Servants of Knowledge
Karnataka Gazette · Government of Karnataka

Karnataka Gazette, Part Part-1, 21 February 2019

Published 21 February 2019

Part
Part-1
Identifier
in.gazette.karnataka_new.2019-02-21.Part-1
Languages
English, Kannada
Published at
Original source ↗

click here for IIIF manifest

ಬೆಂಗಳೂರು, ಗುರುವಾರ, ಫೆಬ್ರವರಿ ೨೧, ೨೦೧೯ (ಫಾಲ್ಗುಣ ೨, ಶಕ ವರ್ಷ ೧೯೪೦)

Bengaluru, Thursday, February 21, 2019 (Phalguna 2, Shaka Varsha 1940)

ಸಂಪುಟ ೧೫೪

Volume 154

ಸಂಚಿಕೆ ೮

Issue 8

ಭಾಗ ೧

ರಾಜ್ಯ ಸರ್ಕಾರದ ಮುಖ್ಯ ಆದೇಶಗಳು ಹಾಗೂ ಸುತ್ತೋಲೆ ಮುಂತಾದ

ಎಲ್ಲಾ ಇಲಾಖೆಗಳಿಗೂ ಸಂಬಂಧಿಸಿದ ಆದೇಶಗಳು

ಆರ್ಥಿಕ ಸಚಿವಾಲಯ

ವಿಷಯ : ಗಿರಿತಾಣ ಭತ್ಯೆ - ದರಗಳ ಪರಿಷ್ಕರಣೆ. ಓದಲಾಗಿದೆ : 1. ದಿನಾಂಕ 14.08.2008ರ ಸರ್ಕಾರಿ ಆದೇಶ ಸಂಖ್ಯೆ:ಎಫ್‌ಡಿ 31 ಎಸ್ಆರ್‌ಪಿ 2007(V) 2. ದಿನಾಂಕ 14.06.2012ರ ಸರ್ಕಾರಿ ಆದೇಶ ಸಂಖ್ಯೆ:ಎಫ್‌ಡಿ 12 ಎಸ್ಆರ್‌ಪಿ 2012(IV)

ಪ್ರಸ್ತಾವನೆ :

ಕರ್ನಾಟಕ ರಾಜ್ಯದಲ್ಲಿರುವ ನಂದಿಬೆಟ್ಟ, ಶ್ರೀ ಮಹದೇಶ್ವರ ಸ್ವಾಮಿ ಬೆಟ್ಟ, ಕೃಷ್ಣರಾಜ ಮತ್ತು ಬಿಳಿಗಿರಿರಂಗನ ಬೆಟ್ಟ ಹಾಗೂ ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿನ ಗಿರಿತಾಣ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಜ್ಯ ಸರ್ಕಾರಿ ನೌಕರರಿಗೆ ನೀಡುತ್ತಿದ್ದ ಗಿರಿತಾಣ ಭತ್ಯೆಯ ದರಗಳನ್ನು ಈ ಮೇಲಿನ ಆದೇಶಗಳ ಪ್ರಕಾರ ದಿನಾಂಕ 01.08.2008 ಮತ್ತು ದಿನಾಂಕ 01.04.2012ರಿಂದ ಜಾರಿಗೆ ಬರುವಂತೆ ಪರಿಷ್ಕರಿಸಲಾಗಿರುತ್ತದೆ.

ಈ ಮೇಲೆ ತಿಳಿಸಿದ ಪ್ರದೇಶಗಳೂ ಸೇರಿದಂತೆ ಊಟಿ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಜ್ಯ ಸರ್ಕಾರಿ ನೌಕರರಿಗೆ ನೀಡಲಾಗುತ್ತಿರುವ ಗಿರಿತಾಣ ಭತ್ಯೆಯನ್ನು ಮುಂದುವರೆಸುವ ಮತ್ತು ಅದನ್ನು ಪರಿಷ್ಕರಿಸುವ ವಿಷಯವನ್ನು 6ನೇ ರಾಜ್ಯ ವೇತನ ಆಯೋಗವು ಪರಿಶೀಲಿಸಿರುತ್ತದೆ.

ಈ ಮೇಲೆ ತಿಳಿಸಿದ ಗಿರಿತಾಣ ಪ್ರದೇಶಗಳಲ್ಲಿ ಇತ್ತೀಚಿನ ದಶಕಗಳಲ್ಲಿ ಆಗಿರುವ ಅಭಿವೃದ್ಧಿಯಿಂದ ಈ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳ ಸಮಸ್ಯೆಗಳು ಬಹಳಷ್ಟು ಮಟ್ಟಿಗೆ ನಿವಾರಣೆಯಾಗಿರುವುದನ್ನು ಮನಗಂಡ 6ನೇ ರಾಜ್ಯ ವೇತನ ಆಯೋಗವು ಈ ಭತ್ಯೆಯನ್ನು ಸಂಪೂರ್ಣವಾಗಿ ರದ್ದುಪಡಿಸಲು ಶಿಫಾರಸ್ಸು ಮಾಡಿರುತ್ತದೆ.

ಗಿರಿತಾಣ ಭತ್ಯೆಯನ್ನು ರದ್ದುಪಡಿಸುವ ಆಯೋಗದ ಶಿಫಾರಸ್ಸನ್ನು ಸರ್ಕಾರವು ಒಪ್ಪಿ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರಿ ಆದೇಶ ಸಂಖ್ಯೆ : ಆಇ 24 ಎಸ್ಆರ್‌ಪಿ 2018(IV) ಬೆಂಗಳೂರು, ದಿನಾಂಕ 11ನೇ ಜನವರಿ 2019

ಪ್ರಸ್ತಾವನೆಯಲ್ಲಿ ವಿವರಿಸಲಾದ ಅಂಶಗಳ ಹಿನ್ನೆಲೆಯಲ್ಲಿ, ರಾಜ್ಯದಲ್ಲಿನ ನಂದಿ ಬೆಟ್ಟ, ಶ್ರೀ ಮಹದೇಶ್ವರ ಸ್ವಾಮಿ ಬೆಟ್ಟ, ಕೃಷ್ಣರಾಜ ಮತ್ತು ಬಿಳಿಗಿರಿರಂಗನ ಬೆಟ್ಟ ಹಾಗೂ ಕೊಡಗು ಜಿಲ್ಲೆಯ ಮಡಿಕೇರಿ ಮತ್ತು ರಾಜ್ಯದ ಹೊರಗಡೆ ಇರುವ ಊಟಿ ಪ್ರದೇಶದ ಗಿರಿತಾಣಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಜ್ಯ ಸರ್ಕಾರಿ ನೌಕರರಿಗೆ ನೀಡಲಾಗುತ್ತಿರುವ ಗಿರಿತಾಣ ಭತ್ಯೆಯನ್ನು 1ನೇ ಜನವರಿ 2019 ರಿಂದ ಜಾರಿಗೆ ಬರುವಂತೆ ರದ್ದುಪಡಿಸಿ ಆದೇಶಿಸಿದೆ.

2. ಗಿರಿತಾಣ ಭತ್ಯೆಯ ಪಾವತಿ ಕುರಿತಂತೆ ಚಾಲ್ತಿಯಲ್ಲಿರುವ ತತ್ಸಂಬಂಧದ ಎಲ್ಲಾ ಆದೇಶಗಳು 1ನೇ ಜನವರಿ 2019ರಿಂದ ಜಾರಿಗೆ ಬರುವಂತೆ ನಿರಸನಗೊಳ್ಳುತ್ತವೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಡಿ.ಎಸ್. ಜೋಗೋಜೆ

ಸರ್ಕಾರದ ಉಪ ಕಾರ್ಯದರ್ಶಿ

ಆರ್ಥಿಕ ಇಲಾಖೆ (ಸೇವೆಗಳು-2)

(೧೩೭)೧೩೮ ಕರ್ನಾಟಕ ರಾಜ್ಯಪತ್ರ, ಗುರುವಾರ, ಫೆಬ್ರವರಿ ೨೧, ೨೦೧೯ ಭಾಗ ೧ FINANCE SECRETARIAT Sub: Discontinuance of Hill Station Allowance-reg.

