012, ದಿನಾಂಕ : 13-02-2013ಕ್ಕೆ ಅನುಬಂಧ

ವಿಷಯ : ಅಲ್ಪಸಂಖ್ಯಾತರ ಅಭ್ಯರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪರೀಕ್ಷೆ ಪೂರ್ವ ತರಬೇತಿಗೆ ಮಾರ್ಗಸೂಚಿಗಳು.

ಕೇಂದ್ರ ಮತ್ತು ಕರ್ನಾಟಕ ಲೋಕಸೇವಾ ಆಯೋಗಗಳು ಹಾಗೂ ಇತರೆ ನೇಮಕಾತಿ ಪ್ರಾಧಿಕಾರಗಳು ನಡೆಸುವ ಪರೀಕ್ಷೆಗಳನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರವು ಅಲ್ಪಸಂಖ್ಯಾತರ ಅಭ್ಯರ್ಥಿಗಳಿಗೆ ಪರೀಕ್ಷಾ ಪೂರ್ವ ತರಬೇತಿಯನ್ನು ಸರ್ಕಾರದ ವಿವಿಧ ಇಲಾಖೆಗಳ ಪರೀಕ್ಷಾ ತರಬೇತಿ ಕೇಂದ್ರಗಳು ಹಾಗೂ ಪ್ರತಿಷ್ಟಿತ ಖಾಸಗಿ ಸಂಸ್ಥೆಗಳ ಮೂಲಕ ತರಬೇತಿ ನೀಡಲು ಉದ್ದೇಶಿಸಿದೆ. ಅದರಂತೆ ಈ ಕೆಳಕಂಡ ಮಾರ್ಗಸೂಚಿಗಳನ್ನು ರಚಿಸಿದೆ.

1. ಉದ್ದೇಶಗಳು :-

ಗುಣಾತ್ಮಕ ಬೋಧನೆಯನ್ನು ಕೊಡುವುದು ಈ ಯೋಜನೆಯ ಉದ್ದೇಶವಾಗಿದೆ.

ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಸೆಪ್ಟೆಂಬರ್ ೧೨, ೨೦೧೩ ೧೪೩೯

1. ಕೇಂದ್ರ ಲೋಕಸೇವಾ ಆಯೋಗದವರು ನಡೆಸುವ ಗೂಪ್ 'ಎ' ಮತ್ತು 'ಬಿ' ಪರೀಕ್ಷೆಗಳು.

2. ಕರ್ನಾಟಕ ಲೋಕಸೇವಾ ಆಯೋಗದಿಂದ ನಡೆಸುವ ಗ್ರೂಪ್ 'ಎ', 'ಬಿ' ಮತ್ತು 'ಸಿ' ಹುದ್ದೆಗಳು.

3. ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ನೇಮಕಾತಿ ಹುದ್ದೆಗಳಿಗೆ ಪೂರಕ ತರಬೇತಿ

4. ಬ್ಯಾಂಕ್‌ಗಳು, ಇನ್‌ಸುರೇನ್ಸ್ ಕಂಪನಿಗಳು, ಸಾರ್ವಜನಿಕ, ರಾಜ್ಯ ಸರ್ಕಾರದ ಸ್ವಯತ್ತ ಸಂಸ್ಥೆಗಳು ಹಾಗೂ ಇತರೆ ಸಂಸ್ಥೆಗಳು ನಡೆಸುವ ಅಧಿಕಾರಿಗಳ ಮತ್ತು ಇತರೆ 'ಸಿ' ದರ್ಜೆ ಹುದ್ದೆಗಳ ಪರೀಕ್ಷೆಗಳು.

2. ಅನುಷ್ಠಾನದ ಸಂಸ್ಥೆಗಳು :-

1. ರಾಜ್ಯ ಸರ್ಕಾರದಿಂದ ನಡೆಸಲಾಗುವ ಪರೀಕ್ಷಾ ಪೂರ್ವ ತರಬೇತಿ ಕೇಂದ್ರ

2. ರಾಜ್ಯ ಮತ್ತು ರಾಜ್ಯದ ಹೊರಗೆ ಗುರುತಿಸಲ್ಪಟ್ಟ ಪ್ರತಿಷ್ಠಿತ ಖಾಸಗಿ ಸಂಸ್ಥೆಗಳಿಗೆ ನಿಯೋಜಿಸುವುದು.

3. ಅನುದಾನದ ಹಂಚಿಕೆ :-

1. ಕರ್ನಾಟಕ ಸರ್ಕಾರವು ಈ ಕಾರ್ಯಕ್ರಮಕ್ಕೆ ಅನುದಾನವನ್ನು ಒದಗಿಸುವುದು.

2. ಸಂಸ್ಥೆಗಳ ತರಬೇತಿ ಶುಲ್ಕಗಳು, ಅಭ್ಯರ್ಥಿಗಳ ಸ್ಟೈಫಂಡ್ ಹಾಗೂ ಇತರೆ ಸಂಬಂಧಿಸಿದ ಖರ್ಚುಗಳನ್ನು ಸರ್ಕಾರವು ಭರಿಸುವುದು.

3. ಕೇಂದ್ರ ಸರ್ಕಾರದ ಅಲ್ಪಸಂಖ್ಯಾತರ ಸಚಿವಾಲಯದಿಂದಲೂ ಈ ಕಾರ್ಯಕ್ರಮ ಅನುಷ್ಠಾನಕ್ಕೆ ಅನುದಾನವನ್ನು ಪಡೆದುಕೊಳ್ಳಲಾಗುವುದು.

ಕೇಂದ್ರ ಸರ್ಕಾರದ ಅಲ್ಪಸಂಖ್ಯಾತರ ಸಚಿವಾಲಯದಿಂದಲೂ ಈ ಕಾರ್ಯಕ್ರಮ ಅನುಷ್ಠಾನಕ್ಕೆ ಅನುದಾನವನ್ನು ಪಡೆದುಕೊಳ್ಳಲಾಗುವುದು.

4. ಅಭ್ಯರ್ಥಿಗಳ ಅರ್ಹತೆ :-

1. ಅಭ್ಯರ್ಥಿಗಳು ಸಂಬಂಧಿಸಿದ ಪ್ರಾಧಿಕಾರದಿಂದ ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳನ್ನು ಪಡೆದು ಸಲ್ಲಿಸುವುದು.

2. ಅಭ್ಯರ್ಥಿಯ ಕುಟುಂಬದ ವಾರ್ಷಿಕ ವರಮಾನ ರೂ. 3.5 ಲಕ್ಷಕ್ಕಿಂತ ಕಡಿಮೆ ಆದಾಯವುಳ್ಳ ಅಲ್ಪಸಂಖ್ಯಾತರ ಅಭ್ಯರ್ಥಿಗಳಿಗೆ ಮಾತ್ರ ಈ ಯೋಜನೆಯಡಿಯಲ್ಲಿ ಸೌಲಭ್ಯ ಪಡೆಯಬಹುದು.

3. ಅಭ್ಯರ್ಥಿಯು ಯು.ಪಿ.ಎಸ್.ಸಿ/ಕೆ.ಪಿ.ಎಸ್.ಸಿ. ಹಾಗೂ ಸಂಬಂಧಪಟ್ಟ ಇಲಾಖೆಯ ಮಾರ್ಗಸೂಚಿಯಂತೆ ಯಾವುದೇ ಒಂದು ಪದವಿಯನ್ನು ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.

4. ರಾಜ್ಯದ ಇಲಾಖೆಗಳಿಂದ ನಿಗದಿಪಡಿಸಿರುವ ವಿದ್ಯಾರ್ಹತೆ ಹೊಂದಿರಬೇಕು.

5. ಇತರೆ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ನೇಮಕಾತಿ ಪ್ರಾಧಿಕಾರದವರು ನಿಗಧಿಪಡಿಸಿದ ವಿದ್ಯಾರ್ಹತೆಯನ್ನು ಹೊಂದಿರಬೇಕು.

6. ಉದ್ಯೋಗದ ಪ್ರಕಟಣೆಯಂತೆ ಅಭ್ಯರ್ಥಿಯ ವಯೋಮಿತಿಯು ಕನಿಷ್ಠ 21 ವರ್ಷಗಳಿದ್ದು, ಗರಿಷ್ಠ ವಯೋಮಿತಿಯು ಪ್ರಾಧಿಕಾರ/ಇಲಾಖೆ ನಿಗಧಿಪಡಿಸಿದಂತೆ ಇರಬೇಕು.

7. ಯೋಜನೆಯಡಿಯಲ್ಲಿ ಅಭ್ಯರ್ಥಿಯು ಈ ಕೆಳಕಂಡಂತೆ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು.

ಅ) ಸ್ಪರ್ಧಾತ್ಮಕ ಪರೀಕ್ಷೆಯು ಎರಡು ಹಂತಗಳಲ್ಲಿ ಅಂದರೆ ಪ್ರಿಲಿಮಿನರಿ ಮತ್ತು ಮುಖ್ಯ ಪರೀಕ್ಷೆ ನಡೆಯುವುದಿದ್ದಲ್ಲಿ ಅಭ್ಯರ್ಥಿಯು ಎರಡೂ ಪರೀಕ್ಷೆಗಳಿಗೂ ಬೋಧನೆಯನ್ನು ಪಡೆಯಬಹುದು. ಆದರೆ ಮುಖ್ಯ ಪರೀಕ್ಷೆಗೆ ತರಬೇತಿಯನ್ನು ಪಡೆಯಲು ಅಭ್ಯರ್ಥಿಯು ಮೂಲ ಪರೀಕ್ಷೆಯನ್ನು (Prelim) ಪಾಸು ಮಾಡಿರಬೇಕು ಹಾಗೂ ಮುಖ್ಯ ಪರೀಕ್ಷೆಗೆ (Prelim) ಅರ್ಜಿಯನ್ನು ಹಾಕಿರಬೇಕು ಅಥವಾ ಹಾಕುವವರಾಗಿರಬೇಕು.

ಆ) ಅಭ್ಯರ್ಥಿಯು ಯಾವುದೇ ಒಂದು ಸ್ಪರ್ಧಾತ್ಮಕ ಪರೀಕ್ಷೆಯನ್ನು ತೆಗೆದುಕೊಳ್ಳಲು ಹಲವಾರು ಅವಕಾಶಗಳಿದ್ದರೂ ಸದರಿ ಯೋಜನೆಯಡಿ ಕೇವಲ ಒಂದು ಬಾರಿ ಮಾತ್ರ ಸೌಲಭ್ಯವನ್ನು ಪಡೆಯಬಹುದು. ಉದಾಹರಣೆ : ಒಂದು ಬಾರಿ ಮೂಲ ಪರೀಕ್ಷೆ (Prelimanary) ಮತ್ತು ಒಂದು ಬಾರಿ ಮುಖ್ಯ ಪರೀಕ್ಷೆ.

ಇ) ವೈಯಕ್ತಿಕ ಸಂದರ್ಶನದ ಅಭ್ಯರ್ಥಿಯು ಈ ಯೋಜನೆಯಡಿಯಲ್ಲಿ ದಿನಭತ್ಯೆ ಮತ್ತು ಪ್ರಯಾಣ ಭತ್ಯೆಯ ಸೌಲಭ್ಯವನ್ನು ಪಡೆಯಬಹುದು.

ಈ) ಅಭ್ಯರ್ಥಿಯು ಸದರಿ ಯೋಜನೆಯಡಿಯಲ್ಲಿ ಎರಡು ಬಾರಿಗಿಂತ ಹೆಚ್ಚಿಗೆ ಮೂಲ ಪರೀಕ್ಷೆ/ಮುಖ್ಯ ಪರೀಕ್ಷೆ (Prelim/main) ಸೌಲಭ್ಯವನ್ನು ಪಡೆದುಕೊಂಡಿರುವುದಿಲ್ಲ ಎಂದು ಪ್ರಮಾಣ ಪತ್ರವನ್ನು ಸಲ್ಲಿಸಬೇಕು.

ಉ) ಆಯ್ಕೆಗೊಂಡ ಅಭ್ಯರ್ಥಿಗಳು ಯಾವುದೇ ಒಂದು ಅನುಮೋದಿತ ತರಬೇತಿ ಸಂಸ್ಥೆಯಲ್ಲಿ ತಮ್ಮ ಇಚ್ಛಾನುಸಾರ ಸೇರಬಹುದು.

ಊ) ಆಯ್ಕೆಗೊಂಡ ಅಭ್ಯರ್ಥಿಯು ಎಲ್ಲಾ ತರಗತಿಗಳಿಗೆ ಕಡ್ಡಾಯವಾಗಿ ಹಾಜರಾಗುವುದು. ಅಭ್ಯರ್ಥಿಯು 15 ದಿನಗಳಿಗೆ ಮೇಲ್ಪಟ್ಟು ಸಕಾರಣವಿಲ್ಲದೇ ಗೈರು ಹಾಜರಾದಲ್ಲಿ ಉಚಿತ ಬೋಧನೆಯ ಸೌಲಭ್ಯವನ್ನು ರದ್ದುಗೊಳಿಸಲಾಗುವುದು.

