ಸಂಪುಟ ೧೫೨
Volume 152
ಬೆಂಗಳೂರು, ಗುರುವಾರ, ಜುಲೈ ೨೭, ೨೦೧೭ (ಶ್ರಾವಣ ೫, ಶಕ ವರ್ಷ ೧೯೩೯)
Bengaluru, Thursday, July 27, 2017 (Shravana 5, Shaka Varsha 1939)
ಸಂಚಿಕೆ ೩೦
Issue 30
ಭಾಗ ೧
ರಾಜ್ಯ ಸರ್ಕಾರದ ಮುಖ್ಯ ಆದೇಶಗಳು ಹಾಗೂ ಸುತ್ತೋಲೆ ಮುಂತಾದ
ಎಲ್ಲಾ ಇಲಾಖೆಗಳಿಗೂ ಸಂಬಂಧಿಸಿದ ಆದೇಶಗಳು
ಕಂದಾಯ ಸಚಿವಾಲಯ
ವಿಷಯ: ಬೆಂಗಳೂರು ದಕ್ಷಿಣ ತಾಲ್ಲೂಕು, ಉತ್ತರಹಳ್ಳಿ ಹೋಬಳಿ, ಸೋಮನಹಳ್ಳಿ ಗ್ರಾಮದ ಸ.ನಂ.225ರಲ್ಲಿ 33-00 ಎಕರೆ ಜಮೀನನ್ನು ಆಚಾರ್ಯ ಪಾಠಶಾಲೆ ಎಜುಕೇಷನ್ ಟ್ರಸ್ಟ್, ಬೆಂಗಳೂರು ಇವರಿಗೆ ಗುತ್ತಿಗೆ ಆಧಾರದ ಮೇಲೆ ಮಂಜೂರು ಮಾಡಿದ್ದು, ಗುತ್ತಿಗೆ ಅವಧಿಯು ಮುಗಿದಿರುವುದರಿಂದ ಜಮೀನನ್ನು ಸರ್ಕಾರದ ವಶಕ್ಕೆ ಪಡೆಯುವ ಬಗ್ಗೆ.
ಓದಲಾಗಿದೆ: ಜಿಲ್ಲಾಧಿಕಾರಿ, ಬೆಂಗಳೂರು ನಗರ ಜಿಲ್ಲೆ ಇವರ ಪತ್ರಗಳು, ಸಂಖ್ಯೆ: ಎಲ್ಎನ್ಡಿ(ಎಸ್)/ಸಿಆರ್/191/ 11-12, ದಿನಾಂಕ: 02-08-2016 ಮತ್ತು 15-11-2016.
ಪ್ರಸ್ತಾವನೆ:
ಮೇಲೆ ಓದಲಾದ ದಿನಾಂಕ:02-08-2016 ಮತ್ತು 15-11-2016ರ ಪತ್ರಗಳಲ್ಲಿ ಜಿಲ್ಲಾಧಿಕಾರಿ, ಬೆಂಗಳೂರು ನಗರ ಜಿಲ್ಲೆ ಇವರು ಬೆಂಗಳೂರು ದಕ್ಷಿಣ ತಾಲ್ಲೂಕು, ಉತ್ತರಹಳ್ಳಿ ಹೋಬಳಿ, ಸೋಮನಹಳ್ಳಿ ಗ್ರಾಮದ ಸ.ನಂ.225ರಲ್ಲಿ 33-00 ಎಕರೆ ಜಮೀನನ್ನು ಆಚಾರ್ಯ ಪಾಠಶಾಲೆ ಎಜುಕೇಷನ್ ಟ್ರಸ್ಟ್, ಬೆಂಗಳೂರು ಇವರಿಗೆ 10 ವರ್ಷಗಳ ಅವಧಿಗೆ ಸರ್ಕಾರದ ಆದೇಶ ಸಂಖ್ಯೆ.ಆರ್ಡಿ 53 ಎಲ್ಎಸ್ಡಿ 1962, ದಿನಾಂಕ: 03-05-1962 ರನ್ವಯ ವ್ಯವಸಾಯದ ಉದ್ದೇಶಕ್ಕೆ ಗುತ್ತಿಗೆ ಆಧಾರದ ಮೇಲೆ ಮಂಜೂರು ಮಾಡಿದ್ದು, ಗುತ್ತಿಗೆ ಅವಧಿಯು ದಿನಾಂಕ: 02-05-1972ರಂದು ಮುಗಿದಿರುವುದರಿಂದ ಈ ಜಮೀನನ್ನು ಸರ್ಕಾರದ ವಶಕ್ಕೆ ಪಡೆಯುವ ಕುರಿತು ಪ್ರಸ್ತಾಪಿಸಿರುತ್ತಾರೆ.
ಪ್ರಸ್ತಾಪಿತ ಜಮೀನಿನ ಗುತ್ತಿಗೆ ಅವಧಿ ಮುಗಿದಿರುವುದರಿಂದ ಸದರಿ ಜಮೀನನ್ನು 1991-92ನೇ ಸಾಲಿನಲ್ಲಿ ಸರ್ಕಾರವು ಬಡ ಜನತೆಗೆ ಉಚಿತ ನಿವೇಶನಗಳನ್ನು ನೀಡುವ ಉದ್ದೇಶದಿಂದ ಈ ಜಮೀನನ್ನು ಆಶ್ರಯ ಯೋಜನೆಗೆ ಮೀಸಲಿಟ್ಟು ಆದೇಶ ಹೊರಡಿಸಿದಾಗ, ಸದರಿ ಸಂಸ್ಥೆಯು ಮಾನ್ಯ ಉಚ್ಚ ನ್ಯಾಯಾಲಯದಲ್ಲಿ ರಿಟ್ ಪಿಟಿಷನ್ ಸಂಖ್ಯೆ. 2659/1991ನ್ನು ದಾಖಲಿಸಿದ್ದು, ಇದಕ್ಕೆ ಸಂಬಂಧಿಸಿದಂತೆ ಮಾನ್ಯ ನ್ಯಾಯಾಲಯವು ದಿನಾಂಕ:29-10-1997 ರಂದು ನೀಡಿದ ತೀರ್ಪಿನಲ್ಲಿ ಈ ಜಮೀನಿನ ವಿಷಯವಾಗಿ ಸಲ್ಲಿಕೆಯಾಗುವ ಮನವಿಗಳಲ್ಲಿನ ಅಂಶಗಳನ್ನು ಪರಿಗಣಿಸುವ ಮೂಲಕ ಶೀಘ್ರವಾಗಿ ಇತ್ಯರ್ಥಪಡಿಸುವಂತೆ ಆದೇಶಿಸಿರುತ್ತದೆ.
ಮುಂದುವರೆದು ಜಿಲ್ಲಾಧಿಕಾರಿ, ಬೆಂಗಳೂರು ನಗರ ಜಿಲ್ಲೆ ಇವರ ಕಾರ್ಯಾಲಯದಿಂದ ಸಂಬಂಧಪಟ್ಟವರಿಗೆ ನೋಟೀಸನ್ನು ಜಾರಿ ಮಾಡಿ ಸಮಜಾಯಿಷಿಯನ್ನು ಸಲ್ಲಿಸಲು ಸಾಕಷ್ಟು ಸಮಯಾವಕಾಶವನ್ನು ನೀಡಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಆಚಾರ್ಯ ಪಾಠಶಾಲೆ ಎಜುಕೇಷನ್ ಟ್ರಸ್ಟ್, ಬೆಂಗಳೂರು ಇವರು ದಿನಾಂಕ:14.10.2003 ಮತ್ತು 11-06-2004 ರಂದು ಸಮಜಾಯಿಷಿಯನ್ನು ನೀಡಿದ್ದು, ಸದರಿ ಸಮಜಾಯಿಷಿಗಳಲ್ಲಿ ಪ್ರಸ್ತಾಪಿತ ಜಮೀನು ಸಂಸ್ಥೆಯ ಸ್ವಾಧೀನಾನುಭವದಲ್ಲಿ 42 ವರ್ಷಗಳಿಂದ ಇರುವುದರಿಂದ ಇದರ ಮಾಲೀಕತ್ವವು ಸಂಸ್ಥೆಗೆ ಸೇರಿದೆಯಂದು ಹಾಗೂ ಟ್ರಸ್ಟ್ಗೆ ಶಾಶ್ವತವಾಗಿ ಮಂಜೂರು ಮಾಡುವಂತೆ ಅಥವಾ ಗುತ್ತಿಗೆಯ ಅವಧಿಯನ್ನು ವಿಸ್ತರಿಸುವಂತೆ ಕೋರಿದೆ. ಸಂಸ್ಥೆಯು ಸಲ್ಲಿಸಿರುವ ಸಮಜಾಯಿಷಿಯು ಸಮಂಜಸವಾಗಿಲ್ಲವಾದುದರಿಂದ ಸದರಿ ಜಮೀನನ್ನು ರಾಜಿವ್ಗಾಂಧಿ ವಸತಿ ನಿಗಮಕ್ಕೆ ಆಶ್ರಯ ಯೋಜನೆಗಾಗಿ ದಿನಾಂಕ: 19-06-2004ರಲ್ಲಿ ಮಂಜೂರು ಮಾಡಿ ಜಿಲ್ಲಾಧಿಕಾರಿಯವರು ಆದೇಶಿಸಿರುತ್ತಾರೆ.
ಸದರಿ ಆದೇಶದ ವಿರುದ್ಧ ಆಚಾರ್ಯ ಪಾಠಶಾಲೆ ಎಜುಕೇಷನ್ ಟ್ರಸ್ಟ್, ಬೆಂಗಳೂರು ಇವರು ಮಾನ್ಯ ಉಚ್ಚ ನ್ಯಾಯಾಲಯದಲ್ಲಿ ರಿಟ್ ಪಿಟಿಷನ್ ಸಂಖ್ಯೆ.28068/2004ನ್ನು ದಾಖಲಿಸಿದ್ದು, ಇದಕ್ಕೆ ಸಂಬಂಧಿಸಿದಂತೆ ಮಾನ್ಯ ನ್ಯಾಯಾಲಯವು ದಿನಾಂಕ:31-08-2004ರಂದು ನೀಡಿರುವ ಆಚಾರ್ಯ ಪಾಠಶಾಲೆ ಎಜುಕೇಷನ್ ಟ್ರಸ್ಟ್, ಬೆಂಗಳೂರು ಇವರಿಗೆ ರೂ.2,500-00 ದಂಡವನ್ನು ವಿಧಿಸಿದ್ದು, ಮನವಿದಾರ ಸಂಸ್ಥೆಯು ಅನುಭೋಗಿಸಿಕೊಂಡು ಬಂದಿರುವ ಜಮೀನನ್ನು ಅನಧಿಕೃತ ಒತ್ತುವರಿಯಿಂದ ತೆರವುಗೊಳಿಸುವಂತೆ ಆದೇಶವನ್ನು ನೀಡಿರುತ್ತದೆ.