Read: 1. G.O.No. FD 31 SRP 2007(V) dated 14.08.2008

2. G.O.No. FD 12 SRP 2012 (IV) dated 14.06.2012

PREAMBLE:

In Government Orders read above, Hill Station Allowance payable to Government employees working in Nandi Hills, Sri Mahadeshwara Swamy Hills, Krishna Raja and Biligiri Ranga Hills and Madikeri in Kodagu District were revised with effect from 01.08.2008 and 01.04.2012 respectively.

The 6th State Pay Commission has examined the issue of revision and continuation of Hill Station Allowance admissible to the employees working in the above mentioned places and in Ooty area.

The 6th State Pay Commission has noticed that the overall development of these areas over several decades has considerably mitigated the number of problems faced by employees working there. Accordingly, the 6th State Pay Commission has recommended to discontinue the payment of Hill Station Allowance for all classes of employees.

The Government have accepted the recommendation of the Pay Commission to discontinue the payment of Hill Station Allowance and the following orders are issued.

GOVERNMENT ORDER NO. FD 24 SRP 2016(IV) BENGALURU, DATED 11th JANUARY 2019

In the light of the fact and circumstances narrated in the preamble, the Hill Station Allowance admissible to employees working in Nandi Hills, Sri Mahadeshwara Swamy Hills, Krishna Raja and Biligiri Ranga Hills and Madikeri in Kodagu District and in Ooty area shall stand discontinued with effect from 1st January 2019.

All existing orders on payment of Hill Station Allowance are rescinded with effect from 01.01.2019.

By Order and in the name of the Governor of Karnataka, PR – 32

D.S. JOGOJE

SC - 50

Deputy Secretary to Government

Finance Department (Services-2)

ಆರ್ಥಿಕ ಸಚಿವಾಲಯ

ವಿಷಯ : ಹೊರ ರಾಜ್ಯ ಭತ್ಯೆ ದರಗಳ ಪರಿಷ್ಕರಣೆ. ಓದಲಾಗಿದೆ : 1. ದಿನಾಂಕ 14.08.2008ರ ಸರ್ಕಾರಿ ಆದೇಶ ಸಂಖ್ಯೆ: ಆಇ 31 ಎಸ್ಆರ್‌ಪಿ 2007(VII).

2. ದಿನಾಂಕ 30.09.2011ರ ಸರ್ಕಾರಿ ಆದೇಶ ಸಂಖ್ಯೆ: ಸಿಆಸುಇ 26 ಎಚ್ಎಂಬಿ 2010. 3. ದಿನಾಂಕ 14.06.2012ರ ಸರ್ಕಾರಿ ಆದೇಶ ಸಂಖ್ಯೆ: ಆಇ 12 ಎಸ್ಆರ್‌ಪಿ 2012(V). 4. ದಿನಾಂಕ 16.01.2014ರ ಸರ್ಕಾರಿ ಆದೇಶ ಸಂಖ್ಯೆ: ಆಇ 31 ಎಸ್ಆರ್‌ಪಿ 2013.

ಪ್ರಸ್ತಾವನೆ :

ಕರ್ನಾಟಕ ರಾಜ್ಯದ ಹೊರಗಿನ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಜ್ಯ ಸರ್ಕಾರಿ ನೌಕರರಿಗೆ ನೀಡಲಾಗುತ್ತಿದ್ದ ಹೊರರಾಜ್ಯ ಭತ್ಯೆಯ ದರಗಳನ್ನು ಮೇಲೆ ಓದಲಾದ ಆದೇಶಗಳಲ್ಲಿ ಕಾಲದಿಂದ ಕಾಲಕ್ಕೆ ಪರಿಷ್ಕರಿಸಲಾಗಿರುತ್ತದೆ. ಮೇಲೆ (4)ರಲ್ಲಿ ಓದಲಾದ ದಿನಾಂಕ: 16.01.2014ರ ಸರ್ಕಾರಿ ಆದೇಶದಲ್ಲಿ ನವದೆಹಲಿಯ ಕರ್ನಾಟಕ ಭವನದಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಜ್ಯ ಸರ್ಕಾರಿ ನೌಕರರಿಗೆ ನೀಡಲಾಗುತ್ತಿದ್ದ ಹೊರ ರಾಜ್ಯ ಭತ್ಯೆಯ ದರವನ್ನು, 2012ರ ಪರಿಷ್ಕøತ ವೇತನ ಶ್ರೇಣಿಯ ಮೂಲ ವೇತನದ ಶೇ.25 ರಿಂದ ಶೇ.35ಕ್ಕೆ ಪರಿಷ್ಕರಿಸಿ ಆದೇಶಿಸಲಾಗಿರುತ್ತದೆ.

ಹೊರ ರಾಜ್ಯ ಭತ್ಯೆಯನ್ನು, ರಾಜ್ಯದ ಹೊರಗಿರುವ ರಾಜ್ಯ ಸರ್ಕಾರಿ ಕಛೇರಿಗಳಾದ ನವದೆಹಲಿಯಲ್ಲಿರುವ ಕರ್ನಾಟಕ ಭವನದಲ್ಲಿನ ನಿವಾಸಿ ಆಯುಕ್ತರ ಕಛೇರಿ ಹಾಗೂ ವಾರಣಾಸಿ, ತಿರುಮಲ ಮತ್ತು ಶ್ರೀಶೈಲ ಮುಂತಾದ ರಾಜ್ಯ ಸರ್ಕಾರಿ ಛತ್ರಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸರ್ಕಾರಿ ಸಿಬ್ಬಂದಿಗಳಿಗೆ ತಗಲುವ ಹೆಚ್ಚುವರಿ ಜೀವನ ನಿರ್ವಹಣೆಯ ವೆಚ್ಚವನ್ನು ಸ್ವಲ್ಪ ಮಟ್ಟಿಗೆ ತಗ್ಗಿಸಲು ಮತ್ತು ರಾಜ್ಯದ ಹೊರಗಡೆ ಕರ್ತವ್ಯ ನಿರ್ವಹಿಸುವುದಕ್ಕಾಗಿ ನೀಡಲಾಗುತ್ತಿರುತ್ತದೆ. ಪ್ರಸ್ತುತ ಈ ಭತ್ಯೆಯನ್ನು ನವದೆಹಲಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆಲವು ಇಲಾಖೆಗಳ ಸಿಬ್ಬಂದಿಗಳಿಗೆ ವಿಸ್ತರಿಸಿಲ್ಲದಿರುವುದನ್ನು 6ನೇ ರಾಜ್ಯ ವೇತನ ಆಯೋಗವು ಗಮನಿಸಿರುತ್ತದೆ. ಮುಂದುವರೆದು, ರಾಜ್ಯದಲ್ಲಿನ ಹೊರಗಿನ ಪ್ರದೇಶಗಳಾದ ವಾರಣಾಸಿ, ತಿರುಮಲ, ಶ್ರೀಶೈಲ ಮತ್ತು ಮಂತ್ರಾಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಜ್ಯ ಸರ್ಕಾರಿ ನೌಕರರಿಗೆ ನೀಡಲಾಗುತ್ತಿರುವ ಹೊರ ರಾಜ್ಯ ಭತ್ಯೆಯ ದರಗಳನ್ನು ಸಹ ಆಯೋಗವು ಪರಿಶೀಲಿಸಿರುತ್ತದೆ.