ಋು) ಅನುಮೋದಿತ ತರಬೇತಿ ಸಂಸ್ಥೆಗಳೂ ಸಹ ಗೈರು ಹಾಜರಾದ ಅಭ್ಯರ್ಥಿಗಳ ಬಗ್ಗೆ ಇಲಾಖೆಗೆ ವರದಿ ಮಾಡುವುದು ಅದರಂತೆ ಶುಲ್ಕ/ಇತ್ಯಾದಿ ಸೌಲಭ್ಯಗಳನ್ನು ಸದರಿ ಅಭ್ಯರ್ಥಿಗಳಿಗೆ ಕಡಿತಗೊಳಿಸಲಾಗುವುದು.

ಋೂ) ಅಭ್ಯರ್ಥಿಯು ಸ್ವತಃ ಮುಖ್ಯ ಪರೀಕ್ಷೆಯನ್ನು ಪಾಸು ಮಾಡಿ ವೈಯಕ್ತಿಕ ಸಂದರ್ಶನದ (Personnel Interview) ತರಬೇತಿಯನ್ನು ಬಯಸಿದ್ದಲ್ಲಿ ಅಂತಹ ಅಭ್ಯರ್ಥಿಗಳು ಸಹ ಯೋಜನೆಯಡಿ ಸೌಲಭ್ಯವನ್ನು ಪಡೆಯಬಹುದು.

5. ಅಭ್ಯರ್ಥಿಗಳ ಆಯ್ಕೆ :

1. ಗ್ರೂಪ್ ಎ, ಬಿ ಮತ್ತು ಸಿ ಅರ್ಹ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಪತ್ರಿಕಾ ಪ್ರಕಟಣೆಗಳು/ವೆಬ್‌ಸೈಟ್ ಇತ್ಯಾದಿಗಳ ಮೂಲಕ ಆಹ್ವಾನಿಸಲಾಗುವುದು.

ಕರ್ನಾಟಕ ರಾಜ್ಯಪತ್ರ, ಗುರುವಾರ, ಸೆಪ್ಟೆಂಬರ್ ೧೨, ೨೦೧೩ ಭಾಗ ೧ ೧೪೪೦

2. ಮೂಲ ಪರೀಕ್ಷೆಯ ಬೋಧನೆಗೆ/ಒಂದನೇ ಹಂತದ ಪರೀಕ್ಷೆ (Preliminary Examination) ಅಭ್ಯರ್ಥಿಗಳು ಲಿಖಿತ ಪರೀಕ್ಷೆಯಲ್ಲಿ ಪಡೆದುಕೊಂಡ ಅಂಕಗಳ ಅರ್ಹತೆ ಮೇಲೆ ಆಯ್ಕೆ ಪಟ್ಟಿಯನ್ನು ಸಿದ್ದಪಡಿಸಲಾಗುವುದು. ಅಭ್ಯರ್ಥಿಗಳ ನಿಯೋಜನೆ/ಪ್ರವೇಶವು ಅನುದಾನದ ಲಭ್ಯತೆಯನ್ನು ಆಧರಿಸಿದೆ (ಅರ್ಹತೆಯ ಪಟ್ಟಿಯನ್ನು ಪ್ರಕಟಿಸುವುದು).

3. ಲಿಖಿತ ಪರೀಕ್ಷೆಯು ಆಂಗ್ಲ, ಕನ್ನಡ, ಸಾಮಾನ್ಯ ಜ್ಞಾನ ಮತ್ತು ಅಂಕಗಣಿತದ ಸಾಮರ್ಥ್ಯ ಇತ್ಯಾದಿಯನ್ನು ಒಳಗೊಂಡಿರುತ್ತದೆ.

4. ಅರ್ಹ ಅಭ್ಯರ್ಥಿಗಳನ್ನು ವಿವಿಧ ತರಬೇತಿ ಸಂಸ್ಥೆಗಳಿಗೆ ಅಂಕಗಳ ಅರ್ಹತೆ ಮತ್ತು ಆಭ್ಯರ್ಥಿಗಳ ಇಚ್ಛಾನುಸಾರ ನಿಯೋಜಿಸಲಾಗುವುದು.

5. ಗ್ರೂಪ್ ಎ ಮತ್ತು ಬಿ ಹುದ್ದೆಗಳ ಮೂಲ ಪರೀಕ್ಷೆಯಲ್ಲಿ (Prelim) ಅರ್ಹರಾದ ಎಲ್ಲಾ ಅಭ್ಯರ್ಥಿಗಳನ್ನು ಮುಖ್ಯ ಪರೀಕ್ಷೆಯ ಬೋಧನೆಗೆ ಅನುದಾನದ ಲಭ್ಯತೆ ಆಧರಿಸಿ ನಿಯೋಜಿಸಲಾಗುವುದು.

6. ಅಭ್ಯರ್ಥಿಗಳ ಸಂಖ್ಯೆ :

ತರಬೇತಿಗೆ ನಿಯೋಜಿಸುವ ಅಭ್ಯರ್ಥಿಗಳ ಸಂಖ್ಯೆಯು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅನುದಾನದ ಲಭ್ಯತೆಯನ್ನು ಅವಲಂಬಿಸಿರುತ್ತದೆ.

7. ಶಿಷ್ಯವೇತನ (ಸ್ಟೈಫಂಡ್) :-

1. ಕೇಂದ್ರ ಲೋಕ ಸೇವಾ ಆಯೋಗದ ಪರೀಕ್ಷೆಗಳಿಗೆ ಆಯ್ಕೆಗೊಂಡ ಅಭ್ಯರ್ಥಿಗಳು ಕರ್ನಾಟಕ ರಾಜ್ಯದ ಹೊರಗಿನ ಪ್ರತಿಷ್ಠಿತ ಸಂಸ್ಥೆಗಳಲ್ಲಿ ತರಬೇತಿ ಪಡೆಯುತ್ತಿದ್ದಲ್ಲಿ ಮಾಸಿಕ ರೂ. 5000/- ಹಾಗೂ ಸ್ಥಳೀಯ ಪ್ರತಿಷ್ಠಿತ ಸಂಸ್ಥೆಗಳಲ್ಲಿ ತರಬೇತಿ ಪಡೆಯುವ ಅಭ್ಯರ್ಥಿಗಳಿಗೆ ಮಾಸಿಕ ರೂ. 3000/-ಕ್ಕೆ ಮೀರದಂತೆ ಶಿಷ್ಯವೇತನ (ಸ್ಟೈಫಂಡ್) ನೀಡಲಾಗುವುದು.

2. ಪ್ರತಿಷ್ಠಿತ ಸಂಸ್ಥೆಗಳಿಗೆ ನಿಯೋಜಿಸುವ ಅಭ್ಯರ್ಥಿಗಳ ಮಾಸಿಕ ಸ್ಟೈಫಂಡ್ ಅನ್ನು ತರಬೇತಿ ಸಂಸ್ಥೆಯು ಇರುವ ಸ್ಥಳ ಹಾಗೂ ಅಲ್ಲಿಯ ಮೂಲಭೂತ ಅಗತ್ಯ ಖರ್ಚುಗಳ ಆಧಾರದ ಮೇಲೆ ಸದರಿ ಯೋಜನೆಯಡಿ ನಿರ್ಧರಿಸಲಾಗುವುದು.

3. ಪತ್ರಾಂಕಿತವಲ್ಲದ (ಸಿ ಗ್ರೂಪ್) ಹುದ್ದೆಗಳ ತರಬೇತಿ ಪಡೆಯುವ ಅಭ್ಯರ್ಥಿಗಳಿಗೆ ಮಾಸಿಕ ರೂ. 1000/-ಗಳ ಶಿಷ್ಯವೇತನ (ಸ್ಟೈಫಂಡ್) ನೀಡಲಾಗುವುದು.

4. ಅಭ್ಯರ್ಥಿಗಳ ಮಾಸಿಕ ಸ್ಟೈಫಂಡ್ಅನ್ನು ಇಲಾಖೆಯಿಂದ ನೇರವಾಗಿ ಅಭ್ಯರ್ಥಿಗಳಿಗೆ ಚೆಕ್‌ಗಳ ಮೂಲಕ ತರಬೇತಿ ಸಂಸ್ಥೆಗಳಿಂದ ಪಡೆದ ಹಾಜರಾತಿಯಂತೆ ಸೂಕ್ತ ಸ್ವೀಕೃತಿಯೊಂದಿಗೆ ಪಾವತಿಸಲಾಗುವುದು. ಒಂದು ವೇಳೆ ತರಬೇತಿ ಸಂಸ್ಥೆಗಳು, ಊಟದ ವಸತಿ ಸೌಲಭ್ಯವನ್ನು ಒದಗಿಸಿದ್ದಲ್ಲಿ ನೇರವಾಗಿ ಸಂಸ್ಥೆಗಳಿಗೆ ಹಣವನ್ನು ಪಾವತಿಸಲಾಗುವುದು. ಆದರೆ ಪತ್ರಾಂಕಿತವಲ್ಲದ (ಸಿ ಗ್ರೂಪ್) ಹುದ್ದೆಗಳ ತರಬೇತಿ ಪಡೆಯುವ ಅಭ್ಯರ್ಥಿಗಳಿಗೆ ಈ ಸೌಲಭ್ಯವು ಇರುವುದಿಲ್ಲ.

5. ಗ್ರೂಪ್ ಎ ಮತ್ತು ಬಿ ಹುದ್ದೆಗಳಿಗೆ ಆಯ್ಕೆಗೊಂಡ ಅಭ್ಯರ್ಥಿಗಳು ತಮ್ಮ ವಾಸಸ್ಥಳದಿಂದ ತರಬೇತಿ ಕೇಂದ್ರ ಹಾಗೂ ತರಬೇತಿ ಕೇಂದ್ರದಿಂದ ವಾಸಸ್ಥಳಕ್ಕೆ ಹೋಗಿಬರಲು 2ನೇ ಶ್ರೇಣಿ ರೈಲು/ ಬಸ್ಸು ಪ್ರಯಾಣ ದರ ಹಾಗೂ ಪ್ರಯಾಣ ಭತ್ಯೆಯನ್ನು ನಿಗಧಿ ಪಡಿಸಿದಂತೆ ಪಡೆಯಲು ಅರ್ಹರು. ಆದರೆ ವೈಯಕ್ತಿಕ ಸಂದರ್ಶನಕ್ಕೆ (Personnel Interview) ಹಾಜರಾಗುವ ಅಭ್ಯರ್ಥಿಗಳು ಪ್ರತಿ ಸಂದರ್ಶನದ ಸಂದರ್ಭದಲ್ಲೂ ಈ ಸೌಲಭ್ಯ ಪಡೆಯಲು ಅರ್ಹರಾಗಿರುತ್ತಾರೆ.

6. ವೈಯಕ್ತಿಕ ಸಂದರ್ಶನಕ್ಕೆ ಹಾಜರಾಗುವ ಅಭ್ಯರ್ಥಿಗಳಿಗೆ ಡಿ.ಪಿ.ಎ.ಆರ್. ಅನುಮತಿಯೊಂದಿಗೆ ಸಾಧ್ಯವಾದಷ್ಟು ಸರ್ಕಾರಿ ವಸತಿ ಗೃಹಗಳಲ್ಲಿ ವಸತಿ ಸೌಲಭ್ಯವನ್ನು ಕಲ್ಪಿಸಿಕೊಡಲಾಗುವುದು.

8. ಸದರಿ ಕಾರ್ಯಕ್ರಮದ ಅನುಷ್ಠಾನಕ್ಕಾಗಿ (ಎ ಮತ್ತು ಬಿ ಹುದ್ದೆಗಳಿಗೆ ಅಭ್ಯರ್ಥಿಗಳ ಆಯ್ಕೆ ಸಮಿತಿಯಾಗಿ) ಈ ಕೆಳಕಂಡ ಸಮಿತಿಯನ್ನು ರಚಿಸಲಾಗಿದೆ :-

1. ಸರ್ಕಾರದ ಕಾರ್ಯದರ್ಶಿಗಳು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ - ಅಧ್ಯಕ್ಷರು 2. ಸರ್ಕಾರದ ಉಪ ಕಾರ್ಯದರ್ಶಿಗಳು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ - ಸದಸ್ಯರು 3. ನಿರ್ದೇಶಕರು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ - ಸದಸ್ಯ ಕಾರ್ಯದರ್ಶಿ 9. ಪತ್ರಾಂಕಿತವಲ್ಲದ ಹುದ್ದೆಗಳ ತರಬೇತಿಗೆ (ಗ್ರೂಪ್ ಸಿ) ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಈ ಕೆಳಕಂಡ ಸಮಿತಿಯನ್ನು ರಚಿಸಲಾಗಿದೆ:-

1.

ಆಯಾ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಣ ಅಧಿಕಾರಿಗಳು

- ಅಧ್ಯಕ್ಷರು 2.

ಆಯಾ ಜಿಲ್ಲೆಗಳ ಜಿಲ್ಲಾ ಉದ್ಯೋಗ ಅಧಿಕಾರಿಗಳು

- ಸದಸ್ಯರು 3.

ಆಯಾ ಜಿಲ್ಲೆಯ ಜಿಲ್ಲಾ ಅಧಿಕಾರಿಗಳು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ/

ಜಿಲ್ಲಾ ಅಧಿಕಾರಿಗಳು, ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ - ಸದಸ್ಯ ಕಾರ್ಯದರ್ಶಿ 10. ಸಮಿತಿಯ ಕಾರ್ಯಗಳು :-

1. ಸಮಿತಿಯು ನಿಯಮಾನುಸಾರ ಅಭ್ಯರ್ಥಿಗಳನ್ನು ಅರ್ಹತೆ ಆಧಾರದ ಮೇಲೆ ಆಯ್ಕೆ ಮಾಡುವುದು.