(೧೦೪೧)೧೦೪೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೨೭, ೨೦೧೭ ಭಾಗ ೧ ಪ್ರಸ್ತಾಪಿತ ಸಂಸ್ಥೆಯು ಮಾನ್ಯ ಉಚ್ಚ ನ್ಯಾಯಾಲಯದ ಆದೇಶದ ವಿರುದ್ದ ರಿಟ್ ಅಪೀಲ್ ಸಂಖ್ಯೆ.4059/2004ನ್ನು ದಾಖಲಿಸಿದ್ದು; ಈ ಅಪೀಲಿಗೆ ಸಂಬಂಧಿಸಿದಂತೆ ದಿನಾಂಕ:17-04-2009ರಂದು ನೀಡಿರುವ ತೀರ್ಪಿನಲ್ಲಿ ರಿಟ್ ಪಿಟಿಷನ್ ಸಂಖ್ಯೆ.28068/2004ಗೆ ಸಂಬಂಧಿಸಿದಂತೆ ಏಕಸದಸ್ಯ ಪೀಠವು ದಿನಾಂಕ:31-08-2004ರಂದು ನೀಡಿರುವ ತೀರ್ಪು, ಬೆಂಗಳೂರು ನಗರ ಜಿಲ್ಲಾಧಿಕಾರಿಯವರ ಆದೇಶ ಮತ್ತು ಆಶ್ರಯ ಯೋಜನೆಗಾಗಿ ಸದರಿ ಜಮೀನನ್ನು ಮಂಜೂರು ಮಾಡಿರುವ ಆದೇಶಗಳೆಲ್ಲವನ್ನೂ ರದ್ದುಪಡಿಸಿದ್ದು, ಮನವಿದಾರ ಸಂಸ್ಥೆಯ ಗುತ್ತಿಗೆ ವಿಚಾರದಲ್ಲಿ ಜಿಲ್ಲಾಧಿಕಾರಿ, ಬೆಂಗಳೂರು ನಗರ ಜಿಲ್ಲೆ ಇವರು ದಿನಾಂಕ: 03-11-1999ರಂದು ಸಲ್ಲಿಸಿದ್ದ ಪ್ರಸ್ತಾವನೆಯನ್ನು ನಿಯಮಾನುಸಾರ ಇತ್ಯರ್ಥಪಡಿಸುವಂತೆ ನಿರ್ದೇಶನವನ್ನು ನೀಡಿರುತ್ತದೆ. ತದನಂತರ ಮನವಿದಾರ ಸಂಸ್ಥೆಯು ಮಾನ್ಯ ಉಚ್ಚ ನ್ಯಾಯಾಲಯದಲ್ಲಿ ಸೋಮನಹಳ್ಳಿ ಗ್ರಾಮ ಪಂಚಾಯಿತಿಯ ವಿರುದ್ಧ ಮಾನ್ಯ ಉಚ್ಚ ನ್ಯಾಯಾಲಯದಲ್ಲಿ ರಿಟ್ ಪಿಟಿಷನ್ ಸಂಖ್ಯೆ.57685/2014 ದಾಖಲಿಸಿರುತ್ತದೆ ಹಾಗೂ ಈ ಸಂಬಂಧ ದಿನಾಂಕ:18-12-2014ರಂದು ನೀಡಿರುವ ತೀರ್ಪಿನನ್ವಯ ಸರ್ಕಾರವು ಸಕ್ಷಮ ಪ್ರಾಧಿಕಾರವಾಗಿದ್ದು, ಜಿಲ್ಲಾಧಿಕಾರಿಗಳಾಗಲೀ/ತಹಶೀಲ್ದಾರ್ರವರಾಗಲೀ ಸಕ್ಷಮ ಪ್ರಾಧಿಕಾರವಾಗಿರುವುದಿಲ್ಲವಾದ್ದರಿಂದ ಸಂಸ್ಥೆಗೆ ಗುತ್ತಿಗೆ ಆಧಾರದ ಮೇಲೆ ಮಂಜೂರು ಮಾಡಿರುವ ಸದರಿ ಜಮೀನಿನಲ್ಲಿ ಸಮಾಜಕ್ಕೆ ಅನುಕೂಲವಾಗುವಂತಹ ಸೇವೆಯನ್ನು ಗಮನದಲ್ಲಿಟ್ಟುಕೊಂಡು ಹಾಗೂ ಸುಧೀರ್ಘ ಕಾಲದಿಂದ ಸದರಿ ಜಮೀನನ್ನು ಅನುಭೋಗಿಸಿಕೊಂಡು ಬರುತ್ತಿರುವುದರಿಂದ ಖಾಯಂ ಆಗಿ ಮಂಜೂರು ಮಾಡುವಂತೆ ಕೋರಿದೆ.
ಆದರೆ ಆಚಾರ್ಯ ಪಾಠಶಾಲೆ ಎಜುಕೇಷನ್ ಟ್ರಸ್ಟ್, ಬೆಂಗಳೂರು ಇವರಿಗೆ ಶೈಕ್ಷಣಿಕ ಉದ್ದೇಶಕ್ಕಾಗಿ ಈಗಾಗಲೇ ಸದರಿ ಸೋಮನಹಳ್ಳಿ ಗ್ರಾಮದ ಸರ್ವೆ ನಂ. 225ರಲ್ಲಿ ಒಟ್ಟು 57 ಎಕರೆ ಜಮೀನನ್ನು ಖಾಯಂ ಆಗಿ 1962 ರಿಂದ 1966ರ ಅವಧಿಗಳಲ್ಲಿ ಮಂಜೂರು ಮಾಡಿದೆ. ಜೊತೆಗೆ ಸದರಿ ಗ್ರಾಮದ ಅದೇ ಸರ್ವೆ ನಂ.225ರಲ್ಲಿ 33-00 ಎಕರೆ ಜಮೀನನ್ನು ವ್ಯವಸಾಯದ ಉದ್ದೇಶಕ್ಕೆ 10 ವರ್ಷಗಳ ಗುತ್ತಿಗೆ ಅವಧಿಗೆ ದಿನಾಂಕ: 03-05-1962ರಲ್ಲಿ ನೀಡಲಾಗಿದ್ದ ಅವಧಿಯು ದಿನಾಂಕ: 03-05-1972ರಲ್ಲಿ ಮುಕ್ತಾಯವಾಗಿದೆ. ಅಂದಿನ ವಿಶೇಷ ಜಿಲ್ಲಾಧಿಕಾರಿರವರು ದಿನಾಂಕ 03-11-1999ರ ಪತ್ರದಲ್ಲಿ ಸದರಿ ಟ್ರಸ್ಟ್ನ ಕೋರಿಕೆಯನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಸಂಸ್ಥೆಯ ಶೈಕ್ಷಣಿಕ ವಿಸ್ತರಣೆಗೆ ಗುತ್ತಿಗೆಯನ್ನು ವಾರ್ಷಿಕ ಎಕರೆಗೆ ರೂ. 1,000/- ರಂತೆ ಗುತ್ತಿಗೆ ದರ ವಿಧಿಸಿ 1972ರಿಂದಲೂ ಇಲ್ಲಿಯವರೆಗೆ (ಅಂದರೆ ಪತ್ರ ದಿನಾಂಕ 03-11-1999ರ ವರೆಗೆ) ವಿಸ್ತರಿಸಿ; ಸ್ಥಿರೀಕರಿಸಿದ ನಂತರ ಇನ್ನೂ 30 ವರ್ಷಗಳವರೆಗೆ ಗುತ್ತಿಗೆ ವಿಸ್ತರಿಸಲು ಶಿಫಾರಸ್ಸು ಮಾಡಿದ್ದಾರೆ.
ಈಗಾಗಲೇ ತಿಳಿಸಿದಂತೆ ಶೈಕ್ಷಣಿಕ ಉದ್ದೇಶಕ್ಕಾಗಿ ಸಾಕಷ್ಟು ಜಮೀನನ್ನು, ಅಂದರೆ, 57 ಎಕರೆ ಜಮೀನನ್ನು ಸದರಿ ಟ್ರಸ್ಟ್ಗೆ ಸೋಮನಹಳ್ಳಿ ಗ್ರಾಮದ ಸರ್ವೆ ನಂ. 225ರಲ್ಲಿ ನೀಡಲಾಗಿದೆ. ಪ್ರಶ್ನಿತ 33-00 ಎಕರೆ ಜಮೀನನ್ನು ವ್ಯವಸಾಯದ ಉದ್ದೇಶಕ್ಕೆ ಸದರಿ ಟ್ರಸ್ಟ್ಗೆ ಗುತ್ತಿಗೆಗೆ ನೀಡಲಾಗಿದ್ದು, ಅದನ್ನು ಸದರಿ ಉದ್ದೇಶಕ್ಕೆ ಸಂಸ್ಥೆ ಬಳಸಿರುವುದಿಲ್ಲವೆಂಬ ಪ್ರಮುಖ ಅಂಶವನ್ನು ಅಂದಿನ ವಿಶೇಷ ಜಿಲ್ಲಾಧಿಕಾರಿರವರು ಮೇಲ್ಕಂಡಂತೆ ಶಿಫಾರಸ್ಸು ಮಾಡುವಾಗ ಗಮನಿಸಿರುವುದಿಲ್ಲ. ಅಲ್ಲದೆ ಭೂ ಮಂಜೂರಾತಿ ನಿಯಮಗಳಲ್ಲಿ ಗರಿಷ್ಠ ಗುತ್ತಿಗೆ ಅವಧಿ 35 ವರ್ಷಗಳವರೆಗೆ ಇದ್ದು, ಅದಕ್ಕಿಂತ ಹೆಚ್ಚಿನ ಅವಧಿಗೆ ಗುತ್ತಿಗೆ ವಿಸ್ತರಿಸಲು ಅವಕಾಶವಿಲ್ಲ ಎಂಬುದನ್ನು ಸಹ ಸದರಿ ವಿಶೇಷ ಜಿಲ್ಲಾಧಿಕಾರಿರವರು ಗಮನಿಸಿರುವುದಿಲ್ಲ. ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಜಮೀನುಗಳು ಅತ್ಯಂತ ಬೆಲೆ ಬಾಳುವುದರಿಂದ ಹಾಗೂ ವಿವಿಧ ಸಾರ್ವಜನಿಕ ಉದ್ದೇಶಗಳಿಗೆ ಈ ಜಮೀನುಗಳ ಅವಶ್ಯಕತೆಯಿರುವುದರಿಂದ ಸಂಸ್ಥೆಯ ಮನವಿಯನ್ನು ಪರಿಗಣಿಸಲು ನಿಯಮಗಳಲ್ಲಿ ಅವಕಾಶವಿರುವುದಿಲ್ಲ.
ಈ ಎಲ್ಲಾ ಅಂಶಗಳ ಹಿನ್ನೆಲೆಯಲ್ಲಿ, ಬೆಂಗಳೂರು ದಕ್ಷಿಣ ತಾಲ್ಲೂಕು, ಉತ್ತರಹಳ್ಳಿ ಹೋಬಳಿ, ಸೋಮನಹಳ್ಳಿ ಗ್ರಾಮದ ಸರ್ವೆ ನಂ.225ರಲ್ಲಿ 33-00 ಎಕರೆ ಗೋಮಾಳ ಜಮೀನನ್ನು ಗುತ್ತಿಗೆ ಆಧಾರದ ಮೇಲೆ 10 ವರ್ಷಗಳ ಅವಧಿಗೆ ಸರ್ಕಾರಿ ಆದೇಶ ಸಂಖ್ಯೆ: ಆರ್ಡಿ 53 ಎಲ್ಎಸ್ಡಿ 1962 ದಿನಾಂಕ:
03-05-1962ರಲ್ಲಿ ಆಚಾರ್ಯ ಪಾಠಶಾಲಾ ಎಜುಕೇಷನಲ್ ಟ್ರಸ್ಟ್, ಬೆಂಗಳೂರು ಇವರಿಗೆ ವ್ಯವಸಾಯ ಉದ್ದೇಶಕ್ಕೆ ನೀಡಲಾಗಿದ್ದು, ಜಿಲ್ಲಾಧಿಕಾರಿ, ಬೆಂಗಳೂರು ಜಿಲ್ಲೆ, ರವರು ಸರ್ಕಾರಕ್ಕೆ ದಿನಾಂಕ 03-11-1999ರ ಪತ್ರದಲ್ಲಿ ಸದರಿ ಗುತ್ತಿಗೆಯನ್ನು ಶೈಕ್ಷಣಿಕ ಉದ್ದೇಶಕ್ಕೆ ವಿಸ್ತರಿಸಲು ಶಿಫಾರಸ್ಸು ಮಾಡಿರುವುದನ್ನು ಪರಿಶೀಲಿಸಲಾಗಿ ಅದನ್ನು ಪರಿಗಣಿಸಲು ನಿಯಮಗಳಲ್ಲಿ ಅವಕಾಶವಿಲ್ಲವಾದ್ದರಿಂದ ಸದರಿ ಪ್ರಸ್ತಾವನೆಯನ್ನು ತಿರಸ್ಕರಿಸಲು ಮತ್ತು ವ್ಯವಸಾಯ ಉದ್ದೇಶಕ್ಕಾಗಿ ನೀಡಲಾದ ಜಮೀನನ್ನು ಆ ಉದ್ದೇಶಕ್ಕೆ ಬಳಸದೆ ಮತ್ತು ಕಾನೂನುಬಾಹಿರವಾಗಿ ಅದೇ ಸರ್ವೆ ನಂಬರ್ 225ರಲ್ಲಿ ಇನ್ನೂ 0.36 ಗುಂಟೆ ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿಕೊಂಡಿರುವುದರಿಂದ ಆಚಾರ್ಯ ಪಾಠಶಾಲಾ ಎಜುಕೇಷನಲ್ ಟ್ರಸ್ಟ್ನ ವಿರುದ್ದ ಕಾನೂನು ಕ್ರಮ ಜರುಗಿಸಲು ತೀರ್ಮಾನಿಸಲಾಗಿದೆ.