ಹೊರ ರಾಜ್ಯ ಭತ್ಯೆಯನ್ನು ನವದೆಹಲಿಯ ಕರ್ನಾಟಕ ಭವನದ ಸಿಬ್ಬಂದಿಗಳಿಗೆ ನೀಡುತ್ತಿರುವಂತೆ, ನವದೆಹಲಿಯಲ್ಲಿ ನೇಮಕಗೊಂಡಿರುವ ಇತರೆ ಇಲಾಖೆಗಳ ಸಿಬ್ಬಂದಿಗಳಿಗೂ ಸಹ ನೀಡುವಂತೆ ಹಾಗೂ ವಾರಣಾಸಿ, ತಿರುಮಲ, ಶ್ರೀಶೈಲ ಮತ್ತು ಮಂತ್ರಾಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಪ್ರಸ್ತುತ ಅನ್ವಯಿಸುವ ದರಗಳಲ್ಲಿ ಹೊರ ರಾಜ್ಯ ಭತ್ಯೆಯನ್ನು ಮುಂದುವರೆಸಿ ಪರಿಷ್ಕರಿಸಲು ಮತ್ತು ಈ ಹೊರ ರಾಜ್ಯ ಭತ್ಯೆಯನ್ನು ರಾಜ್ಯದ ಹೊರಗೆ ಕಾರ್ಯನಿರ್ವಹಿಸುತ್ತಿರುವ ಇತರೆ ಇಲಾಖೆಗಳ ಸಿಬ್ಬಂದಿಗಳಿಗೂ ಸಹ ನೀಡುವಂತೆ 6ನೇ ರಾಜ್ಯ ವೇತನ ಆಯೋಗವು ಶಿಫಾರಸ್ಸು ಮಾಡಿರುತ್ತದೆ.

ಹೊರ ರಾಜ್ಯ ಭತ್ಯೆ ಪಾವತಿ ಕುರಿತಂತೆ 6ನೇ ರಾಜ್ಯ ವೇತನ ಆಯೋಗವು ಮಾಡಿರುವ ಶಿಫಾರಸ್ಸನ್ನು ಪರಿಶೀಲಿಸಿದ ಸರ್ಕಾರವು ಈ ಕೆಳಕಂಡಂತೆ ಆದೇಶ ಹೊರಡಿಸಿದೆ.

ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಫೆಬ್ರವರಿ ೨೧, ೨೦೧೯ ೧೩೯

ಸರ್ಕಾರಿ ಆದೇಶ ಸಂಖ್ಯೆ: ಆಇ 24 ಎಸ್ಆರ್‌ಪಿ 2018(V) ಬೆಂಗಳೂರು, ದಿನಾಂಕ 11ನೇ ಜನವರಿ 2019

ನವದೆಹಲಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಜ್ಯ ಸರ್ಕಾರಿ ನೌಕರರಿಗೆ, ಹೊರ ರಾಜ್ಯ ಭತ್ಯೆಯ ದರಗಳನ್ನು 1ನೇ ಜನವರಿ 2019ರಿಂದ ಜಾರಿಗೆ ಬರುವಂತೆ 2018ರ ಪರಿಷ್ಕøತ ವೇತನ ಶ್ರೇಣಿಯ ಮೂಲ ವೇತನದ ಶೇ.35ಕ್ಕೆ ಪರಿಷ್ಕರಿಸಿ ಮಂಜೂರು ಮಾಡಲು ಸರ್ಕಾರವು ಹರ್ಷಿಸುತ್ತದೆ.

2. ಮುಂದುವರೆದು, ವಾರಣಾಸಿ, ತಿರುಮಲ, ಶ್ರೀಶೈಲ ಮತ್ತು ಮಂತ್ರಾಲಯವೂ ಸೇರಿದಂತೆ ರಾಜ್ಯದ ಹೊರಗಿನ ಇತರೆ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಜ್ಯ ಸರ್ಕಾರಿ ನೌಕರರಿಗೆ ಕೂಡ ಹೊರ ರಾಜ್ಯ ಭತ್ಯೆಯ ದರಗಳನ್ನು 2018ರ ಪರಿಷ್ಕøತ ವೇತನ ಶ್ರೇಣಿಯ ಮೂಲ ವೇತನದ ಶೇ.10ರ ದರದಲ್ಲಿ 1ನೇ ಜನವರಿ 2019 ರಿಂದ ಜಾರಿಗೆ ಬರುವಂತೆ ಪರಿಷ್ಕರಿಸಿ ಮಂಜೂರು ಮಾಡಲು ಸಹ ಸರ್ಕಾರವು ಹರ್ಷಿಸುತ್ತದೆ.

3. ಈ ಭತ್ಯೆಯನ್ನು ಮಂಜೂರು ಮಾಡುವ ಕುರಿತು ಚಾಲ್ತಿಯಲ್ಲಿರುವ ಎಲ್ಲಾ ಷರತ್ತು ಮತ್ತು ನಿಬಂಧನೆಗಳು ಮುಂದುವರೆದು ಅನ್ವಯಿಸುತ್ತವೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, ಡಿ.ಎಸ್. ಜೋಗೋಜೆ ಸರ್ಕಾರದ ಉಪ ಕಾರ್ಯದರ್ಶಿ ಆರ್ಥಿಕ ಇಲಾಖೆ (ಸೇವೆಗಳು-2)

FINANCE SECRETARIAT

Sub: Revision of the rates of Out of State Allowance – reg.

Read: 1. G.O.No. FD 31 SRP 2007(VII) dated 14.8.2008

2. G.O.No. DPAR 26 HMB 2010 dated 30.9.2011

3. G.O.No. FD 12 SRP 2012(V) dated 14.06.2012

4. G.O.No. FD 31 SRP 2013 dated 16.01.2014

PREAMBLE:

The Out of State Allowance payable to State Government employees working in areas outside the State of Karnataka is being revised from time to time vide Government Orders read above. In Government Order dated 16.01.2014 read at (4) above orders were issued revising the rates of Out of State Allowance in respect of Government employees working in Karnataka Bhavan, New Delhi from 25% of the basic pay to 35% of the basic pay in 2012 Revised Pay Scales.

Out of State Allowance is being paid to Government employees working in the State Government offices located outside the State like the office of the Resident Commissioner, Karnataka Bhavan, New Delhi, State Government Choultries of Varanasi, Thirumala and Srisailam etc., to compensate the high cost of living and working outside the State. The Commission has noticed that presently this allowance is not extended to the employees of some departments working in New Delhi. Further, the Commission has also examined the rates of Out of State Allowance payable to State Government employees working in places located outside the State like Varanasi, Thirumala, Srisailam and Manthralaya.

The 6th State Pay Commission has recommended to grant the Out of State Allowance to the employees of other departments serving in New Delhi as is paid to the employees of Karnataka Bhavan and also to continue and revise the Out of State Allowance admissible to employees working in Varanasi, Thirumala, Srisailam and Manthralaya and to extend the benefit to employees of other departments working outside the State.

The recommendation of the 6th State Pay Commission pertaining to the payment of Out of State Allowance has been accepted by the Government and the following orders are issued.

GOVERNMENT ORDER NO. FD 24 SRP 2018(V) BENGALURU, DATED 11th JANUARY 2019

Government are pleased to sanction the Out of State Allowance in respect of the State Government employees working in New Delhi at the rate of 35% of basic pay in the 2018 Revised Pay Scale with effect from 1st January 2019.