2. ಸಮಿತಿಯು ಸರ್ಕಾರಕ್ಕೆ ಪ್ರತಿಷ್ಠಿತ ತರಬೇತಿ ಸಂಸ್ಥೆಗಳು, ಅವುಗಳ ತರಬೇತಿ ಶುಲ್ಕ ಇತ್ಯಾದಿ ಹಾಗೂ ಅಭ್ಯರ್ಥಿಗಳ ಶಿಷ್ಯವೇತನ (ಸ್ಟೈಫಂಡ್) ಮತ್ತು ಪ್ರಯಾಣ ಭತ್ಯೆ ಇತ್ಯಾದಿಗಳ ಬಗ್ಗೆ ಶಿಫಾರಸ್ಸು ಮಾಡುವುದು. ಸಮಿತಿಯು ಬೋಧನಾ ಅಂಶಗಳ ಕುರಿತಂತೆ ಸಂಬಂಧಪಟ್ಟ ಬೋಧನಾ ಸಂಸ್ಥೆಗಳೊಂದಿಗೆ ಒಡಂಬಡಿಕೆಯನ್ನು ಮಾಡಿಕೊಳ್ಳುವ ಅಧಿಕಾರ ಹೊಂದಿರುತ್ತದೆ (ದಂಡನೆಯ ನಿಬಂಧನೆ ಸೇರಿದಂತೆ).

ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಸೆಪ್ಟೆಂಬರ್ ೧೨, ೨೦೧೩ ೧೪೪೧

3. ಸಮಿತಿಯ ಸದರಿ ಯೋಜನೆಯಡಿಯಲ್ಲಿ ನಡೆಯುವ ಪರೀಕ್ಷೆಯ ಬಗ್ಗೆ ಪೂರೈಕೆ ಮಾಡಬೇಕಾದ ಅಧ್ಯಯನದ ಸಾಮಗ್ರಿಗಳು ಹಾಗೂ ಇತರೆ ಅಂಶಗಳ ಬಗ್ಗೆ ನಿರ್ಧಾರವನ್ನು ತೆಗೆದುಕೊಳ್ಳುವ ಅಧಿಕಾರ ಹೊಂದಿದೆ.

4. ಆಯ್ಕೆ ಸಮಿತಿ ಆಯ್ಕೆ ಮಾಡಿದ ಅಭ್ಯರ್ಥಿಗಳ ಪಟ್ಟಿಯನ್ನು ಅಲ್ಪಸಂಖ್ಯಾತರ ನಿರ್ದೇಶನಾಲಯದ ಪೂರ್ವ ಅನುಮೋದನೆ ಪಡೆದ ನಂತರ ಅಭ್ಯರ್ಥಿಗಳನ್ನು ತರಬೇತಿಗಾಗಿ ನಿಯೋಜಿಸುವುದು.

5. ಸದರಿ ಯೋಜನೆಯ ಮೇಲ್ವಿಚಾರಣೆ ಮತ್ತು ಅನುಷ್ಠಾನ.

6. ಸದರಿ ಯೋಜನೆಯ ಸಾಧನೆಯ ಬಗ್ಗೆ ವಾರ್ಷಿಕ ವರದಿ ಸಲ್ಲಿಸುವುದು.

7. ಸದರಿ ಯೋಜನೆಯಡಿಯಲ್ಲಿ ಅರ್ಹ ಅಭ್ಯರ್ಥಿಗಳಿಂದ ನಿಯಮಾನುಸಾರ ಅರ್ಜಿಗಳನ್ನು ಆಹ್ವಾನಿಸಲು ಸಮಿತಿಯು ಅರ್ಜಿ ನಮೂನೆ ಹಾಗೂ ಅದಕ್ಕೆ ಸಂಬಂಧಪಟ್ಟ ಲಗತ್ತುಗಳನ್ನು ನಿಗಧಿಪಡಿಸುವುದು.

8. ಸಮಿತಿಯು ಬೋಧನಾ ತರಬೇತಿಯ ಅಭ್ಯರ್ಥಿಗಳ ಆಯ್ಕೆಯ ಲಿಖಿತ ಪರೀಕ್ಷೆಯನ್ನು ಸರ್ಕಾರಿ ಸಂಸ್ಥೆಗಳ ಮೂಲಕ ಮಾಡಿಸಲು ಅಧಿಕಾರ ಹೊಂದಿರುತ್ತದೆ. (Screening Test)

11. ಪ್ರತಿಷ್ಠಿತ ಖಾಸಗಿ ಸಂಸ್ಥೆಗಳ ಆಯ್ಕೆ ಮತ್ತು ಶುಲ್ಕದ ನಿರ್ಧರಣೆ :-

1. ಸಮಿತಿಯು ಅಭ್ಯರ್ಥಿಗಳ ನಿಯೋಜನೆಗೆ ಪ್ರತಿಷ್ಠಿತ ಸಂಸ್ಥೆಗಳಿಂದ ಪ್ರಸ್ತಾವನೆಗಳನ್ನು ಕರೆಯುವುದು.

2. ಸಮಿತಿಯು ಪ್ರತಿಷ್ಠಿತ ಸಂಸ್ಥೆಗಳ ಅಭ್ಯರ್ಥಿಗಳ ಪಾಸಿನ ಪ್ರಮಾಣದ ಆಧಾರದ ಮೇಲೆ ಅಂತಹ ಪ್ರತಿಷ್ಠಿತ ಸಂಸ್ಥೆಗಳನ್ನು ಆಯ್ಕೆ ಮಾಡಲು ಅಧಿಕಾರ ಹೊಂದಿರುತ್ತದೆ. ತರಬೇತಿ ಸಂಸ್ಥೆಗಳ ವಿವಿಧ ಪರೀಕ್ಷೆಗಳ ಬೋಧನಾ ಅವಧಿ, ಬೋಧನಾ ಗುಣಮಟ್ಟ ಹಾಗೂ ಸಂಸ್ಥೆಯ ಉದ್ಯೋಗದ ಸಫಲತೆಯ ಆಧಾರದ ಮೇಲೆ ಸಮಿತಿಯು ಶುಲ್ಕದ ನಿಗಧಿಗೆ ಶಿಫಾರಸ್ಸು ಮಾಡುವುದು.

3. ತರಬೇತಿಯ ಅವಧಿ, ಶುಲ್ಕ ಇತ್ಯಾದಿಯೊಂದಿಗೆ ತರಬೇತಿ ಸಂಸ್ಥೆಗಳನ್ನು ಪ್ರತಿ ವರ್ಷ ಅಥವಾ ನಿರ್ಧಿಷ್ಟ ಅವಧಿಗೆ ಆಯ್ಕೆ ಮಾಡುವುದು.

4. ಬೋಧನಾ ಕೇಂದ್ರಗಳಿಗೆ ಶುಲ್ಕ ಇತ್ಯಾದಿಯನ್ನು ಚೆಕ್‌ಗಳ ಮೂಲಕ ಒಡಂಬಡಿಕೆಯಂತೆ ಕಂತುಗಳಲ್ಲಿ ಪಾವತಿಸಲಾಗುವುದು.

12. ಸಾಮಾನ್ಯ ಅವಕಾಶಗಳು :-

1. ತರಬೇತಿ ಸಂಸ್ಥೆಯು ತರಬೇತಿ ಅವಧಿಯಲ್ಲಿ ಪ್ರತಿಯೊಬ್ಬ ಅಭ್ಯರ್ಥಿಯ ಪೂರ್ಣ ದಾಖಲೆಗಳನ್ನು ನಿರ್ವಹಿಸತಕ್ಕದ್ದು.

2. ಇಲಾಖೆಯ ತರಬೇತಿಗೆ ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿ. ಮೂಲ ಪರೀಕ್ಷೆ/ಮುಖ್ಯ ಪರೀಕ್ಷೆಯನ್ನು (Preliminary/Main) ಪಾಸು ಮಾಡಿದ ಅಭ್ಯರ್ಥಿಗಳ ಪಟ್ಟಿ ಮತ್ತು ಆಯ್ಕೆಗೊಂಡ ಅಭ್ಯರ್ಥಿಗಳ ಪಟ್ಟಿಯನ್ನು ನಿರ್ವಹಿಸತಕ್ಕದ್ದು.

9. ಯು.ಪಿ.ಎಸ್.ಸಿ.

3. ಯು.ಪಿ.ಎಸ್.ಸಿ/ಕೆ.ಪಿ.ಎಸ್.ಸಿ ಮತ್ತು ಇತರೆ ನೇಮಕಾತಿ ಸಂಸ್ಥೆಗಳ ಮೂಲ ಆಯ್ಕೆಗೊಂಡ ಅಭ್ಯರ್ಥಿಗಳ ಪಟ್ಟಿಯನ್ನು ದಿನಪತ್ರಿಕೆಗಳಲ್ಲಿ ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸುವುದು ಹಾಗೂ ಆಯ್ಕೆಗೊಂಡ ಅಭ್ಯರ್ಥಿಗಳನ್ನು ಸೂಕ್ತ ರೀತಿಯಲ್ಲಿ ಸನ್ಮಾನಿಸುವುದರ ಮೂಲಕ ಇತರೆ ಅಭ್ಯರ್ಥಿಗಳಿಗೆ ಉತ್ತೇಜನ, ಪ್ರೋತ್ಸಾಹ ನೀಡುವುದು.

P.R. 626

ಎಂ. ನಾಗರತ್ನ

SC-100

ಸರ್ಕಾರದ ಉಪ ಕಾರ್ಯದರ್ಶಿ,

ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆ.

ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಸಚಿವಾಲಯ

ವಿಷಯ : ಭಾರತ ಸಂವಿಧಾನದ ಅನುಚ್ಛೇದ 371 (ಜೆ) 118ನೇ ತಿದ್ದುಪಡಿಯ ಚಟುವಟಿಕೆಗಳ ಮೇಲುಸ್ತುವಾರಿಗಾಗಿ ಹೈದರಾಬಾದ್-ಕರ್ನಾಟಕ ವಿಶೇಷ ಕೋಶ ಸೃಜಿಸುವ ಬಗ್ಗೆ.

ಪ್ರಸ್ತಾವನೆ :

2013-14ನೇ ಸಾಲಿನ ಆಯವ್ಯಯ ಭಾಷಣದಲ್ಲಿ ಘೋಷಿಸಿರುವಂತೆ, ಭಾರತ ಸಂವಿಧಾನದ ಅನುಚ್ಛೇದ 371 (ಜೆ) ಅಡಿಯಲ್ಲಿ 118ನೇ ತಿದ್ದುಪಡಿಯಂತೆ ಹೈದರಾಬಾದ್ ಕರ್ನಾಟಕ ಪ್ರದೇಶಗಳಾದ ಗುಲ್ಬರ್ಗಾ, ಬೀದರ್, ಯಾದಗಿರಿ, ರಾಯಚೂರು, ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳಿಗೆ ವಿಶೇಷ ಸ್ಥಾನಮಾನ ನೀಡಿರುವುದರಿಂದ, ಆ ಪ್ರದೇಶಗಳ ಸ್ಥಳೀಯ ಜನರಿಗೆ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಸಹಾಯಕವಾಗಲು ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ಮೀಸಲಾತಿ ಕಲ್ಪಿಸಲು ಪರಿಗಣಿಸಬೇಕಾಗಿದೆ. ಸದರಿ ಸಂವಿಧಾನಿಕ ತಿದ್ದುಪಡಿಯನ್ನು ಅನುಷ್ಠಾನಗೊಳಿಸಲು ಹಾಗೂ ಇದರ ಚಟುವಟಿಕೆಗಳ ಮೇಲುಸ್ತುವಾರಿಗಾಗಿ ಹೈದರಾಬಾದ್-ಕರ್ನಾಟಕ ವಿಶೇಷ ಕೋಶವನ್ನು ಜಂಟಿ ಕಾರ್ಯದರ್ಶಿಗಳ ಮೇಲುಸ್ತುವಾರಿಯಲ್ಲಿ ಈ ಕೆಳಕಂಡ ಪೂರಕ ಹುದ್ದೆಗಳೊಂದಿಗೆ

ಕ್ರಮ ಸ ಂಖ್ಯೆ ಹುದ್ದೆಯ ಪದನಾಮ ಹುದ್ದೆಗಳ ಸಂಖ್ಯೆ
1. ಜಂಟಿ ಕಾರ್ಯದರ್ಶಿ (ಎಕ್ಸ್‌ಕೇಡರ್ 01
2. ಆಪ್ತ ಸಹಾಯಕ (ಶೀಘ್ರಲಿಪಿಗಾರ) 01
3. ಕಿರಿಯ ಸಹಾಯಕ 01
4. ದಲಾಯತ್ 01
ಶಾಖೆಯ ಪೂರಕ ಹುದ್ದೆಗಳು
5. ಹಿರಿಯ ಸಹಾಯಕ 01
6. ಕಿರಿಯ ಸಹಾಯಕ 01
7. ಬೆರಳಚ್ಚುಗಾರ/ ಡಾಟಾ ಎಂಟ್ರಿ ಆಪರೇಟರ್ 01
8. ದಲಾಯತ್ 01
ಕರ್ನಾಟಕ ರಾಜ್ಯಪತ್ರ, ಗುರುವಾರ, ಸೆಪ್ಟೆಂಬರ್ ೧೨, ೨೦೧೩ ಭಾಗ ೧ ೧೪೪೨