ಜಿಲ್ಲಾಧಿಕಾರಿ, ಬೆಂಗಳೂರು ನಗರ ಜಿಲ್ಲೆ ಇವರ ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿ ಕೆಳಕಂಡಂತೆ ಆದೇಶಿಸಿದೆ.
ಸರ್ಕಾರದ ಆದೇಶ ಸಂಖ್ಯೆ. ಆರ್ಡಿ 333 ಎಲ್ಜಿಬಿ 2016,
ಬೆಂಗಳೂರು ದಿನಾಂಕ: 21-04-2017
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಬೆಂಗಳೂರು ದಕ್ಷಿಣ ತಾಲ್ಲೂಕು, ಉತ್ತರಹಳ್ಳಿ ಹೋಬಳಿ, ಸೋಮನಹಳ್ಳಿ ಗ್ರಾಮದ ಸರ್ವೆ ನಂ.225ರಲ್ಲಿ 33-00 ಎಕರೆ ಗೋಮಾಳ ಜಮೀನನ್ನು ಆಚಾರ್ಯ ಪಾಠಶಾಲಾ ಎಜುಕೇಷನಲ್ ಟ್ರಸ್ಟ್ ಇವರಿಗೆ ಗುತ್ತಿಗೆ ಆಧಾರದ ಮೇಲೆ 10 ವರ್ಷಗಳ ಅವಧಿಗೆ ಸರ್ಕಾರಿ ಆದೇಶ ಸಂಖ್ಯೆ: ಆರ್ಡಿ 53 ಎಲ್ಎಸ್ಡಿ 1962 ದಿನಾಂಕ: 03-05-1962ರಲ್ಲಿ ವ್ಯವಸಾಯ ಉದ್ದೇಶಕ್ಕೆ ನೀಡಲಾಗಿದ್ದು ಸದರಿ ಗುತ್ತಿಗೆಯನ್ನು ವಿಸ್ತರಿಸಲು ಅಂದಿನ ವಿಶೇಷ ಜಿಲ್ಲಾಧಿಕಾರಿಯವರು ಪತ್ರ ಸಂಖ್ಯೆ: ಎಲ್ಎನ್ಡಿ(ಎಸ್)ಸಿಆರ್223:97-98 ದಿನಾಂಕ: 01-11-1999ರಲ್ಲಿ ಸಲ್ಲಿಸಿರುವ ಪ್ರಸ್ತಾವನೆಯನ್ನು ಸರ್ಕಾರವು ತಿರಸ್ಕರಿಸಿ ಆದೇಶಿಸಿದೆ.
ಆಚಾರ್ಯ ಪಾಠಶಾಲಾ ಎಜುಕೇಷನಲ್ ಟ್ರಸ್ಟ್ಗೆ ಪ್ರಸ್ತಾವಿತ 33-00 ಎಕರೆ ಜಮೀನನ್ನು ಗುತ್ತಿಗೆ ಆಧಾರದ ಮೇಲೆ ವ್ಯವಸಾಯ ಉದ್ದೇಶಕ್ಕೆ ನೀಡಲಾಗಿದ್ದು ಸದರಿ ಉದ್ದೇಶಕ್ಕೆ ಅದನ್ನು ಉಪಯೋಗಿಸದೆ ಗುತ್ತಿಗೆ ಷರತ್ತುಗಳನ್ನು ಉಲ್ಲಂಘಿಸಿರುವ ಕಾರಣ, ಕರ್ನಾಟಕ ಭೂ ಮಂಜೂರಾತಿ ನಿಯಮಗಳು, 1969ರನ್ವಯ ಗುತ್ತಿಗೆ ಮುಂದುವರೆಸಲು ಅವಕಾಶವಿರುವುದಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿ, ಬೆಂಗಳೂರು ನಗರ ಜಿಲ್ಲೆ ಇವರು ಕಾನೂನು ಕ್ರಮ ವಹಿಸುವಂತೆ ನಿರ್ದೇಶಿಸಿದೆ.
PR No.192
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ SC-50
ಎಸ್.ಎಲ್. ಮಹಾಂತೇಗೌಡ
ಸರ್ಕಾರದ ಅಧೀನ ಕಾರ್ಯದರ್ಶಿ,
ಕಂದಾಯ ಇಲಾಖೆ. (ಭೂಮಂಜೂರಾತಿ-1)ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೨೭, ೨೦೧೭ ೧೦೪೩
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ವಿಷಯ: ಖಾಸಗಿ ಫಾರ್ಮಸಿ ಕಾಲೇಜುಗಳಲ್ಲಿನ ಎಂ.ಫಾರ್ಮ, ಫಾರ್ಮ.ಡಿ (ಪಿ.ಬಿ.), ಫಾರ್ಮ.ಡಿ ಮತ್ತು
ಬಿ.ಫಾರ್ಮ ಕೋರ್ಸ್ಗಳ ಪ್ರವೇಶಕ್ಕೆ ಸೀಟುಗಳ ಅನುಪಾತವನ್ನು ನಿಗದಿಗೊಳಿಸುವ ಬಗ್ಗೆ.
ಓದಲಾಗಿದೆ: 1. ಔಷಧ ನಿಯಂತ್ರಕರ ಪ್ರಸ್ತಾವನೆ ಸಂಖ್ಯೆ:ಔನಿಇ/99/ಯೋಜನೆ/ 2016-1, ದಿನಾಂಕ; 08.05.2017. 2. ಸರ್ಕಾರದ ಆದೇಶ ಸಂಖ್ಯೆ:ಆಕುಕ 179 ಪಿಟಿಡಿ 2005, ದಿನಾಂಕ: 19.04.2007. 3. ಸರ್ಕಾರದ ಆದೇಶ ಸಂಖ್ಯೆ:ಆಕುಕ 244 ಪಿಟಿಡಿ 2012, ದಿನಾಂಕ: 20.07.2012.
ಪ್ರಸ್ತಾವನೆ:
ಮೇಲೆ ಓದಲಾದ ಕ್ರ.ಸಂ. (1)ರ ಪ್ರಸ್ತಾವನೆಯಲ್ಲಿ, ಔಷಧ ನಿಯಂತ್ರಕರು, ರಾಜ್ಯ ಔಷಧ ನಿಯಂತ್ರಣ ಇಲಾಖೆ, ಬೆಂಗಳೂರು ಇವರು ಪ್ರಸಕ್ತ ಶೈಕ್ಷಣಿಕ ಸಾಲಿನ ಫಾರ್ಮಸಿ ವಿಷಯದ ಎಂ.ಫಾರ್ಮ, ಫಾರ್ಮ.ಡಿ. (ಪಿ.ಬಿ) ಮತ್ತು ಫಾರ್ಮ.ಡಿ. ಸ್ನಾತಕೋತ್ತರ ಕೋರ್ಸ್ಗಳ ಪ್ರವೇಶಕ್ಕೆ ಸರ್ಕಾರಿ ಕೋಟಾ ಮತ್ತು ಆಡಳಿತ ಮಂಡಳಿಯ ಕೋಟಾ ಸೀಟುಗಳನ್ನು ಶೇ. 50:50ರ ಅನುಪಾತದಲ್ಲಿ ನಿಗದಿಪಡಿಸಿ ಆದೇಶ ಹೊರಡಿಸುವಂತೆ ಸರ್ಕಾರವನ್ನು ಕೋರಿರುತ್ತಾರೆ.
ಮೇಲೆ ಓದಲಾದ ಕ್ರ.ಸಂ (2)ರ ಸರ್ಕಾರದ ಆದೇಶದಲ್ಲಿ, 2007-08ನೇ ಶೈಕ್ಷಣಿಕ ಸಾಲಿನಲ್ಲಿ ರಾಜ್ಯದ ಖಾಸಗಿ ಫಾರ್ಮಸಿ, ನರ್ಸಿಂಗ್ ಮತ್ತು ಫಿಜಿಯೋಥೆರಪಿ ಮಹಾವಿದ್ಯಾಲಯಗಳ ಸ್ನಾತಕೋತ್ತರ ಮತ್ತು ಪದವಿ ಕೋರ್ಸ್ಗಳ ಪ್ರವೇಶಕ್ಕೆ ಈ ಕೆಳಗಿನಂತೆ ಸೀಟುಗಳ ಹಂಚಿಕೆಯನ್ನು ನಿಗಧಿಪಡಿಸಿದೆ.
| ಕ್ರ.ಸಂ. | ಕೋರ್ಸ್ | ಸ ರ್ಕಾರಿ ಸೀಟುಗಳು | ಆಡಳಿತ ಮಂಡಳಿಯ ಸೀಟುಗಳು. |
| 1. | ಎಂ.ಫಾರ್ಮ | 50% | 50% |
| 2. | ಎಂ.ಎಸ್ಸಿ. ನರ್ಸಿಂಗ್ | 25% | 75% |
| 3. | ಎಂ.ಪಿ.ಟಿ. | 25% | 75% |
| 4. | ಬಿ.ಫಾರ್ಮ | 20% | 80% |
| 5. | ಬಿ.ಎಸ್ಸಿ.ನರ್ಸಿಂಗ್ | 20% | 80% |
| 6. | ಬಿ.ಪಿ.ಟಿ. | 20% | 80% |
ಮೇಲೆ ಓದಲಾದ ಕ್ರ.ಸಂ (3)ರ ಸರ್ಕಾರದ ಆದೇಶದಲ್ಲಿ, 2012-13ನೇ ಶೈಕ್ಷಣಿಕ ಸಾಲಿಗೆ ಎಂ.ಫಾರ್ಮ, ಫಾರ್ಮ.ಡಿ (ಪಿ.ಬಿ) ಮತ್ತು ಫಾರ್ಮ.ಡಿ ಕೋರ್ಸ್ಗಳ ಪ್ರವೇಶಕ್ಕೆ ಸರ್ಕಾರಿ ಮತ್ತು ಆಡಳಿತ ಮಂಡಳಿಯ ಸೀಟ್ಗಳ ಅನುಪಾತವನ್ನು ಶೇ. 50:50ರಂತೆ ನಿಗದಿಪಡಿಸಿದೆ.