2. Further, Government are also pleased to sanction Out of State Allowance at the rate of 10% of the basic pay in 2018 Revised Pay Scale to the State Government employees working in places outside the State like Varanasi, Thirumala, Srisailam and Manthralaya and also in other places outside the State with effect from 1st January 2019.

3. The other conditions regulating grant of this allowance shall continue to apply.

By Order and in the name of the Governor of Karnataka, PR – 33

D.S. JOGOJE

SC - 50

Deputy Secretary to Government

Finance Department (Services-2)

ಆರ್ಥಿಕ ಸಚಿವಾಲಯ

ವಿಷಯ : ವೈದ್ಯಕೀಯ ಭತ್ಯೆ ದರಗಳ ಪರಿಷ್ಕರಣೆ.

ಓದಲಾಗಿದೆ : 1. ದಿನಾಂಕ 28.12.1996ರ ಸರ್ಕಾರಿ ಆದೇಶ ಸಂಖ್ಯೆ: ಎಫ್‌ಡಿ 5 ಎಸ್ಆರ್‌ಪಿ 96.

2. ದಿನಾಂಕ 14.08.2008ರ ಸರ್ಕಾರಿ ಆದೇಶ ಸಂಖ್ಯೆ: ಎಫ್‌ಡಿ 31 ಎಸ್ಆರ್‌ಪಿ 2007(VI). 3. ದಿನಾಂಕ 14.06.2012(VI)ರ ಸರ್ಕಾರಿ ಆದೇಶ ಸಂಖ್ಯೆ:ಎಫ್‌ಡಿ 12 ಎಸ್ಆರ್‌ಪಿ 2012.

೧೪೦ ಕರ್ನಾಟಕ ರಾಜ್ಯಪತ್ರ, ಗುರುವಾರ, ಫೆಬ್ರವರಿ ೨೧, ೨೦೧೯ ಭಾಗ ೧

ಪ್ರಸ್ತಾವನೆ :

ಮೇಲೆ (1) ರಲ್ಲಿ ಓದಲಾದ ದಿನಾಂಕ 28.12.1996ರ ಸರ್ಕಾರಿ ಆದೇಶದಲ್ಲಿ ಸಮೂಹ 'ಸಿ' ಮತ್ತು 'ಡಿ' ವೃಂದದ ರಾಜ್ಯ ಸರ್ಕಾರಿ ನೌಕರರಿಗೆ ದಿನಾಂಕ 01.01.1997 ರಿಂದ ಜಾರಿಗೆ ಬರುವಂತೆ ಪ್ರತಿ ತಿಂಗಳಿಗೆ `.25/-ಗಳ ವೈದ್ಯಕೀಯ ಭತ್ಯೆಯನ್ನು ಮಂಜೂರು ಮಾಡಲಾಗಿರುತ್ತದೆ. ಈ ಭತ್ಯೆಯನ್ನು ಮೇಲೆ (2) ಮತ್ತು (3)ರಲ್ಲಿ ಓದಲಾದ ಆದೇಶಗಳನ್ವಯ ಕಾಲಕಾಲಕ್ಕೆ ಪರಿಷ್ಕರಿಸಲಾಗಿರುತ್ತದೆ.

6ನೇ ರಾಜ್ಯ ವೇತನ ಆಯೋಗವು ಸಮೂಹ 'ಸಿ' ಮತ್ತು 'ಡಿ' ವೃಂದದ ರಾಜ್ಯ ಸರ್ಕಾರಿ ನೌಕರರಿಗೆ ನೀಡುತ್ತಿರುವ ವೈದ್ಯಕೀಯ ಭತ್ಯೆಯ ದರವನ್ನು ಪರಿಷ್ಕರಿಸಲು ಶಿಫಾರಸ್ಸು ಮಾಡಿರುತ್ತದೆ. ಆಯೋಗದ ಈ ಶಿಫಾರಸ್ಸನ್ನು ಸರ್ಕಾರವು ಒಪ್ಪಿ ಈ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರಿ ಆದೇಶ ಸಂಖ್ಯೆ: ಆಇ 24 ಎಸ್ಆರ್‌ಪಿ 2018(VI) ಬೆಂಗಳೂರು, ದಿನಾಂಕ 11ನೇ ಜನವರಿ 2019

ರಾಜ್ಯ ಸರ್ಕಾರದ ಸಮೂಹ 'ಸಿ' ಮತ್ತು 'ಡಿ' ವೃಂದದ ನೌಕರರಿಗೆ ಪ್ರಸ್ತುತ ನೀಡುತ್ತಿರುವ ವೈದ್ಯಕೀಯ ಭತ್ಯೆಯನ್ನು ಮಾಸಿಕ `.100/-ಗಳಿಂದ `.200/-ಗಳಿಗೆ 1ನೇ ಜನವರಿ 2019 ರಿಂದ ಜಾರಿಗೆ ಬರುವಂತೆ ಪರಿಷ್ಕರಿಸಲು ಸರ್ಕಾರವು ಹರ್ಷಿಸುತ್ತದೆ.

2. ಈ ಭತ್ಯೆಯನ್ನು ಕ್ರಮಬದ್ಧಗೊಳಿಸಲು ವಿಧಿಸಿರುವ ಇತರೆ ಷರತ್ತುಗಳು ಮುಂದುವರೆದು ಅನ್ವಯಿಸುತ್ತವೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, ಡಿ.ಎಸ್. ಜೋಗೋಜೆ ಸರ್ಕಾರದ ಉಪ ಕಾರ್ಯದರ್ಶಿ ಆರ್ಥಿಕ ಇಲಾಖೆ (ಸೇವೆಗಳು-2)

FINANCE SECRETARIAT

Sub: Revision of the rates of Medical Allowance –reg.

Read: 1. G.O.No. FD 5 SRP 96 dated 28.12.1996

2. G.O.No. FD 31 SRP 2007 (VI) dated 14.8.2008

3. G.O.No. FD 12 SRP 2012 (VI) dated: 14.06.2012

PREAMBLE:

In Government Order dated 28-12-1996 read at (1) above, sanction was accorded for grant of Medical Allowance at the rate of `.25/- per month to the Group 'C' and 'D' State Government employees with effect from 1-1-1997. This allowance has been revised from time to time vide Government Orders read at (2) and (3) above.

The 6th State Pay Commission has recommended to revise the existing rates of Medical Allowance payable to Group-C and D State Government employees. The recommendation of the Commission has been accepted by the Government and the following orders are issued.

GOVERNMENT ORDER NO. FD 24 SRP 2018(VI) BENGALURU, DATED 11th JANUARY 2019

Government are pleased to enhance the rate of Medical allowance in respect of Group 'C' and 'D' State Government employees from the existing `.100/- per month to `.200/- per month with effect from 1st January 2019.

2. The other conditions regulating grant of this allowance shall continue to apply.

By Order and in the name of the Governor of Karnataka, PR – 34

D.S. JOGOJE

SC - 50

Deputy Secretary to Government

Finance Department (Services-2)

ಆರ್ಥಿಕ ಸಚಿವಾಲಯ

ವಿಷಯ : ಅಂಧ ಮತ್ತು ಅಂಗವಿಕಲ ರಾಜ್ಯ ಸರ್ಕಾರಿ ನೌಕರರಿಗೆ ನೀಡಲಾಗುತ್ತಿರುವ ವಾಹನ ಭತ್ಯೆ ದರಗಳ

ಪರಿಷ್ಕರಣೆ.