ಮೇಲೆ ತಿಳಿಸಿರುವ ಹಿನ್ನೆಲೆಯಲ್ಲಿ ಈ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ : ಸಿಆಸುಇ 527 ಸಅಸೇ 2013, ಬೆಂಗಳೂರು, ದಿನಾಂಕ : 09ನೇ ಜುಲೈ 2013.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ 2013-14ನೇ ಸಾಲಿನ ಆಯವ್ಯಯ ಭಾಷಣದಲ್ಲಿ ಘೋಷಿಸಿರುವಂತೆ, ಭಾರತ ಸಂವಿಧಾನದ ಅನುಚ್ಛೇದ 371 (ಜೆ) ಅಡಿಯಲ್ಲಿ ಸಂವಿಧಾನದ 118ನೇ ತಿದ್ದುಪಡಿಯಲ್ಲಿ ಹೈದರಾಬಾದ್ ಕರ್ನಾಟಕ ಪ್ರದೇಶಗಳಾದ ಗುಲ್ಬರ್ಗಾ, ಬೀದರ್, ಯಾದಗಿರಿ, ರಾಯಚೂರು, ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳಿಗೆ ವಿಶೇಷ ಸ್ಥಾನಮಾನ ನೀಡಿರುವುದರಿಂದ, ಆ ಪ್ರದೇಶಗಳ ಸ್ಥಳೀಯ ಜನರಿಗೆ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಸಹಾಯಕವಾಗಲು ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ಮೀಸಲಾತಿ ಕಲ್ಪಿಸಲು ಪರಿಗಣಿಸಲು ಹಾಗೂ ಸದರಿ ಸಂವಿಧಾನಿಕ ತಿದ್ದುಪಡಿಯನ್ನು ಅನುಷ್ಠಾನಗೊಳಿಸಲು ಹಾಗೂ ಇದರ ಚಟುವಟಿಕೆಗಳ ಮೇಲುಸ್ತುವಾರಿಗಾಗಿ ಹೈದರಾಬಾದ್-ಕರ್ನಾಟಕ ವಿಶೇಷ ಕೋಶವನ್ನು ಜಂಟಿ

ಕ್ರಮ ಸ ಂಖ್ಯೆ ಹುದ್ದೆಯ ಪದನಾಮ ಹುದ್ದೆಗಳ ಸಂಖ್ಯೆ
1. ಜಂಟಿ ಕಾರ್ಯದರ್ಶಿ (ಎಕ್ಸ್‌ಕೇಡರ್ 01
2. ಆಪ್ತ ಸಹಾಯಕ (ಶೀಘ್ರಲಿಪಿಗಾರ) 01
3. ಕಿರಿಯ ಸಹಾಯಕ 01
4. ದಲಾಯತ್ 01
ಶಾಖೆಯ ಪೂರಕ ಹುದ್ದೆಗಳು
5. ಹಿರಿಯ ಸಹಾಯಕ 01
6. ಕಿರಿಯ ಸಹಾಯಕ 01
7. ಬೆರಳಚ್ಚುಗಾರ/ ಡಾಟಾ ಎಂಟ್ರಿ ಆಪರೇಟರ್ 01
8. ದಲಾಯತ್ 01

ಇದಕ್ಕೆ ತಗಲುವ ವೆಚ್ಚವನ್ನು ಆಯವ್ಯಯದ ಲೆಕ್ಕ ಶೀರ್ಷಿಕೆ 2052-00-090-0-01 (ಯೋಜನೇತರ) ರಡಿ ಭರಿಸತಕ್ಕದ್ದು.

ಈ ಆದೇಶವನ್ನು ಆರ್ಥಿಕ ಇಲಾಖೆಯ ಟಿಪ್ಪಣಿ ಸಂಖ್ಯೆ : ಆಇ 556 ವೆಚ್ಚ-12/2013, ದಿನಾಂಕ : 24-06-2013ರ ಸಹಮತಿಯನ್ವಯ ಹೊರಡಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಚಂದ್ರಶೇಖರ

P.R. 818

ಸರ್ಕಾರದ ಅಧೀನ ಕಾರ್ಯದರ್ಶಿ,

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಸೇವೆಗಳು-6).

ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಸಚಿವಾಲಯ

ವಿಷಯ : ಶ್ರೀ ಡಿ.ಎಂ. ರಾಜಣ್ಣ, ಸರ್ಕಾರದ ಅಧೀನ ಕಾರ್ಯದರ್ಶಿ, ಪಶು ಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ, ಕರ್ನಾಟಕ ಸರ್ಕಾರ ಸಚಿವಾಲಯ ಇವರನ್ನು ಸರ್ಕಾರಿ ಸೇವೆಯಿಂದ ಅಮಾನತ್ತುಗೊಳಿಸುವ ಬಗ್ಗೆ.

ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಸೆಪ್ಟೆಂಬರ್ ೧೨, ೨೦೧೩ ೧೪೪೩

ಓದಲಾಗಿದೆ : 1. ಆರಕ್ಷಕ ನಿರೀಕ್ಷಕರು, ಕರ್ನಾಟಕ ಲೋಕಾಯುಕ್ತ, ಬೆಂಗಳೂರು ನಗರ ವಿಭಾಗ ಇವರ ಬಂಧನ ತಿಳುವಳಿಕೆ ಪತ್ರ ದಿನಾಂಕ : 4-7-2013.

2. ಸರ್ಕಾರದ ಅಪರ ಕಾರ್ಯದರ್ಶಿ, ಪಶು ಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ, ಕರ್ನಾಟಕ ಸರ್ಕಾರ ಸಚಿವಾಲಯ ಇವರ ಅನಧಿಕೃತ ಟಿಪ್ಪಣಿ ಸಂಖ್ಯೆ : ಪಸಂಮೀ 09 ಸಮನ್ವಯ 2013, ದಿನಾಂಕ : 5-7-2013.

ಪ್ರಸ್ತಾವನೆ :

ಮೇಲೆ ಓದಲಾದ (1)ರ ಆರಕ್ಷಕ ನಿರೀಕ್ಷಕರು, ಕರ್ನಾಟಕ ಲೋಕಾಯುಕ್ತ, ಬೆಂಗಳೂರು ನಗರ ವಿಭಾಗ ಇವರ ಬಂಧನ ತಿಳುವಳಿಕೆ ಪತ್ರ ದಿನಾಂಕ : 4-7-2013ರಲ್ಲಿ ಕರ್ನಾಟಕ ಲೋಕಾಯುಕ್ತ, ಬೆಂಗಳೂರು ನಗರ ವಿಭಾಗ ಪೊಲೀಸ್ ಠಾಣಾ ಮೊಕದ್ದಮೆ ಸಂಖ್ಯೆ : 41/2013, ಕಲಂ 7, 13(1)(ಡಿ) ರೆ/ವಿ 13(2) ಲಂಚ ನಿರೋಧಕ ಕಾಯ್ದೆ 1988ರ ಪ್ರಕರಣದಲ್ಲಿ ಶ್ರೀ ಡಿ.ಎಂ. ರಾಜಣ್ಣ, ಸರ್ಕಾರದ ಅಧೀನ ಕಾರ್ಯದರ್ಶಿ, ಪಶು ಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ, ಕರ್ನಾಟಕ ಸರ್ಕಾರ ಸಚಿವಾಲಯ ಇವರನ್ನು ಲಂಚ ಸ್ವೀಕಾರ ಆರೋಪದ ಮೇಲೆ ದಿನಾಂಕ : 4-7-2013ರ ರಾತ್ರಿ ಸುಮಾರು 8-00 ಗಂಟೆಗೆ ದಸ್ತಗಿರಿ ಮಾಡಲಾಗಿದ್ದು ಇಲಾಖಾ ವತಿಯಿಂದ ಮುಂದಿನ ಕ್ರಮ ಕೈಗೊಳ್ಳುವಂತೆ ತಿಳಿಸಿರುವ ಪತ್ರವನ್ನು ಮೇಲೆ ಓದಲಾದ (2)ರ ಅನಧಿಕೃತ ಟಿಪ್ಪಣಿಯೊಂದಿಗೆ ಸರ್ಕಾರದ ಅಪರ ಕಾರ್ಯದರ್ಶಿ, ಪಶು ಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ ಇವರು ಲಗತ್ತಿಸಿ ಕಳುಹಿಸಿದ್ದು. ಸದರಿ ಅಧಿಕಾರಿಯವರ ವಿರುದ್ಧ ಮುಂದಿನ ಕ್ರಮ ಕೈಗೊಳ್ಳುವಂತೆ ಕೋರಿರುತ್ತಾರೆ.

ಈ ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿದ ಸರ್ಕಾರವು ಆರೋಪಿತ ಅಧಿಕಾರಿಯು ಲಂಚ ಸ್ವೀಕಾರ ಆರೋಪದ ಮೇಲೆ ಲೋಕಾಯುಕ್ತ ಪೊಲೀಸರಿಂದ ಬಂಧನಕ್ಕೆ ಒಳಗಾಗಿರುವುದಕ್ಕೆ ಮೇಲ್ನೋಟದ ಸಾಕ್ಷ್ಯವಿರುವುದರಿಂದ, ಸದರಿ ಆರೋಪಿತ ಅಧಿಕಾರಿಯು ಎಸಗಿರುವ ಕೃತ್ಯವು ಸರ್ಕಾರಿ ನೌಕರರಿಗೆ ತರವಲ್ಲದ ಕ್ರಮವೆಂದು ಮೇಲ್ನೋಟಕ್ಕೆ ಸಾಬೀತಾಗುವುದರಿಂದ, ಈ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ : ಸಿಆಸುಇ 8 ಸೇಇವಿ 2013, ಬೆಂಗಳೂರು, ದಿನಾಂಕ : 16ನೇ ಜುಲೈ 2013.

ಪ್ರಸ್ತಾವನೆಯಲ್ಲಿ ವಿವರಿಸಿರುವ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಸಚಿವಾಲಯದ ಪಶು ಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಶ್ರೀ ಡಿ.ಎಂ. ರಾಜಣ್ಣ, ಸರ್ಕಾರದ ಅಧೀನ ಕಾರ್ಯದರ್ಶಿ ಇವರನ್ನು ಲಂಚ ಸ್ವೀಕಾರ ಆರೋಪದ ಮೇಲೆ ದಿನಾಂಕ :4-7-2013 ರ ರಾತ್ರಿ ಸುಮಾರು 8-00 ಗಂಟೆಗೆ ದಸ್ತಗಿರಿ ಮಾಡಲಾಗಿರುವುದರಿಂದ ಇವರ ವಿರುದ್ಧದ ಶಿಸ್ತು ಕ್ರಮವನ್ನು ಬಾಕಿ ಇಟ್ಟು, ದಿನಾಂಕ : 4-7-2013ರ ರಾತ್ರಿ 8-00 ಗಂಟೆಯಿಂದಲೇ ಪೂರ್ವಾನ್ವಯವಾಗಿ ಜಾರಿಗೆ ಬರುವಂತೆ ಮತ್ತು ಮುಂದಿನ ಆದೇಶದವರೆಗೆ ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿ 1957ರ ನಿಯಮ 10(1)(ಎ) ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಸರ್ಕಾರವು ಶ್ರೀ ಡಿ.ಎಂ. ರಾಜಣ್ಣ, ಸರ್ಕಾರದ ಅಧೀನ ಕಾರ್ಯದರ್ಶಿ, ಕರ್ನಾಟಕ ಸರ್ಕಾರ ಸಚಿವಾಲಯ ಇವರನ್ನು ಈ ಮೂಲಕ ಸರ್ಕಾರಿ ಸೇವೆಯಿಂದ ಅಮಾನತ್ತುಗೊಳಿಸಿ ಆದೇಶಿಸಿದೆ.

ಶ್ರೀ ಡಿ.ಎಂ. ರಾಜಣ್ಣ, ಸರ್ಕಾರದ ಅಧೀನ ಕಾರ್ಯದರ್ಶಿ, ಕರ್ನಾಟಕ ಸರ್ಕಾರ ಸಚಿವಾಲಯ ಇವರ ಲೀನ್ ಅನ್ನು ಪಶು ಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯಿಂದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ವರ್ಗಾಯಿಸಲಾಗಿದೆ. ಶ್ರೀಯುತರು ಆಮಾನತ್ತಿನ ಅವಧಿಯಲ್ಲಿ ಕೆ.ಸಿ.ಎಸ್.ಆರ್ಸ್. ನಿಯಮ 98ರನ್ವಯ ಜೀವನಾಧಾರ ಭತ್ಯೆಯನ್ನು ಪಡೆಯಲು ಅರ್ಹರಿರುತ್ತಾರೆ ಹಾಗೂ ಅಮಾನತ್ತಿನ ಅವಧಿಯಲ್ಲಿ ಸಕ್ಷಮ ಪ್ರಾಧಿಕಾರದ ಲಿಖಿತ ಅನುಮತಿಯಿಲ್ಲದೆ ಕೇಂದ್ರ ಸ್ಥಾನವನ್ನು ಬಿಡತಕ್ಕದ್ದಲ್ಲ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಚಂದ್ರಶೇಖರ

ಸರ್ಕಾರದ ಅಧೀನ ಕಾರ್ಯದರ್ಶಿ, P.R. 819

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಸೇವೆಗಳು-6).