ಔಷಧ ನಿಯಂತ್ರಕರ ಪ್ರಸ್ತಾವನೆ ಮತ್ತು ಲಭ್ಯವಿರುವ ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸಿದ ಸರ್ಕಾರವು ಜನಸಾಮಾನ್ಯರ ಮತ್ತು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ 2017-18ನೇ ಶೈಕ್ಷಣಿಕ ಸಾಲಿನಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ರಾಜ್ಯದ ಖಾಸಗಿ ಫಾರ್ಮಸಿ ಕಾಲೇಜುಗಳಲ್ಲಿ ಸ್ನಾತಕೋತ್ತರ ಮತ್ತು ಪದವಿ ಕೋರ್ಸ್ಗಳ ಪ್ರವೇಶಕ್ಕೆ ಸರ್ಕಾರಿ ಮತ್ತು ಆಡಳಿತ ಮಂಡಳಿಯ ಸೀಟುಗಳ ಅನುಪಾತವನ್ನು ಶೇ. 50:50ರಂತೆ ನಿಗದಿಪಡಿಸಲು ನಿರ್ಧರಿಸಿದೆ. ಆದುದರಿಂದ, ಈ ಆದೇಶ.
ಸರ್ಕಾರದ ಆದೇಶ ಸಂಖ್ಯೆ:ಆಕುಕ 182 ಪಿಟಿಡಿ 2016, ಬೆಂಗಳೂರು, ದಿನಾಂಕ:02.06.2017.
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, 2017-18ನೇ ಶೈಕ್ಷಣಿಕ ಸಾಲಿನಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ರಾಜ್ಯದ ಖಾಸಗಿ ಫಾರ್ಮಸಿ ಕಾಲೇಜುಗಳಲ್ಲಿನ ಸ್ನಾತಕೋತ್ತರ ಮತ್ತು ಪದವಿ ಕೋರ್ಸ್ಗಳ ಪ್ರವೇಶಕ್ಕೆ ಸರ್ಕಾರಿ ಮತ್ತು ಆಡಳಿತ ಮಂಡಳಿಯ ಸೀಟುಗಳ
| ಕ್ರ.ಸಂ. | ಕೋರ್ಸ್ | ಸ ರ್ಕಾರಿ ಸೀಟುಗಳು | ಆಡಳಿತ ಮಂಡಳಿಯ ಸೀಟುಗಳು. |
| 1. | ಎಂ.ಫಾರ್ಮ | 50% | 50% |
| 2. | ಪ ಾರ್ಮ.ಡಿ. (ಪೋಸ್ಟ್ ಬ್ಯಾಕಲುರೇಟ್) | 50% | 50% |
| 3. | ಪ ಾರ್ಮ.ಡಿ. | 50% | 50% |
| 4. | ಬಿ.ಫಾರ್ಮ | 50% | 50% |
PR No.193
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ SC-250
ಬಿ.ಕಮಲಮ್ಮ ಸರ್ಕಾರದ ಅದೀನ ಕಾರ್ಯದರ್ಶಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
(ಭಾರತೀಯ ವೈದ್ಯ ಪದ್ಧತಿ)೧೦೪೪ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೨೭, ೨೦೧೭ ಭಾಗ ೧
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ವಿಷಯ: ಶ್ರೀ ಎನ್. ಕೃಷ್ಣಾ ರೆಡ್ಡಿ, ಸಹಾಯಕ ಔಷಧ ನಿಯಂತ್ರಕರು, ಚಾಮರಾಜನಗರ ಜಿಲ್ಲೆ ಔಷಧ ನಿಯಂತ್ರಣ ಇಲಾಖೆ, ಇವರನ್ನು ಸರ್ಕಾರಿ ಸೇವೆಯಿಂದ ಕಡ್ಡಾಯ ನಿವೃತ್ತಿ ಗೊಳಿಸುವ ದಂಡನೆ ವಿಧಿಸುವ ಬಗ್ಗೆ.
ಓದಲಾಗಿದೆ: 1. ಅಪರ ಪೋಲೀಸ್ ಮಹಾನಿರ್ದೇಶಕರು, ಕರ್ನಾಟಕ ಲೋಕಾಯುಕ್ತ, ಬೆಂಗಳೂರು ಇವರ ಪತ್ರ
ಲೋಕ್/ಐಎನ್ವಿ(ಜಿ)/ಎಲ್-37/ಸಿಆರ್-5/2011/ ಬಿಜಿಕೆಟಿ ದಿನಾಂಕ: 06-06-2011.
2. ಸರ್ಕಾರಿ ಆದೇಶ ಸಂಖ್ಯೆ: ಆಕುಕ 90 ಐಎಂಎಂ 2011 ದಿನಾಂಕ: 21-06-2011.
3. ಅಪರ ಪೊಲೀಸ್ ಮಹಾನಿರ್ದೇಶಕರು, ಕರ್ನಾಟಕ ಲೋಕಾಯುಕ್ತ, ಬೆಂಗಳೂರು,
ಇವರ ಪತ್ರ ಲೋಕ್/ಐಎನ್ವಿ(ಜಿ)/ಎಲ್-37/ಸಿಆರ್-5/2011/ ಬಿಜಿಕೆಟಿ ದಿನಾಂಕ: 22-07-2011.
ಮತ್ತು ಲೋಕಾಯುಕ್ತ ಪೊಲೀಸ್, ಬಾಗಲಕೋಟೆ, ಇವರ ವಿಚಾರಣಾ ವರದಿ ದಿನಾಂಕ: 30-06-2011.
4. ಸರ್ಕಾರಿ ಆದೇಶ ಸಂಖ್ಯೆ: ಆಕುಕ 90 ಐಎಂಎಂ 2011 ದಿನಾಂಕ: 30-08-2011 ಮತ್ತು 24-10-2011.
5. ಸರ್ಕಾರಿ ಆದೇಶ ಸಂಖ್ಯೆ: ಆಕುಕ 90 ಐಎಂಎಂ 2011 ದಿನಾಂಕ: 14-5-2012.
6. ಲೋಕ್/ಐಎನ್ಕ್ಯೂ/14-ಎ/224/2012/ಎಆರ್ಇ-11 ದಿನಾಂಕ: 21-09-2016.
7. ಸರ್ಕಾರದ ತಿಳುವಳಿಕೆ ಪತ್ರ ಸಂಖ್ಯೆ: ಆಕುಕ 90 ಐಎಂಎಂ 2011 ದಿನಾಂಕ: 19-10-2016.
ಮತ್ತು 09-12-2016.
8. ಶ್ರೀ ಎನ್. ಕೃóಷ್ಣಾ ರೆಡ್ಡಿ, ಇವರ ಪ್ರತಿ ರಕ್ಷಣಾ ಹೇಳಿಕೆ ದಿನಾಂಕ: 22-12-2016.
9. ಸಚಿವ ಸಂಪುಟದ ನಿರ್ಣಯ ದಿನಾಂಕ: 12-04-2017.
ಪ್ರಸ್ತಾವನೆ:
ಮೇಲೆ ಓದಲಾದ ಕ್ರಮಸಂಖ್ಯೆ (1)ರಲ್ಲಿ ಅಪರ ಪೊಲೀಸ್ ಮಹಾನಿರ್ದೇಶಕರು, ಕರ್ನಾಟಕ ಲೋಕಾಯುಕ್ತ, ಬೆಂಗಳೂರು, ಇವರ ಪತ್ರದಲ್ಲಿ, ಶ್ರೀ ಎನ್. ಕೃಷ್ಣಾರೆಡ್ಡಿ, ಸಹಾಯಕ ಔಷಧ ನಿಯಂತ್ರಕರು ಚಾಮರಾಜನಗರ ವೃತ್ತ, ಇವರು ಈ ಹಿಂದೆ ಬಾಗಲಕೋಟೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ, ಶ್ರೀ ಸಿದ್ದಯ್ಯ ಸಂಗಯ್ಯ ಲಕ್ಕುಂಡಿಮಠ, ಮಾಲಿಕರು ಮೆ|| ವಿಶ್ವಾಸ್ ಮೆಡಿಕಲ್ & ಜನರಲ್ ಸ್ಟೋರ್ಸ್, ಸಾವಳಗಿ ಗ್ರಾಮ, ಜಮಖಂಡಿ ತಾಲ್ಲೂಕು, ಬಾಗಲಕೋಟೆ, ಇವರಿಂದ ದಿನಾಂಕ: 28-05-2011ರಂದು `. 8000.00ಗಳನ್ನು ಲಂಚದ ರೂಪದಲ್ಲಿ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರ ಟ್ರಾಪ್ ಗೆ ಸಾಕ್ಷಿ ಸಮೇತ ಸಿಕ್ಕಿಬಿದ್ದಿದ್ದು, ಪ್ರಕರಣದ ತನಿಖೆಯು ಮುಂದುವರೆದಿರುವ ಹಿನ್ನೆಲೆಯಲ್ಲಿ, ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 4 ಎಸ್ಡಿಇ 2000 ದಿನಾಂಕ: 15-04-2002ರನ್ವಯ ಇವರು ತನಿಖೆಯಲ್ಲಿ ಹಸ್ತಕ್ಷೇಪ ಮಾಡುವ/ ಸಾಕ್ಷಿ ಪುರಾವೆಗಳನ್ನು ನಾಶಪಡಿಸುವ ಸಾಧ್ಯತೆ ಇರುವುದರಿಂದ ಕೂಡಲೇ ಅಮಾನತ್ತಿನಲ್ಲಿಡಲು ಶಿಫಾರಸು ಮಾಡಿರುತ್ತಾರೆ.
ಮೇಲೆ ಓದಲಾದ ಕ್ರಮ ಸಂಖ್ಯೆ (2)ರಲ್ಲಿ, ಕರ್ನಾಟಕ ನಾಗರೀಕ ಸೇವಾ (ಸಿಸಿಎ) ನಿಯಮಾವಳಿ 1957ರ ನಿಯಮ 10(1) (ಎ)ರಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಶ್ರೀ ಎನ್. ಕೃಷ್ಣಾರೆಡ್ಡಿ, ಸಹಾಯಕ ಔಷಧ ನಿಯಂತ್ರಕರು ಬಾಗಲಕೋಟೆ ವೃತ್ತ, ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಸರ್ಕಾರಿ ಸೇವೆಯಿಂದ ಅಮಾನತ್ತುಗೊಳಿಸಿ ಆದೇಶಿಸಿದೆ.
ಮೇಲೆ ಓದಲಾದ ಕ್ರಮಸಂಖ್ಯೆ (3)ರಲ್ಲಿ, ಬಾಗಲಕೋಟೆಯ ಲೋಕಾಯುಕ್ತ ಪೊಲೀಸ್ರವರು ದಿನಾಂಕ: 30-06-2011ರಂದು ಪ್ರಕರಣದ ಕುರಿತು ತಮ್ಮ ಅಂತಿಮ ವರದಿಯನ್ನು ಸಲ್ಲಿಸಿದ್ದು, ಅದರ ಆಧಾರದ ಮೇಲೆ ಶ್ರೀ ಎನ್. ಕೃಷ್ಣಾರೆಡ್ಡಿ, ಸಹಾಯಕ ಔಷಧ ನಿಯಂತ್ರಕರು ಬಾಗಲಕೋಟೆ ವೃತ್ತ, ಇವರ ಮೇಲಿನ ಆರೋಪವು ಮೇಲ್ನೋಟಕ್ಕೆ ಸಾಬೀತಾಗಿರುವುದಾಗಿರುವುದರಿಂದ ಆಪಾದಿತರಾದ ಶ್ರೀ ಎನ್.ಕೃಷ್ಣಾರೆಡಿ, ಸಹಾಯಕ ಔಷಧ ನಿಯಂತ್ರಕರು ಇವರನ್ನು ಭ್ರ್ರಷ್ಟಾಚಾರ ನಿರ್ಮೂಲನಾ ಕಾಯ್ದೆ 1988ರ ಕಲಂ 7, 8 13(1)(ಡಿ) ಸಹವಾಚನ 13(2)ರ ಅಡಿಯಲ್ಲಿ ಎಸಗಿರುವ ಅಪರಾಧಕ್ಕಾಗಿ ಅಭಿಯೋಜನೆಗೆ ಒಳಪಡಿಸಲು ಭ್ರಷ್ಟಾಚಾರ ನಿರ್ಮೂಲನಾ ಕಾಯ್ದೆ 1988ರ ಕಲಂ 19(1)(ಬಿ)ರ ಅನ್ವಯ ಸಕ್ಷಮ ನ್ಯಾಯಾಲಯದಲ್ಲಿ ಅಭಿಯೋಜನೆಗೆ ಒಳಪಡಿಸಲು ಆದೇಶ ಹೊರಡಿಸುವಂತೆ ಕೋರಿರುತ್ತಾರೆ.