ಓದಲಾಗಿದೆ : 1. ದಿನಾಂಕ 14.02.1979ರ ಸರ್ಕಾರಿ ಆದೇಶ ಸಂಖ್ಯೆ: ಆಇ 1 ಎಸ್ಆರ್‌ಪಿ 79 2. ದಿನಾಂಕ 17.07.1979ರ ಸರ್ಕಾರಿ ಆದೇಶ ಸಂಖ್ಯೆ: ಆಇ 1 ಎಸ್ಆರ್‌ಪಿ 79 3. ದಿನಾಂಕ 14.08.2008ರ ಸರ್ಕಾರಿ ಆದೇಶ ಸಂಖ್ಯೆ: ಎಫ್‌ಡಿ 31 ಎಸ್ಆರ್‌ಪಿ 2007(I) 4. ದಿನಾಂಕ 16.02.2013ರ ಸರ್ಕಾರಿ ಆದೇಶ ಸಂಖ್ಯೆ: ಎಫ್‌ಡಿ 12 ಎಸ್ಆರ್‌ಪಿ 2012(X)

ಪ್ರಸ್ತಾವನೆ :

ಅಂಧ ಮತ್ತು ಅಂಗವಿಕಲ ರಾಜ್ಯ ಸರ್ಕಾರಿ ನೌಕರರು, ಅವರ ಅಂಧತ್ವ ಮತ್ತು ದೈಹಿಕ ಅಂಗವೈಕಲ್ಯತೆಯ (ದೈಹಿಕ ನ್ಯೂನ್ಯತೆ) ಕಾರಣಗಳಿಂದಾಗಿ ಕಛೇರಿಗೆ ಬಂದು ಹೋಗಲು ಇತರರ ಸಹಕಾರ ಮತ್ತು ಅವಲಂಬನೆಯಿಂದಾಗಿ ಅವರಿಗೆ ಉಂಟಾಗುವ ಅಧಿಕ ಆರ್ಥಿಕ ಹೊರೆಯನ್ನು ಸ್ವಲ್ಪ ಮಟ್ಟಿಗೆ ತಗ್ಗಿಸಲು ರಾಜ್ಯ ಸರ್ಕಾರವು ಮೇಲೆ (1)ರಲ್ಲಿ ಓದಲಾದ ದಿನಾಂಕ 14.02.1979ರ ಆದೇಶದಲ್ಲಿ ವಾಹನ ಭತ್ಯೆಯನ್ನು ಮಂಜೂರು ಮಾಡಲು ಅವಕಾಶಗಳನ್ನು ಕಲ್ಪಿಸಲಾಗಿರುತ್ತದೆ. ಈ ಸೌಲಭ್ಯವನ್ನು ಪಡೆಯಲು ಸದರಿ ನೌಕರರು ಮೇಲೆ (2)ರಲ್ಲಿ ಓದಲಾದ ದಿನಾಂಕ 17.07.1979ರ ಆದೇಶದ ಅನುಬಂಧದಲ್ಲಿ ಲಗತ್ತಿಸಿರುವ ನಮೂನೆಯಲ್ಲಿ ವೈದ್ಯಕೀಯ ಪ್ರಮಾಣ ಪತ್ರವನ್ನು ಪಡೆದು ಸಲ್ಲಿಸಬೇಕಾಗಿರುತ್ತದೆ. ಸದರಿ ಭತ್ಯೆಯನ್ನು ಸರ್ಕಾರವು ನಿಗದಿಪಡಿಸಿದ ಮಿತಿಗೊಳಪಟ್ಟು ಮಂಜೂರು ಮಾಡಲಾಗುತ್ತಿತ್ತು.

ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಫೆಬ್ರವರಿ ೨೧, ೨೦೧೯ ೧೪೧

ಅಂಧ ಮತ್ತು ಅಂಗವಿಕಲ ರಾಜ್ಯ ಸರ್ಕಾರಿ ನೌಕರರಿಗೆ ಮಂಜೂರು ಮಾಡಲಾಗಿದ್ದ ಈ ಮೇಲಿನ ವಾಹನ ಭತ್ಯೆಯ ದರಗಳನ್ನು, ಕಾಲದಿಂದ ಕಾಲಕ್ಕೆ ಪರಿಷ್ಕರಿಸಿಕೊಂಡು ಬರಲಾಗಿರುತ್ತದೆ.

ಅಂಧ ಮತ್ತು ಅಂಗವಿಕಲ (ಚಲನವಲನ ವೈಕಲ್ಯ ಹೊಂದಿರುವ) ರಾಜ್ಯ ಸರ್ಕಾರಿ ನೌಕರರು ಕಛೇರಿಗೆ ಬಂದು ಹೋಗಲು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಗಣಿಸಿದ 2011ರ ಅಧಿಕಾರಿ ವೇತನ ಸಮಿತಿಯು ಸದರಿ ನೌಕರರಿಗೆ ಮಂಜೂರು ಮಾಡಲಾಗುತ್ತಿದ್ದ ವಾಹನ ಭತ್ಯೆಯ ದರವನ್ನು ಯಾವುದೇ ಗರಿಷ್ಠ ಮಿತಿ ಇಲ್ಲದೇ ಮೂಲ ವೇತನದ ಶೇ.6ರ ದರದಲ್ಲಿ ಮಂಜೂರು ಮಾಡುವಂತೆ ಶಿಫಾರಸ್ಸು ಮಾಡಿತ್ತು. ಅಧಿಕಾರಿ ವೇತನ ಸಮಿತಿಯ ಶಿಫಾರಸ್ಸಿನಂತೆ ಮೇಲೆ(4)ರಲ್ಲಿ ಓದಲಾದ ದಿನಾಂಕ 16.02.2013ರಲ್ಲಿ ಆದೇಶಗಳನ್ನು ಹೊರಡಿಸಲಾಗಿರುತ್ತದೆ.

ಪ್ರಸ್ತುತ ವಿಶೇಷ ಚೇತನ ಸಿಬ್ಬಂದಿಗಳು ಕಛೇರಿಗೆ ಹೋಗಿ ಬರುವ ವೆಚ್ಚವನ್ನು ಭರಿಸಲು ಮೂಲ ವೇತನದ ಶೇ.6ರಷ್ಟು ವಾಹನ ಭತ್ಯೆಯನ್ನು ಮಂಜೂರು ಮಾಡುವ ಪದ್ಧತಿಯನ್ನು 6ನೇ ರಾಜ್ಯ ವೇತನ ಆಯೋಗವು ಪರಿಶೀಲಿಸಿ ಈ ಸೌಲಭ್ಯವನ್ನು ಮುಂದುವರೆಸಲು ಶಿಫಾರಸ್ಸು ಮಾಡಿರುತ್ತದೆ. 6ನೇ ರಾಜ್ಯ ವೇತನ ಆಯೋಗದ ಈ ಶಿಫಾರಸ್ಸನ್ನು ಸರ್ಕಾರವು ಒಪ್ಪಿರುತ್ತದೆ ಮತ್ತು ಈ ಕೆಳಕಂಡಂತೆ ಆದೇಶ ಹೊರಡಿಸಿದೆ.