ಜಲ ಸಂಪನ್ಮೂಲ ಸಚಿವಾಲಯ

ತಿದ್ದುಪಡಿ

ಸಂಖ್ಯೆ : ಜಸಂಇ/05/ಸಿಯುಕೆ/2012, ಬೆಂಗಳೂರು, ದಿನಾಂಕ : 10-07-2013.

ಸರ್ಕಾರದ ಆದೇಶ ಸಂಖ್ಯೆ : ಜಸಂಇ 10 ಸಿಯುಕೆ 2003, ದಿನಾಂಕ : 02-01-2006ರ ಎರಡನೇ ಪುಟದಲ್ಲಿ ಆದೇಶ ಭಾಗದಲ್ಲಿರುವ "(ಈ) ಈ ಆದೇಶವು ದಿನಾಂಕ : 1-7-84ರ ನಂತರ ದಿನಗೂಲಿ ಆಧಾರದ ಮೇಲಿದ್ದು, ಸಕ್ರಮ ಹೊಂದಿರುವ ನೌಕರರಿಗೆ ಅನ್ವಯವಾಗತಕ್ಕದ್ದಲ್ಲ" ಎಂಬುದರ ಬದಲಾಗಿ, ಈ ಕೆಳಕಂಡಂತೆ ತಿದ್ದಿಕೊಂಡು ಓದಿಕೊಳ್ಳತಕ್ಕದ್ದು.

"(ಈ) ದಿನಾಂಕ : 1-7-84 ರಿಂದ ದಿನಾಂಕ : 10-04-2006 ರೊಳಗೆ ದಿನಗೂಲಿ ಮೇಲೆ ಕಾಡಾದಲ್ಲಿ ನೇಮಕಗೊಂಡು ಸಕ್ರಮಗೊಂಡ ಕಾಡಾ ನೌಕರರುಗಳಿಗೆ ಪಿಂಚಣಿ ಹಾಗೂ ಇತರೆ ಸೌಲಭ್ಯಗಳು ಅನ್ವಯವಾಗತಕ್ಕದ್ದು".

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಎಲ್. ಬೈರಪ್ಪ

P.R. 820

ಜಲ ಸಂಪನ್ಮೂಲ ಇಲಾಖೆ.

ಕರ್ನಾಟಕ ರಾಜ್ಯಪತ್ರ, ಗುರುವಾರ, ಸೆಪ್ಟೆಂಬರ್ ೧೨, ೨೦೧೩ ಭಾಗ ೧ ೧೪೪೪

SOCIAL WELFARE SECRETARIAT

CIRCULAR

No: SWD 105 SAD 2013, Bangalore, dated : 08-04-2013.

SUB : Procedure for cancellation of false caste Certificates and taking criminal action and termination of services in respect of Government employees and others-reg.

The process of taking final action against the persons obtained false caste certificates after due enquiry by the Directorate of Civil Rights Enforcement Cell (DCREC) is getting delayed because of lack of clarity in the matter. The false caste certificates are obtained for availing the reservation in Government service and admission in educational institutions and also for contesting elections against the reserved seats. Therefore, it is felt necessary to prescribe the procedure for taking step wise action by all the concerned officers and all the concerned officers are hereby directed to follow the procedure without fail.

THE PROCEDURE

STEP-1 :- The complaints/petitions are made to Government/Directorate of Civil Rights Enforcement Cell/Commissioner, Social Welfare Department/Director Scheduled Tribes Welfare Department etc. by any person against a particular person alleged to have been taken the false caste certificate from the Tahasildar for getting the benefit of reservation etc. All such complaints/petitions received should be forwarded to the Directorate of Civil Rights Enforcement Cell, Bangalore for detailed enquiry.

STEP-2 :- On receipt of the complaints/petition, the Directorate of Civil Rights Enforcement Cell shall enter in the petition register by giving specific number and take up the detailed enquiry through an officer not below the rank of Inspector. The enquiry shall be done on the following two aspects. 1) False Certificate details 2) Whether, the procedure prescribed is followed or not by the issuing authority.

The enquiry will be done on various aspects including the verification of the records in the Tahasildars office and school records, place of residence etc. The enquiry officer will submit the report to the Additional Director General of Police, Civil Rights Enforcement Cell along with the documents including the copy of the caste certificate with specific findings.

Directorate of Civil Rights Enforcement Cell may also initiate SUOMOTU enquiry in case of false caste certificate. The Directorate of Civil Rights Enforcement Cell may use the software for proper maintaining of the case register of all cases in order to find out each stage of the case. The Government will provide funds for development of software if not already there.

STEP-3 :- After enquiry report is received the Additional Director General of Police, Civil Rights Enforcement Cell will examine and forward the report with his comments etc. to the District Verification Committee headed by the Deputy Commissioner of the District for cancellation of the false caste certificate issued by the Tahasildar under intimation to the State Nodal Officer i.e. Principal Secretary, Social Welfare Deparrtment. In all cases where the allegation is not proved, the Directorate of Civil Rights Enforcement Cell may close the complaint under intimation to the Government in Social Welfare Department. STEP-4 :- The District Verification Committee shall follow the procedure and principles of naturals justice etc., before cancellation by giving proper opportunity to the person who obtain the false caste certificate. Of-course, the burden of the proof shall lies on the caste certificate holder. The Committee shall also dispose the case within a reasonable time i.e., say within 2 or 3 months. The District Commissioner shall also look in to the procedural lapses committed by the issuing authority to take further necessary action as per the provisions of Karnataka Scheduled Caste and Scheduled Tribes and other Backward Class appointment in reservation etc. Act 1990), Amendment of 2011.

STEP-5 :- The aggrieved person may file an appeal before the Commissioner, Social Welfare Department/Director, Scheduled Tribes Welfare Department against the order of the District Commissioner. The appeal shall be dispose of within a reasonable time under intimation to the concerned District Commissioner and the head of the Departments Additional Director General of Police, Civil Rights Enforcement Cell, and State Nodal Officer, Bangalore.

STEP-6 :- The Deputy Commissioner/Commissioner Social Welfare Department/Director, Scheduled Tribes Welfare shall conduct an enquiry and send the report of cancellation to the Head of the Department under intimation to Additional Director General of Police. Civil Rights Enforcement Cell, Bangalore and State Nodal Officer, Bangalore, (Principal Secretary, Social Welfare Department) of the concerned employee in who's case the cancellation is done for dismissal/termination of the concerned employee for entering in the Government Service based on the false caste certificate under reservation quota. Even, cases of promotion based on false caste certificates also attracts similar action. In case of Central Government Employees also similar action to be taken by informing to the concerned head of the dept. (Civil Appeal No. 255 to 258 of 2004-Supreme Court-L. Ushadevi V/s. Union of India and others) In case of other than Government employees, the concerned institutions/organisations have to be informed to take action. However. In all cases the verification authorities have to inform the Directorate of Civil Rights Enforcement Cell to file criminal cases and take further action. The Directorate of Civil Rights Enforcement Cell have to file the criminal cases by filing the FIR. The Directorate of Civil Rights Enforcement Cell have to utilize the services of the special advocates appointed by the Social Welfare Department to defend the cases before the learned verification authorities and in the Hon'ble Courts.

ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಸೆಪ್ಟೆಂಬರ್ ೧೨, ೨೦೧೩ ೧೪೪೫ STEP-7 :- The head of the Department/Principal Secretary/Secretary to Government shall immediately take action against the

concerned employee by terminating/dismissing from Government service and also forfeit the benefits etc., under intimation to Additional Director General of Police, Civil Rights Enforcement Cell and State Nodal Officer, Bangalore, Commissioner, Social Welfare Department and Director, Scheduled Tribes Welfare Department, Bangalore. The Government or head of the department who ever is competent to take action cantake action immediately. No need to serve any notice on the concerned employee as article 311 of the constitution is not applicable in such cases. (Civil Appeal No. 89 and 90 of 2004 in the Hon'ble Supreme Court in case of R. Vishwanatha Pillai V/s State of Kerala and others and V. Vimal Ghosh V/s. State of Kerala and others). Obtaining any benefit of reservation based on false caste certificate is void and unlawful. The various Head of the Department/Government Department. Need not refer the cases to Social Welfare Department for opinion before termination.

STEP-8 :- In some cases it may be revealed in the enquiry by the Directorate of Civil Rights Enforcement Cell that the certificate is not at all issued by the Tahasiladar. It means, the person must have forged the same etc. In such cases the Directorate of Civil Rights Enforcement Cell may directly file the criminal case against the person concerned and proceed further of filing charge sheet etc. The report has to be submitted to the Head of the Dept. of the Concerned person for his termination/removal from the service.

STEP-9 :- The DCRE Cell shall maintain the case records from the beginning to end for all statistical purpose. The criminal proceedings and removal/termination of the dismissal from the service etc. are separate issues. Hence, simultaneous action should be taken in all false caste certificate cases.

N. NARASIMHA MURTHY

Under Secretary to Government-2,

Social Welfare Department.

ಸಮಾಜ ಕಲ್ಯಾಣ ಸಚಿವಾಲಯ

ಸುತ್ತೋಲೆ

ಸಂಖ್ಯೆ : ಸಕಇ 105 ಎಸ್ಎಡಿ 2013, ಬೆಂಗಳೂರು, ದಿನಾಂಕ : 08-04-2013.

ವಿಷಯ : ಸರ್ಕಾರಿ ನೌಕರರು ಮತ್ತು ಇತರರಿಗೆ ಸಂಬಂಧಪಟ್ಟ ಸುಳ್ಳು ಜಾತಿ ಪ್ರಮಾಣಪತ್ರಗಳನ್ನು ರದ್ದುಗೊಳಿಸುವುದಕ್ಕೆ ಮತ್ತು ಕ್ರಿಮಿನಲ್ ಕ್ರಮ ತೆಗೆದುಕೊಳ್ಳುವುದಕ್ಕೆ ಹಾಗೂ ಸೇವೆಯನ್ನು ಕೊನೆಗೊಳಿಸುವುದಕ್ಕೆ ಸಂಬಂಧಿಸಿದ ಕಾರ್ಯವಿಧಾನ-ಕುರಿತು.

ಸುಳ್ಳು ಜಾತಿ ಪ್ರಮಾಣಪತ್ರಗಳನ್ನು ಪಡೆದಿರುವ ವ್ಯಕ್ತಿಗಳ ವಿರುದ್ಧ ನಾಗರೀಕ ಹಕ್ಕುಗಳ ಜಾರಿ ಕೋಶ ನಿರ್ದೇಶನಾಲಯವು (ಡಿಸಿಆರ್ಇಸಿ) ಯುಕ್ತ ವಿಚಾರಣೆ ಮಾಡಿದ ನಂತರ ಅಂತಿಮ ಕ್ರಮ ಕೈಗೊಳ್ಳುವ ಪ್ರಕ್ರಿಯೆಯು, ಸದರಿ ವಿಷಯದಲ್ಲಿ ಸ್ಪಷ್ಟತೆ ಇಲ್ಲದಿರುವುದರಿಂದಾಗಿ ವಿಳಂಬವಾಗುತ್ತಿದೆ. ಸುಳ್ಳು ಜಾತಿ ಪ್ರಮಾಣ ಪತ್ರಗಳನ್ನು, ಸರ್ಕಾರಿ ಸೇವೆಗಳಲ್ಲಿ ಮೀಸಲಾತಿಯನ್ನು ಪಡೆಯುವುದಕ್ಕಾಗಿ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆಯುವುದಕ್ಕಾಗಿ ಹಾಗೂ ಮೀಸಲು ಸ್ಥಾನಗಳಿಗೆ ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕಾಗಿ ಪಡೆಯಲಾಗುತ್ತದೆ. ಆದುದರಿಂದ, ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳು ಹಂತಹಂತವಾಗಿ ಕ್ರಮ ಕೈಗೊಳ್ಳುವುದಕ್ಕೆ ಸಂಬಂಧಿಸಿದಂತೆ ಕಾರ್ಯವಿಧಾನವನ್ನು ನಿಗದಿಪಡಿಸುವ ಅಗತ್ಯವಿದೆಯೆಂದು ಭಾವಿಸಲಾಗಿದೆ ಹಾಗೂ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳು ಸದರಿ ಕಾರ್ಯವಿಧಾನವನ್ನು ತಪ್ಪದೇ ಅನುಸರಿಸಬೇಕೆಂದು ಈ ಮೂಲಕ ನಿರ್ದೇಶಿಸಲಾಗಿದೆ.