ಮೇಲೆ ಓದಲಾದ ಕ್ರಮಸಂಖ್ಯೆ (4)ರ ಆದೇಶದಲ್ಲಿ ಇವರನ್ನು ಸಕ್ಷಮ ನ್ಯಾಯಾಲಯದಲ್ಲಿ ಅಭಿಯೋಜನೆ ಗೊಳಿಸಲು ಸಕ್ಷಮ ಪ್ರಾಧಿಕಾರದ ಅನುಮತಿಯು ಅವಶ್ಯವಾಗಿರುವ ಪ್ರಯುಕ್ತ, ದಿನಾಂಕ: 30-08-2011ರ ಆದೇಶದಲ್ಲಿ ಹಾಗೂ ದಿನಾಂಕ:24-10-2011ರ ಪರಿಷ್ಕøತ ಆದೇಶದಲ್ಲಿ, ಇವರನ್ನು ಸಕ್ಷಮ ನ್ಯಾಯಾಲಯದಲ್ಲಿ ಅಭಿಯೋಜನೆಗೊಳಿಸಲು ಭ್ರಷ್ಟಾಚಾರ ನಿರ್ಮೂಲನಾ ಕಾಯ್ದೆ 1988ರ ಕಲಂ 7, 8, 13(1)(ಡಿ) ಸಹಿತ ಓದಲಾದ 13(2)ರ ಅಡಿಯಲ್ಲಿ ಸದರಿ ಕಾಯ್ದೆಯ ಕಲಂ 19(1)(ಬಿ)ರನ್ವಯ ಸರ್ಕಾರದ ಮಂಜೂರಾತಿಯನ್ನು ನೀಡಲಾಗಿದೆ.
ಮೇಲೆ ಓದಲಾದ ಕ್ರಮಸಂಖ್ಯೆ (5)ರಲ್ಲಿ, ಶ್ರೀ ಎನ್. ಕೃಷ್ಣಾರೆಡ್ಡಿ, ಸಹಾಯಕ ಔಷಧ ನಿಯಂತ್ರಕರು, ಇವರ ವಿರುದ್ಧದ ಆಪಾದನೆಗಳ ಕುರಿತು ಪೂರ್ಣ ಪ್ರಮಾಣದ ವಿಚಾರಣೆ ಕೈಗೊಳ್ಳಲು, ಪ್ರಕರಣವನ್ನು ಕರ್ನಾಟಕ ನಾಗರೀಕ ಸೇವಾ (ಸಿಸಿಎ) ನಿಯಮಾವಳಿ 1957ರ ನಿಯಮ 14(ಎ)ರಡಿ ಕರ್ನಾಟಕ ಲೋಕಾಯುಕ್ತ-1 ಇವರಿಗೆ ವಹಿಸಲಾಗಿದೆ.
ಮೇಲೆ ಓದಲಾದ ಕ್ರಮಸಂಖ್ಯೆ (6)ರಲ್ಲಿ, ಗೌ|| ಲೋಕಾಯುಕ್ತರು ತಮ್ಮ ಅಂತಿಮ ವಿಚಾರಣಾ ವರದಿ ಸಲ್ಲಿಸುತ್ತಾ, ಸದರಿ ಅಧಿಕಾರಿಯವರನ್ನು ಸರ್ಕಾರಿ ಸೇವೆಯಿಂದ ಕಡ್ಡಾಯ ನಿವೃತ್ತಿಗೊಳಿಸುವಂತೆ ಶಿಫಾರಸು ಮಾಡಿರುತ್ತಾರೆ.
ಮೇಲೆ ಓದಲಾದ ಕ್ರಮ ಸಂಖ್ಯೆ (7)ರಲ್ಲಿ, ಆಪಾದಿತ ಅಧಿಕಾರಿಗೆ ಸರ್ಕಾರವು ಮಾನ್ಯ ವಿಚಾರಣಾ ವರದಿ ಹಾಗೂ ಉಪ ಲೋಕಾಯುಕ್ತರ ಶಿಫಾರಸ್ಸಿನ ಮೇಲೆ ತಿಳುವಳಿಕೆ ಪತ್ರವನ್ನು (2ನೇ ಕಾರಣ ಕೇಳುವ ನೋಟಿಸ್) ಜಾರಿ ಮಾಡಿ ಅವರ ವಿವರಣೆಯನ್ನು ಸಲ್ಲಿಸುವಂತೆ ಕೋರಲಾಗಿತ್ತು.
ಮೇಲೆ ಓದಲಾದ ಕ್ರಮಸಂಖ್ಯೆ (8)ರಲ್ಲಿ, ಅಧಿಕಾರಿಯವರು ತಮ್ಮ ಪ್ರತಿರಕ್ಷಣಾ ಹೇಳಿಕೆಯನ್ನು ಸಲ್ಲಿಸಿ, ತಮ್ಮ ವಿರುದ್ಧದ ಆರೋಪಗಳನ್ನು ಅಲ್ಲಗಳೆದು ತಮ್ಮನ್ನು ಆರೋಪಮುಕ್ತಗೊಳಿಸುವಂತೆ ಹಾಗೂ ಲೋಕಾಯುಕ್ತರ ವರದಿಯನ್ನು ಮಾನ್ಯ ಮಾಡದಿರುವಂತೆ ಕೋರಿರುತ್ತಾರೆ.
ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೨೭, ೨೦೧೭ ೧೦೪೫ಮೇಲೆ ಓದಲಾದ ಕ್ರಮಸಂಖ್ಯೆ (9)ರಲ್ಲಿ, ಪ್ರಕರಣವನ್ನು ಸಚಿವ ಸಂಪುಟದ ಮುಂದೆ ಮಂಡಿಸಿದ್ದು, ದಿನಾಂಕ: 12-04-2017ರ ಸಚಿವ ಸಂಪುಟ ಸಭೆಯ ಪ್ರಕರಣ ಸಂಖ್ಯೆ ಸಿ:228/2017ರಲ್ಲಿ, ಶ್ರೀ ಎನ್. ಕೃಷ್ಣಾರೆಡ್ಡಿ, ಸಹಾಯಕ ಔಷಧ ನಿಯಂತ್ರಕರು, ಔಷಧ ನಿಯಂತ್ರಣ ಇಲಾಖೆ, ಚಾಮರಾಜನಗರ ಜಿಲ್ಲೆ, ಇವರ ವಿರುದ್ಧದ ಲೋಕಾಯುಕ್ತ ಪ್ರಕರಣಕ್ಕೆ ಸಂಬಂಧಿಸಿದಂತೆ ಸೇವೆಯಿಂದ ಕಡ್ಡಾಯ ನಿವೃತ್ತಿಗೊಳಿಸುವ ದಂಡನೆ ವಿಧಿಸುವ ಬಗ್ಗೆ ಕೆಳಗಿನಂತೆ ನಿರ್ಣಯ ಕೈಗೊಳ್ಳಲಾಯಿತು.
"ಸಚಿವ ಸಂಪುಟ ಟಿಪ್ಪಣಿಯ ಕಂಡಿಕೆ 11ರಲ್ಲಿ ಒಳಗೊಂಡಿರುವ ಪ್ರಸ್ತಾವನೆಗಳನ್ನು ಸಚಿವ ಸಂಪುಟವು ಅನುಮೋದಿಸಿತು" ಮೇಲ್ಕಂಡ ಅಂಶಗಳ ಹಿನ್ನೆಲೆಯಲ್ಲಿ, ಪ್ರಕರಣದ ಕುರಿತು ಕಡತದಲ್ಲಿ ಲಭ್ಯವಿರುವ ಎಲ್ಲಾ ದಾಖಲೆ/ ಮಾಹಿತಿಗಳನ್ನು ಕೂಲಂಕಷವಾಗಿ ಪರಿಶೀಲಿಸಿದ ನಂತರ, ಶ್ರೀ ಎನ್. ಕೃಷ್ಣಾರೆಡ್ಡಿ, ಸಹಾಯಕ ಔಷಧ ನಿಯಂತ್ರಕರು, ಔಷಧ ನಿಯಂತ್ರಣ ಇಲಾಖೆ, ಚಾಮರಾಜನಗರ ಜಿಲ್ಲೆ ಇವರನ್ನು ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿ 1957ರ ನಿಯಮ 8(vi)ರಡಿ ಪ್ರದತ್ತವಾದ ಅಧಿಕಾರದಡಿ ಸರ್ಕಾರಿ ಸೇವೆಯಿಂದ ಕೂಡಲೇ ಜಾರಿಗೆ ಬರುವಂತೆ ಕಡ್ಡಾಯ ನಿವೃತ್ತಿಗೊಳಿಸಿ ಆದೇಶ ಹೊರಡಿಸಲು ಸರ್ಕಾರವು ನಿರ್ಧರಿಸಿದೆ. ಅದರಂತೆ ಈ ಆದೇಶ.
ಸರ್ಕಾರದ ಆದೇಶ ಸಂಖ್ಯೆ: ಆಕುಕ 90 ಐಎಂಎಂ 2011 ದಿನಾಂಕ 24-04-2017
ವಿಚಾರಣಾಧಿಕಾರಿಗಳ ವಿಚಾರಣಾ ವರದಿ, ಗೌ|| ಲೋಕಾಯುಕ್ತರ ಶಿಫಾರಸು, ಆರೋಪಿತ ಅಧಿಕಾರಿಯವರು ಸಲ್ಲಿಸಿದ್ದ ಪ್ರತಿರಕ್ಷಣಾ ಹೇಳಿಕೆಗಳನ್ನು ಮತ್ತು ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳನ್ನು ಕೂಲಂಕಷವಾಗಿ ಪರಿಶೀಲಿಸಿದ ಸರ್ಕಾರವು, ಔಷಧ ನಿಯಂತ್ರಣ ಇಲಾಖೆಯ ಚಾಮರಾಜನಗರ ವೃತ್ತದಲ್ಲಿ ಸಹಾಯಕ ಔಷಧ ನಿಯಂತ್ರಕ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀ ಎನ್. ಕೃಷ್ಣಾರೆಡ್ಡಿ, ಇವರು ಬಾಗಲಕೋಟೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆಯ ಲೋಕಾಯುಕ್ತ ಟ್ರಾಪ್ ಪ್ರಕರಣದ ಆರೋಪವು ಲೋಕಾಯುಕ್ತ ವಿಚಾರಣೆಯಲ್ಲಿ ಸಾಬೀತಾಗಿರುವುದರಿಂದ, ಅಧಿಕಾರಿಯವರ ಈ ದುರ್ವರ್ತನೆಗಾಗಿ ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿ 1957ರ ನಿಯಮ 8(vi)ರಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ತಕ್ಷಣದಿಂದ ಜಾರಿಗೆ ಬರುವಂತೆ ಸರ್ಕಾರಿ ಸೇವೆಯಿಂದ ಕಡ್ಡಾಯ ನಿವೃತ್ತಿಗೊಳಿಸುವ ದಂಡನೆ ವಿಧಿಸಿ (Compulsory Retirement from Service) ಆದೇಶ ಹೊರಡಿಸಿದೆ.