ಸರ್ಕಾರಿ ಆದೇಶ ಸಂಖ್ಯೆ: ಎಫ್‌ಡಿ 24 ಎಸ್ಆರ್‌ಪಿ 2018(VII) ಬೆಂಗಳೂರು, ದಿನಾಂಕ 11ನೇ ಜನವರಿ 2019

ರಾಜ್ಯ ಸರ್ಕಾರದ ವಿಶೇಷ ಚೇತನ ಸಿಬ್ಬಂದಿಗಳು ಅಂದರೆ, ಅಂಧ ಮತ್ತು ಅಂಗವಿಕಲ (ಚಲನವಲನ ವೈಕಲ್ಯತೆ) ರಾಜ್ಯ ಸರ್ಕಾರಿ ನೌಕರರಿಗೆ ಹಾಲಿ ನೀಡುತ್ತಿರುವ ವಾಹನ ಭತ್ಯೆಯ ದರವನ್ನು 2018ರ ಪರಿಷ್ಕøತ ವೇತನ ಶ್ರೇಣಿಯಲ್ಲಿನ ಮೂಲ ವೇತನದ ಶೇ.6ರ ದರದಲ್ಲಿ ಮಾಹೆಯಾನ ಯಾವುದೇ ಗರಿಷ್ಠ ಮಿತಿಯಿಲ್ಲದೆ 1ನೇ ಜನವರಿ 2019 ರಿಂದ ಜಾರಿಗೆ ಬರುವಂತೆ ಪರಿಷ್ಕರಿಸಲು ಸರ್ಕಾರವು ಹರ್ಷಿಸುತ್ತದೆ.

2. ಈ ಸೌಲಭ್ಯದ ಉದ್ದೇಶಕ್ಕಾಗಿ ಅಂಧತ್ವ ಎಂದರೆ The Rights of Persons with Disabilities Act, 2016 ರ ಅನುಬಂಧದ ಕಂಡಿಕೆ 1(B) ರಲ್ಲಿ ವ್ಯಾಖ್ಯಾನಿಸಿರುವಂತೆ ಅರ್ಥೈಸಿಕೊಳ್ಳತಕ್ಕದ್ದು.

3. ಈ ಸೌಲಭ್ಯದ ಉದ್ದೇಶಕ್ಕಾಗಿ ದಿನಾಂಕ 14.02.1979ರ ಸರ್ಕಾರಿ ಆದೇಶ ಸಂಖ್ಯೆ: ಆಇ 1 ಎಸ್ಆರ್‌ಪಿ 79 ರಲ್ಲಿ ವಿಷದಪಡಿಸಿರುವಂತೆ ಕನಿಷ್ಠ ಶೇಕಡ 40ರಷ್ಟು ಅಂಗವೈಕಲ್ಯತೆ ಹೊಂದಿರತಕ್ಕದ್ದು.

4. ಈ ಸೌಲಭ್ಯವನ್ನು ಪಡೆಯಲು ಸಲ್ಲಿಸಬೇಕಾದ ವೈದ್ಯಕೀಯ ಪ್ರಮಾಣ ಪತ್ರದ ನಮೂನೆಯನ್ನು ಈ ಆದೇಶದ ಅನುಬಂಧದಲ್ಲಿ ಲಗತ್ತಿಸಿದೆ.

5. ಈ ಭತ್ಯೆಯನ್ನು ಮಂಜೂರು ಮಾಡಲು ವಿಧಿಸಿರುವ ಇತರೆ ಷರತ್ತುಗಳು ಮುಂದುವರೆದು ಅನ್ವಯಿಸುತ್ತವೆ ಹಾಗೂ ಭತ್ಯೆಯ ಲಭ್ಯತೆಯೂ ಸಹ ಸೇವಾ ನಿಯಮಗಳ ನಿಬಂಧನೆಗೊಳಪಟ್ಟಿರುತ್ತದೆ.

6. ಈ ಭತ್ಯೆಯನ್ನು ಮಂಜೂರು ಮಾಡಲು ಇಲಾಖಾ ಮುಖ್ಯಸ್ಥರು ಸಕ್ಷಮ ಪ್ರಾಧಿಕಾರಿಗಳಾಗಿರುತ್ತಾರೆ.

7. ಈ ಆದೇಶಗಳು ಸರ್ಕಾರದ ಅನುದಾನಿತ ಶಿಕ್ಷಣ ಸಂಸ್ಥೆಗಳ ಅಂಧ ಮತ್ತು ಅಂಗವಿಕಲ ನೌಕರರಿಗೂ ಸಹ ಅನ್ವಯಿಸುತ್ತದೆ.

8. ದಿನಾಂಕ 16.02.2013ರ ಸರ್ಕಾರಿ ಆದೇಶ ಸಂಖ್ಯೆ: ಎಫ್‌ಡಿ 12 ಎಸ್ಆರ್‌ಪಿ 2012(X)ನ್ನು ರದ್ದುಪಡಿಸಿ ಈ ಆದೇಶ ಹೊರಡಿಸಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಡಿ.ಎಸ್. ಜೋಗೋಜೆ

ಸರ್ಕಾರದ ಉಪ ಕಾರ್ಯದರ್ಶಿ ಆರ್ಥಿಕ ಇಲಾಖೆ (ಸೇವೆಗಳು-2)

ANNEXURE to G.O. No. FD 24 SRP 2018(VII) DATED 11th JANUARY 2019

Form

(Applicable to Orthopaedically Handicapped/Blind Government employees)Orthopaedics/Ophthalmology Department, Government Hospital…………………………..….

Sl.No.

I hereby certify that I have examined Shri/Smt……………………………………………………… who is said to have been employed in ………………………………………………………………………………. as (designation) ………………………………………..

and whose signature is attested by me, is a candidate for sanction of conveyance allowance as stipulated in G.O. No. FD 1 SRP 79 dated 14th February 1979 read with G.O. dated :…….. 01-2019. After the detailed examination. I find that he/she has got the following permanent/partial disability of ………………………………………………………………………… /total blindness (both eyes)/blindness* as defined in para 1(B) of the SCHEDULE TO THE RIGHTS OF PERSONS WITH DISABILITIES ACT. 2016.

(1)

(2)

(3)

(4)೧೪೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಫೆಬ್ರವರಿ ೨೧, ೨೦೧೯ ಭಾಗ ೧ In conclusion, I am of the opinion that the total permanent disabilility is up to ………………………………. Percentage of both upper and lower extremities/both eyes and requires physical assistance to commute to work place. He/she is eligible/not eligible for the conveyance allowance as per G.O. No. FD 1 SRP 79, dated 14th February 1979 read with G.O. dated : 11-01-2019.

Specimen signature of the Candidate or,

Left thumb impression.

Signature and designation of the Head of the

Department of Othopaedics/Opthalmology,

Government Hospital.

Date :

ಡಿ.ಎಸ್. ಜೋಗೋಜೆ

Place :

*Strike out whichever is not applicable

ಸರ್ಕಾರದ ಉಪ ಕಾರ್ಯದರ್ಶಿ ಆರ್ಥಿಕ ಇಲಾಖೆ (ಸೇವೆಗಳು-2)

FINANCE SECRETARIAT

Sub: Revision of the rates of Conveyance Allowance to the Blind and Orthopaedically Handicapped (differently-abled) State Government employees– reg.

Read: 1. G.O. No. FD 1 SRP 79 dated 14.02.1979

2. G.O. No. FD 1 SRP 79 dated: 17.07.1979

3. G.O. NO. FD 31 SRP 2007(I) dated 14.08.2008

4. G.O. NO. FD 12 SRP 2012 (X) dated 16.02.2013

PREAMBLE:

In Government Order dated 14.02.1979 read at (1) above, provisions were made to grant conveyance allowance to the Blind and Orthopaedically Handicapped State Government employees so as to lessen the financial burden of these employees for getting the Physical Assistance for commuting from the place of their residence to the place of duty vice-versa on account of their blindness or physical disability. To get this benefit these employees are required submit the Medical Certificate appended in Annexure to the G.O. dated 17.07.1979 read at (2) above. The said benefit is being sanctioned subject to a ceiling limit fixed by the State Government. The Conveyance Allowance sanctioned to the Blind and Orthopaedically Handicapped employees were revised periodically from time to time.