ಕಾರ್ಯವಿಧಾನ :

ಹಂತ-1 : ಮೀಸಲಾತಿ, ಇತ್ಯಾದಿ ಪ್ರಯೋಜನ ಪಡೆಯುವುದಕ್ಕಾಗಿ ತಹಸೀಲ್ದಾರರಿಂದ ಸುಳ್ಳುಜಾತಿ ಪ್ರಮಾಣಪತ್ರವನ್ನು ಪಡೆದುಕೊಂಡಿರುವನೆಂದು ಆಪಾದಿಸಿ ಒಬ್ಬ ನಿರ್ದಿಷ್ಟ ವ್ಯಕ್ತಿಯ ವಿರುದ್ಧ ಯಾರೇ ವ್ಯಕ್ತಿಯಿಂದ ಸರ್ಕಾರ/ನಾಗರೀಕ ಹಕ್ಕುಗಳ ಜಾರಿ ಕೋಶ ನಿರ್ದೇಶನಾಲಯ/ಆಯುಕ್ತರು, ಸಮಾಜ ಕಲ್ಯಾಣ ಇಲಾಖೆ/ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ನಿರ್ದೇಶಕರು, ಮುಂತಾದವರಿಗೆ ದೂರುಗಳನ್ನು/ಅರ್ಜಿಗಳನ್ನು ಸಲ್ಲಿಸಲಾಗುತ್ತದೆ. ಸ್ವೀಕರಿಸಲಾದ ಅಂಥ ಎಲ್ಲಾ ದೂರುಗಳು/ಅರ್ಜಿಗಳನ್ನು ನಾಗರೀಕ ಹಕ್ಕುಗಳ ಜಾರಿ ಕೋಶ ನಿರ್ದೇಶನಾಲಯ, ಬೆಂಗಳೂರು-ಇಲ್ಲಿಗೆ ಸವಿವರ ವಿಚಾರಣೆಗಾಗಿ ಕಳುಹಿಸಿಕೊಡತಕ್ಕದ್ದು.

ಹಂತ-2 : ದೂರು ಅಥವಾ ಅರ್ಜಿಯನ್ನು ಸ್ವೀಕರಿಸಿದ ಮೇಲೆ, ನಾಗರೀಕ ಹಕ್ಕುಗಳ ಜಾರಿ ಕೋಶ ನಿರ್ದೇಶನಾಲಯವು ನಿರ್ದಿಷ್ಟ ಸಂಖ್ಯೆಯನ್ನು ನೀಡಿ ಅರ್ಜಿ ರಿಜಿಸ್ಟರಿನಲ್ಲಿ ಅದನ್ನು ನಮೂದಿಸತಕ್ಕದ್ದು ಮತ್ತು ಇನ್‌ಸ್ಪೆಕ್ಟರ್ ದರ್ಜೆಗಿಂತ ಕಡಿಮೆಯಲ್ಲದ ದರ್ಜೆಯ ಒಬ್ಬ ಅಧಿಕಾರಿಯ ಮುಖಾಂತರ ಸವಿವರ ವಿಚಾರಣೆಯನ್ನು ಕೈಗೊಳ್ಳತಕ್ಕದ್ದು. ವಿಚಾರಣೆಯನ್ನು ಈ ಮುಂದಿನ ಎರಡು ಅಂಶಗಳ ಮೇಲೆ ಮಾಡತಕ್ಕದ್ದು. 1) ಸುಳ್ಳು ಪ್ರಮಾಣಪತ್ರಗಳ ವಿವರಗಳು 2) ನಿಗದಿಪಡಿಸಲಾದ ಕಾರ್ಯವಿಧಾನವನ್ನು ಪ್ರಮಾಣಪತ್ರ ನೀಡಿಕೆ ಪ್ರಾಧಿಕಾರವು ಅನುಸರಿಸಿದೆಯೇ ಅಥವಾ ಇಲ್ಲವೇ.

ವಿಚಾರಣೆಯನ್ನು ತಹಸೀಲ್ದಾರರ ಕಛೇರಿಯಲ್ಲಿನ ದಾಖಲೆಗಳು ಮತ್ತು ಶಾಲಾ ದಾಖಲೆಗಳು, ವಾಸಸ್ಥಳ ಇತ್ಯಾದಿಗಳ ಪರಿಶೀನೆಯೂ ಸೇರಿದಂತೆ ವಿವಿಧ ಸಂಗತಿಗಳ ಬಗ್ಗೆ ಮಾಡಲಾಗುತ್ತದೆ. ವಿಚಾರಣಾಧಿಕಾರಿಯು. ತನ್ನ ಸ್ಪಷ್ಟ ನಿರ್ಣಯದೊಂದಿಗೆ ಜಾತಿ ಪ್ರಮಾಣಪತ್ರದ ಪ್ರತಿಯೂ ಸೇರಿದಂತೆ ದಸ್ತಾವೇಜುಗಳ ಜೊತೆ, ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರು, ನಾಗರೀಕ ಹಕ್ಕುಗಳ ಜಾರಿ ಕೋಶ-ಇವರಿಗೆ ವರದಿಯನ್ನು ಸಲ್ಲಿಸುತ್ತಾರೆ. ನಾಗರೀಕ ಹಕ್ಕುಗಳ ಜಾರಿ ನಿರ್ದೇಶನಾಲಯವು ಸಹ ಸುಳ್ಳು ಜಾತಿ ಪ್ರಮಾಣಪತ್ರದ ಸಂದರ್ಭದಲ್ಲಿ ತಾನಾಗಿಯೇ ವಿಚಾರಣೆಯನ್ನು ಪ್ರಾರಂಭಿಸಬಹುದು. ನಾಗರೀಕ ಹಕ್ಕುಗಳ ಜಾರಿ ಕೋಶ ನಿರ್ದೇಶನಾಲಯವು. ಪ್ರಕರಣದ ಪ್ರತಿಯೊಂದು ಹಂತವನ್ನುಕರ್ನಾಟಕ ರಾಜ್ಯಪತ್ರ, ಗುರುವಾರ, ಸೆಪ್ಟೆಂಬರ್ ೧೨, ೨೦೧೩ ಭಾಗ ೧ ೧೪೪೬ ಪತ್ತೆಹೆಚ್ಚುವ ಸಲುವಾಗಿ ಎಲ್ಲಾ ಪ್ರಕರಣಗಳ ಕೇಸ್ ರಿಜಿಸ್ಟರನ್ನು ಸೂಕ್ತವಾಗಿ ನಿರ್ವಹಿಸುವುದಕ್ಕಾಗಿ ತಂತ್ರಾಂಶವನ್ನು ಬಳಸಬಹುದು.

ತಂತ್ರಾಂಶವನ್ನು (ಸಾಫ್ಟ್‌ವೇರ್) ಇನ್ನೂ ರೂಪಿಸದಿರುವಲ್ಲಿ. ಸಾಫ್ಟ್‌ವೇರನ್ನು ಅಭಿವೃದ್ಧಿಪಡಿಸುವುದಕ್ಕಾಗಿ ಹಣ ಒದಗಿಸಲಾಗುವುದು.

ಹಂತ-3 : ವಿಚಾರಣಾ ವರದಿಯನ್ನು ಸ್ವೀಕರಿಸಿದ ನಂತರ, ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರು (ADGP), ನಾಗರೀಕ ಹಕ್ಕುಗಳ ಕೋಶ-ಇವರು ವರದಿಯನ್ನು ಪರಿಶೀಲಿಸುತ್ತಾರೆ ಮತ್ತು ತನ್ನ ಅಭಿಪ್ರಾಯಗಳು, ಇತ್ಯಾದಿಗಳೊಂದಿಗೆ ವರದಿಯನ್ನು ರಾಜ್ಯ ನೋಡಲ್ ಅಧಿಕಾರಿಯಾದ ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರಿಗೆ ತಿಳಿಸಿ, ತಹಸೀಲ್ದಾರರು ನೀಡಿದ ಸುಳ್ಳು ಜಾತಿ ಪ್ರಮಾಣಪ್ರತ ರದ್ದುಗೊಳಿಸುವ ಸಲುವಾಗಿ ಜಿಲ್ಲೆಯ ಜಿಲ್ಲಾಧಿಕಾರಿಯವರು ಮುಖ್ಯಸ್ಥರಾಗಿರುವ ಜಿಲ್ಲಾ ಪರಿಶೀಲನಾ ಸಮಿತಿಗೆ ಕಳುಹಿಸುತ್ತಾರೆ.

ಆಪಾದನೆಯು ರುಜುವಾತಾಗದಿರುವ ಎಲ್ಲ ಪ್ರಕರಣಗಳಲ್ಲಿ ನಾಗರೀಕ ಹಕ್ಕುಗಳ ಜಾರಿ ನಿರ್ದೇಶನಾಲಯವು ಸಮಾಜ ಕಲ್ಯಾಣ ಇಲಾಖೆಯಲ್ಲಿ ಸರ್ಕಾರಕ್ಕೆ ಈ ಬಗ್ಗೆ ತಿಳಿಸಿ ದೂರನ್ನು ಮುಕ್ತಾಯಗೊಳಿಸಬಹುದು.

ಹಂತ-4 : ಜಿಲ್ಲಾ ಪರಿಶೀಲನಾ ಸಮಿತಿಯು, ಸುಳ್ಳು ಜಾತಿ ಪ್ರಮಾಣಪತ್ರವನ್ನು ರದ್ದುಗೊಳಿಸುವುದಕ್ಕೂ ಮುಂಚೆ ಸುಳ್ಳು ಜಾತಿಪ್ರಮಾಣಪತ್ರವನ್ನು ಪಡೆದ ವ್ಯಕ್ತಿಯು ತನ್ನ ಅಹವಾಲು ಹೇಳಿಕೊಳ್ಳಲು ಒಂದು ಸೂಕ್ತ ಅವಕಾಶವನ್ನು ನೀಡುವ ಮೂಲಕ ಸ್ವಾಭಾವಿಕ ನ್ಯಾಯದ ಕಾರ್ಯವಿಧಾನ ಹಾಗೂ ತತ್ವ ಇತ್ಯಾದಿಗಳನ್ನು ಅನುಸರಿಸತಕ್ಕದ್ದು. ಸಹಜವಾಗಿ, ರುಜುವಾತುಪಡಿಸುವ ಹೊಣೆಗಾರಿಕೆಯು ಜಾತಿ ಪ್ರಮಾಣಪತ್ರದಾರನ ಮೇಲಿರತಕ್ಕದ್ದು. ಸಮಿತಿಯು ಕೂಡ ಯುಕ್ತ ಸಮಯದೊಳಗೆ, ಅಂದರೆ 2 ಅಥವಾ 3 ತಿಂಗಳುಗಳೊಳಗಾಗಿ ಪ್ರಕರಣವನ್ನು ಇತ್ಯರ್ಥಗೊಳಿಸತಕ್ಕದ್ದು. ಜಿಲ್ಲಾಧಿಕಾರಿಯವರು, ಕರ್ನಾಟಕ ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳು ಹಾಗೂ ಇತರ ಹಿಂದುಳಿದ ವರ್ಗಗಳ (ನೇಮಕಾತಿ, ಮುಂತಾದವುಗಳ ಮೀಸಲಾತಿ ಅಧಿನಿಯಮ, 1990-ಇದರ ತಿದ್ದುಪಡಿ ಅಧಿನಿಯಮ 2011ರ ಉಪಬಂಧಗಳ ಅನುಸಾರ ಮುಂದಿನ ಅಗತ್ಯ ಕ್ರಮ ಕೈಗೊಳ್ಳಲು ಪ್ರಮಾಣಪತ್ರ ನೀಡಿಕೆ ಪ್ರಾಧಿಕಾರವು ಎಸಗಿದ ಪ್ರಕ್ರಿಯಾ ಲೋಪಗಳನ್ನು ಸಹ ಪರಿಶೀಲಿಸತಕ್ಕದ್ದು.

ಹಂತ-5 : ಬಾಧಿತ ವ್ಯಕ್ತಿಯು, ಜಿಲ್ಲಾಧಿಕಾರಿಯವರ ಆದೇಶದ ವಿರುದ್ಧ ಸಮಾಜ ಕಲ್ಯಾಣ ಇಲಾಖೆಯು ಆಯುಕ್ತರ/ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ನಿರ್ದೇಶಕರ ಮುಂದೆ ಅಪೀಲನ್ನು ಸಲ್ಲಿಸಬಹುದು. ಅಪೀಲನ್ನು, ಸಂಬಂಧಪಟ್ಟ ಜಿಲ್ಲಾಧಿಕಾರಿಗೆ ಮತ್ತು ಇಲಾಖೆಗಳ ಮುಖ್ಯಸ್ಥರು, ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು, ನಾಗರೀಕ ಹಕ್ಕುಗಳ ಜಾರಿ ಕೋಶ ಹಾಗೂ ರಾಜ್ಯ ನೋಡಲ್ ಅಧಿಕಾರಿ, ಬೆಂಗಳೂರು-ಇವರಿಗೆ ತಿಳಿಸಿ ಯುಕ್ತ ಸಮಯದೊಳಗೆ ಇತ್ಯರ್ಥಗೊಳಿಸತಕ್ಕದ್ದು.