PR No.194
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ SC-50
ಬಿ.ಕಮಲಮ್ಮ ಸರ್ಕಾರದ ಅದೀನ ಕಾರ್ಯದರ್ಶಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
(ಭಾರತೀಯ ವೈದ್ಯ ಪದ್ಧತಿ)
ನಗರಾಭಿವೃದ್ಧಿ ಸಚಿವಾಲಯ
ವಿಷಯ: ವಾಡಿ-ಶಹಾಬಾದ್ ಸ್ಥಳೀಯ ಯೋಜನಾ ಪ್ರದೇಶದ ಮಹಾ ಯೋಜನೆ(ಪ-1)ಗೆ ಸರ್ಕಾರದ ಅಂತಿಮ ಅನುಮೋದನೆ ನೀಡುವ ಬಗ್ಗೆ.
ಓದಲಾಗಿದೆ: 1. ಸರ್ಕಾರದ ಆದೇಶ ಸಂಖ್ಯೆ:ನಅಇ:154:ಬೆಮಪ್ರಾ:2007, ದಿ:25.07.2007.
2. ನಗರ ಮತ್ತು ಗ್ರಾಮಾಂತರ ಯೋಜನಾ ನಿರ್ದೇಶಕರ ಏಕ ಕಡತ ಸಂಖ್ಯೆ: ನಗ್ರಾಯೋ(3)/ಗುವಿ/ ವಾಡಿ-ಶಹಾಬಾದ್/ ಮ.ಯೋ/ 2013-14ರಲ್ಲಿ ನೀಡಿರುವ ಅಭಿಪ್ರಾಯ ದಿನಾಂಕ: 16.05.2015.
ಪ್ರಸ್ತಾವನೆ:
ಮೇಲೆ ಓದಲಾದ (1)ರ ಸರ್ಕಾರಿ ಆದೇಶದಲ್ಲಿ ವಾಡಿ-ಶಹಾಬಾದ್ ಪಟ್ಟಣ ಸ್ಥಳೀಯ ಯೋಜನಾ ಪ್ರದೇಶದ ಮಹಾಯೋಜನೆಗೆ ತಾತ್ಕಾಲಿಕ ಅನುಮೋದನೆ ನೀಡಲಾಗಿದೆ.
ಮೇಲೆ ಓದಲಾದ (2)ರ ಪತ್ರದಲ್ಲಿ ವಾಡಿ-ಶಹಾಬಾದ್ ಯೋಜನಾ ಪ್ರಾಧಿಕಾರವು, ವಾಡಿ-ಶಹಾಬಾದ್ ಪಟ್ಟಣದ ಸ್ಥಳೀಯ ಯೋಜನಾ ಪ್ರದೇಶಕ್ಕೆ ತಯಾರಿಸಿರುವ ಮಹಾಯೋಜನೆ ಕುರಿತು ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961ರ ಕಲಂ 13(1)(2) ರನ್ವಯ ಅಗತ್ಯ ಕ್ರಮ ಜರುಗಿಸಿ ಮಹಾ ಯೋಜನೆಯ ನಕ್ಷೆಗಳನ್ನು ಹಾಗೂ ವರದಿಯನ್ನು ತಯಾರಿಸಿ ಸರ್ಕಾರದ ಅಂತಿಮ ಅನುಮೋದನೆಗೆ ಸಲ್ಲಿಸಿದೆ.
ವಾಡಿ-ಶಹಾಬಾದ್ ಪಟ್ಟಣದ ಜನಸಂಖ್ಯೆಯು 2021ರಲ್ಲಿ ವಾಡಿ 62,000 ಮತ್ತು ಶಹಾಬಾದ್ 1,15,000 ಗಳಷ್ಟು ಬೆಳವಣಿಗೆಯಾಗುವುದಾಗಿ ಅಂದಾಜಿಸಿ ಮಹಾಯೋಜನೆಯನ್ನು ತಯಾರಿಸಲಾಗಿದೆ. ವಾಡಿ-ಶಹಾಬಾದ್ ನಗರದ ಒಟ್ಟು 22,000 ಹೆಕ್ಟರ್ ಸ್ಥಳೀಯ ಯೋಜನಾ ಪ್ರದೇಶದಲ್ಲಿ ಒಟ್ಟು 3801 ಹೆಕ್ಟೇರ್ ಪ್ರದೇಶವನ್ನು ನಗರದ ಅಭಿವೃದ್ಧಿಗಾಗಿ ನಗರೀಕರಣದ ಎಲ್ಲೆಯೆಂದು ಪ್ರಸ್ತಾಪಿಸಿ ಮಹಾಯೋಜನೆಯನ್ನು ರೂಪಿಸಲಾಗಿದೆ. ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ, 1961ರ ಕಲಂ (12)ರಲ್ಲಿ ನಿಗದಿಪಡಿಸಿರುವ ಅಂಶಗಳನ್ನು ಪರಿಗಣಿಸಿ ನಗರಗಳ ಮುಂದಿನ ಯೋಜಿತ ಬೆಳವಣಿಗೆಗಾಗಿ ವಿವಿಧ ಭೂ ಉಪಯೋಗಗಳಿಗಾಗಿ ಈ ಕೆಳಗಿನಂತೆ ವಿಸ್ತೀರ್ಣವನ್ನು ಪ್ರಸ್ತಾಪಿಸಲಾಗಿದೆ.
ವಾಡಿ: 1825 ಹೆಕ್ಟೇರ್ ಪ್ರದೇಶದಲ್ಲಿ ವಸತಿಗಾಗಿ 705.00 ಹೆಕ್ಟೇರ್ (ಶೇ.38.63), ವಾಣಿಜ್ಯಕ್ಕಾಗಿ 39.00 ಹೆಕ್ಟೇರ್ (ಶೇ.2.13), ಕೈಗಾರಿಕೆಗಾಗಿ 548.0 ಹೆಕ್ಟೇರ್, (ಶೇ.30.02), ಸಾರ್ವಜನಿಕ / ಅರೆ ಸಾರ್ವಜನಿಕ ಉಪಯೋಗಕ್ಕೆ 57.0 ಹೆಕ್ಟೇರ್, (ಶೇ.3.12) ಉದ್ಯಾನವನ ಮತ್ತು ಬಯಲು ಜಾಗಕ್ಕಾಗಿ 170.00 ಹೆಕ್ಟೇರ್ (ಶೇ.9.31) ಹಾಗೂ ಸಾರಿಗೆ/ ಸಂಪರ್ಕ ವಲಯಕ್ಕೆ 302.00 ಹೆಕ್ಟೇರ್ (ಶೇಕಡ 16.58), ನಾಗರೀಕ ಸೌಲಭ್ಯಕ್ಕಾಗಿ 4.00 ಹೆಕ್ಟೇರ್ (ಶೇ.0.21).
ಶಹಾಬಾದ್: 1976 ಹೆಕ್ಟೇರ್ ಪ್ರದೇಶದಲ್ಲಿ ವಸತಿಗಾಗಿ 1073.66 ಹೆಕ್ಟೇರ್ (ಶೇ.54.33), ವಾಣಿಜ್ಯಕ್ಕಾಗಿ 59.92 ಹೆಕ್ಟೇರ್ (ಶೇ.3.03), ಕೈಗಾರಿಕೆಗಾಗಿ 235.00 ಹೆಕ್ಟೇರ್, (ಶೇ.11.89), ಸಾರ್ವಜನಿಕ/ ಅರೆ ಸಾರ್ವಜನಿಕ ಉಪಯೋಗಕ್ಕೆ 78.00 ಹೆಕ್ಟೇರ್, (ಶೇ.3.94) ಉದ್ಯಾನವನ ಮತ್ತು ಬಯಲು ಜಾಗಕ್ಕಾಗಿ 255 ಹೆಕ್ಟೇರ್ (ಶೇ.12.90) ಹಾಗೂ ಸಾರಿಗೆ/ ಸಂಪರ್ಕ ವಲಯಕ್ಕೆ 267.85 ಹೆಕ್ಟೇರ್ (ಶೇಕಡ 13.58), ನಾಗರೀಕ ಸೌಲಭ್ಯಕ್ಕಾಗಿ 6.57ಹೆಕ್ಟೇರ್ (ಶೇ.0.33) ಪ್ರದೇಶವನ್ನು ನಿಗಧಿಪಡಿಸಲಾಗಿದೆ. ಮಹಾಯೋಜನೆಯನ್ನು ಅನುಷ್ಠಾನಕ್ಕೆ ತರಲು ಅಗತ್ಯವಿರುವ ವಲಯ ನಿಯಮಾವಳಿಗಳನ್ನು ರೂಪಿಸಲಾಗಿದ್ದು, ಸದರಿ ಮಹಾ ಯೋಜನೆಗೆ ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961ರ ಕಲಂ 13(3) ರನ್ವಯ ಅಂತಿಮ ಅನುಮೋದನೆ ನೀಡಲು ಶಿಫಾರಸ್ಸು ಮಾಡಿ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಿರುತ್ತಾರೆ. ಪ್ರಸ್ತಾವನೆಯನ್ನು ಪರಿಶೀಲಿಸಿದ ನಂತರ ಈ ಕೆಳಕಂಡ ಆದೇಶವನ್ನು ಹೊರಡಿಸಲಾಗಿದೆ.
೧೦೪೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೨೭, ೨೦೧೭ ಭಾಗ ೧ಸರ್ಕಾರದ ಆದೇಶ ಸಂಖ್ಯೆ: ನಅಇ 118 ಗುಅಪ್ರಾ 2015, ಬೆಂಗಳೂರು, ದಿನಾಂಕ: 20.04.2017
ಮೇಲಿನ ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲೆ, ವಾಡಿ-ಶಹಾಬಾದ್ ಪಟ್ಟಣದ ಸ್ಥಳೀಯ ಯೋಜನಾ ಪ್ರದೇಶಕ್ಕೆ ರೂಪಿಸಿರುವ ಮಹಾಯೋಜನೆ (ಪ-1)ಗೆ ಈ ಕೆಳಕಂಡ ಷರತ್ತಿಗೊಳಪಟ್ಟು ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ, 1961ರ ಪ್ರಕರಣ 13(3)ರನ್ವಯ ಸರ್ಕಾರದ ಅಂತಿಮ ಅನುಮೋದನೆಯನ್ನು ನೀಡಲಾಗಿದೆ. ಮಹಾ ಯೋಜನೆ (ಪ-1)ಗೆ ಅಂತಿಮ ಅನುಮೋದನೆ ನೀಡಿದ ಗುರುತಾಗಿ ವರದಿ ಹಾಗೂ ನಕ್ಷೆಗಳ ಮೇಲೆ ಸರ್ಕಾರದ ಮುದ್ರೆಯನ್ನು ಹಾಕಲಾಗಿದೆ.
ಷರತ್ತು:
• ಈ ಆದೇಶದ ದಿನಾಂಕದಿಂದ ಎರಡು ವರ್ಷಗಳವರೆಗೆ ಪ್ರಾಧಿಕಾರವು ಯಾವುದೇ ಭೂ ಉಪಯೋಗ ಬದಲಾವಣೆ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಕೂಡದು.
PR No.195
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ SC-100
ನಾಗರಾಜ
ಸರ್ಕಾರದ ಅಧೀನ ಕಾರ್ಯದರ್ಶಿ,
ನಗರಾಭಿವೃದ್ಧಿ ಇಲಾಖೆ.