In view of the difficulties faced by the Government servants with locomotor disability and blindness to commute from the place of residence to the place of working and vice-versa the 2011 Official Pay Committee has recommended to sanction conveyance allowance at the rate of 6% of the revised basic pay without any ceiling limit. Accordingly, in G.O. dated 16.02.2013 read at (4) above orders were issued as per the recommendations of the Official Pay Committee.

The 6th State Pay Commission has examined the system of payment of conveyance allowance at the rate of 6% of the basic pay without any ceiling limit to differently-abled Government employees and recommended to continue the benefit.

The Government have accepted the recommendations of the 6th State Pay Commission and the following orders are issued.

GOVERNMENT ORDER NO.FD 24 SRP 2018(VII) BENGALURU, DATED 11th JANUARY 2019

Government are pleased to sanction Conveyance Allowance in respect of Blind and Orthopaedically Handicapped (differently- abled) State Government employees at the rate of 6% of basic pay in the 2018 Revised Pay Scale without any ceiling limit with effect from 1st January 2019.

2. For the purpose of this benefit blindness means the same meaning as assigned in para 1(B) of the Schedule to the Rights of Persons with Disabilities Act, 2016.

3. For the purpose of this benefit an employee should have a minimum of 40% physical disability as explained in G.O. No.FD 1 SRP 79 dated: 14.02.1979.

4. The form of Medical Certificate to be submitted to get this benefit is appended in Annexure to this order.

5. The other conditions governing regulation of this allowance shall continue to apply and this benefit is also subject to the fulfillment of conditions if any stipulated in the Service Rules.

6. The concerned Heads of the Department are the competent authority to sanction this benefit.

7. This order is also applicable to the Blind and Orthopedically Handicapped employees of Aided Educational Institutions.

8. This order issues in supersession of earlier G.O.No.FD 12 SRP 2012(X) dated 16.02.2013.

By Order and in the Name of the Governor of Karnataka

D.S. JOGOJE

Deputy Secretary to Government,

Finance Departnment (Services-2)ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಫೆಬ್ರವರಿ ೨೧, ೨೦೧೯ ೧೪೩ ANNEXURE to G.O. No. FD 24 SRP 2018(VII) DATED 11th JANUARY 2019

Form

(Applicable to Orthopaedically Handicapped/Blind Government employees)Orthopaedics/Ophthalmology Department, Government Hospital…………………………..….

Sl.No.

I hereby certify that I have examined Shri/Smt……………………………………………………… who is said to have been employed in ………………………………………………………………………………. as (designation) ………………………………………..

and whose signature is attested by me, is a candidate for sanction of conveyance allowance as stipulated in G.O. No. FD 1 SRP 79 dated 14th February 1979 read with G.O. dated :…….. 01-2019. After the detailed examination. I find that he/she has got the following permanent/partial disability of ………………………………………………………………………… /total blindness (both eyes)/blindness* as defined in para 1(B) of the SCHEDULE TO THE RIGHTS OF PERSONS WITH DISABILITIES ACT. 2016.

(1)

(2)

(3)

(4)

In conclusion, I am of the opinion that the total permanent disability is up to ………………………………. Percentage of both upper and lower extremities/both eyes and requires physical assistance to commute to work place. He/she is eligible/not eligible for the conveyance allowance as per G.O. No. FD 1 SRP 79, dated 14th February 1979 read with G.O. dated : 11-01-2019.

Specimen signature of the Candidate or,

Left thumb impression.

Signature and designation of the Head of the

Department of Othopaedics/Opthalmology,

Government Hospital.

Date :

Place :

*Strike out whichever is not applicable

PR – 35

SC - 50

ಆರ್ಥಿಕ ಸಚಿವಾಲಯ

ವಿಷಯ : ವಿಕಲ ಚೇತನ (ಅಂಗವಿಕಲ) ರಾಜ್ಯ ಸರ್ಕಾರಿ ನೌಕರರು, ಮೋಟಾರುಚಾಲಿತ/ಯಾಂತ್ರಿಕ (ಮೆಕ್ಯಾನಿಕಲ್) ವಾಹನಗಳನ್ನು ಖರೀದಿಸಲು ನೀಡಲಾಗುತ್ತಿರುವ ಸಹಾಯಧನವನ್ನು ಪರಿಷ್ಕರಿಸುವ ಬಗ್ಗೆ. ಓದಲಾಗಿದೆ : ದಿನಾಂಕ 10.06.2013ರ ಸರ್ಕಾರಿ ಆದೇಶ ಸಂಖ್ಯೆ: ಎಫ್‌ಡಿ 12 ಎಸ್ಆರ್‌ಪಿ 2012(XI)

ಪ್ರಸ್ತಾವನೆ :

2011ರ ಅಧಿಕಾರಿ ವೇತನ ಸಮಿತಿಯ ಶಿಫಾರಸ್ಸಿನಂತೆ, ಮೇಲೆ ಓದಲಾದ ದಿನಾಂಕ : 10.06.2013ರ ಸರ್ಕಾರಿ ಆದೇಶದಲ್ಲಿ ಅಂಗವಿಕಲತೆಯುಳ್ಳ (ವಿಕಲ ಚೇತನ) ಸರ್ಕಾರಿ ನೌಕರರು ಕಛೇರಿಗೆ ಹೋಗಿ ಬರಲು ಬಳಸುವ ಮೋಟಾರು ಚಾಲಿತ/ಯಾಂತ್ರಿಕ (ಮೆಕ್ಯಾನಿಕಲ್) ವಾಹನಗಳನ್ನು ಖರೀದಿಸಲು ಸಹಾಯವಾಗಲೆಂದು, ಅಂತಹ ನೌಕರರು ಖರೀದಿಸುವ ವಾಹನದ ಬೆಲೆಯ ಶೇ.25ರಷ್ಟನ್ನು ಗರಿಷ್ಠ `.25,000/-ಗಳ ಮಿತಿಗೊಳಪಟ್ಟು ಹಿಂಬರಿಸಲು ಆದೇಶವನ್ನು ಹೊರಡಿಸಲಾಗಿರುತ್ತದೆ. ಈ ಸೌಲಭ್ಯವು ವಿಶೇಷ ಚೇತನ ಸಿಬ್ಬಂದಿಗಳ ಸೇವಾ ಅವಧಿಯಲ್ಲಿ ಒಂದು ಬಾರಿ ಮಾತ್ರ ಲಭ್ಯವಾಗತಕ್ಕದ್ದಾಗಿರುತ್ತದೆ.

ವಾಹನಗಳ ಬೆಲೆ ಏರಿಕೆಯನ್ನು ಗಮನದಲ್ಲಿರಿಸಿದ 6ನೇ ರಾಜ್ಯ ವೇತನ ಆಯೋಗವು ಯಾಂತ್ರೀಕೃತ/ಮೋಟಾರು ಚಾಲಿತ ವಾಹನಗಳ ಖರೀದಿಗೆ ಸರ್ಕಾರವು ಪ್ರಸ್ತುತ ನೀಡುತ್ತಿರುವ ವಾಹನದ ಬೆಲೆಯ ಶೇಕಡ 25ರಷ್ಟು ಸಹಾಯಧನವನ್ನು ಪರಿಷ್ಕರಿಸಲು ಶಿಫಾರಸ್ಸು ಮಾಡಿರುತ್ತದೆ.