ಹಂತ-6 : ಜಿಲ್ಲಾಧಿಕಾರಿ/ಆಯುಕ್ತರು ಸಮಾಜ ಕಲ್ಯಾಣ ಇಲಾಖೆ/ ನಿರ್ದೇಶಕರು, ಪರಿಶಿಷ್ಟ ಪಂಗಡಗಳ ಕಲ್ಯಾಣ-ಇವರು, ಯಾವ ನೌಕರನ ಪ್ರಕರಣದಲ್ಲಿ ಮೀಸಲಾತಿ ಕೋಟಾದಡಿಯಲ್ಲಿ ಸುಳ್ಳು ಜಾತಿ ಪ್ರಮಾಣಪತ್ರದ ಆಧಾರದ ಮೇಲೆ ಸರ್ಕಾರಿ ಸೇವೆಗೆ ಸೇರಿರುವುದಕ್ಕಾಗಿ ಸಂಬಂಧಪಟ್ಟ ನೌಕರನ ವಜಾ/ಸೇವೆ ಕೊನೆಗೊಳಿಸುವುದಕ್ಕಾಗಿ ಪ್ರಮಾಣಪತ್ರ ರದ್ದುಪಡಿಸಲಾಗಿದೆಯೋ ಆ ಸಂಬಂಧಪಟ್ಟ ನೌಕರನ ಬಗ್ಗೆ ವಿಚಾರಣೆಯನ್ನು ನಡೆಸತಕ್ಕದ್ದು ಹಾಗೂ ರದ್ದುಗೊಳಿಸುವಿಕೆಯ ವರದಿಯನ್ನು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು, ನಾಗರೀಕ ಹಕ್ಕುಗಳ ಜಾರಿ ಕೋಶ, ಬೆಂಗಳೂರು ಮತ್ತು ರಾಜ್ಯ ನೋಡಲ್ ಅಧಿಕಾರಿ, ಬೆಂಗಳೂರು (ಪ್ರಧಾನ ಕಾರ್ಯದರ್ಶಿ, ಸಮಾಜ ಕಲ್ಯಾಣ ಇಲಾಖೆ)-ಇವರಿಗೆ ತಿಳಿಸಿ ಅದನ್ನು ಆ ಸಂಬಂಧಪಟ್ಟ ನೌಕರನು ಇರುವ ಇಲಾಖೆಯ ಮುಖ್ಯಸ್ಥರಿಗೆ ಕಳುಹಿಸಿಕೊಡತಕ್ಕದ್ದು. ಸುಳ್ಳು ಜಾತಿ ಪ್ರಮಾಣಪತ್ರಗಳ ಆಧಾರದ ಮೇಲೆ ಮುಂಬಡ್ತಿ ಪಡೆದ ಪ್ರಕರಣಗಳಿಗೂ ಕೂಡ ಇದೇ ರೀತಿಯ ಕ್ರಮ ಅನ್ವಯಿಸುತ್ತದೆ. ಕೇಂದ್ರ ಸರ್ಕಾರಿ ನೌಕರರ ವಿಷಯದಲ್ಲಿಯೂ ಸಹ, ಸಂಬಂಧಪಟ್ಟ ಇಲಾಖೆಯ ಮುಖ್ಯಸ್ಥರಿಗೆ ತಿಳಿಸುವ ಮೂಲಕ ಇದೇ ರೀತಿಯ ಕ್ರಮವನ್ನು ಕೈಗೊಳ್ಳಬೇಕಾಗುತ್ತದೆ. (2004ರ ಸಿವಿಲ್ ಅಪೀಲು ಸಂಖ್ಯೆ : 255 ರಿಂದ 258-ಸರ್ವೋಚ್ಛ ನ್ಯಾಯಾಲಯ-ಎಲ್. ಉಷಾದೇವಿ-ವಿರುದ್ಧ-ಭಾರತ ಒಕ್ಕೂಟ ಮತ್ತು ಇತರರು) ಸರ್ಕಾರಿ ನೌಕರರನ್ನು ಹೊರತುಪಡಿಸಿ, ಬೇರೆ ನೌಕರರ ವಿಷಯದಲ್ಲಿ. ಸಂಬಂಧಪಟ್ಟ ಸಂಸ್ಥೆಗಳು ಸಂಘಗಳಿಗೆ ಕ್ರಮಕೈಗೊಳ್ಳುವಂತೆ ತಿಳಿಸಬೇಕು. ಆದಾಗ್ಯೂ, ಎಲ್ಲಾ ಸಂದರ್ಭಗಳಲ್ಲಿ ಪರಿಶೀಲನಾ ಪ್ರಾಧಿಕಾರಗಳು, ಕ್ರಿಮಿನಲ್ ಮೊಕದ್ದಮೆಗಳನ್ನು ಹೂಡಿ ಮುಂದಿನ ಕ್ರಮ ಕೈಗೊಳ್ಳುವಂತೆ ನಾಗರೀಕ ಹಕ್ಕುಗಳ ಜಾರಿ ಕೋಶ ನಿರ್ದೇಶನಾಲಯಕ್ಕೆ ತಿಳಿಸಬೇಕು. ನಾಗರೀಕ ಹಕ್ಕುಗಳ ಜಾರಿ ಕೋಶ ನಿರ್ದೇಶನಾಲಯವು ಪ್ರಥಮ ಮಾಹಿತಿ ವರದಿ (ಎಫ್ಐಆರ್) ಸಲ್ಲಿಸುವ ಮೂಲಕ ಕ್ರಿಮಿನಲ್ ಮೊಕದ್ದಮೆಯನ್ನು ದಾಖಲಿಸಬೇಕು. ನಾಗರೀಕ ಹಕ್ಕುಗಳ ಜಾರಿ ಕೋಶ ನಿರ್ದೇಶನಾಲಯವು, ಪ್ರಾಜ್ಞ ಪರಿಶೀಲನಾ ಪ್ರಾಧಿಕಾರಗಳ ಮತ್ತು ಗೌರವಾನ್ವಿತ ನ್ಯಾಯಾಲಯಗಳ ಮುಂದೆ ಪ್ರಕರಣಗಳನ್ನು ಸಮರ್ಥಿಸಿಕೊಳ್ಳಲು ಸಮಾಜ ಕಲ್ಯಾಣ ಇಲಾಖೆಯಿಂದ ನೇಮಕಗೊಂಡ ವಿಶೇಷ ವಕೀಲರ ಸೇವೆಗಳನ್ನು ಬಳಸಿಕೊಳ್ಳಬೇಕು.

ಹಂತ-7 : ಇಲಾಖೆಯ ಮುಖ್ಯಸ್ಥರು/ಸರ್ಕಾರದ ಪ್ರಧಾನ ಕಾರ್ಯದರ್ಶಿ/ಕಾರ್ಯದರ್ಶಿಯವರು ಸಂಬಂಧಪಟ್ಟ ನೌಕರನ ಸರ್ಕಾರಿ ಸೇವೆಯನ್ನು ಕೊನೆಗೊಳಿಸುವ/ಸೇವೆಯಿಂದ ವಜಾಗೊಳಿಸುವ ಮೂಲಕ ಅವನ ವಿರುದ್ಧ ಕೂಡಲೇ ಕ್ರಮಕೈಗೊಳ್ಳತಕ್ಕದ್ದು ಹಾಗೂ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು, ನಾಗರೀಕ ಹಕ್ಕುಗಳ ಜಾರಿ ಕೋಶ ಮತ್ತು ರಾಜ್ಯ ನೋಡಲ್ ಅಧಿಕಾರಿ, ಬೆಂಗಳೂರು, ಆಯುಕ್ತರು, ಸಮಾಜ ಕಲ್ಯಾಣ ಇಲಾಖೆ ಹಾಗೂ ನಿರ್ದೇಶಕರು, ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ, ಬೆಂಗಳೂರು-ಇವರಿಗೆ ತಿಳಿಸಿ ಪ್ರಯೋಜನಗಳು, ಇತ್ಯಾದಿಯನ್ನು ಸಹ ಮುಟ್ಟುಗೋಲು ಹಾಕಿಕೊಳ್ಳತಕ್ಕದ್ದು. ಕ್ರಮಕೈಗೊಳ್ಳಲು ಸಕ್ಷಮರಾಗಿರುವ ಸರ್ಕಾರ ಅಥವಾ ಇಲಾಖೆಯ ಮುಖ್ಯಸ್ಥರು ಕೂಡಲೇ ಕ್ರಮಕೈಗೊಳ್ಳಬಹುದು. ಇಂಥ ಪ್ರಕರಣದಲ್ಲಿ ಸಂವಿಧಾನದ 311ನೇ ಅನುಚ್ಛೇದವು ಅನ್ವಯವಾಗದಿರುವುದರಿಂದ ಸಂಬಂಧಪಟ್ಟ ನೌಕರನ ಮೇಲೆ ಯಾವುದೇ ನೋಟೀಸು ಜಾರಿ ಮಾಡುವ ಅಗತ್ಯವಿಲ್ಲ. (ಆರ್. ವಿಶ್ವನಾಥ ಪಿಳ್ಳೈ-ವಿರುದ್ಧ-ಕೇರಳ ರಾಜ್ಯ ಮತ್ತು ಇತರರು ಹಾಗೂ ವಿ.

ವಿಮಲ್ ಘೋಶ್-ವಿರುದ್ಧ-ಕೇರಳ ರಾಜ್ಯ ಮತ್ತು ಇತರರು ಪ್ರಕರಣದಲ್ಲಿ ಮಾನ್ಯ ಸರ್ವೋಚ್ಛ ನ್ಯಾಯಾಲಯದಲ್ಲಿ ದಾಖಲಾದ 2004ರ ಸಿವಿಲ್ ಅಪೀಲು ಸಂಖ್ಯೆ : 89 ಮತ್ತು 90). ಸುಳ್ಳು ಜಾತಿ ಪ್ರಮಾಣಪತ್ರದ ಆಧಾರದ ಮೇಲೆ ಮೀಸಲಾತಿಯ ಯಾವುದೇ ಪ್ರಯೋಜನವನ್ನು ಪಡೆಯುವುದು ಅನೂರ್ಜಿತವಾಗುತ್ತದೆ ಹಾಗೂ ಕಾನೂನುಬಾಹಿರವಾಗುತ್ತದೆ ವಿವಿಧ ಇಲಾಖೆಗಳ ಮುಖ್ಯಸ್ಥರು/ಸರ್ಕಾರಿ ಇಲಾಖೆಗಳು ಸೇವೆಯನ್ನು ಕೊನೆಗೊಳಿಸುವ ಮುನ್ನ ಅಭಿಪ್ರಾಯ ಕೋರಿ ಪ್ರಕರಣಗಳನ್ನು ಸಮಾಜ ಕಲ್ಯಾಣ ಇಲಾಖೆಗೆ ಕಳುಹಿಸುವ ಅಗತ್ಯವಿಲ್ಲ.

ಹಂತ-8 : ಕೆಲವು ಪ್ರಕರಣಗಳಲ್ಲಿ ಪ್ರಮಾಣಪತ್ರವನ್ನು ತಹಸೀಲ್ದಾರರು ನೀಡಿಯೇ ಇಲ್ಲವೆಂದು ನಾಗರೀಕ ಹಕ್ಕುಗಳ ಜಾರಿ ಕೋಶ ನಿರ್ದೇಶನಾಲಯವು ನಡೆಸುವ ವಿಚಾರಣೆಯಲ್ಲಿ ಬಹಿರಂಗವಾಗಬಹುದು. ಇದರ ಅರ್ಥ ವ್ಯಕ್ತಿಯು ಅದನ್ನು ಸುಳ್ಳು ಸೃಷ್ಟಿ ಇತ್ಯಾದಿ ಮಾಡಿರಲೇಬೇಕು. ಅಂಥಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಸೆಪ್ಟೆಂಬರ್ ೧೨, ೨೦೧೩ ೧೪೪೭ ಸಂದರ್ಭಗಳಲ್ಲಿ, ನಾಗರೀಕ ಹಕ್ಕುಗಳ ಜಾರಿ ಕೋಶ ನಿರ್ದೇಶನಾಲಯವು ಸಂಬಂಧಪಟ್ಟ ವ್ಯಕ್ತಿಯ ವಿರುದ್ಧ ಕ್ರಿಮಿನಲ್ ಮೊಕದ್ದಮೆಯನ್ನು ನೇರವಾಗಿ ದಾಖಲಿಸಬಹುದು ಮತ್ತು ಆರೋಪ ಪಟ್ಟಿಯನ್ನು ಸಲ್ಲಿಸಲು ಮುಂದಿನ ಕ್ರಮ ಕೈಗೊಳ್ಳಬಹುದು. ಅವನ ಸೇವೆಯನ್ನು ಕೊನೆಗೊಳಿಸುವುದಕ್ಕಾಗಿ/ ಅವನನ್ನು ಸೇವೆಯಿಂದ ತೆಗೆದು ಹಾಕುವುದಕ್ಕಾಗಿ ವರದಿಯನ್ನು ಸಂಬಂಧಪಟ್ಟ ವ್ಯಕ್ತಿಯ ಇಲಾಖಾ ಮುಖ್ಯಸ್ಥರಿಗೆ ಸಲ್ಲಿಸಬೇಕಾಗುತ್ತದೆ.

ಹಂತ-9 : ನಾಗರೀಕ ಹಕ್ಕುಗಳ ಜಾರಿ ಕೋಶ ನಿರ್ದೇಶನಾಲಯವು (ಡಿಸಿಆರ್ಇ) ಎಲ್ಲಾ ಅಂಕಿ-ಸಂಖ್ಯೆಗಳ ಉದ್ದೇಶಕ್ಕಾಗಿ ಪ್ರಾರಂಭದಿಂದ ಹಿಡಿದು ಕೊನೆಯವರೆಗೆ ಪ್ರಕರಣದ ದಾಖಲೆಗಳನ್ನು ಇಟ್ಟುಕೊಂಡು ಬರತಕ್ಕದ್ದು. ಕ್ರಿಮಿನಲ್ ವ್ಯವಹರಣೆಗಳು ಮತ್ತು ಸೇವೆಯಿಂದ ತೆಗೆದುಹಾಕುವುದು, ಸೇವೆಯನ್ನು ಕೊನೆಗೊಳಿಸುವುದು. ವಜಾ ಮಾಡುವುದು ಮುಂತಾದವು ಬೇರೆ ಬೇರೆ ವಿಷಯಗಳಾಗಿವೆ. ಆದ್ದರಿಂದ ಎಲ್ಲಾ ಸುಳ್ಳು ಜಾತಿ ಪ್ರಮಾಣಪತ್ರ ಪ್ರಕರಣಗಳಲ್ಲೂ ಏಕಕಾಲಕ್ಕೆ ಕ್ರಮಕೈಗೊಳ್ಳತಕ್ಕದ್ದು.