ಕಂದಾಯ ಸಚಿವಾಲಯ
ಸೇರ್ಪಡೆ ಆದೇಶ
ಸಂಖ್ಯೆ: ಕಂಇ 109 ಮುಸೇವಿ 2015 (ಭಾ-3) ಬೆಂಗಳೂರು, ದಿನಾಂಕ: 08.06.2017
ಸರ್ಕಾರದ ಆದೇಶ ಸಂಖ್ಯೆ:ಕಂಇ 109 ಮುಸೇವಿ 2015 ದಿನಾಂಕ:29.01.2016ರ ಆದೇಶದಲ್ಲಿ ಶ್ರವಣಬೆಳಗೊಳದಲ್ಲಿ 2018ನೇ ಸಾಲಿನಲ್ಲಿ ಜರುಗಲಿರುವ ಮಹಾಮಸ್ತಕಾಭಿಷೇಕ ಮಹೋತ್ಸವದ ರಾಜ್ಯ ಮಟ್ಟದ ಸಮಿತಿಯಲ್ಲಿ ಕ್ಷೇತ್ರ ಹಾಗೂ ಸಮಾಜ ಪ್ರತಿನಿಧಿಗಳು ಪಟ್ಟಿಯ ಕ್ರಮ ಸಂಖ್ಯೆ:(18)ರಲ್ಲಿ 'ಶ್ರೀ ಹೆಚ್. ಪ್ರಭಾಕರ ಜೈನ್ ಬಿನ್ ಧರಣೀಂದ್ರಯ್ಯ, ಹಂಪಾಪುರ, ಕೆ.ಆರ್.ನಗರ ತಾಲ್ಲೂಕು, ಮೈಸೂರು ಜಿಲ್ಲೆ' ಇವರನ್ನು ಹೆಚ್ಚುವರಿ ಸದಸ್ಯರನ್ನಾಗಿ ನೇಮಕ ಮಾಡಿ ಆದೇಶಿಸಿದೆ.
PR No.196
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ SC-25
ಬಿ.ಎಸ್. ನಾಗರತ್ನಮ್ಮ
ಸರ್ಕಾರದ ಅಧೀನ ಕಾರ್ಯದರ್ಶಿ
ಕಂದಾಯ ಇಲಾಖೆ (ಮುಜರಾಯಿ)
FINANCE SECRETARIAT
Sub : Procedure for Accounting contributions of New Pension System.
Ref : 1. G.O. No. FD (SPL) 04 PET 2005, Dated 31.03.2006
2. G.O.No. FD (SPL) 28 PEN 2009 Dated 19.01.2009
3. G.O.No. FD (SPL) 28 PEN 2009 Dated 29.03.2010.
4. G.O.No. FD (SPL) 28 PEN 2009 Dated 12.10.2010.
5. G.O.No. FD (Spl) 01 PEN 2010 Dated 20.10.2010.
6. G.O.No:FD (spl) 176 PEN 2014 Dated 05.05.2016.
7. G.O.No: FD (Spl) 203 PEN 2012 (P) Dated 18.05.2016.
8. Letter NO. DOT/NPS/09/2010-11, Dated 29.12.2015.
PREAMBLE:
The State Government has approved a Defined Contribution Pension Scheme as a mandatory scheme for all new recruits to the State Government service joining on or after 1.4.2006 vide G.O. referred at (1) above and the New Pension System is made applicable for the members of the All India Services (Karnataka cadre) joining All India Services on or after 01.01.2004 in the G.O. read at (5) above. The monthly contribution under the scheme shall be 10% of the basic pay and dearness allowance thereon, to be paid by the employee and matched by the State Government in equal proportion. The contributions and returns have to be deposited in PRAN (Tier) 1 Account.
Since Government has operationalised the NPS system from March 2010 there are cases of backlog contribution due for both employee and Government. Though, the Government has issued instructions regarding payment of backlog vide G.O. at ref. 3 above, detailed accounting procedure has to be issued.
The New Pension System contributions include Regular Monthly contribution by subscriber and matching contribution from the Government. Backlog contribution by subscriber from 01.01.2004 and 01.04.2006 or his date of joining to the service, whichever is later till the commencement of regular contribution in case of AIS employees (Karnataka Cadre) and the State Government employees respectively. Government Backlog will be the contribution along with compound interest at 8% from 01.04.2006 or date of joining of the concerned employees, till the month prior to the commencement of regular contribution.
ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೨೭, ೨೦೧೭ ೧೦೪೭ In the Government order referred at (2) above, it was indicated that separate orders will be issued regarding detailedguidelines and procedure for accounting contributions.
In the letter read at (8) above, the Director of Treasuries has sent a proposal for detailed accounting procedure to be issued.
After examining the proposal, Government has issued the following order:
GOVERNMENT ORDER NO. FD(SPL) 216 PEN 2012, BENGALURU, DATED: 19.05.2017
1. Accounting Procedure to be followed by the Drawing and Disbursing Officers (DDOs):
i) DDOs shall effect regular deduction for employees covered under NPS from their salary, an amount equal to 10% of the Basic and DA in HRMS from the month when the salary becomes due to the Government servant, consequent to his joining Government service.
If the Government Servant has joined service on the first of the month, then deductions shall be effected from the same month itself. If the Government servant has joined the service after 1st of the month, the deductions shall be effected from next month's salary.
ii) DDO shall generate the following schedules from HRMS:
a) SCHEDULE I - Regular contribution (Annexure E) enclosed.
b) SCHEDULE II - Employee backlog Contribution (Annexure F) enclosed.
c) SCHEDULE III - for Lump sum Employee Backlog Contribution outside the salary (if an employee has opted for lump sum backlog contribution). (Annexure G) enclosed.
d) SCHEDULE IV - monthly statement of backlog Contribution by Government for every employee covered under NPS and to whom backlog is due. (Annexure H) enclosed.
e) SCHEDULE V - DDO wise consolidated Government backlog contribution statement for all eligible employees covered under NPS. (Annexure I) enclosed.
iii) Schedules I and II shall be sent to the treasury along with pay bill as enclosures.
iv) DDOs shall generate schedule III from HRMS when an employee chooses to pay the entire backlog in one lump sum outside the salary. Schedule III shall be verified and certified by the DDO who shall forward the DD submitted by the employee towards lump sum payment to the treasury officer along with Schedule III.
v) DDO shall send duly verified and certified Schedules IV and V along with covering letter to the NPS cell.
vi) DDOs shall maintain the following Registers/documents:
1) Details of subscriber's contributions shall be maintained in a register like any other deductions such as LIC, KGID, Group Insurance etc. as per Annexure A.
2) a) For non-Gazetted - Form S1/CSRF 1 (Annexure B) – Two copies shall be generated for each employee. One copy along with covering letter S5 (Annexure C) shall be submitted to the concerned treasury for onward submission to CRA -FC. One copy shall be maintained in the Service Register/Personal File of the concerned official. Annexure B enclosed.
b) For Gazetted Officers whose service particulars are maintained by the AG, DDOs shall send a copy of the S1/CSRF 1 and backlog option form submitted by the employee to the AG.
3) Backlog Recovery Option Form submitted by the Government Servant shall be maintained in the personal file of the concerned official / officer.
4) Payment details of the Government servant at the time of exit (superannuation/death/resignation) shall be maintained as prescribed in the Government order read at (7) above.
5) DDOs shall keep a certified copy of the Schedule IV & V which was submitted to the NPS cell in the personal file of the employee.
2. Accounting Procedure to be followed by the Treasury Officers:
I. Treasury Officer shall approve the bill containing NPS deduction similar to any other deductions like KGID, GPF, LIC etc. The approval shall be subject to usual treasury checks.
II. Treasury Officers shall do the accounting work of NPS deductions of NPS employees and Government's Contribution as they do in case of other deductions.
PROCEDURE UNDER KHAJANE-1
| Sl. No. | Particulars | Category and Head of Account | Account Number |
| 1 | Employee Regular Contribution | 1-8342-00-117-2-01 | 10000001 |
| 2 | Government Regular contribution | 10000002 | |
| 3 | Employee Backlog Contribution | 1-8342-00-117-2-03 | 10000003 |
A. REGULAR CONTRIBUTION:-
i. Deductions towards NPS employee's Regular contribution shall be adjusted through TTR and accounted under the Head of Account 8342-00-117-2-01category 1 (Government).
ii. The Employees' contribution towards NPS will be credited to Account Number 10000001 in deposit module of Khajane automatically as soon as ECS/cheques of Salary bill with NPS is delivered in the system.
iii. At the end of the day the Treasury Officer shall consolidate total subscriber contribution for the day.
iv. Treasury officer shall generate control file (which consists of Date of NPS bill delivered, Token No, DDO code and amount) in 'Khajane 1' application, after which a unique number called NPS ID is generated.
v. Treasury officer shall then transfer equal matching contribution as that of the consolidated subscribers contribution for the day by generating a payees receipt in Khajane by debiting Government Head of Account 2071-01-117-0- 01 – (object code 251) and crediting the Head of Account 8342-00-117-2-01 by transfer in 'Khajane 1' to account number 10000002 within next working day.
vi. The control file generated in 'Khajane 1' should be uploaded to HRMS. The SCF (Subscriber's Contribution File) shall be generated in HRMS and validated through FVU (File Validation Utility) of CRA. Validated SCF should be uploaded to NPSCAN of CRA .
vii. On acceptance by the CRA system, a Transaction ID will be generated along with CSF (Contribution Submission Form) which will contain the details of SCF.
viii. Transaction ID will be updated in HRMS by generating Acknowledgement file and the Acknowledgement file is uploaded to Khajane Deposit Module for clearing NPS Regular contribution bill.
ix. A cheque for the consolidated amount of employee and Government contribution has to be generated and printed through the Khajane I. The cheque has to be drawn for the day in the name of the Manager of respective Agency Bank of the treasury which on receiving the same will transfer the amount to Trustee Bank through RTGS or NEFT to the NPS Trust Account.
B. EMPLOYEE BACKLOG CONTRIBUTION:-
i. In case of Employee backlog contribution, an employee has an option to pay his backlog in one instalment at a time (every month) from salary along with regular monthly deductions or payment of multiple instalments at a time (every month) from salary.
ii. Deductions towards NPS employee backlog contribution shall be adjusted through TTR and accounted under the Head of Account 8342-00-117-2 -03 Category 1 (Government).
iii. The Employees' backlog contribution towards NPS will be credited to Account Number 10000003 in Deposit module automatically in the Khajane system as soon as ECS/cheque of the salary bill with NPS is delivered.
iv. The control file generated in 'Khajane 1' should be uploaded to HRMS. The SCF (Subscriber's Contribution File) shall be generated in HRMS and validated through FVU (File Validation Utility) of CRA. Validated SCF should be uploaded to NPSCAN of CRA.
v. On acceptance by the CRA system, a Transaction ID will be generated along with CSF (Contribution Submission Form) which will contain the details of SCF.
vi. Transaction ID will be updated in HRMS by generating Acknowledgment file and the Acknowledgement file is uploaded to Khajane Deposit Module for clearing NPS Backlog contribution bill.
vii. A cheque has to be drawn for the day in the name of the Manager of respective Agency Bank of the treasury who upon receiving the same will transfer the amount to Trustee Bank through RTGS or NEFT to the NPS Trust Account.
viii. Lump sum payment outside salary : On receipt of DD and Schedule III from the DDO towards payment of employee backlog in one lump sum outside salary, the Treasury Officer shall generate SCF (Subscriber Contribution File) in HRMS and upload it to the CRA and forward DD to the Agency bank for onward transfer of funds to the Trustee Bank through RTGS/NEFT. This however shall not be accounted in the Treasury.
3. GOVERNMENT BACKLOG CONTRIBUTION :
i. DDO will prepare Schedule IV and Schedule V in the HRMS and will send the signed copies of Schedule IV and V to the NPS Cell after verification.
ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೨೭, ೨೦೧೭ ೧೦೪೯ii. On receipt at NPS cell, the Schedule IV and Schedule V's will be verified. Schedules without any discrepancy will be processed after interest updation till the month of making payment of Government backlog contribution by generating Schedule VI in HRMS as per G.O. read at (3) above. Payment of compound interest will be updated till 30.06.2016 only as per G.O. read at (6) above.
iii. PRAN wise consolidated list will be sent to CRA for providing Transactions IDs.
iv. On receipt of Transaction IDs, a bill will be prepared in NPS Cell by debiting HOA 2071-01-117-0-01 V Object code 251 and sent to State Huzur Treasury for payment towards Government Backlog contribution to be made to NPS Trust Account.
v. Compound interest on Government backlog contribution shall be debited against HOA 2071-01-117-0-01 which later will be adjusted to the interest HOA 0049 at the end of the March every year by the NPS Cell.
vi. A Cheque will be obtained in the name of Trustee Bank and will be sent to the Trustee Bank.
vii. Schedules with discrepancies will be returned back to the DDO concerned for resubmission after rectification.
| Sl. No. | Particulars | Category and Head of Account | Object Code |
| 1 | Employee Regular Contribution | 1-8342-00-117-0-** | 508 |
| 2 | Government Regular contribution | 1-8342-00-117-0-** | 509 |
| 3 | Employee Backlog Contribution | 1-8342-00-117-0-** | 510 |
** Sub head is 01 to 30 i.e. each district is identified by the unique sub head.
A. REGULAR CONTRIBUTION:-
i. Deductions towards NPS employee's Regular contribution shall be adjusted through TTR and accounted under the Head of Account 8342-00-117-0-** (** Sub head is 01 to 30 i.e. each district is identified by the unique sub head).
ii. The Employees' contribution towards NPS will be credited to the HOA 8342-00-117-0-** (** Sub head is 01 to 30 unique to each district ) under the Object code 508 automatically as soon as Salary bill with NPS contribution is authorised for payment in the system.
iii. Salary Bills which have NPS deductions will be identified in the system and will be classified accordingly after payment is authorized in the system.
iv. The bills with NPS deductions will go to the Schedule Processor for separating the schedules from the bills submitted.
v. The NPS Schedules (Schedule I) will be separated and consolidated for the day to generate the Schedule VII (Consolidated Sheet for underlying Schedule I in the batch) with a unique ID i.e. NPS ID.
vi. Treasury Officer will prepare and submit the Bill for TTR towards the corresponding Government Contribution based on the Schedule VII generated by debiting Government Head of Account 2071-01-117-0-01 –Voted(object code 251) and crediting the Head of Account 8342-00-117-0-** by transfer in 'Khajane II' under object code 509.
vii. The SCF will be generated for the day after approval of TTR corresponding to the NPS ID.
viii. SCF file will be generated in Khajane II. The SCF will automatically run through the FVU software provided by the CRA and embedded in the Khajane-II system. A SCF Batch Id is generated for the SCF. CRA will provide a Transaction ID as confirmation of SCF receipt to Khajane-II. Transaction ID will be stored against the SCF Batch ID.
ix. On receipt of Transaction ID, Treasury Officer will prepare a draft bill to debit the total amount from HOA 8342-00- 117-0-** and forward it to "Bill Preparation and Submission" module for sending payment instruction to Agency bank.
x. Treasury officer will process the Bill and send the payment instruction to Agency Bank.
xi. The Agency Bank will effect the NEFT transaction to Trustee bank and send back to Khajane-II an UTR No. for the transaction. This UTR Number will be saved against the Transaction Id and SCF batch ID in the System/Database.
xii. Matched and Booked date will be sent by the CRA to Khajane-II system on receipt of FRC (Fund Receipt Confirmation) from Trustee Bank.
೧೦೫೦ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೨೭, ೨೦೧೭ ಭಾಗ ೧ B. EMPLOYEE BACKLOG CONTRIBUTION:-i. Deductions towards NPS employee backlog contribution shall be adjusted through TTR and accounted under the Head of Account 8342-00-117-0-01 to 8342-00-117-0-30 Object code 510 Category 1 (Government). ii. The Employees' backlog contribution towards NPS will be credited to 8342-00-117-0-01 to 8342-00-117-0-30 Object code 510 automatically in the Khajane II system as soon as NPS salary bill payment is authorised.
iii. The NPS Schedules (Schedule II) will be separated and consolidated for the day to generate the Schedule VIII (Consolidated Sheet for underlying Schedule II s in the batch) with a unique ID i.e. NPS ID.
iv. SCF file will be generated automatically by fetching data from the consolidated list of Schedule-IIs i.e. Schedule VIII.
The SCF will automatically run through the FVU software provided by the CRA and embedded in the Khajane-II system. A SCF Batch Id is generated for the SCF. CRA will provide a Transaction ID as confirmation of SCF receipt to Khajane-II. Transaction Id will be stored against the SCF Batch ID.
v. On receipt of Transaction ID, Treasury Officer will prepare a draft bill to debit the total amount from HOA 8342-00- 117-0-** object code 510 and forward it to Bill Preparation and Submission module for sending payment instruction to Agency bank.
vi. The Agency Bank will effect the RTGS/NEFT transaction to Trustee bank and send back to Khajane-II an UTR No. for the transaction. This UTR Number will be saved against the Transaction Id and SCF batch ID in the System/Database.
vii. Matched and Booked date will be sent by the CRA to Khajane-II system on receipt of FRC (Fund Receipt Confirmation) from Trustee Bank.
viii. In case of Employee backlog contribution in one lump sum outside the salary, the Treasury Officer shall generate SCF, upload it to the CRA and forward DD/e-payment for lump sum amount submitted by the DDO to the Agency Bank for onward transfer to the Trustee Bank. This amount however shall not be accounted in the Treasury.
ix. The Treasury Officers shall send a copy of the Schedule of Receipts (SOR) for NPS receipts along with regular monthly accounts to the Accountant General.
C. GOVERNMENT BACKLOG CONTRIBUTION
1. DDO will prepare Schedule-IV and Schedule-V in the HRMS and will send the digitally signed schedules to Khajane-II system through online integration and the physical copies of schedules to NPS cell as per Government Order referred at 3 above.
2. In NPS cell, after receiving Schedule-IV and V in Khajane-II system as well as physically, the same will be verified if there is any difference in the online received copies and the physically received copies.
3. If discrepancies are found on comparison between the physical copies and online copies, the schedules will be rejected by the NPS Cell through online and physical copies will be sent back to the DDO concerned.
4. When schedule IV and V are approved in NPS cell, the same will be stored in the Khajane-II system and physical copies will also be stored in the NPS cell.
5. Interest amount will be updated in Schedule-VI till the month of making payment of Government Backlog contribution as per G.O. read at (3) above. Payment of compound interest will be updated by the NPS Cell upto 30.06.2016 only as per G.O. read at (6) above.
6. Schedule-VI and PRAN wise consolidated list will be generated by using the link provided for the same and will be sent to CRA for SCF generation. Schedule-VI and PRAN wise consolidated list will be stored in the Khajane-II system. Transaction IDs will be generated by CRA.
7. On receipt of Transaction IDs from CRA, Separate Draft bill request will be prepared in Khajane II system.
8. The Government Backlog contribution will be debited to the HOA 2071-01-117-0-01 NP V Object code 251.
9. Validation with NPS Employee Ledger will be done in system that Government Backlog Contribution has not been paid already for any Employee.
10. The bill will be sent to State Huzur Treasury through online as well as physical copy of the bill for making payment to Trustee Bank.
11. Treasury officer will approve the bill and make payment authorization and system will communicate the Payment ID to NPS module after sending payment instruction to Agency Bank.
ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೨೭, ೨೦೧೭ ೧೦೫೧ D. The District Treasury Officers shall send the following schedules to the NPS cell:i. TTR Schedules :
1. TTR schedule along with Schedules I & II received in the pay bills.
2. TTR abstract major head wise and category wise.
3. Date wise NPS abstract district/taluk wise
4. Consolidated NPS abstract district wise.
5. Consolidated NPS status report for the Month.
6. NPS Schedule III (Annexure F) enclosed.
ii. NPS Balance Sheet (KTC 31):
1. The Individual balance sheets of Sub-treasuries
2. The balance sheet of the District Treasuries.
E. Treasury Officers shall maintain the following records related to NPS:
1. Annexure S6 – Treasury officer's covering letter to Annexure S1/CSRF 1 (Annexure D) enclosed.
2. CSF (Contribution Submission Form). Annexure J enclosed.
3. NPS transaction status report (contribution Register).
4. Control sheet report generated through FVU for Regular and backlog payment.
5. NPS balance sheet (KTC 31).
6. Acknowledgement/Counterfoil given by Banks after NEFT/RTGS transactions with UTR number.
7. Record of Lump sum amount made for dependents of Expired NPS employees while in service as per G.O. at ref. 4 shall be maintained at Treasury.
8. Records of withdrawal of NPS amount on account of resignation/ retirement due to superannuation or otherwise.
9. Annexure S7 and S8 (covering letter) received from employees through their DDOs for making changes in Signature & Photograph and forwarded to CRA-FC. Annexure L enclosed.
10. Annexure S2 forms received by the employees for updation of personal details through the concerned DDOs.
Annexure K enclosed.
F. Accounting Procedure to be followed by the NPS Cell:
i. Payment of Government Backlog contribution: NPS Cell shall receive schedule IV and V generated by DDO and make payment of Government backlog to the eligible employees, by generating schedule VI in HRMS from DDNPS login. NPS Cell shall draw the Government backlog contribution from SHT and the amount shall be debited to HOA 2071.
ii. Monitoring NPS contributions monthly and co-ordinating with the CRA regarding contributions from the subscribers and Government as and when need arise.
iii. The NPS cell has to carryout reconciliation of schedules and challans received from all the district treasuries for the month and matching the totals with the figures booked by AG on a monthly basis. Discrepancies if any have to be reconciled (figures to be matched with CRA, Treasuries and AG).
iv. Verification and making payment of service charges to CRA as per demand.
G. Maintenance of Masters and Records in NPS cell:
a) Treasury Officers master – PAO/DTO registration numbers allotted by CRA to all the Treasury Officers for carrying out NPS transactions.
b) DDOs Master – DDO Registration numbers allotted to all the DDOs by CRA.
c) Subscribers master – PRAN numbers allotted by CRA to individual subscribers.
d) Keeping Records which are received from the Treasuries (as mentioned in Para 3(VIII) and DDOs. These Records shall be maintained Treasury Wise-DDO Wise in NPS Cell.
H. NPS cell will generate following reports every month and keep them as record :
➢ MIS 1 - Non IRA Compliant Subscribers list.
➢ MIS 2 - Non NPS employees registered with CRA.
R.N.I. No. KARBIL/2001/47147 POSTAL REGN. No. RNP/KA/BGS/2202/2017-19
Licensed to post without prepayment WPP No. 297
೧೦೫೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೨೭, ೨೦೧೭ ಭಾಗ ೧ ➢ MIS 3 - Subscriber contribution File (SCF) Not Matched &Not Booked.
➢ MIS 4 - (a) List of DDOs registered.
(b) List of Active Subscribers.
(c) Salary Drawn Statement.
(d) SCF status.
(e) I-Pin Reissue
(f) Register for watching subscriber registration with CRA
➢ MIS 5 - Statement showing DDO wise missing entries (Missing Credits).
➢ MIS 6 - Government Backlog Credit Statement (PRAN wise).
➢ MIS 7 - Ledger Posting (PRAN wise & Year wise).
I. Inspection:
NPS cell will inspect all the Treasuries and random test check of DDO office in respect of NPS records to be maintained at their end i.e. subscriber registration, NPS contribution deductions and other subscriber related records, as and when required.
By Order and in the name of the Governor of Karnataka, PR – 205
PADMAVATHI
Additional Secretary to Government,
Finance Department (Pension).
ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು-59.