6ನೇ ರಾಜ್ಯ ವೇತನ ಆಯೋಗದ ಶಿಫಾರಸ್ಸನ್ನು ಸರ್ಕಾರವು ಒಪ್ಪಿರುತ್ತದೆ ಮತ್ತು ಈ ಕೆಳಕಂಡಂತೆ ಆದೇಶವನ್ನು ಹೊರಡಿಸಿದೆ.

ಸರ್ಕಾರಿ ಆದೇಶ ಸಂಖ್ಯೆ: ಎಫ್‌ಡಿ 24 ಎಸ್ಆರ್‌ಪಿ 2018(VIII) ಬೆಂಗಳೂರು, ದಿನಾಂಕ 11ನೇ ಜನವರಿ 2019

ವಿಶೇಷ ಚೇತನ (ಅಂಗವೈಕಲ್ಯತೆ ಹೊಂದಿರುವ) ರಾಜ್ಯ ಸರ್ಕಾರಿ ನೌಕರರು ಖರೀದಿಸುವ ಮೋಟಾರು ಚಾಲಿತ/ಯಾಂತ್ರೀಕೃತ (ಮೆಕ್ಯಾನಿಕಲ್) ವಾಹನಗಳಿಗೆ ನೀಡಲಾಗುತ್ತಿದ್ದ ಸಹಾಯಧನವನ್ನು ವಿಶೇಷ ವಾಹನದ ಬೆಲೆಯ ಶೇ.30ರಷ್ಟು ಗರಿಷ್ಠ `.40,000/-ಗಳ ಮಿತಿಗೊಳಪಟ್ಟು 1ನೇ ಜನವರಿ 2019 ರಿಂದ ಜಾರಿಗೆ ಬರುವಂತೆ ಪರಿಷ್ಕರಿಸಲು ಸರ್ಕಾರವು ಹರ್ಷಿಸುತ್ತದೆ. ಈ ಸೌಲಭ್ಯದ ಮಂಜೂರಾತಿಯು ಈ ಕೆಳಕಂಡ ಷರತ್ತು ಮತ್ತು ನಿಬಂಧನೆಗಳ ಪೂರೈಕೆಗೊಳಪಟ್ಟಿರುತ್ತದೆ.

R.N.I. No. KARBIL/2001/47147 POSTAL REGN. No. RNP/KA/BGS/2202/2017-19

Licensed to post without prepayment WPP No. 297

೧೪೪ ಕರ್ನಾಟಕ ರಾಜ್ಯಪತ್ರ, ಗುರುವಾರ, ಫೆಬ್ರವರಿ ೨೧, ೨೦೧೯ ಭಾಗ ೧

(i) ಈ ಸೌಲಭ್ಯವು ಕನಿಷ್ಠ ಶೇ.40 ಮತ್ತು ಅದಕ್ಕೂ ಹೆಚ್ಚಿನ ಅಂಗವೈಕಲ್ಯತೆ (ಚಲನವಲನ ವೈಕಲ್ಯತೆ) ಹೊಂದಿರುವ ವಿಶೇಷ ಚೇತನ ಸಿಬ್ಬಂದಿಗಳಿಗೆ ಮಾತ್ರ ಲಭ್ಯವಾಗತಕ್ಕದ್ದು.

(ii) ವಿಶೇಷ ಚೇತನ ಸಿಬ್ಬಂದಿಗಳು ಅವರ ಚಲನವಲನ ವೈಕಲ್ಯತೆಯ ದೃಡೀಕರಣದ ಬಗ್ಗೆ ವೈದ್ಯಕೀಯ ಮಂಡಳಿಯಿಂದ ಪಡೆದ ಪ್ರಮಾಣ ಪತ್ರವನ್ನು ಇಲಾಖಾ ಮುಖ್ಯಸ್ಥರಿಗೆ ಸಲ್ಲಿಸತಕ್ಕದ್ದು.

(iii) ಈ ಉದ್ದೇಶಕ್ಕಾಗಿ ಖರೀದಿಸುವ ವಿಶೇಷ ವಾಹನದ ಬಿಲ್ಲನ್ನು ಇಲಾಖಾ ಮುಖ್ಯಸ್ಥರಿಗೆ ಸಲ್ಲಿಸತಕ್ಕದ್ದು.

(iv) ಈ ಸೌಲಭ್ಯವು ಸೇವೆಯಲ್ಲಿ ಒಂದು ಬಾರಿ ಮಾತ್ರ ಲಭ್ಯವಾಗತಕ್ಕದ್ದು. ಈ ಮೊದಲು ಈ ಸೌಲಭ್ಯವನ್ನು ಪಡೆದವರು ಪರಿಷ್ಕøತ ದರದಲ್ಲಿ ಈ ಸೌಲಭ್ಯವನ್ನು ಪುನ: ಪಡೆಯಲು ಅರ್ಹರಿರುವುದಿಲ್ಲ.

2. ಈ ಸೌಲಭ್ಯವನ್ನು ಮಂಜೂರು ಮಾಡಲು ನೇಮಕಾತಿ ಪ್ರಾಧಿಕಾರವು ಸಕ್ಷಮ ಪ್ರಾಧಿಕಾರಿಯಾಗಿರುತ್ತದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಡಿ.ಎಸ್. ಜೋಗೋಜೆ

ಸರ್ಕಾರದ ಉಪ ಕಾರ್ಯದರ್ಶಿ ಆರ್ಥಿಕ ಇಲಾಖೆ (ಸೇವೆಗಳು-2)

FINANCE SECRETARIAT

Sub: Revision of the rates of subsidy for the purchase of motorised / mechanised

vehicles by the handicapped State Government employees – reg.

Read: G.O. No.FD 12 SRP 2012 (XI) dated: 10.06.2013

PREAMBLE:

As per the recommendation of the 2011 Official Pay Committee, the State Government with a view to assist the Government servant with disabilities in procuring motorized / mechanical vehicles used to commute to and from the office, orders were issued to reimburse the 25% cost of the vehicle subject to a maximum ceiling limit of `.25,000 vide Government Order dated 10.06.2013 read above. This benefit is admissible only once in the entire service of disabled employees.

The 6th State Pay Commission keeping in mind the increased cost of such vehicles has recommended to revise the present 25% of subsidy granted to purchase the special vehicles.

The State Government have accepted the recommendations of the 6th State Pay Commission and the following orders are issued.

GOVERNMENT ORDER NO. FD 24 SRP 2018(VIII) BENGALURU, DATED 11th JANUARY 2019

Government are pleased to revise the subsidy for the purchase of the motorized / mechanical vehicles by the disabled persons to 30% of the cost of the vehicle subject to a maximum of `.40,000 with effect from 1st January 2019 subject to fulfillment of the conditions stipulated below:

(i) This benefit is admissible only to disabled employees with a minimum 40% or more disability (locomotor disability).

(ii) The disabled employees shall produce the locomotor disability Certificate obtained from the Medical Board to the Head of the Department.

(iii) The bill pertaining to purchase of this special vehicle shall be submitted to the Head of the Department.

(iv) This benefit is admissible only once in entire service. The employees who have already availed this benefit are not entitled to this benefit.

2. The appointing authority shall be competent to sanction this benefit.

By Order and in the name of the Governor of Karnataka, PR – 36

D.S. JOGOJE

SC - 50

Deputy Secretary to Government

Finance Department (Services-2) ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು-59.

Cite this issue. Karnataka Gazette, Government of Karnataka, 21 February 2019. Indian Gazettes, https://egazette.servantsofknowledge.in/details/in.gazette.karnataka_new.2019-02-21.Part-1/. Archive identifier in.gazette.karnataka_new.2019-02-21.Part-1.