ಎನ್. ನರಸಿಂಹಮೂರ್ತಿ

P.R. 764

ಸರ್ಕಾರದ ಅಧೀನ ಕಾರ್ಯದರ್ಶಿ-2,

ಸಮಾಜ ಕಲ್ಯಾಣ ಇಲಾಖೆ.

SC - 500

ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಸಚಿವಾಲಯ

ವಿಷಯ : ಶ್ರೀ ಎಂ.ಸಿ. ವಾಸುದೇವ, ನೋಟರಿ, ಮಡಿಕೇರಿ ಕಂದಾಯ ತಾಲ್ಲೂಕು, ಕೊಡಗು ಜಿಲ್ಲೆ ಇವರ ರಾಜೀನಾಮೆಯನ್ನು ಅಂಗೀಕರಿಸಿ, ಅವರ ಹೆಸರನ್ನು ನೋಟರಿ ರಿಜಿಸ್ಟರ್‌ನಿಂದ ತೆಗೆಯುವ ಬಗ್ಗೆ.

ಓದಲಾಗಿದೆ : ನೋಟರಿಯವರ ಮನವಿ ದಿನಾಂಕ : 19-04-2013.

ಪ್ರಸ್ತಾವನೆ :

ಮೇಲೆ ಓದಲಾದ ದಿನಾಂಕ : 19-04-2013ರಂದು ಶ್ರೀ ಎಂ.ಸಿ. ವಾಸುದೇವ, ನೋಟರಿ, ಮಡಿಕೇರಿ, ಕಂದಾಯ ತಾಲ್ಲೂಕು, ಕೊಡಗು ಜಿಲ್ಲೆ ಇವರು ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಿ ಅವರ ಆರೋಗ್ಯ ಸರಿಯಿಲ್ಲದ ಕಾರಣ ಅವರ ನೋಟರಿ ಪ್ರಮಾಣ ಪತ್ರದ ಚಾಲ್ತಿ ಅವಧಿ 5 ವರ್ಷಗಳು ದಿನಾಂಕ : 21-05-2012 ರಂದು ಕೊನೆಗೊಳ್ಳುವ ಪೂರ್ವದಲ್ಲಿಯೇ ನೋಟರಿ ವೃತ್ತಿಯನ್ನು ಮಾಡುವುದನ್ನು ದಿನಾಂಕ : 01-01-2012 ರಿಂದಲೇ ನಿಲ್ಲಿಸಿರುವುದಾಗಿ/ಬಿಟ್ಟಿರುವುದಾಗಿ ಹಾಗೂ ಕೊಡಗು ಜಿಲ್ಲೆಯ ಮಡಿಕೇರಿ ಕಂದಾಯ ತಾಲ್ಲೂಕಿನ ನೋಟರಿಯಾಗಿ ವೃತ್ತಿ ನಡೆಸುವುದನ್ನು ನಿಲ್ಲಿಸಲು ಅನುಮತಿ ನೀಡಬೇಕೆಂದು ಕೋರಿರುತ್ತಾರೆ.

1952ರ ನೋಟರಿ ನಿಯಮಗಳ ನಿಯಮ 10ರ ಉಪನಿಯಮ (ಎ) ರನ್ವಯ ನೋಟರಿಯವರು ವಿನಂತಿ ಮಾಡಿಕೊಂಡಲ್ಲಿ ಅವರ ಹೆಸರನ್ನು ನೋಟರಿವಹಿಯಿಂದ ಕೈಬಿಡಬಹುದು/ತೆಗೆದುಹಾಕಬಹುದಾಗಿರುತ್ತದೆ.

ಅದರಂತೆ, ಸರ್ಕಾರವು ನೋಟರಿಯವರ ಮನವಿಯನ್ನು ಪರಿಗಣಿಸಿ, ಈ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ : ಲಾ 92 ಎಲ್‌ಸಿಎಲ್ 2013, ಬೆಂಗಳೂರು, ದಿನಾಂಕ : 23-07-2013.

ಶ್ರೀ ಎಂ.ಸಿ. ವಾಸುದೇವ, ನೋಟರಿ, ಮಡಿಕೇರಿ, ಕಂದಾಯ ತಾಲ್ಲೂಕು, ಕೊಡಗು ಜಿಲ್ಲೆ ಇವರು ನೋಟರಿ ಹುದ್ದೆಗೆ ನೀಡಿರುವ ರಾಜೀನಾಮೆಯನ್ನು ದಿನಾಂಕ : 19-04-2013 ರಿಂದ ಜಾರಿಗೆ ಬರುವಂತೆ ಅಂಗೀಕರಿಸಲಾಗಿದೆ ಮತ್ತು ಸದರಿಯವರ ಹೆಸರನ್ನು ನೋಟರಿ ಕಾಯ್ದೆ 1952ರ ಕಲಂ 10 (ಎ) ರೀತ್ಯಾ ನೋಟರಿ ರಿಜಿಸ್ಟರ್‌ನಿಂದ ಶಾಶ್ವತವಾಗಿ ತೆಗೆದುಹಾಕಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಟಿ.ಕೆ. ಲಕ್ಷ್ಮಿನರಸಯ್ಯ

P.R. 811

SC - 15

ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆ.

ವಸತಿ ಸಚಿವಾಲಯ

ವಿಷಯ : ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಯವರನ್ನು ಸಮಗ್ರ ವಸತಿ ಮತ್ತು ಕೊಳಗೇರಿ ಅಭಿವೃದ್ಧಿ ಕಾರ್ಯಕ್ರಮದ (IHSDP) ರಾಜ್ಯ ಮಟ್ಟದ ಅಧಿಕಾರಯುಕ್ತ ಸಮಿತಿಗೆ ಅಧ್ಯಕ್ಷರನ್ನಾಗಿ ನೇಮಿಸುವ ಬಗ್ಗೆ.

ಓದಲಾಗಿದೆ : 1. ಸರ್ಕಾರದ ಆದೇಶ ಸಂಖ್ಯೆ : ವಇ 24 ಕೊಮಂಲೆ 2007, ದಿನಾಂಕ : 04-08-2007. 2. ಸರ್ಕಾರದ ಆದೇಶ ಸಂಖ್ಯೆ : ವಇ 24 ಕೊಮಂಲೆ 2007, ದಿನಾಂಕ : 04-03-2008. 3. ಸರ್ಕಾರದ ಆದೇಶ ಸಂಖ್ಯೆ : ವಇ 20 ಕೊಮಂಲೆ 2012, ದಿನಾಂಕ : 28-06-2012.

ಪ್ರಸ್ತಾವನೆ :

ಭಾರತ ಸರ್ಕಾರದ ನರ್ಮ್ ಯೋಜನೆಯ ಸಮಗ್ರ ವಸತಿ ಮತ್ತು ಕೊಳಗೇರಿ ಅಭಿವೃದ್ಧಿ ಯೋಜನೆ (IHSDP) ಯನ್ನು ರಾಜ್ಯದಲ್ಲಿ ಸುಗಮವಾಗಿ ಅನುಷ್ಟಾನಗೊಳಿಸುವ ಸಲುವಾಗಿ ಮೇಲೆ ಓದಲಾದ (1)ರ ಆದೇಶದಲ್ಲಿ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ರಾಜ್ಯ ಮಟ್ಟದ ಅಧಿಕಾರಯುಕ್ತ ಸಮಿತಿಯನ್ನು ರಚಿಸಲಾಗಿತ್ತು.

ಕರ್ನಾಟಕ ರಾಜ್ಯಪತ್ರ, ಗುರುವಾರ, ಸೆಪ್ಟೆಂಬರ್ ೧೨, ೨೦೧೩ ಭಾಗ ೧ ೧೪೪೮

ಅಂದಿನ ಅಪರ ಮುಖ್ಯಕಾರ್ಯದರ್ಶಿ ಹಾಗೂ ಅಧ್ಯಕ್ಷರು ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮದ ಅಧ್ಯಕ್ಷರಾಗಿದ್ದ ಶ್ರೀ ಅರವಿಂದ ಜಾಧವ ಭಾ.ಆ.ಸೇ. ರವರನ್ನು ಮೇಲೆ ಓದಲಾದ (3) ಆದೇಶದಲ್ಲಿ ಸಮಗ್ರ ವಸತಿ ಮತ್ತು ಕೊಳಗೇರಿ ಅಭಿವೃದ್ಧಿ ಯೋಜನೆ (IHSDP) ಯ ರಾಜ್ಯ ಮಟ್ಟದ ಅಧಿಕಾರಯುಕ್ತ ಸಮಿತಿಗೆ ಅಧ್ಯಕ್ಷರನ್ನು ನೇಮಿಸಲಾಗಿತ್ತು. ಪ್ರಸ್ತುತ ಸದರಿ ಅಧಿಕಾರಿಯವರು ವರ್ಗಾವಣೆಯಾಗಿರುತ್ತಾರೆ.

ಈ ಹಿನ್ನೆಲೆಯಲ್ಲಿ ಸಮಗ್ರ ವಸತಿ ಮತ್ತು ಕೊಳಗೇರಿ ಅಭಿವೃದ್ಧಿ ಯೋಜನೆ (IHSDP) ಯ ಅನುಷ್ಟಾನಕ್ಕಾಗಿ ರಾಜ್ಯಮಟ್ಟದ ಅಧಿಕಾರಯುಕ್ತ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸುವ ಪ್ರಸ್ತಾವನೆಯನ್ನು ಸರ್ಕಾರವು ಪರಿಶೀಲಿಸಿ ಈ ಕೆಳಕಂಡಂತೆ ಆದೇಶ ಹೊರಡಿಸಿದೆ.

ಸರ್ಕಾರದ ಆದೇಶ ಸಂಖ್ಯೆ : ವಇ 20 ಕೊಮಂಲೆ 2012, ಬೆಂಗಳೂರು, ದಿನಾಂಕ : 24-07-2013.

ಪ್ರಸ್ತಾವನೆಯಲ್ಲಿ ವಿವರಿಸಿರುವ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರದ JNNURM ನ ಸಮಗ್ರ ವಸತಿ ಮತ್ತು ಕೊಳಗೇರಿ ಅಭಿವೃದ್ಧಿ ಯೋಜನೆಯ ಸುಗಮ ಅನುಷ್ಟಾನಕ್ಕಾಗಿ ರಚಿಸಲಾಗಿದ್ದ ರಜ್ಯ ಮಟ್ಟದ ಅಧಿಕಾರಯುಕ್ತ ಸಮಿತಿಯನ್ನು (State Level Empowered Committee) ಸರ್ಕಾರದ ಅಪರ ಮುಖ್ಯಕಾರ್ಯದರ್ಶಿ ಇವರ ಅಧ್ಯಕ್ಷತೆಯಲ್ಲಿ ಈ ಕೆಳಕಂಡಂತೆ ಪುನರ್ ರಚಿಸಲಾಗಿದೆ.

ಸರ್ಕಾರದ ಅಪರ ಮುಖ್ಯಕಾರ್ಯದರ್ಶಿ ಅಧ್ಯಕ್ಷರು
ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ವಸತಿ ಇಲಾಖೆ ಸದಸ್ಯರು
ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ನಗರಾಭಿವೃದ್ಧಿ ಇಲಾಖೆ ಸದಸ್ಯರು
ಸರ್ಕಾರದ ಕಾರ್ಯದರ್ಶಿಗಳು, ಹಣಕಾಸು ಇಲಾಖೆ (ವೆಚ್ಚ) ಸದಸ್ಯರು
ಜಂಟಿ ನಿರ್ದೇಶಕರು, (ಯೋಜನೆ) ವಸತಿ ಮತ್ತು ನಗರಾಭಿವೃದ್ಧಿ ಇಲಾಖೆ ಸದಸ್ಯರು
ಯೋಜನೆಗೆ ಸಂಬಂಧಿಸಿದ ಅಧಿಕಾರಿಗಳು ಸದಸ್ಯರು
ಆಯುಕ್ತರು, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಸದಸ್ಯ-ಕಾರ್ಯದರ್ಶಿ (Member-Secretary)

ಅಧಿಕಾರಯುಕ್ತ ಸಮಿತಿಯ ಜವಾಬ್ದಾರಿ ಮತ್ತು ಕಾರ್ಯಗಳು ದಿನಾಂಕ : 04-08-2007ರ ಆದೇಶದಲ್ಲಿ ತಿಳಿಸಿರುವಂತೆ ಇರುತ್ತದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ನಾಗಣ್ಣ

P.R. 812

ಪೀಠಾಧಿಕಾರಿ-4,

ವಸತಿ ಇಲಾಖೆ.

SC-150

ಸರ್ಕಾರಿ ಕೇಂದ್ರ ಮುದ್ರಣಾಲಯ, ಘಟಕ-2, ಬೆಂಗಳೂರು

Cite this issue. Karnataka Gazette, Government of Karnataka, 12 September 2013. Indian Gazettes, https://egazette.servantsofknowledge.in/details/in.gazette.karnataka_new.2013-09-12.Part-1/. Archive identifier in.gazette.karnataka_new.2013-09-12.Part-1.